T20 World Cup Live: ಜಿಯೋ ಬಳಕೆದಾರರಿಗೆ Ind Vs Pak ಪಂದ್ಯವನ್ನು ಉಚಿತವಾಗಿ ವೀಕ್ಷಿಸುವ ಅವಕಾಶ!

Ind Vs Pak match Live: ಸ್ಮಾರ್ಟ್​ಫೋನ್​ ಬಳಕೆದಾರರು ಕ್ರಿಕೆಟ್​ ಪಂದ್ಯ ಸ್ಟ್ರೀಮ್ ಮಾಡಲು ಚಂದಾದಾರಿಕೆಯ ಅಗತ್ಯವಿದೆ. ಭಾರತದಲ್ಲಿ ಆನ್​ಲೈನ್​ ಮೂಲಕ ಐಸಿಸಿ ಟಿ20 ವಿಶ್ವಕಪ್ 2021 ಅನ್ನು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..

ಜಿಯೋ

ಜಿಯೋ

  • Share this:
    Jio Reacharge Plans: ICC T20 ವಿಶ್ವಕಪ್ 2021 ಆರಂಭವಾಗಿದೆ, 16 ತಂಡಗಳು ಟಿ 20 ವಿಶ್ವಕಪ್ (Worldcup) ಪ್ರಶಸ್ತಿಗಾಗಿ ಹೋರಾಡುತ್ತಿವೆ ಮತ್ತು 5 ವರ್ಷಗಳ ನಂತರ ಪಂದ್ಯಾವಳಿಯನ್ನು ಆಡಲಾಗುತ್ತದೆ. ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ಭಾರತದ ಮೊದಲ ಪಂದ್ಯ ನಡೆಯಲಿದೆ. ಟಿ20 ವಿಶ್ವಕಪ್ 2021 ಸೇರಿದಂತೆ ಎಲ್ಲಾ ಐಸಿಸಿ ಕಾರ್ಯಕ್ರಮಗಳನ್ನು ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ (Disney+HotStar) ಪ್ರಸಾರ ಮಾಡುವ ವಿಶೇಷ ಹಕ್ಕುಗಳನ್ನು ಸ್ಟಾರ್ ಸ್ಪೋರ್ಟ್ಸ್ (Star Sports) ಹೊಂದಿದೆ. ಹಾಟ್‌ಸ್ಟಾರ್ (HotStar) ಸ್ಮಾರ್ಟ್‌ಫೋನ್‌ಗಳು (Smartphones) ಮತ್ತು ಲ್ಯಾಪ್‌ಟಾಪ್‌ಗಳು (Laptops) ಸೇರಿದಂತೆ ಎಲ್ಲಾ ಸಾಧನಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಆದರೆ ಸ್ಮಾರ್ಟ್​ಫೋನ್​ ಬಳಕೆದಾರರು ಕ್ರಿಕೆಟ್​ ಪಂದ್ಯ ಸ್ಟ್ರೀಮ್ ಮಾಡಲು ಚಂದಾದಾರಿಕೆಯ ಅಗತ್ಯವಿದೆ. ಭಾರತದಲ್ಲಿ ಆನ್​ಲೈನ್​ ಮೂಲಕ ಐಸಿಸಿ ಟಿ20 ವಿಶ್ವಕಪ್ 2021 ಅನ್ನು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..

    ಭಾರತದಲ್ಲಿ T 20 ವಿಶ್ವಕಪ್ 2021 ಅನ್ನು ಮೊಬೈಲ್‌ನಲ್ಲಿ ಲೈವ್ ಆಗಿ ಹೇಗೆ ವೀಕ್ಷಿಸುವುದು

    ನೀವು ಜಿಯೋ, ಏರ್‌ಟೆಲ್ ಮತ್ತು ವೊಡಾಫೊನ್​ ಐಡಿಯಾ ಮತ್ತು ಜಿಯೋ ರೀಚಾರ್ಜ್ ಪ್ಲಾನ್‌ಗಳ ಮೂಲಕ ಟಿ20 ವಿಶ್ವಕಪ್ 2021 ಅನ್ನು ಉಚಿತವಾಗಿ ವೀಕ್ಷಿಸಬಹುದು. ಈ ಯೋಜನೆಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್‌ಗೆ ಉಚಿತ ಚಂದಾದಾರಿಕೆಯೊಂದಿಗೆ ಅನಿಯಮಿತ ಧ್ವನಿ ಕರೆಗಳು, ಉಚಿತ SMS ಮತ್ತು ಡೇಟಾ ಮತ್ತು ಇತರ ಪ್ರಯೋಜನಗಳೊಂದಿಗೆ ಬರುತ್ತದೆ.

    Jio ರೀಚಾರ್ಜ್ ಯೋಜನೆಗಳನ್ನು ಹತ್ತಿರದಿಂದ ನೋಡೋಣ:

    499 ರೂ.ಗಳ ಜಿಯೋ ರೀಚಾರ್ಜ್ ಯೋಜನೆ: ಪ್ಲಾನ್ ಅಳವಡಿಸಕೊಂಡವರಿಗೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ, 3ಜಿಬಿ ಡೇಟಾ/ದಿನ + 6 ಜಿಬಿ ಹೆಚ್ಚುವರಿ ಡೇಟಾ, ಉಚಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್ಎಂಎಸ್ ಮತ್ತು ಜಿಯೋ ಆ್ಯಪ್‌ಗಳಿಗೆ ಪ್ರವೇಶ ಒದಗಿಸುತ್ತದೆ. ಈ ರೀಚಾರ್ಜ್ ಯೋಜನೆ 28 ದಿನಗಳ ಮಾನ್ಯತೆ ಹೊಂದಿದೆ.

    666 ರೂ.ಗಳ ಜಿಯೋ ರೀಚಾರ್ಜ್ ಪ್ಲಾನ್: ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ ಒದಗಿಸುತ್ತದೆ. 2 ಜಿಬಿ ಡೇಟಾ/ದಿನ, ಉಚಿತ ವಾಯ್ಸ್ ಕರೆಗಳು, ದಿನಕ್ಕೆ 100 ಎಸ್ಎಂಎಸ್ ಮತ್ತು ಜಿಯೋ ಆಪ್ ಗಳಿಗೆ ಪ್ರವೇಶ. ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 56 ದಿನಗಳು.

    Read Also: T20 World Cup 2021: ವಿರಾಟ್​ ಕೊಹ್ಲಿಗಾಗಿ ಈ ವರ್ಷ ಟಿ-20 ವಿಶ್ವಕಪ್ ಗೆಲ್ಲಿ; ಟೀಂ ಇಂಡಿಯಾಗೆ ರೈನಾ ಸಂದೇಶ!

    888 ರೂ.ಗಳ ಜಿಯೋ ರೀಚಾರ್ಜ್ ಪ್ಲಾನ್: ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ, 2 ಜಿಬಿ ಡೇಟಾ/ದಿನ + 5 ಜಿಬಿ ಹೆಚ್ಚುವರಿ ಡೇಟಾ, ಉಚಿತ ವಾಯ್ಸ್ ಕರೆಗಳು, ದಿನಕ್ಕೆ 100 ಎಸ್ಎಂಎಸ್ ಮತ್ತು ಜಿಯೋ ಆಪ್ ಗಳಿಗೆ ಪ್ರವೇಶ. ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 84 ದಿನಗಳು.

    2,599 ರೂ.ಗಳ ಜಿಯೋ ರೀಚಾರ್ಜ್ ಯೋಜನೆ: ಪ್ರಯೋಜನಗಳಲ್ಲಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ, 2 ಜಿಬಿ ಡೇಟಾ/ದಿನ + 10 ಜಿಬಿ ಹೆಚ್ಚುವರಿ ಡೇಟಾ, ಉಚಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್ಎಂಎಸ್ ಮತ್ತು ಜಿಯೋ ಆ್ಯಪ್‌ಗಳಿಗೆ ಪ್ರವೇಶ. ರೀಚಾರ್ಜ್ ಯೋಜನೆಯ ಮಾನ್ಯತೆಯು 365 ದಿನಗಳು.

    Read Also: Smartphones: ಈ ವಾರ ಮಾರುಕಟ್ಟೆಗೆ ಬರಲಿರುವ ಸ್ಮಾರ್ಟ್​ಫೋನ್​ಗಳಿವು!

    549 ರೂ.ಗಳ ಜಿಯೋ ಆಡ್-ಆನ್ ರೀಚಾರ್ಜ್ ಯೋಜನೆ: ಪ್ರಯೋಜನಗಳಲ್ಲಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ, 1.5 ಜಿಬಿ ಡೇಟಾ/ದಿನ ಮತ್ತು ಜಿಯೋ ಆಪ್‌ಗಳಿಗೆ ಪ್ರವೇಶವಿದೆ. ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 56 ದಿನಗಳು.
    Published by:Harshith AS
    First published: