ಜಿಯೋ ಭರ್ಜರಿ ಗಿಫ್ಟ್​: ಇಂದಿನಿಂದಲೇ 5 ವರ್ಷಗಳ ಕಾಲ ಉಚಿತವಾಗಿ ಕ್ರಿಕೆಟ್​ ವೀಕ್ಷಿಸಿ

2019ರಿಂದ ಆರಂಭವಾಗಲಿರುವ ಈ ವಿಶೇಷ ಸೇವೆಯ ಮೂಲಕ ಕ್ರಿಕೆಟ್​ ಪ್ರೇಮಿಗಳು ಜಿಯೋ ಟಿವಿಯಲ್ಲಿ ಲೈವ್​ ಆಗಿ ಪಂದ್ಯವನ್ನು ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ. ಇದಕ್ಕಾಗಿ ಯಾವುದೇ ಚಾರ್ಜ್​ನ್ನು ಪಾವತಿಸಬೇಕಾಗಿಲ್ಲ.

zahir | news18
Updated:January 3, 2019, 8:22 PM IST
ಜಿಯೋ ಭರ್ಜರಿ ಗಿಫ್ಟ್​: ಇಂದಿನಿಂದಲೇ 5 ವರ್ಷಗಳ ಕಾಲ ಉಚಿತವಾಗಿ ಕ್ರಿಕೆಟ್​ ವೀಕ್ಷಿಸಿ
ಸಾಂದರ್ಭಿಕ ಚಿತ್ರ
  • News18
  • Last Updated: January 3, 2019, 8:22 PM IST
  • Share this:
ಹೊಸ ವರ್ಷದ ಆರಂಭದಲ್ಲೇ ರಿಲಯನ್ಸ್​ ಜಿಯೋ ತನ್ನ ಬಳಕೆದಾರರಿಗೆ ದೊಡ್ಡ ಉಡುಗೊರೆ ನೀಡಿದೆ. ಈ ಮೂಲಕ ಜಿಯೋ ಬಳಕೆದಾರರು ಮುಂದಿನ 5 ವರ್ಷಗಳ ಕಾಲ ಉಚಿತವಾಗಿ ಕ್ರಿಕೆಟ್ ವೀಕ್ಷಿಸಬಹುದು. ಇದಕ್ಕಾಗಿ ಜಿಯೋ ನೆಟ್​ವರ್ಕ್​ ದೇಶದ ಪ್ರಮುಖ ಟಿವಿ ಚಾನೆಲ್ ಸಂಸ್ಥೆ ಸ್ಟಾರ್​ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.  ಈ ಒಪ್ಪಂದದ ಪ್ರಕಾರ ತನ್ನ ಬಳಕೆದಾರರಿಗೆ ಜಿಯೋ ಟಿವಿ ಮೂಲಕ ಎಲ್ಲ ಕ್ರಿಕೆಟ್​ ಪಂದ್ಯಗಳ ನೇರ ಪ್ರಸಾರ ಸೇವೆ ಸಿಗಲಿದೆ.

2019ರಿಂದ ಆರಂಭವಾಗಲಿರುವ ಈ ವಿಶೇಷ ಸೇವೆಯ ಮೂಲಕ ಕ್ರಿಕೆಟ್​ ಪ್ರೇಮಿಗಳು ಜಿಯೋ ಟಿವಿಯಲ್ಲಿ ಲೈವ್​ ಆಗಿ ಪಂದ್ಯವನ್ನು ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ. ಇದಕ್ಕಾಗಿ ಯಾವುದೇ ಚಾರ್ಜ್​ನ್ನು ಪಾವತಿಸಬೇಕಾಗಿಲ್ಲ. ನೀವು ಜಿಯೋ ಟಿವಿ ಸಬ್ಸ್​ಕ್ರೈಬರ್ ಆಗಿದ್ದರೆ ಮಾತ್ರ ಸಾಕು. ಇಲ್ಲಿ ಬಳಕೆದಾರರು ಟಿ20, ಒನ್​ಡೆ, ಅಂತರಾಷ್ಟ್ರೀಯ ಮ್ಯಾಚ್​ಗಳು, ಟೆಸ್ಟ್​ ಸೇರಿದಂತೆ ಕೆಲವು ದೇಶೀಯ ಪಂದ್ಯಗಳನ್ನು ಮೊಬೈಲ್​ನಲ್ಲಿ ನೋಡಬಹುದು.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲಿ ಈ ಫೀಚರ್​ ಬಂದರೆ ತೊಂದರೆ ಗ್ಯಾರೆಂಟಿ..!

ಕಡಿಮೆ ದರದ ಡೇಟಾ ಪ್ಯಾಕ್ ಮತ್ತು ಅತ್ಯುತ್ತಮ ಇಂಟರ್​ನೆಟ್ ಸೇವೆಯ ಮೂಲಕ ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೋ, ಈಗ ಕ್ರಿಕೆಟ್​ ಪ್ರೇಮಿಗಳಿಗಾಗಿ ಹೊಸ ಸೇವೆಯನ್ನು ಒದಗಿಸಲು ಯಶಸ್ವಿಯಾಗಿದೆ. ಇಂತಹದೊಂದು ಸೇವೆಯನ್ನು ಆ್ಯಪ್​ ಮೂಲಕ ಸ್ಟಾರ್​ ನೆಟ್​ವರ್ಕ್​ನ ಹಾಟ್​ಸ್ಟಾರ್ ಒದಗಿಸುತ್ತಿದ್ದು, ಇದರ ಹೊರತಾಗಿ ಜಿಯೋ ಸಂಸ್ಥೆ ತನ್ನ ಬಳಕೆದಾರರಿಗೆ ಉಚಿತವಾಗಿ ಕ್ರಿಕೆಟ್​ ಪಂದ್ಯಗಳ ವೀಕ್ಷಣೆಗೆ ವೇದಿಕೆ ಒದಗಿಸಿಕೊಟ್ಟಿದೆ.

ಇದನ್ನೂ ಓದಿ: ಗುಡ್ ​ನ್ಯೂಸ್: ಕೆಲವೇ ದಿನಗಳಲ್ಲಿ ಪೆಟ್ರೋಲ್ ದರ 8 ರೂ. ಇಳಿಕೆ..!

ಇದರಿಂದ ಮುಂಬರುವ ಐಪಿಎಲ್​ ಪಂದ್ಯಗಳನ್ನು ಜಿಯೋ ಬಳಕೆದಾರರು ಜಿಯೋ ಟಿವಿಯಲ್ಲಿ ವೀಕ್ಷಿಸುವ ಸುವರ್ಣಾವಕಾಶ ಪಡೆಯಲಿದ್ದಾರೆ. ಅಲ್ಲದೆ 2019ರ ವಿಶ್ವಕಪ್​ ಅನ್ನು ಕೂಡ ಮೊಬೈಲ್​ನಲ್ಲೇ ನೋಡಬಹುದಾಗಿದೆ.

ಇದನ್ನೂ ಓದಿ: 2000 ರೂಪಾಯಿ ನೋಟ್ ಮುದ್ರಣ ನಿಲ್ಲಿಸಿದ ಸರ್ಕಾರ, ಮುಂದೇನು?
Loading...

First published:January 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...