• Home
 • »
 • News
 • »
 • tech
 • »
 • Jio Telecom: ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋಗೆ ಅಗ್ರಸ್ಥಾನ!

Jio Telecom: ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋಗೆ ಅಗ್ರಸ್ಥಾನ!

ಟೆಲಿಕಾಂ ಕಂಪನಿಗಳು

ಟೆಲಿಕಾಂ ಕಂಪನಿಗಳು

ಭಾರತದಾದ್ಯಂತ ಟ್ರಸ್ಟ್ ರಿಸರ್ಚ್ ಅಡ್ವೈಸರಿ ಆರ್ಗನೈಸೇಶನ್ (ಟಿಆರ್‌ಎ) ನಡೆಸಿದ ಸಮೀಕ್ಷೆಯಲ್ಲಿ ಜಿಯೋ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಪ್ರಮುಖ ಸೇವಾ ಪೂರೈಕೆದಾರರಾಗಿ ಹೊರಹೊಮ್ಮಿದೆ ಎಂದು ತಿಳಿದುಬಂದಿದೆ. ಇದಲ್ಲದೆ ನಂತರದ ಸ್ಥಾನದಲ್ಲಿ ಏರ್ಟೆಲ್ ಮತ್ತು ವೊಡಫೋನ್ ಐಡಿಯಾಗಳು ಇವೆ ಎಂದು ವರದಿ ಮಾಡಿದ್ದಾರೆ.

ಮುಂದೆ ಓದಿ ...
 • Share this:

  ಭಾರತದಲ್ಲಿ  ಟೆಲಿಕಾಂ  ಸಂಸ್ಥೆಗಳು (Telecom Company) ಇದೀಗ ಬಹಳಷ್ಟು ತನ್ನ ಸೇವೆಗಳಲ್ಲಿ ಲಾಭವನ್ನು ಗಳಿಸುತ್ತಿದೆ. ಅದ್ರಲ್ಲೂ ಜಿಯೋ (Jio), ಭಾರ್ತಿ ಏರ್ಟೆಲ್ (Airtel), ವೊಡಫೋನ್ ಐಡಿಯಾ (Vi) ಟೆಲಿಕಾಂ ಕಂಪನಿಗಳಲ್ಲಿ  ಬಹಳ ಮುಂಚೂಣಿಯಲ್ಲಿರುವ ಸಂಸ್ಥೆಗಳಾಗಿವೆ. ಈ ಟೆಲಿಕಾಂ ಸಂಸ್ಥೆಗಳು ದಿನದಿಂದ ದಿನಕ್ಕೆ ಗ್ರಾಹಕರಿಗೆ ಆಕರ್ಷಣೆ ಆಗುವಂತೆ ಸೇವೆಗಳನ್ನು ನೀಡು್ತ್ತಲೇ ಇದೆ.  ಇದು ನೀಡುವಂತಹ ಯೋಜನೆಯ ದರಗಳು ಕೂಬಡ ಗ್ರಾಹಕರಿಗೆ ಕೈಗೆಟಕುವ ದರದಲ್ಲಿದೆ. ಬಿಲಿಯನೇರ್ ಉದ್ಯಮಿ ಮುಕೇಶ್ ಅಂಬಾನಿ (Mukhesh Ambani) ನೇತೃತ್ವದ ರಿಲಯನ್ಸ್ ಜಿಯೋ (Reliance Jio) ಭಾರತದ ಪ್ರಬಲ ಟೆಲಿಕಾಂ ಬ್ರ್ಯಾಂಡ್ ಆಗಿದ್ದು, ಇದು ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್‌ಗಿಂತ ಮುಂದಿದೆ ಎಂದು ಬ್ರ್ಯಾಂಡ್ ಗುಪ್ತಚರ ಮತ್ತು ಡೇಟಾ ಒಳನೋಟಗಳ ಕಂಪನಿ ಟಿಆರ್‌ಎ (TRA) ತನ್ನ ವರದಿಯಲ್ಲಿ ತಿಳಿಸಿದೆ.


  ಭಾರತದಾದ್ಯಂತ ಟ್ರಸ್ಟ್ ರಿಸರ್ಚ್ ಅಡ್ವೈಸರಿ ಆರ್ಗನೈಸೇಶನ್ (ಟಿಆರ್‌ಎ) ನಡೆಸಿದ ಸಮೀಕ್ಷೆಯಲ್ಲಿ ಜಿಯೋ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಪ್ರಮುಖ ಸೇವಾ ಪೂರೈಕೆದಾರರಾಗಿ ಹೊರಹೊಮ್ಮಿದೆ ಎಂದು ತಿಳಿದುಬಂದಿದೆ. ಟ್ರಸ್ಟ್ ರಿಸರ್ಚ್ ಅಡ್ವೈಸರಿ  ನಡೆಸಿದ ಸಮೀಕ್ಷೆಯು ಜಿಯೋ ಗ್ರಾಹಕರಿಂದ ಹೆಚ್ಚು ಬೇಡಿಕೆಯನ್ನು ಹೊಂದಿದ ಬ್ರ್ಯಾಂಡ್ ಎಂದು ಬಹಿರಂಗಪಡಿಸಿದೆ.


  ಜಿಯೋ ಮುನ್ನಡೆ:


  ಜಿಯೋ ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಇದೀಗ ಟಿಆರ್​ಎ ಬಿಡುಗಡೆ ಮಾಡಿದ ವರದಿಯಲ್ಲಿ ಜಿಯೋ ಮುನ್ನಡೆಯನ್ನು ಸಾಧಿಸಿದ್ದು ಏರ್ಟೆಲ್ ಮತ್ತು ವೊಡಫೋನ್ ಐಡಿಯಾ ಕಂಪನಿಗಳು ನಂತರದ ಸ್ಥಾನದಲ್ಲಿದೆ. ಜಿಯೋ ಇದೀಗ 5ಜಿ ಸೇವೆಯನ್ನು ದೇಶದಾದ್ಯಂತ ಆರಂಭಿಸಲು ಸಿದ್ಧತೆ ನಡಿಸುತ್ತಿದೆ. ಇನ್ನುಮುಂದೆ ಇನ್ನಷ್ಟು ಹೆಚ್ಚು ಚಂದಾದಾರರನ್ನು ಜಿಯೋ ಹೊಂದುತ್ತದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.


  ಇದನ್ನೂ ಓದಿ: ಲಕ್ ಬದಲಾಯಿಸಿದ ಗೂಗಲ್ ಸ್ಪರ್ಧೆ! 7 ಲಕ್ಷ ಗೆದ್ದ ವಿದ್ಯಾರ್ಥಿ


  ಟಿಆರ್​ಎ ನಡೆಸಿದ ಇತರ ತಂತ್ರಜ್ಞಾನದ ಸಮೀಕ್ಷೆಗಳು:


  ಕ್ಲೋತ್​ ಮಾರುಕಟ್ಟೆಯ ಸಮೀಕ್ಷೆ:


  ಅದೇ ರೀತಿ ಟಿಆರ್​ಎ ವಿವಿಧ ವಲಯಗಳಲ್ಲಿ ಸಂಶೋಧನೆ ನಡೆಸಿದೆ. ಆ ಸಮೀಕ್ಷೆಯಲ್ಲಿ ಉಡುಪು ಉದ್ಯಮದಲ್ಲಿ ಅಡಿಡಾಸ್ ಅನ್ನು ಹೆಚ್ಚು ಆದ್ಯತೆಯ ಬ್ರಾಂಡ್ ಆಗಿ ಆಯ್ಕೆ ಮಾಡಲಾಗಿದೆ. ಬ್ರ್ಯಾಂಡ್‌ಗಳಾದ ನೈಕ್, ರೇಮಂಡ್ಸ್, ಅಲಂಚೋಜಿ ಮತ್ತು ಪೀಟರ್ ಇಂಗ್ಲೆಂಡ್ ಈ ಎಲ್ಲಾ ಬ್ರಾಂಡ್​​ಗಳು ನಂತರದ ಸ್ಥಾನದಲ್ಲಿದೆ.


  5G service launched in Hyderabad This service will start all over the country by December 2023
  ಜಿಯೋ 5ಜಿ ನೆಟ್‌ವರ್ಕ್‌


  ಆಟೋಮೊಬೈಲ್:


  ಟಿಆರ್​ಎ ಸಂಸ್ಥೆ ಆಟೋ ಮೊಬೈಲ್​ಗಳ ಉದ್ಯಮದಲ್ಲೂ ಸಂಶೋಧನೆ ಮಾಡಿತ್ತು. ಇದರ ವರದಿಯ ಪ್ರಕಾರ ಆಟೋಮೊಬೈಲ್ ಉದ್ಯಮದಲ್ಲಿ, BMW ಮೊದಲ ಸ್ಥಾನದಲ್ಲಿದೆ ಮತ್ತು ಟೊಯೊಟಾ ವಾಹನಗಳು ಎರಡನೇ ಸ್ಥಾನದಲ್ಲಿವೆ. ಮುಂದಿನ ಸ್ಥಾನಗಳನ್ನು ಹ್ಯುಂಡೈ ಮತ್ತು ಹೋಂಡಾ ಕಂಪನಿಗಳು ಆಕ್ರಮಿಸಿಕೊಂಡಿವೆ ಎಂದು ವರದಿ ಮಾಡಿದ್ದಾರೆ.


  ಬ್ಯಾಂಕಿಂಗ್ ಉದ್ಯಮ:


  ಬ್ಯಾಂಕಿಂಗ್ ಹಣಕಾಸು ಸೇವೆಗಳ ವಿಭಾಗದಲ್ಲಿ ಸಾರ್ವಜನಿಕ ವಲಯದ ಎಲ್‌ಐಸಿ ಪ್ರಥಮ ಸ್ಥಾನ ಪಡೆದಿದೆ. ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ್ವಿತೀಯ ಸ್ಥಾನ ಮತ್ತು ಖಾಸಗಿ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ ತೃತೀಯ ಸ್ಥಾನ ಪಡೆದಿವೆ. ವಿವಿಧ ಸೇವಾ ಪೂರೈಕೆದಾರರ ಪೈಕಿ , ಐಟಿಸಿ ಮೊದಲ ಸ್ಥಾನ ಮತ್ತು ಟಾಟಾ ಮತ್ತು ರಿಲಯನ್ಸ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡಿವೆ ಎಂದು ತಿಳಿಸಿದ್ದಾರೆ.


  ಪೆಟ್ರೋಲಿಯಂ ಉದ್ಯಮ:


  ಇಂಧನ ಕ್ಷೇತ್ರದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮೊದಲ ಸ್ಥಾನದಲ್ಲಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಎರಡನೇ ಸ್ಥಾನದಲ್ಲಿದೆ.


  ಅಮುಲ್ ನಂಬರ್​​ ಒನ್ ಕಂಪನಿ:


  ಆಹಾರ ಮತ್ತು ಪಾನೀಯಗಳ ಉತ್ಪಾದನೆ ಮತ್ತು ವಿತರಣೆಯ ವಿಷಯದಲ್ಲಿ ಅಮುಲ್ ನಂಬರ್ ಒನ್ ಕಂಪನಿಯಾಗಿದೆ. ನೆಸ್ಕೆಫೆ ಎರಡನೇ ಸ್ಥಾನದಲ್ಲಿದೆ.


  ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳನ್ನು ಹೊಂದಿದೆ. ಆದ್ದರಿಂದ, ವಿಶ್ವದ ಪ್ರಮುಖ ಕಂಪನಿಗಳಾದ ಆಹಾರ, ಸೌಂದರ್ಯವರ್ಧಕಗಳು, ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು, ಬಟ್ಟೆ ಮತ್ತು ಆನ್‌ಲೈನ್ ವ್ಯಾಪಾರ ಕಂಪನಿಗಳು, ಸೇವಾ ಪೂರೈಕೆದಾರರು ಭಾರತದಲ್ಲಿ ತಮ್ಮ ವ್ಯವಹಾರವನ್ನು ಉತ್ತಮವಾಗಿ ಸ್ಥಾಪಿಸಲು ಈ ಎಲ್ಲಾ ಕಂಪನಿಗಳು ಸಿದ್ಧತೆ ನಡೆಸುತ್ತಿದೆ.

  Published by:ವಾಸುದೇವ್ ಎಂ
  First published: