ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) 4G ಡೌನ್ಲೋಡ್ ವೇಗದಲ್ಲಿ 2 Mbps ಜಿಗಿತದೊಂದಿಗೆ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಏಪ್ರಿಲ್ ತಿಂಗಳ (April Month) ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜಿಯೋದ ಸರಾಸರಿ 4G ಡೌನ್ಲೋಡ್ ವೇಗ (Download Speed) 23.1 Mbps ಇದೆ. ಮಾರ್ಚ್ ತಿಂಗಳಲ್ಲಿ ಜಿಯೋ ಸರಾಸರಿ 4G ಡೌನ್ಲೋಡ್ ವೇಗ 21.1 Mbps ಆಗಿತ್ತು. ಜಿಯೋ ಪ್ರಾರಂಭದಿಂದಲೂ TRAI ನ ಡೌನ್ಲೋಡ್ ವೇಗ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿದೆ.
ಟೆಲಿಕಾಂ ದೈತ್ಯ ವಿ (ವೊಡಾಫೋನ್-ಐಡಿಯಾ) 4G ಡೌನ್ಲೋಡ್ ವೇಗವು ಸತತ ಎರಡನೇ ತಿಂಗಳು ಕಡಿಮೆಯಾಗಿದೆ ಎಂದು ಡೇಟಾ ತೋರಿಸುತ್ತದೆ. ಇದು ಫೆಬ್ರವರಿಯಲ್ಲಿ 18.4 Mbps ಡೌನ್ಲೋಡ್ ವೇಗದಿಂದ ಏಪ್ರಿಲ್ನಲ್ಲಿ 17.7 Mbps ಗೆ ಇಳಿದಿದೆ. ವಿಐ ಜೊತೆಗೆ, ಸರ್ಕಾರಿ ನೇತೃತ್ವದ ಬಿಎಸ್ಎನ್ಎಲ್ ವೇಗವು 5.9 Mbps ಗೆ ಇಳಿದಿದೆ. ಮಾರ್ಚ್ನಲ್ಲಿ, ಏರ್ಟೆಲ್ನ ಡೌನ್ಲೋಡ್ ವೇಗವು 1.3 Mbps ನಿಂದ 13.7 Mbps ಗೆ ಕುಸಿದಿತ್ತು. ಏಪ್ರಿಲ್ನಲ್ಲಿ ವೇಗವು 14.1 ಎಂಬಿಪಿಎಸ್ಗೆ ಏರಿಕೆಯಾಗಿದ್ದರೂ, ಫೆಬ್ರವರಿಯಲ್ಲಿ ಅದರ 15 Mbps ವೇಗಕ್ಕೆ ಹೋಲಿಸಿದರೆ, ಇದು ಇನ್ನೂ ಹಿಂದುಳಿದಿದೆ.
ಇದನ್ನೂ ಓದಿ: Smart Phone: ನಿಮ್ಮ ಫೋನಿನಲ್ಲಿ ಈ 7 ಆ್ಯಪ್ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ! ಸಂಕಷ್ಟದಿಂದ ಪಾರಾಗಿ
ಪ್ರತಿ ಬಾರಿಯಂತೆ, ಮುಖೇಶ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಜಿಯೋ ಸರಾಸರಿ 4G ಡೌನ್ಲೋಡ್ ವೇಗದಲ್ಲಿ ಏರ್ಟೆಲ್ ಮತ್ತು ವಿ ಅನ್ನು ಹಿಂದಿಕ್ಕಿದೆ. ಏಪ್ರಿಲ್ ತಿಂಗಳಿನಲ್ಲಿ, ಜಿಯೋದ 4G ಡೌನ್ಲೋಡ್ ವೇಗವು ಏರ್ಟೆಲ್ಗಿಂತ 9.0 mbps ಮತ್ತು ವಿ ಇಂಡಿಯಾಗಿಂತ 5.4 mbps ಹೆಚ್ಚಾಗಿದೆ. ರಿಲಯನ್ಸ್ ಜಿಯೋ ಕಳೆದ ಹಲವಾರು ವರ್ಷಗಳಿಂದ ಸರಾಸರಿ 4G ಡೌನ್ಲೋಡ್ ವೇಗದಲ್ಲಿ ಸತತವಾಗಿ ಮೊದಲ ಸ್ಥಾನವನ್ನು ಹೊಂದಿದೆ.
ಇದನ್ನೂ ಓದಿ: Jio Phone Nextನ ಸೀಮಿತ ಅವಧಿಯ ‘ಎಕ್ಸ್ಚೇಂಜ್ ಟು ಅಪ್ಗ್ರೇಡ್’ ಕೊಡುಗೆ
ವಿ ಇಂಡಿಯಾ ಎರಡನೇ ಸ್ಥಾನವನ್ನು ಮುಂದುವರೆಸಿದೆ ಮತ್ತು ಭಾರ್ತಿ ಏರ್ಟೆಲ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ.ವಿ ಇಂಡಿಯಾ 8.2 Mbps ನೊಂದಿಗೆ ಸರಾಸರಿ 4G ಅಪ್ಲೋಡ್ ವೇಗದೊಂದಿಗೆ ಚಾರ್ಟ್ನಲ್ಲಿ ಅಗ್ರಸ್ಥಾನದಲ್ಲಿದೆ. ರಿಲಯನ್ಸ್ ಜಿಯೋ ತನ್ನ ಅಪ್ಲೋಡ್ ವೇಗ 7.6 ಎಂಬಿಪಿಎಸ್ನೊಂದಿಗೆ ಎರಡನೇ ಸಂಖ್ಯೆಯನ್ನು ಪಡೆದಿದೆ. ರಿಲಯನ್ಸ್ ಜಿಯೋ ಮಾತ್ರ ಅಪ್ಲೋಡ್ ವೇಗವನ್ನು ಹೆಚ್ಚಿಸಿಕೊಂಡ ಕಂಪನಿಯಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ವಿ ಇಂಡಿಯಾ ಮತ್ತು ಏರ್ಟೆಲ್ ಅಪ್ಲೋಡ್ ವೇಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ಸಮಯದಲ್ಲಿ, ಬಿಎಸ್ಎನ್ಎಲ್ ಅಪ್ಲೋಡ್ ವೇಗವು 5 Mbps ಗೆ ಇಳಿದಿದೆ. ಭಾರ್ತಿ ಏರ್ಟೆಲ್ ಸರಾಸರಿ 4G ಅಪ್ಲೋಡ್ ವೇಗದಲ್ಲಿ ಮೂರನೇ ಸ್ಥಾನದಲ್ಲಿದೆ. ಏಪ್ರಿಲ್ ತಿಂಗಳಲ್ಲಿ ಕಂಪನಿಯು ಸರಾಸರಿ 6.1 Mbps ಅಪ್ಲೋಡ್ ವೇಗವನ್ನು ದಾಖಲಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ