ಜಿಯೋ ಗ್ರಾಹಕರಿಗೆ ಶಾಕಿಂಗ್ ಸುದ್ದಿ: ಇನ್ಮುಂದೆ ಉಚಿತ ಕರೆ ಸೌಲಭ್ಯವಿಲ್ಲ..!

Jio iuc: ಇತರ ಮೊಬೈಲ್ ಆಪರೇಟರ್‌ಗಳಾದ ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾಗಳಿಗೆ ಐಯುಸಿ ಶುಲ್ಕವಾಗಿ ಜಿಯೋ ಟೆಲಿಕಾಂ ಸಂಸ್ಥೆ ಸುಮಾರು 13,500 ಕೋಟಿ ರೂಪಾಯಿಗಳನ್ನು ಪಾವತಿಸಿದೆ.

news18-kannada
Updated:October 9, 2019, 7:17 PM IST
ಜಿಯೋ ಗ್ರಾಹಕರಿಗೆ ಶಾಕಿಂಗ್ ಸುದ್ದಿ: ಇನ್ಮುಂದೆ ಉಚಿತ ಕರೆ ಸೌಲಭ್ಯವಿಲ್ಲ..!
ಸಾಂದರ್ಭಿಕ ಚಿತ್ರ
  • Share this:
ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದ ರಿಲಯನ್ಸ್ ಜಿಯೋ ಇದೀಗ ಇತರೆ ನೆಟ್​ವರ್ಕ್​ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಚಾರ್ಜ್ ಮಾಡಲಿದೆ. ಈ ಹೊಸ ನಿಯಮವು ಇಂದಿನಿಂದ ಜಾರಿಗೆ ಬರಲಿದೆ.

ಅಂದರೆ ಇನ್ಮುಂದೆ ಜಿಯೋ ಟು ಏರ್​ಟೆಲ್ ಅಥವಾ ವೊಡಾಫೋನ್ ಸೇರಿದಂತೆ ಇನ್ನಿತರ ನೆಟ್​ವರ್ಕ್​ಗಳಿಗೆ ಕರೆ ಮಾಡಿದರೆ ಶುಲ್ಕ ಅನ್ವಯವಾಗಲಿದೆ. ಇದರ ಹೊರತಾಗಿ ಡೇಟಾ ಸೌಲಭ್ಯವನ್ನು ಉಚಿತವಾಗಿ ನೀಡುವುದಾಗಿ ಜಿಯೋ ಕಂಪೆನಿ ಹೇಳಿಕೊಂಡಿದೆ.

ಇತರೆ ಜಿಯೋ ಫೋನ್‌ಗಳು ಮತ್ತು ಲ್ಯಾಂಡ್‌ಲೈನ್‌ಗಳಲ್ಲಿ ಜಿಯೋ ಬಳಕೆದಾರರು ಮಾಡುವ ಕರೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅಂತೆಯೇ, ವಾಟ್ಸ್​ಆ್ಯಪ್, ಫೇಸ್ ಟೈಮ್ ಮತ್ತು ಇತರ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಮಾಡಿದ ಕರೆಗಳಿಗೆ ಈ ಶುಲ್ಕ ವಿಧಿಸಲಾಗುವುದಿಲ್ಲ. ಹಾಗೆಯೇ ಇತರೆ ನೆಟ್‌ವರ್ಕ್‌ಗಳಿಂದ ಒಳಬರುವ ಕರೆಗಳು ಮೊದಲಿನಂತೆ ಉಚಿತವಾಗಿರಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಕನ್ನಡ ಚಿತ್ರನಟನ ಮಗಳೊಂದಿಗೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಲವ್ವಿ-ಡವ್ವಿ?

ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) 2017 ರ ಇಂಟರ್​ಕನೆಕ್ಟ್​ ಬಳಕೆ ಶುಲ್ಕವನ್ನು (ಐಯುಸಿ) ನಿಮಿಷಕ್ಕೆ 14 ಪೈಸೆಗಳಿಂದ 6 ಪೈಸೆಗಳಿಗೆ ಇಳಿಸಿತ್ತು. ಹಾಗೆಯೇ ಈ ಶುಲ್ಕವನ್ನು 2020 ರ ಜನವರಿಯ ವೇಳೆಗೆ ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದು ಹೇಳಿತ್ತು. ಆದರೆ ಈಗ TRAI ಈ ಗಡುವನ್ನು ವಿಸ್ತರಿಸಲು ಮುಂದಾಗಿದೆ ಎಂದು ಹೇಳಲಾಗಿದೆ.



2015 ರಿಂದ ಜಿಯೋ ಉಚಿತ ಕರೆ ಸೌಲಭ್ಯವನ್ನು ಒದಗಿಸುತ್ತಿದೆ. ಇದರಿಂದ  ಕಳೆದ ಮೂರು ವರ್ಷಗಳಲ್ಲಿ ಇತರ ಮೊಬೈಲ್ ಆಪರೇಟರ್‌ಗಳಾದ ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾಗಳಿಗೆ ಐಯುಸಿ ಶುಲ್ಕವಾಗಿ ಜಿಯೋ ಟೆಲಿಕಾಂ ಸಂಸ್ಥೆ ಸುಮಾರು 13,500 ಕೋಟಿ ರೂಪಾಯಿಗಳನ್ನು ಪಾವತಿಸಿದೆ.
Loading...

ಈ ನಷ್ಟದ ಮೊತ್ತವನ್ನು ಸರಿದೂಗಿಸಲು ಅನ್ಯ ನೆಟ್​ವರ್ಕ್​ಗಳಿಗೆ ಮಾಡುವ ವಾಯ್ಸ್ ಕರೆಗಳಿಗೆ ದರ ವಿಧಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಹೀಗೆ ವಿಧಿಸಲಾಗುವ ದರಕ್ಕೆ ಸಮನಾಗಿ ಡೇಟಾವನ್ನು ಜಿಯೋ ಉಚಿತವಾಗಿ ನೀಡಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

First published:October 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...