ಜಿಯೋ ಸ್ವಿಚ್​ ಆ್ಯಪ್​: ವಿಡಿಯೋ, ಫೋಟೋ ಶೇರ್​ ಮಾಡುವುದು ಈಗ ಮತ್ತಷ್ಟು ಸುಲಭ

ಆ್ಯಪ್​ ಸ್ಟೋರ್​ನಿಂದ ಜಿಯೋ ಸ್ವಿಚ್​ ಅಪ್ಲಿಕೇಷನ್​ ಅನ್ನು ಡೌನ್​ಲೋಡ್ ಮಾಡಿಕೊಂಡ ಬಳಿಕ ಅದನ್ನು ಒಪನ್ ಮಾಡಿ. ಇಲ್ಲಿ SEND ಮತ್ತು RECEIVE ಎಂಬ ಎರಡು ಆಯ್ಕೆಗಳನ್ನು ನೀಡಲಾಗಿರುತ್ತದೆ.

zahir | news18
Updated:February 8, 2019, 11:03 AM IST
ಜಿಯೋ ಸ್ವಿಚ್​ ಆ್ಯಪ್​: ವಿಡಿಯೋ, ಫೋಟೋ ಶೇರ್​ ಮಾಡುವುದು ಈಗ ಮತ್ತಷ್ಟು ಸುಲಭ
ಸಾಂದರ್ಭಿಕ ಚಿತ್ರ
  • News18
  • Last Updated: February 8, 2019, 11:03 AM IST
  • Share this:
ರಿಲಯನ್ಸ್​ ಜಿಯೋ ಟೆಲಿಕಾಂ ಸಂಸ್ಥೆ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಹೊಸ ಹೊಸ ಆ್ಯಪ್​ಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗಷ್ಟೇ ಜಿಯೋ ರೈಲ್​ ಆ್ಯಪ್​ ಬಿಡುಗಡೆ ಮಾಡಿದ್ದ ಕಂಪೆನಿಯು, ಇದೀಗ ಮತ್ತಷ್ಟು ವೈಶಿಷ್ಠ್ಯಗಳೊಂದಿಗೆ ಜಿಯೋ ಸ್ವಿಚ್​ ಆ್ಯಪ್​ ಅನ್ನು ಪರಿಚಯಿಸಿದೆ. ಈ ಅಪ್ಲಿಕೇಷನ್​ ಬಳಸಿ ತುಂಬಾ ಸುಲಭವಾಗಿ ನಿಮ್ಮ ಮೊಬೈಲ್​ನಲ್ಲಿರುವ ಡೇಟಾಗಳನ್ನು ವರ್ಗಾವಣೆ ಮಾಡಿಕೊಳ್ಳಬಹುದು.

ಸ್ವಿಚ್​ ಆ್ಯಪ್​ ಮೂಲಕ ಯಾವುದೇ ಗಾತ್ರದ ಫೋಟೋಗಳು, ವಿಡಿಯೋ ಮತ್ತು ಮ್ಯೂಸಿಕ್​ಗಳನ್ನು ಹಂಚಿಕೊಳ್ಳಬಹುದಾಗಿದೆ. ಈ​ ಆ್ಯಪ್​ ಅನ್ನು ಜಿಯೋ ಫೋನ್​ ಹೊರತಾಗಿ, ಆ್ಯಂಡ್ರಾಯ್ಡ್​ ಮತ್ತು ಐಒಎಸ್​ ಮೊಬೈಲ್​ಗಳಲ್ಲಿಯೂ ಡೌನ್​ಲೋಡ್​ ಮಾಡಿಕೊಳ್ಳಬಹುದು. ಇದರಲ್ಲಿ ಯಾವುದೇ ರೀತಿಯ ಜಾಹೀರಾತನ್ನು ನೀಡದಿರುವುದು ಇದರ ವಿಶೇಷತೆ.

ಡೇಟಾ ವರ್ಗಾವಣೆ ಹೇಗೆ:
ಆ್ಯಪ್​ ಸ್ಟೋರ್​ನಿಂದ ಜಿಯೋ ಸ್ವಿಚ್​ ಅಪ್ಲಿಕೇಷನ್​ ಅನ್ನು ಡೌನ್​ಲೋಡ್ ಮಾಡಿಕೊಂಡ ಬಳಿಕ ಅದನ್ನು ಒಪನ್ ಮಾಡಿ. ಇಲ್ಲಿ SEND ಮತ್ತು RECEIVE ಎಂಬ ಎರಡು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಬೇರೆಯವರಿಗೆ ಫೈಲ್​ ಕಳುಹಿಸಬೇಕಿದ್ದರೆ, ಆ ಫೈಲ್​ ಅನ್ನು ಆಯ್ಕೆ ಮಾಡಿ ನಂತರ SEND ಬಟನ್​ ಕ್ಲಿಕ್ ಮಾಡಿ. ಇದೇ ವೇಳೆ ರಿಸೀವರ್​ ಸರ್ಚಿಂಗ್​ ಆಯ್ಕೆಯನ್ನು ತೋರಿಸುತ್ತದೆ. ಇಲ್ಲಿ ನೀವು ರಿಸೀವರ್ ಹೆಸರನ್ನು ಕ್ಲಿಕ್ ಮಾಡುವ ಮೂಲಕ ಕಳುಹಿಸಬಹುದು. ಅದೇ ರೀತಿ ನೀವು ಫೈಲ್​ಗಳನ್ನು ಅಂದರೆ ವಿಡಿಯೋ, ಫೋಟೋ, ಹಾಡುಗಳನ್ನು ಪಡೆದುಕೊಳ್ಳುವಾಗ ರಿಸೀವ್ ಬಟನ್​ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯ ನೇಮಕಾತಿ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ, ತಿಂಗಳ ವೇತನ 28 ಸಾವಿರ ರೂ.

ಇನ್ನು ಮುಂದೆ ಸಿನಿಮಾ, ವಿಡಿಯೋ ಸೇರಿದಂತೆ ಫೈಲ್​ಗಳನ್ನು ಮೊಬೈಲ್​ನಿಂದ ಮೊಬೈಲ್​ಗೆ ವರ್ಗಾಯಿಸಲು ಜಿಯೋ ಸ್ವಿಚ್​ ಆ್ಯಪ್​ಗಳನ್ನು ಬಳಸಿಕೊಳ್ಳುವುದು ಉತ್ತಮ. ಏಕೆಂದರೆ ಇದು ಇತರೆ ಟ್ರಾನ್ಸಫರ್ ಆ್ಯಪ್​ಗಳಿಗಿಂತ ಅತ್ಯಂತ ವೇಗವಾಗಿ ಈ ಆ್ಯಪ್ ಕಾರ್ಯ ನಿರ್ವಹಿಸುತ್ತದೆ ಎಂದು ಜಿಯೋ ತಿಳಿಸಿದೆ.
First published: February 8, 2019, 10:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading