Disney+ Hotstar: ಕೆಲವು ಪ್ರಿಪೇಯ್ಡ್ ಯೋಜನೆಗಳನ್ನ ಪರಿಷ್ಕರಿಸಿದ ಜಿಯೋ, ಹೆಚ್ಚುವರಿಯಾಗಿ 10GB ಡೇಟಾ ಉಚಿತ!

Jio Disney+ Hotstar plans: ಜಿಯೋ ಕೂಡ ಕೆಲವು ಯೋಜನೆಗಳಿಗೆ ತಕ್ಕಂತೆ ಡೇಟಾ ಪ್ರಯೋಜನಗಳನ್ನು ನೀಡುತ್ತಿದೆ. ಒಟ್ಟಿನಲ್ಲಿ ಜಿಯೋ ಡಿಸ್ನಿ+ ಹಾಟ್ ಸ್ಟಾರ್ ಯೋಜನೆಗಳ ಜೊತೆಗೆ 10GB ವರೆಗಿನ ಹೆಚ್ಚುವರಿ ಡೇಟಾ  ಪ್ರಯೋಜನವನ್ನ ನೀಡುತ್ತದೆ.

Jio

Jio

  • Share this:
    Jio Disney+ Hotstar plans: ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಡಿಸ್ನಿ+ ಹಾಟ್‌ಸ್ಟಾರ್ಗಳ ಅಧಿಕ ಪ್ರಯೋಜನಗಳು ದೊರಕುವಂತೆ ಮಾಡಿವೆ. ಅದಕ್ಕಾಗಿ ಏರ್​​ಟೆಲ್ ತನ್ನ ಕೆಲವು ಯೋಜನೆಗಳನ್ನು ಪರಿಷ್ಕರಿಸಿದರೆ, ಅದರಂತೆ ಜಿಯೋ ಕೂಡ ಕೆಲವು ಯೋಜನೆಗಳಿಗೆ ತಕ್ಕಂತೆ ಡೇಟಾ ಪ್ರಯೋಜನಗಳನ್ನು ನೀಡುತ್ತಿದೆ. ಒಟ್ಟಿನಲ್ಲಿ ಜಿಯೋ ಡಿಸ್ನಿ+ ಹಾಟ್ ಸ್ಟಾರ್ ಯೋಜನೆಗಳ ಜೊತೆಗೆ 10GB ವರೆಗಿನ ಹೆಚ್ಚುವರಿ ಡೇಟಾ  ಪ್ರಯೋಜನವನ್ನ ನೀಡುತ್ತದೆ. ಇನ್ನು ಟೆಲಿಕಾಂ ಈ ಯೋಜನೆಗಳ ಬೆಲೆಯನ್ನು ನೇರವಾಗಿ ಮೂಲ ಡಿಸ್ನಿ+ ಹಾಟ್‌ಸ್ಟಾರ್ ಯೋಜನೆಯ ಬೆಲೆಗೆ ಅನುಗುಣವಾಗಿ ಹೆಚ್ಚಿಸಿದರೂ, ಈಗ ಬಳಕೆದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹೆಚ್ಚುವರಿ ಡೇಟಾವನ್ನು ನೀಡುವ ಗುರಿಯನ್ನು ಹೊಂದಿದೆ.

    ಜಿಯೋ ನವೀಕರಿಸಿದ 499 ರೂ, 888 ರೂ ಮತ್ತು 2599 ರೂ ಯೋಜನೆಗಳ ಪೈಕಿ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಪ್ರಯೋಜನಗಳನ್ನು ನೀಡುತ್ತಿದೆ.

    ಜಿಯೋ 499 ರೂ ಪ್ಲಾನ್ ರೀಚಾರ್ಜ್​ ಮಾಡಿದರೆ 3GB ದೈನಂದಿನ ಡೇಟಾ ಸಿಗುತ್ತದೆ. ಈ ಪ್ಲಾನ್​ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. 666 ರೂ ಪ್ಲಾನ್​ ಪರಿಚಯಿಸಿದ್ದು, ಇದರ ಮೂಲಕ 2GB ದೈನಂದಿನ ಡೇಟಾ ಸಿಗಲಿದೆ. ಈ ಪ್ಲಾನ್​ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. 888 ರೂ ಪ್ಲಾನ್​ ಅಳವಡಿಸಕೊಂಡರೆ ಪ್ರತಿದಿನ 2GB ಡೇಟಾ ಸಿಗಲಿದೆ. 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಂತಿಮವಾಗಿ, ಡಿಸ್ನಿ+ ಹಾಟ್‌ಸ್ಟಾರ್ ಪ್ರಯೋಜನಗಳೊಂದಿಗೆ 2599 ರೂ.ವಿನ ವಾರ್ಷಿಕ ಯೋಜನೆ ಇದ್ದು, 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರಿಗೆ 2GB ದೈನಂದಿನ ಡೇಟಾವನ್ನು ಸಿಗಲಿದೆ.

    ಈ ಎಲ್ಲಾ ಯೋಜನೆಗಳು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಸಹ ನೀಡುತ್ತವೆ. ಜಿಯೋ ತನ್ನ ವೆಬ್‌ಸೈಟ್ ಅನ್ನು ಪರಿಷ್ಕರಿಸಿದ್ದು, 10 GB ಹೆಚ್ಚುವರಿ ಡೇಟಾವನ್ನು ಸಿಗಲಿದೆ ಎಂದು ಹೇಳಿದೆ.

    499 ರೂ ಪ್ಲಾನ್ ಮೂಲಕ ಹೆಚ್ಚುವರಿ 6GB ಡೇಟಾವನ್ನು ನೀಡುತ್ತದೆ. 888 ರೂ ಪ್ಲಾನ್ ಅಳವಡಿಸಿಕೊಂಡರೆ 2GB ದೈನಂದಿನ ಡೇಟಾವನ್ನು ನೀಡುತ್ತದೆ. ಅಂತೆಯೇ 2599 ರೂ ಪ್ರಿಪೇಯ್ಡ್ ಪ್ಲಾನ್ ಅಳವಡಿಸಿಕೊಂಡರೆ 10GB ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ.

    ಜಿಯೋ ತನ್ನ ಬಳಕೆದಾರರಿಗೆ ಆಗಾಗ ಏನಾದರೊಂದು ಕೊಡುಗೆಯನ್ನು  ನೀಡುತ್ತಿರುತ್ತದೆ. ಅದರಲ್ಲೂ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಹೊಸ ಯೋಜನೆಗಳನ್ನು ಮತ್ತು ಕಡಿಮೆ ಬೆಲೆಗೆ ಅಧಿಕ ಪ್ರಯೋಜನ ಒದಗಿಸುವ ಯೋಜನೆಯನ್ನು ನೀಡುತ್ತಿರುತ್ತದೆ. ಇತ್ತೀಚೆಗೆ ಜಿಯೋ ಗ್ರಾಹಕರಿಗಾಗಿ ಜಿಯೋ ಫೋನ್ ಅನಾವರಣಗೊಳಿಸಿದೆ.

    ಇದನ್ನು ಓದಿ⇒ Youtube: ಹೊಸ ಫೀಚರ್ ಪರಿಚಯಿಸಿದ ಯುಟ್ಯೂಬ್..ಯಾವುದೇ ಭಾಷೆಯ ಕಾಮೆಂಟ್​​ಗಳನ್ನ ಕನ್ನಡದಲ್ಲೇ ಓದಬಹುದು

    ಮಾತ್ರವಲ್ಲದೆ, ಇತ್ತೀಚೆಗೆ ಜಿಯೋ  ಹೊಸ 75 ರೂ.ವಿನ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಪ್ರಸ್ತುತ ಅಗ್ಗದ ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ.   ಟೆಲಿಕಾಂ ಆಪರೇಟರ್ ಜಿಯೋ ಇತ್ತೀಚೆಗೆ 39 ಮತ್ತು 69 ರೂ.ವಿನ ಜಿಯೋಫೋನ್ ಪ್ರಿಯೇಯ್ಡ್ ಯೋಜನೆಯನ್ನ ಸ್ಥಗಿತಗೊಳಿಸಿತು. ಅದರ ಬೆನ್ನಲ್ಲೇ ಇದೀಗ 75 ರೂ.ವಿನ ಪ್ಲಾನ್ ಪರಿಚಯಿಸಿದೆ.

    ಇದನ್ನು ಓದಿ⇒Mind Matters: ತಲೆಗೆ ದಿನದಲ್ಲಿ 60 ಸಾವಿರ ಆಲೋಚನೆಗಳು ಬರುತ್ತವಂತೆ! ಹಾಗಿದ್ರೆ ಎಷ್ಟು ಬಾರಿ ಉಸಿರಾಡುತ್ತೇವೆ ಗೊತ್ತಾ?
     ಜಿಯೋಫೊನ್ ಬಳಕೆದಾರರಿಗಾಗಿ ಪರಿಚಯಿಸಿದ 75 ರೂ.ವಿನ ಪ್ರಿಪೇಯ್ಡ್ ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ, ದಿನಕ್ಕೆ 50 ಎಸ್ಎಮ್ಎಸ್ ಮತ್ತು ಜಿಯೋ ಟಿವಿ, ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್​​ನಂತಹ ಜಿಯೋ ಆ್ಯಪ್ ಪ್ರವೇಶವನ್ನು ನೀಡುತ್ತಿದೆ. ಈ ಪ್ಲಾನ್ ಅಳವಡಿಸಿಕೊಂಡರೆ ಅನಿಯಮಿತ ಕರೆ ಸೌಲಭ್ಯ ಮತ್ತು 200MB ಬೂಸ್ಟರ್​ನೊಂದಿಗೆ ತಿಂಗಳಿಗೆ 4ಜಿ ನೆಟ್​ವರ್ಕ್​ನಡಿಯಲ್ಲಿ 3GB ಡೇಟಾ ನೀಡುತ್ತಿದೆ. ಸದ್ಯ ವೈಬ್​ಸೈಟ್ ಮತ್ತು ಮೈಜಿಯೋ ಆ್ಯಪ್​ನಲ್ಲಿ ನೂತನ ಪ್ಲಾನ್ ಅಳವಡಿಸಲು ಸಿಗುತ್ತಿದೆ.



    Published by:Harshith AS
    First published: