• Home
 • »
 • News
 • »
 • tech
 • »
 • Jio Postpaid Plus; ಜಿಯೋ ಪೋಸ್ಟ್​ಪೇಯ್ಡ್​​ ಪ್ಲಸ್​​ ಸೇವೆ ಆರಂಭ; ಉಚಿತ ವಿಡಿಯೋ ಸ್ಟ್ರೀಮಿಂಗ್, ಇಂಟರ್​ನ್ಯಾಷನಲ್​ ಕರೆ ಲಭ್ಯ

Jio Postpaid Plus; ಜಿಯೋ ಪೋಸ್ಟ್​ಪೇಯ್ಡ್​​ ಪ್ಲಸ್​​ ಸೇವೆ ಆರಂಭ; ಉಚಿತ ವಿಡಿಯೋ ಸ್ಟ್ರೀಮಿಂಗ್, ಇಂಟರ್​ನ್ಯಾಷನಲ್​ ಕರೆ ಲಭ್ಯ

ಜಿಯೋ ಪೋಸ್ಟ್​​ಪೇಯ್ಡ್​​ ಪ್ಲಸ್

ಜಿಯೋ ಪೋಸ್ಟ್​​ಪೇಯ್ಡ್​​ ಪ್ಲಸ್

Reliance Jio: ಜಿಯೋ ಪೋಸ್ಟ್​​ಪೇಯ್ಡ್​​ ಪ್ಲಸ್​​ ಬಳಕೆದಾರರು ಉಚಿತ ನೆಟ್​ಪ್ಲಿಕ್, ಅಮೆಜಾನ್​ ಪ್ರೈಮ್​ ವಿಡಿಯೋ, ಡಿಸ್ನಿ+ಹಾಟ್​ಸ್ಟಾರ್​​ ವಿಐಪಿ ಚಂದಾದಾರಿಕೆ ಪಡೆಯಬಹುದಾಗಿದೆ.

 • Share this:

  ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಯಾದ ರಿಲಾಯನ್ಸ್​ ಜಿಯೋ ಇದೀಗ ಜಿಯೋ ಪೋಸ್ಟ್​ಪೇಯ್ಡ್​​ ಪ್ಲಸ್​​ ಸೇವೆಯನ್ನು ಒದಗಿಸಿಸಲು ಮುಂದಾಗಿದೆ. ಇದರ ಮೂಲಕ ಬಳಕೆದಾರರಿಗೆ ಸಂಪರ್ಕ ಮತ್ತು ಉತ್ತಮ ಮನರಂಜನಾ ಸೇವೆಯನ್ನು ನೀಡಲಿದೆ. ಜಿಯೋ ಪೋಸ್ಟ್​ಪೇಯ್ಡ್​ ಪ್ಲಸ್ ​ ವಿಡಿಯೋ ಸ್ಟ್ರೀಮಿಂಗ್​​ ಸೇವೆ ಒದಗಿಸಲಿದೆ. ಅದರ ಜೊತೆಗೆ ಜಿಯೋ ಆ್ಯಪ್​ ಮೂಲಕ ಡೇಟಾ ರೋಲ್​ಓವರ್​, ಇಂಟರ್​ನ್ಯಾಷನಲ್​​ ಕರೆ ಸೌಲಭ್ಯ ಸಿಗಲಿದೆ. ಜಿಯೋ ಪೋಸ್ಟ್​​ಪೇಯ್ಡ್​ ಪ್ಲಸ್​ ಸೇವೆಯನ್ನು ಪಡೆಯುವವರು ಹೊಸ ಸಿಮ್​​ ಖರೀದಿಸಬೇಕಾಗುತ್ತದೆ. ಆದರೆ ಫೋನ್​ ನಂಬರ್​ ಮಾತ್ರ ಒಂದೇ ಆಗಿರುತ್ತದೆ. ಸೆಪ್ಟೆಂಬರ್​ 24ರಿಂದ ಜಿಯೋ ಪೋಸ್ಟ್​​ಪೇಯ್ಡ್​​ ಪ್ಲಸ್​​ ಸೇವೆ ಬಳಕೆಗೆ ಸಿಗಲಿದೆ.


  ಜಿಯೋ ಪೋಸ್ಟ್​​ಪೇಯ್ಡ್​​ ಪ್ಲಸ್​​ ವಿಶೇಷತೆ:


  ಜಿಯೋ ಪೋಸ್ಟ್​​ಪೇಯ್ಡ್​​ ಪ್ಲಸ್​​ ಬಳಕೆದಾರರು ನೆಟ್​ಪ್ಲಿಕ್, ಅಮೆಜಾನ್​ ಪ್ರೈಮ್​ ವಿಡಿಯೋ, ಡಿಸ್ನಿ+ಹಾಟ್​ಸ್ಟಾರ್​​ ವಿಐಪಿ ಚಂದಾದಾರಿಕೆ ಪಡೆಯಬಹುದಾಗಿದೆ. ಜೊತೆಗೆ ಜಿಯೋ ಆ್ಯಪ್​​ ಬಳಸಿ 650 ಟಿವಿ ಚಾನೆಲ್​​​ ವೀಕ್ಷಿಸಬಹುದಾಗಿದೆ, 5 ಕೋಟಿಗೂ ಹೆಚ್ಚು ಸಾಂಗ್​ ಮತ್ತು  300 ನ್ಯೂಸ್​​ ಪೇಪರ್​ ಓದಬಹುದಾಗಿದೆ.


  ಬಳಕೆದಾರರು 500ಜಿಬಿ ಡೇಟಾ ಮತ್ತು ವೈ-ಫೈ ಸೇವೆಯನ್ನು ಬಳಸಬಹುದಾಗಿದೆ. ಕುಟುಂಬ ಸದಸ್ಯರಿಗಾಗಿ ಜಿಯೋ ಪೋಸ್ಟ್​​ಪೇಯ್ಡ್​​ ಪ್ಲಸ್​​ 250 ರೂ.ವಿನ ಪ್ಲಾನ್​ ಪರಿಚಯಿಸಿದೆ. ಇದರಲ್ಲಿ ಇಂಟರ್​ನ್ಯಾಷನಲ್ ರೋಮಿಂಗ್​ ಕರೆಗಳು ಸೇರಿವೆ. ವಿದೇಶಕ್ಕೆ ಹೋಗುವ ಭಾರತೀಯ ಪ್ರಯಾಣಿಕರಿಗೆ ಫೈಟ್ ​​ಬಗ್ಗೆ ಮಾಹಿತಿ ತಿಳಿಯಬಹುದಾಗಿದೆ. ಇನ್ನು ಚಂದಾದಾರರು USA​ ಮತ್ತು UAEಗೆ  ಅಂತರಾಷ್ಟ್ರೀಯ ಕರೆಯನ್ನು ಉಚಿತವಾಗಿ ಮಾಡಬಹುದಾಗಿದೆ.


  ಜಿಯೋ ಪೋಸ್ಟ್​​ಪೇಯ್ಡ್​​ ಪ್ಲಸ್​​ ಪ್ಲಾನ್​:


  ನೂತನ ಸೇವೆಯನ್ನು ಬಳಸುವ ಗ್ರಾಹಕರಿಗೆ ಜಿಯೋ ಪೋಸ್ಟ್​​ಪೇಯ್ಡ್​​ ಪ್ಲಸ್​​ 399 ರೂ.ನಿಂದ 1,499 ರೂ.ವರೆಗೆ ಪ್ಲಾನ್​​ಗಳನ್ನು ಪರಿಚಯಿಸಿದೆ. ಅದರಲ್ಲಿ ಅನಿಯಮಿತ ಕರೆ ಸೌಲಭ್ಯ ಮತ್ತು ಎಸ್​​​ಎಮ್​ಎಸ್​ ಸೇವೆ ಜೊತೆಗೆ ಸ್ಟ್ರೀಮಿಂಗ್​ ಸೇವೆಯನ್ನು ನೀಡುತ್ತಿದೆ.


  -399 ಪ್ಲಾನ್​ ಮೂಲಕ 75GB ಡೇಟಾ, 200GB ಡೇಟಾ ರೋಲ್​ಓವರ್​ ಸಿಗಲಿದೆ.


  -599 ಪ್ಲಾನ್​ ಅಳವಡಿಸಿಕೊಂಡರೆ 100GB, 200GB ಡೇಟಾ ರೋಲ್​ಓವರ್


  -799 ಪ್ಲಾನ್​ನಲ್ಲಿ 150GB ಡೇಟಾ, 200GB ಡೇಟಾ ರೋಲ್​ಓವರ್


  -999 ರೀಚಾರ್ಜ್​ ಮಾಡಿದರೆ 200GB ಡೇಟಾ, 500GB ರೋಲ್​​ಓವರ್​


  -1,499 ಪ್ಲಾನ್​ ಅಳವಡಿಸಿಕೊಂಡರೆ 300GB ಡೇಟಾ, 500GB ಡೇಟಾ ರೋಲ್​​ಓವರ್​


  ಜಿಯೋ ಪೋಸ್ಟ್​​ಪೇಯ್ಡ್​​ ಪ್ಲಸ್ ಸೇವೆ ಪಡೆಯುವುದು ಹೇಗೆ?


  ಪೋಸ್ಟ್​ಪೇಯ್ಡ್​ ಬಳಕೆದಾರರು ಜಿಯೋ ಪೋಸ್ಟ್​​ಪೇಯ್ಡ್​​ ಪ್ಲಸ್ ಸೇವೆಯನ್ನು ಅಳವಡಿಸಿಕೊಳ್ಳಬೇಕಾದರೆ  'Hi' ಎಂದು 8850188501 ನಂಬರ್​ಗೆ ವಾಟ್ಸ್​ಆ್ಯಪ್​ ಮಾಡಬೇಕು.


  -ನಂತರ jio.Com​/ ಪೋಸ್ಟ್​ಪೇಯ್ಡ್​ ಅಥವಾ 180088998899 ನಂಬರ್​ಗೆ ಕರೆ ಮಾಡಬೇಕು.


  -ಇದಾದ ಬಳಿಕ ಹತ್ತಿರದ ಜಿಯೋ ಸ್ಟೋರ್​ ಅಥವಾ ರಿಲಾಯನ್ಸ್​​ ಡಿಜಿಟಲ್​​ ಸ್ಟೋರ್​ಗೆ  ತೆರಳಿ ಸಿಮ್​ ಪಡೆಯಬಹುದಾಗಿದೆ.

  Published by:Harshith AS
  First published: