• Home
 • »
 • News
 • »
 • tech
 • »
 • JioCricket App; ಜಿಯೋ ಫೋನ್ ಬಳಕೆದಾರರಿಗೆ ಜಿಯೋಕ್ರಿಕೆಟ್ ಆ್ಯಪ್ ಲಭ್ಯ; ಪಂದ್ಯಗಳ ಮಾಹಿತಿಯನ್ನ ಸುಲಭವಾಗಿ ಪಡೆಯಬಹುದು

JioCricket App; ಜಿಯೋ ಫೋನ್ ಬಳಕೆದಾರರಿಗೆ ಜಿಯೋಕ್ರಿಕೆಟ್ ಆ್ಯಪ್ ಲಭ್ಯ; ಪಂದ್ಯಗಳ ಮಾಹಿತಿಯನ್ನ ಸುಲಭವಾಗಿ ಪಡೆಯಬಹುದು

ಜಿಯೋ ಫೋನ್

ಜಿಯೋ ಫೋನ್

ಜಿಯೋ ಫೋನ್​ ಬಳಕೆದಾರರು ಜಿಯೋ ಕ್ರಿಕೆಟ್ ಆ್ಯಪ್​ ಮೂಲಕ​ ಕ್ರಿಕೆಟ್​ ಕುರಿತಾದ ಅಪ್ಡೇಟ್ಸ್​ ನೋಡಬಹುದಾಗಿದೆ.  ಜೊತೆಗೆ ಕ್ರಿಕೆಟ್​ ಪಂದ್ಯದ ಅಂಕಗಳು, ಪಂದ್ಯದ ಕುರಿತ ಮಾಹಿತಿ, ಕ್ರಿಕೆಟ್​ ನ್ಯೂಸ್​ ಮತ್ತು ವಿಡಿಯೋ ಸಿಗಲಿದೆ.

 • Share this:

  ಕೊರೋನಾ ನಡುವೆಯೂ ಐಪಿಎಲ್ 2020​ ಪಂದ್ಯ ನಡೆಯುತ್ತಿದೆ. ಅರಬ್​ ನೆಲದಲ್ಲಿ ತಂಡಗಳು ಬ್ಯಾಟ್​ ಬೀಸುತ್ತಿವೆ. ಸದ್ಯ ಎಲ್ಲರ ಕಣ್ಣು  ಐಪಿಎಲ್​ ಪಂದ್ಯದ ಮೇಲಿದೆ. ಯಾವ ತಂಡ ಜಯಶಾಲಿಯಾಗುತ್ತದೆ. ವಿನ್ನರ್​ ಯಾರಾಗಲಿದ್ದಾರೆ? ಎಂಬ ಕುತೂಹಲದಿಂದ ಅಂದಿನ ಪಂದ್ಯವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ರಿಲಾಯನ್ಸ್ ಸಂಸ್ಥೆ​ ತನ್ನ ಜಿಯೋ ಫೋನ್​ನಲ್ಲಿ ಕ್ರಿಕೆಟ್​ ಕುರಿತಾದ ಮಾಹಿತಿಯನ್ನು ನೀಡಲು ಮುಂದಾಗಿದೆ.


  ಜಿಯೋ ಫೋನ್​ ಬಳಕೆದಾರರು ಜಿಯೋ ಕ್ರಿಕೆಟ್ ಆ್ಯಪ್​ ಮೂಲಕ​ ಕ್ರಿಕೆಟ್​ ಕುರಿತಾದ ಅಪ್ಡೇಟ್ಸ್​ ನೋಡಬಹುದಾಗಿದೆ.  ಜೊತೆಗೆ ಕ್ರಿಕೆಟ್​ ಪಂದ್ಯದ ಅಂಕಗಳು, ಪಂದ್ಯದ ಕುರಿತ ಮಾಹಿತಿ, ಕ್ರಿಕೆಟ್​ ನ್ಯೂಸ್​ ಮತ್ತು ವಿಡಿಯೋ ಸಿಗಲಿದೆ. ಬೇರೆ ಬೇರೆ ಭಾಷೆಯಲ್ಲೂ ಕೂಡ ಈ ಆ್ಯಪ್​ ಅನ್ನು ಬಳಸುವುದರ ಜೊತೆಗೆ ಮಾಹಿತಿ ಪಡೆಯಬಹುದಾಗಿದೆ.


  ಅಷ್ಟು ಮಾತ್ರವಲ್ಲದೆ, ಕ್ರಿಕೆಟ್​ ಗೇಮ್​ ಆಡಬಹುದಾಗಿದೆ. ನವೆಂಬರ್​ 10ರ ವರೆಗೆ ನಡೆಯಲಿರುವ ಐಪಿಎಲ್​ ಫೈನಲ್​ ಪಂದ್ಯದ ಮಾಹಿತಿಯನ್ನು ಜಿಯೋ ಕ್ರಿಕೆಟ್​ ಮೂಲಕ ಪಡೆಯಬಹುದಾಗಿದೆ.


  ಇನ್ನು ಇಂಗ್ಲಿಂಷ್​, ಹಿಂದಿ ಸೇರಿದಂತೆ ಕನ್ನಡ ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ತಮಿಳು, ತೆಲುಗು ಭಾಷೆಯಲ್ಲಿ ಬಳಸಬಹುದಾದ ಆಯ್ಕೆಯನ್ನು ನೀಡಿದೆ.


  ಜಿಯೋ ಫೋನ್​ ಬಳಕೆದಾರರಿಗೆ ಕ್ರಿಕೆಟ್​ ಕುರಿತಾಗಿ ಸರಿಯಾದ ಅಪ್ಡೇಟ್ಸ್​ ನೀಡಲು ಜಿಯೋ ಕ್ರಿಕೆಟ್​ ಆ್ಯಪ್ ಬಿಡುಗಡೆ ಮಾಡಿದೆ. ಆ್ಯಂಡ್ರಾಯ್ಡ್​ ಬಳಕೆದಾರರು ಜಿಯೋ ಆ್ಯಪ್​ ಮೂಲಕ ಪಂದ್ಯ ಲೈವ್​ ವೀಕ್ಷಿಸುತ್ತಿದ್ದಾರೆ.


  ಇನ್ನು ಜಿಯೋ ಕ್ರಿಕೆಟ್​ ಆ್ಯಪ್​ನಲ್ಲಿ ಕ್ರಿಕೆಟ್​ ಪ್ಲೇ ಅಲಾಂಗ್​ ಗೇಮ್​ ಅನ್ನು ಪರಿಚಯಿಸಿದೆ. ಇದರ ಮೂಲಕ ಗೇಮ್​ ಪ್ರಿಯರು 50 ಸಾವಿರ ಹಣ ಗಳಿಸಬಹುದಾಗಿದೆ. ಜಿಯೋ ಕ್ರಿಕೆಟ್​ ಅಪ್ಲಿಕೇಶನ್​ನಲ್ಲಿ ಕಾಣಿಸುವ ಹೋಮ್​ ಪೇಜ್​ನಲ್ಲಿ ಗೇಮ್​ ಸೆಕ್ಷನ್​ ನೀಡಿದೆ.


  Bike: 1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಬೈಕ್​ಗಳಿವು!

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು