ಜಿಯೋ ಸುದ್ದಿ ಸುಗ್ಗಿ: ಸಿದ್ಧವಾಗಿದೆ ‘ಜಿಯೋ ನ್ಯೂಸ್'​ ಆ್ಯಪ್​

JIO NEWS APP: ಗ್ರಾಹಕರಿಗಾಗಿ ಸುದ್ದಿಗಳನ್ನು ಪಸರಿಸುವ ನಿಟ್ಟಿನಲ್ಲಿ ‘ಜಿಯೋ ನ್ಯೂಸ್​ ಆ್ಯಪ್’​ 12ಕ್ಕೂ ಹೆಚ್ಚಿನ ಭಾರತೀಯ ಭಾಷೆಯಲ್ಲಿ ಲಭ್ಯವಿದೆ. ವಿಶೇಷವೆಂದರೆ ಈ ಆ್ಯಪ್​ ಬಳಕೆ ಮಾಡುವವರು ಭಾರತ ಮತ್ತು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುವ 150ಕ್ಕೂ ಹೆಚ್ಚಿನ ಲೈವ್​ ನ್ಯೂಸ್​ ಚಾನೆಲ್​ಗಳನ್ನು, 800ಕ್ಕೂ ಅಧಿಕ ಮ್ಯಾಗಜಿನ್​ಗಳನ್ನು, 250ಕ್ಕೂ ಹೆಚ್ಚಿನ ಸುದ್ದಿ ಪತ್ರಿಕೆಗಳನ್ನು ಮತ್ತು ಬ್ಲಾಗ್​, ಸುದ್ದಿ ವೆಬ್​ಸೈಟ್​ಗಳನ್ನು ಈ ಆ್ಯಪ್​ನಲ್ಲಿ ಕಾಣಬಹುದಾಗಿದೆ.

news18
Updated:April 11, 2019, 9:33 PM IST
ಜಿಯೋ ಸುದ್ದಿ ಸುಗ್ಗಿ: ಸಿದ್ಧವಾಗಿದೆ ‘ಜಿಯೋ ನ್ಯೂಸ್'​ ಆ್ಯಪ್​
ಜಿಯೋ ನ್ಯೂಸ್'​ ಆ್ಯಪ್
news18
Updated: April 11, 2019, 9:33 PM IST
ಮುಂಬೈಏಪ್ರಿಲ್ 11, 2019: ದಿನನಿತ್ಯದ ಸುದ್ದಿಯನ್ನು ವೀಕ್ಷಕರ ಮನೆ-ಮನೆಗೂ ತಲುಪಿಸುವ ನಿಟ್ಟಿನಲ್ಲಿ ರಿಲಾಯನ್ಸ್​ ಜಿಯೋ ಕಂಪೆನಿಯು ‘ಜಿಯೋ ನ್ಯೂಸ್​‘ ಆ್ಯಪ್​ವೊಂದನ್ನು ಪರಿಚಯಿಸಿದೆ. ಗ್ರಾಹಕರು ತಮ್ಮ ಮೊಬೈಲ್​ ಮೂಲಕ ಗೂಗಲ್​ ಪ್ಲೇಸ್ಟೋರ್ ಅಥವಾ ಆ್ಯಪಲ್​ ಸ್ಟೋರ್​​ನಿಂದ ‘ಜಿಯೋ ನ್ಯೂಸ್​ ಆ್ಯಪ್‘ ಅನ್ನು​ ಡೌನ್​ಲೋಡ್​ ಮಾಡಬಹುದಾಗಿದೆ.

ದೇಶದೆಲ್ಲೆಡೆ ಲೋಕಸಭಾ ಚುನಾವಣೆ ಕಾವೇರುತ್ತಿದ್ದು, ಚುನಾವಣೆ ಸುದ್ದಿಗಳನ್ನು, ಐಪಿಎಲ್​ ಪಂದ್ಯದ ಮಾಹಿತಿ ಮತ್ತು ವಿಶ್ವಕಪ್​ 2019ರ ಸಂಪೂರ್ಣ ಮಾಹಿತಿಯನ್ನು ಒದಗಿಸುವಲ್ಲಿ ‘ಜಿಯೋ ನ್ಯೂಸ್​ ಆ್ಯಪ್‘​ ಮುಂದಾಗಿದೆ. ಮಾತ್ರವಲ್ಲದೆ ದೇಶ- ವಿದೇಶಗಳಲ್ಲಿ ನಡೆಯುವ ಪ್ರಮುಖ ಘಟನೆಗಳನ್ನು ಈ ಆ್ಯಪ್​ ಮೂಲಕ ತಿಳಿದುಕೊಳ್ಳ ಬಹುದು.

ರಿಲಾಯನ್ಸ್​ ಕಂಪೆನಿ ಪರಿಚಯಿಸಿದ ‘ಜಿಯೋ ನ್ಯೂಸ್‘ ಆ್ಯಪ್​ನಲ್ಲಿ ಬ್ರೇಕಿಂಗ್​ ಸುದ್ದಿ​, ಲೈವ್​ ಟಿವಿ ಮತ್ತು ವಿಡಿಯೋಗಳು ಸಹ ದೊರಕಲಿದೆ. ಈ ಮೂಲಕ ಬಳಕೆದಾರಿಗೆ ಒಂದೇ ಆ್ಯಪ್​ನಲ್ಲಿ ಸರ್ವವೂ ದೊರಕಲಿದೆ.

ಇದನ್ನೂ ಓದಿ: ಕುರುಬರಿಗೇ ಒಂದು ಸೀಟು ಕೊಡಿಸಲಾಗದ ಈಶ್ವರಪ್ಪ ಮುಸ್ಲಿಮರಿಗೇನು ಕೊಡಿಸ್ತಾರೆ?; ಸಿಎಂ ಇಬ್ರಾಹಿಂ ಲೇವಡಿ

ಗ್ರಾಹಕರಿಗಾಗಿ ಸುದ್ದಿಗಳನ್ನು ಪಸರಿಸುವ ನಿಟ್ಟಿನಲ್ಲಿ ‘ಜಿಯೋ ನ್ಯೂಸ್​ ಆ್ಯಪ್’​ 12ಕ್ಕೂ ಹೆಚ್ಚಿನ ಭಾರತೀಯ ಭಾಷೆಯಲ್ಲಿ ಲಭ್ಯವಿದೆ. ವಿಶೇಷವೆಂದರೆ ಈ ಆ್ಯಪ್​ ಬಳಕೆ ಮಾಡುವವರು ಭಾರತ ಮತ್ತು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುವ 150ಕ್ಕೂ ಹೆಚ್ಚಿನ ಲೈವ್​ ನ್ಯೂಸ್​ ಚಾನೆಲ್​ಗಳನ್ನು, 800ಕ್ಕೂ ಅಧಿಕ ಮ್ಯಾಗಜಿನ್​ಗಳನ್ನು, 250ಕ್ಕೂ ಹೆಚ್ಚಿನ ಸುದ್ದಿ ಪತ್ರಿಕೆಗಳನ್ನು ಮತ್ತು ಬ್ಲಾಗ್​, ಸುದ್ದಿ ವೆಬ್​ಸೈಟ್​ಗಳನ್ನು ಈ ಆ್ಯಪ್​ನಲ್ಲಿ ಕಾಣಬಹುದಾಗಿದೆ.

ಜಿಯೋ ನ್ಯೂಸ್​ ತನ್ನ ಬಳಕೆದಾರರಿಗಾಗಿ ವೇಗವಾಗಿ ಸುದ್ದಿಯನ್ನು ತಲುಪಿಸುವ ಕಾರ್ಯ ಮಾಡಲಿದ್ದು, ಕ್ರೀಡೆ, ಮನರಂಜನೆ, ವ್ಯಾಪಾರ, ತಂತ್ರಜ್ನಾನ, ಜೀವನ ಶೈಲಿ, ವೃತ್ತಿ, ಆರೋಗ್ಯ, ಜೋತಿಷ್ಯ, ಹಣಕಾಸು ಮುಂತಾದ ಆಸಕ್ತಿದಾಯಕ ಸುದ್ದಿಯನ್ನು ಪಸರಿಸುತ್ತಿದೆ. ಗ್ರಾಹಕರು ತಮ್ಮಿಷ್ಟದ ಸುದ್ದಿಯನ್ನು ಆಯ್ಕೆಗೊಳಿಸುವ ಮೂಲಕ ಬೇಕಾದ ಸುದ್ದಿಗಳನ್ನು ನೋಡಬಹುದು.
Loading...

ಇದನ್ನೂ ಓದಿ: ಎಲೆಕ್ಷನ್ ಟ್ರೈನಿಂಗ್ ವೇಳೆ ಹೃದಯಾಘಾತದಿಂದ ಶಿಕ್ಷಕ ಸಾವು!

ಜಿಯೋ ನ್ಯೂಸ್​ ಆ್ಯಪ್​  ಪ್ರಕಟಿಸುವ ಎಲ್ಲಾ ಸುದ್ದಿಗಳನ್ನು ಸ್ಕ್ಯಾನ್​ ಮಾಡುವ ಮೂಲಕ ಬಳಕೆದಾರಿಗೆ ಹೆಚ್ಚು ಸೂಕ್ತವಾದ ಸುದ್ದಿಯನ್ನು ಭಿತ್ತರಿಸುವಲ್ಲಿ ಯೋಜನೆ ಹಾಕಿಕೊಂಡಿದೆ.

ಇನ್ನೂ ಜಿಯೋ ಆ್ಯಪ್​ನಲ್ಲಿ ಜಿಯೋ ಎಕ್ಸ್​ಪ್ರೆಸ್​ ನ್ಯೂಸ್​, ಜಿಯೋ ಮ್ಯಾಗಜಿನ್​ ಮತ್ತು ಜಿಯೋ ನ್ಯೂಸ್​ ಪೇಪರ್ಸ್​ ಒಳಗೊಂಡ  ಸೇವೆಯಾಗಿದೆ. ಈಗಾಗಲೇ ಈ ಮೂರು ಆ್ಯಪ್​ಗಳನ್ನು ಬಳಕೆ ಮಾಡುತ್ತಿರುವ ಬಳಕೆದಾರರು ಜಿಯೋ ನ್ಯೂಸ್​ ಮೂಲಕ ಸದುಪಯೋಗ ಪಡೆದುಕೊಳ್ಳಬಹುದು.

ಗ್ರಾಹಕರಿಗಾಗಿ ಕ್ಷಣ-ಕ್ಷಣದ ಸುದ್ದಿಯನ್ನು ವೇಗವಾಗಿ ತಲುಪಿಸುವ ನಿಟ್ಟಿನಲ್ಲಿ ರಿಲಾಯನ್ಸ್​ ಕಂಪೆನಿ ‘ಜಿಯೋ ನ್ಯೂಸ್​ ಆ್ಯಪ್​‘ ಅನ್ನು ಬಿಡುಗಡೆಮಾಡಿದ್ದು, ‘ನಿಮ್ಮ ಸುದ್ದಿ ನಿಮ್ಮ ಭಾಷೆ‘ ಎಂಬ ಶೀರ್ಷಿಕೆಯಡಿ ಕಾರ್ಯ ನಿರ್ವಹಿಸಲಿದೆ.

First published:April 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...