Moto G7, ಮೊಟೊ1 ಸ್ಮಾರ್ಟ್​ಫೋನ್​ಗಳು ಬಿಡುಗಡೆ: ಜಿಯೋ ನೀಡುತ್ತಿದೆ 2 ಸಾವಿರ ರೂ. ಕ್ಯಾಶ್​ ಬ್ಯಾಕ್

ಮೊಟೊರೊಲ ಒನ್ 5.9-ಇಂಚಿನ ಫುಲ್ ಎಚ್​ಡಿ ಡಿಸ್​ಪ್ಲೇ + ಮ್ಯಾಕ್ಸ್ ವಿಷನ್ ಎಲ್​ಟಿಪಿಎಸ್ ಎಲ್​ಸಿಡಿ ಡಿಸ್​ಪ್ಲೇಯನ್ನು ಹೊಂದಿದೆ. ಹಾಗೆಯೇ ಇದರಲ್ಲಿ 720x1520 ಪಿಕ್ಸೆಲ್​ಗಳ ರೆಸಲ್ಯೂಶನ್ ನೀಡಲಾಗಿದೆ.

zahir | news18
Updated:March 26, 2019, 9:28 AM IST
Moto G7, ಮೊಟೊ1 ಸ್ಮಾರ್ಟ್​ಫೋನ್​ಗಳು ಬಿಡುಗಡೆ: ಜಿಯೋ ನೀಡುತ್ತಿದೆ 2 ಸಾವಿರ ರೂ. ಕ್ಯಾಶ್​ ಬ್ಯಾಕ್
ಮೊಟೊರೊಲ
zahir | news18
Updated: March 26, 2019, 9:28 AM IST
ಪ್ರಸಿದ್ಧ ಎಲೆಕ್ಟ್ರಾನಿಕ್ ಕಂಪೆನಿ ಲೆನೊವೊ ಸ್ವಾಮ್ಯದ ಸ್ಮಾರ್ಟ್​ಫೋನ್​ ತಯಾರಕ ಮೊಟೊರೊಲ ಭಾರತದಲ್ಲಿ  ನೂತನ Moto G7 ಮತ್ತು Motorola One ಮೊಬೈಲ್​ಗಳನ್ನು ಬಿಡುಗಡೆ ಮಾಡಿದೆ. 4GB RAM ಹೊಂದಿರುವ ಈ ಸ್ಮಾರ್ಟ್​ಫೋನ್​ಗಳು 64GB ಇಂಟರ್ನಲ್​ ಸ್ಟೊರೇಜ್​ನಲ್ಲಿ ಲಭ್ಯವಿದೆ. ಮೊಟೊ ಸಿರೀಸ್​ನ ಈ ನೂತನ ಮೊಬೈಲ್​ಗಳ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.

Moto G7 ವಿಶೇಷತೆ:
ನೂತನ Moto G7 ಫೋನ್​ನಲ್ಲಿ 1080x2270 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.24 ಇಂಚಿನ ಫುಲ್ ಹೆಚ್​ಡಿ + ಮ್ಯಾಕ್ಸ್ ವಿಷನ್ ಎಲ್​ಟಿಪಿಎಸ್ ಎಲ್​ಸಿಡಿ ಡಿಸ್​ಪ್ಲೇ ನೀಡಲಾಗಿದೆ. ಇದಲ್ಲದೆ 4GB RAM ಹಾಗೂ 1.8 GHz ಒಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್​ಡ್ರ್ಯಾಗನ್ 632 ಪ್ರೊಸೆಸರ್ ಹೊಂದಿದೆ. ಇನ್ನು ಸ್ಟೋರೇಜ್ ವಿಭಾಗದಲ್ಲಿ 64 ಜಿಬಿ ಇನ್​ಬಿಲ್ಟ್ ಮೆಮೊರಿ ನೀಡಲಾಗಿದ್ದು, 512GB ವರೆಗೆ ಮೈಕ್ರೊ ಎಸ್​ಡಿ ಬಳಸುವ ಅವಕಾಶವಿದೆ. 3000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಮೊಬೈಲ್ ಅನ್ನು 15W ಟರ್ಬೊಪವರ್ ವೇಗದಲ್ಲಿ ಚಾರ್ಜಿಂಗ್ ಮಾಡಿಕೊಳ್ಳಬಹುದು.

ಇನ್ನು ಕ್ಯಾಮೆರಾವನ್ನು ಗಮನಿಸಿದರೆ ಹಿಂಬದಿಯಲ್ಲಿ ಡ್ಯುಯೆಲ್ ಕ್ಯಾಮ್​ ಆಯ್ಕೆಯಿದ್ದು, ಇದಲ್ಲೊಂದು  12 ಮೆಗಾಪಿಕ್ಸೆಲ್ ಆಗಿದೆ. ಇದು f / 1.8 ಅಪರ್ಚರ್​ನಲ್ಲಿ ತೆರೆದುಕೊಳ್ಳುವುದರಿಂದ ಫೋಟೊಗಳ ಕ್ಲಾರಿಟಿ ಮತ್ತಷ್ಟು ಚೆನ್ನಾಗಿ ಮೂಡಿಬರಲಿದೆ. ಎರಡನೇ ಕ್ಯಾಮೆರಾವು 5 ಮೆಗಾಪಿಕ್ಸೆಲ್ ಆಗಿದ್ದು, ಇದು f / 2.2 ಅಪರ್ಚರ್​ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಲ್ಲದೆ, ಸೆಲ್ಫಿಗಾಗಿ 8 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ. ಇದು f/2.2.2 ಅಪರ್ಚರ್​ನಲ್ಲಿ ತೆರೆದುಕೊಳ್ಳಲಿದೆ. ಇದರೊಂದಿಗೆ 4G VOLTE, wifi, 3.5 mm ಹೆಡ್​ಫೋನ್, ಬ್ಲೂಟೂತ್, ಜಿಪಿಎಸ್ ಸೌಲಭ್ಯಗಳು ಇದರಲ್ಲಿದೆ.

Motorola One ವಿಶೇಷತೆ:
ಮೊಟೊರೊಲ ಒನ್ 5.9-ಇಂಚಿನ ಫುಲ್ ಎಚ್​ಡಿ ಡಿಸ್​ಪ್ಲೇ + ಮ್ಯಾಕ್ಸ್ ವಿಷನ್ ಎಲ್​ಟಿಪಿಎಸ್ ಎಲ್​ಸಿಡಿ ಡಿಸ್​ಪ್ಲೇಯನ್ನು ಹೊಂದಿದೆ. ಹಾಗೆಯೇ ಇದರಲ್ಲಿ 720x1520 ಪಿಕ್ಸೆಲ್​ಗಳ ರೆಸಲ್ಯೂಶನ್ ನೀಡಲಾಗಿದೆ. ಕ್ವಾಲ್ಕಾಮ್ ಸ್ನಾಪ್​ಡ್ರ್ಯಾಗನ್ 625 ಪ್ರೊಸೆಸರ್​ನೊಂದಿಗೆ ಆಂಡ್ರೆನೊ 506 ಜಿಪಿಯು ಒದಗಿಸಲಾಗಿದೆ. 4GB RAM, 64GB ಇಂಟರ್ನಲ್ ಸ್ಟೊರೇಜ್ ಇದರಲಿದ್ದು, ಮೈಕ್ರೊ SD ಕಾರ್ಡ್ ಮೂಲಕ 256GB ವರೆಗೆ ಹೆಚ್ಚಿಸಬಹುದು. ಈ ಫೋನ್ ಆ್ಯಂಡ್ರಾಯ್ಡ್ 8.1 ಓರಿಯೊದಲ್ಲಿ ಕಾರ್ಯನಿರ್ವಹಿಸಲಿದ್ದು, ಅಪ್​ಡೇಟ್​ ಅವಕಾಶಗಳು ಕೂಡ ಇರಲಿದೆ. 3,000 ಎಮ್ಎಹೆಚ್ ಸಾಮರ್ಥ್ಯದ ಬ್ಯಾಟರಿ ಇದಕ್ಕೆ ಫಿಕ್ಸ್ ಮಾಡಲಾಗಿದ್ದು, ಇದು ಟರ್ಬೊಪವರ್​ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
Loading...

ಮೊಟೊರೆಲ ಒನ್ ಮೊಬೈಲ್​ನಲ್ಲಿ ಮೂರು ಕ್ಯಾಮೆರಾಗಳಿರಲಿದ್ದು, ಹಿಂಬದಿಯಲ್ಲಿ 13 ಮೆಗಾ ಪಿಕ್ಸೆಲ್ ಹಾಗೂ 2 ಮೆಗಾ ಪಿಕ್ಸೆಲ್​ನ ಎರಡು ಕ್ಯಾಮೆರಾಗಳಿರಲಿವೆ. ಅದೇ ರೀತಿಯ ಮುಂಭಾಗದಲ್ಲಿ 8MPನ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ 4G VOLTE, wifi, 3.5 mm ಹೆಡ್​ಫೋನ್, ಬ್ಲೂಟೂತ್, ಜಿಪಿಎಸ್ ಸೌಲಭ್ಯಗಳು ಈ ಮೊಬೈಲ್​ನಿಂದ ಪಡೆಯಬಹುದು.

Moto G7 ಮತ್ತು Motorola One ಲಾಂಚಿಂಗ್ ಆಫರ್:
ಭಾರತದಲ್ಲಿ ಮೊಟೊ G7,  16,999 ರೂ. ಮತ್ತು ಮೊಟೊರೊಲ ಒನ್ ಬೆಲೆ 13,999 ರೂ.ನಲ್ಲಿ ಖರೀದಿಗೆ ಲಭ್ಯವಿದೆ. ಮೊಟೊ ಹಬ್ ಸ್ಟೋರ್ಸ್, ರಿಟೇಲ್ ಸ್ಟೋರ್ಸ್​ ಮತ್ತು ಫ್ಲಿಪ್​ಕಾರ್ಟ್​ನಲ್ಲೂ ಇದೇ ಬೆಲೆ ನಿಗದಿ ಪಡಿಸಲಾಗಿದೆ. ಸೆರಾಮಿಕ್ ಬ್ಲಾಕ್ ಮತ್ತು ಕ್ಲಿಯರ್ ವೈಟ್ ಬಣ್ಣಗಳಲ್ಲಿ ಈ ಫೋನ್​ಗಳು ಸಿಗಲಿದೆ. ಇನ್ನು ಹೊಸ ಫೋನಿನ ಲಾಂಚಿಂಗ್​ ಆಫರ್​ ಆಗಿ ಖರೀದಿ ಮೇಲೆ 2,200 ರೂ. ಜಿಯೋ ಕ್ಯಾಶ್ ಬ್ಯಾಕ್ ಪಡೆಯಬಹುದು. ಈ ಕ್ಯಾಶ್​ ಬ್ಯಾಕ್ ಕೂಪನ್​ಗಳನ್ನು ಗ್ರಾಹಕರು 198 ರೂ. ಮತ್ತು 299 ರೂ. ಜಿಯೋ ರೀಚಾರ್ಜ್​ಗಾಗಿ ಬಳಸಿಕೊಳ್ಳಬಹುದು.
First published:March 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626