ಜಿಯೋ ರೈಲ್​ ಆ್ಯಪ್​: ಇನ್ಮುಂದೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯಬೇಕಿಲ್ಲ!

IRCTC ಅಕೌಂಟ್ ಇಲ್ಲದೆ ಇರುವವರು ಸಹ ಈ ಆ್ಯಪ್​ ಮೂಲಕ ಅಕೌಂಟ್ ಕ್ರಿಯೇಟ್ ಮಾಡಿ ಟಿಕೆಟ್ ಬುಕ್ ಮಾಡಬಹುದು. ಇದಲ್ಲದೇ ಈ ಆ್ಯಪ್​ ಮೂಲಕ ಜಿಯೋ ಫೋನ್ ಬಳಕೆದಾರರು PNR ಸ್ಟೇಟಸ್ ಸಹ ನೋಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

zahir | news18
Updated:January 28, 2019, 4:41 PM IST
ಜಿಯೋ ರೈಲ್​ ಆ್ಯಪ್​: ಇನ್ಮುಂದೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯಬೇಕಿಲ್ಲ!
ಸಾಂದರ್ಭಿಕ ಚಿತ್ರ
  • News18
  • Last Updated: January 28, 2019, 4:41 PM IST
  • Share this:
ಮುಂಬೈ: ಡಿಜಿಟಲ್ ಇಂಡಿಯಾ ಕನಸಿಗೆ ಸಂಪೂರ್ಣ ಬೆನ್ನಲುಬಾಗಿರಲು ರಿಯಲನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​ ಮುಂದಾಗಿದೆ. ಇದಕ್ಕಾಗಿಯೇ ಜಿಯೋ ಟೆಲಿಕಾಂನಲ್ಲಿ ಬಳಕೆದಾರರಿಗೆ ಅನುಕೂಲವಾಗುವಂತಹ ಅನೇಕ ಫೀಚರ್​ಗಳನ್ನು ರಿಲಯನ್ಸ್​ ಪರಿಚಯಿಸುತ್ತಿದೆ. ಇದೀಗ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗುವಂತಹ ಹೊಸ ಆಯ್ಕೆಯನ್ನು ಜಿಯೋ ಒದಗಿಸಿದೆ. ಇದೇ ಮೊದಲ ಬಾರಿಗೆ ಜಿಯೋ ಫೋನ್ ಬಳಕೆದಾರರಿಗೆ ರೈಲ್ ಆ್ಯಪ್​ವೊಂದನ್ನು ಜಿಯೋ ಪರಿಚಯಿಸಿದೆ. ಈ ಆ್ಯಪ್​ ಮೂಲಕ ಇನ್ನು ಮುಂದೆ ಜಿಯೋ ಫೋನ್ ಮತ್ತು ಜಿಯೋ ಪೋನ್ 2 ಬಳಕೆದಾರರು IRCTC ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು.

ಜಿಯೋ ಆ್ಯಪ್​ ಸ್ಟೋರಿನಲ್ಲಿ ಹೊಸದಾಗಿ ಲಾಂಚ್ ಆಗಿರುವ ಜಿಯೋ ರೈಲ್ ಆ್ಯಪ್​ ಲಭ್ಯವಿದ್ದು, ಬಳಕೆದಾರರು ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ನಿಮ್ಮ ರೈಲು ಪ್ರಯಾಣ ತೊಂದರೆಗಳು ಕಡಿಮೆಯಾಗಲಿದೆ. IRCTC ಅಕೌಂಟ್ ಇಲ್ಲದೆ ಇರುವವರು ಸಹ ಈ ಆ್ಯಪ್​ ಮೂಲಕ ಅಕೌಂಟ್ ಕ್ರಿಯೇಟ್ ಮಾಡಿ ಟಿಕೇಟ್ ಬುಕ್ ಮಾಡಬಹುದು. ಇದಲ್ಲದೇ ಈ ಆ್ಯಪ್​ ಮೂಲಕ ಜಿಯೋ ಫೋನ್ ಬಳಕೆದಾರರು PNR ಸ್ಟೇಟಸ್ ಸಹ ನೋಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಆ್ಯಪ್​ನಲ್ಲಿ ಟಿಕೇಟ್ ಬುಕ್ ಮಾಡಿ, ಅದರ ಸ್ಥಿತಿಗತಿಯನ್ನು ತಿಳಿಯಬಹುದು. ಇದಲ್ಲದೇ ಟ್ರೈನ್ ಎಲ್ಲಿ ಚಲಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇದರೊಂದಿಗೆ ಆ್ಯಪ್​ ಮೂಲಕ ಫುಡ್ ಸಹ ಆರ್ಡರ್ ಮಾಡುವ ಅವಕಾಶ ನೀಡಿರುವುದು ವಿಶೇಷ.

ಇದನ್ನೂ ಓದಿ: ಬಿಗ್​ ಬಾಸ್​ ವಿನ್ನರ್​ ಶಶಿ ಕುಮಾರ್: ಜನರ ಹೃದಯ ಗೆದ್ದಿರುವುದು ನವೀನ್ ಸಜ್ಜು!

ಈ ಆ್ಯಪ್ ಬಳಕೆಯಿಂದ ಇನ್ನು ಮುಂದೆ ಟಿಕೆಟ್​ಗಾಗಿ ಕ್ಯೂ ನಿಲ್ಲುವಂತಹ ಸಮಸ್ಯೆಗಳು ದೂರವಾಗಲಿದೆ. ಒಂದಾರ್ಥದಲ್ಲಿ ಜಿಯೋ ರೈಲ್ ಆ್ಯಪ್ ಮೂಲಕ​ ಡಿಜಿಟಲ್​ ಲೈಫ್​ ಅನ್ನು ಮತ್ತಷ್ಟು ಎಂಜಾಯ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಲಕ್ಷ ಲಕ್ಷ ಸಂಬಳ ಬಿಟ್ಟು ಬಿಗ್​ ಬಾಸ್​ನಲ್ಲಿ 50 ಲಕ್ಷ ಗೆದ್ದ ಶಶಿ ಕುಮಾರ್​!

First published: January 28, 2019, 4:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading