• Home
  • »
  • News
  • »
  • tech
  • »
  • Reliance Jio ಪರಿಚಯಿಸಿದೆ ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಪ್ರಿಪೇಯ್ಡ್ ಪ್ಲಾನ್​

Reliance Jio ಪರಿಚಯಿಸಿದೆ ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಪ್ರಿಪೇಯ್ಡ್ ಪ್ಲಾನ್​

Jio / ಜಿಯೋ

Jio / ಜಿಯೋ

Disney+ Hotstar: ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಜಿಯೋ ಬಳಕೆದಾರರು ಅನಿಯಮಿತ ಲೈವ್ ಕ್ರೀಡೆಗಳನ್ನು ನೋಡಬಹುದಾಗಿದೆ. ಇದಲ್ಲದೇ ಟಿವಿಗಿಂತ ಮೊದಲು ಹಾಟ್‌ಸ್ಟಾರ್ ವಿಶೇಷತೆಗಳು ಮತ್ತು ಧಾರಾವಾಹಿಗಳು ಹಾಗೂ ಚಲನಚಿತ್ರಗಳನ್ನು ವಿಕ್ಷೀಸಬಹುದು.

  • Share this:

    ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ (Jio), ಡಿಸ್ನಿ+ ಹಾಟ್‌ಸ್ಟಾರ್ (Disney+ Hotstar) ಜೊತೆಯಾಗಿ ಹೊಸದಾಗಿ ಎರಡು ಯೋಜನೆಗಳನ್ನು ಲಾಂಚ್ (Launch) ಮಾಡಲಿದೆ. ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆ ಹೊಂದಿರುವ ₹1,499 ಮತ್ತು ₹4,199 ಬೆಲೆಯ ತನ್ನ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.


    ಈ ಯೋಜನೆಯು ಜಿಯೋ ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ, ಡಿಸ್ನಿ+ ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನ ಅತ್ಯಂತ ವಿಶೇಷ ಸದಸ್ಯತ್ವವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಡಿಸ್ನಿ+ ಹಾಟ್‌ಸ್ಟಾರ್‌ನ ಪ್ರೀಮಿಯಂ ಚಂದಾದಾರಿಕೆಯು ಬಳಕೆದಾರರಿಗೆ ಒಂದೇ ಸಮಯದಲ್ಲಿ 4 ಸಾಧನಗಳಲ್ಲಿ ತಮ್ಮ ನೆಚ್ಚಿನ ವಿಷಯವನ್ನು 4Kನಲ್ಲಿ ಆನಂದಿಸಲು ಅನುಮತಿಸುತ್ತದೆ. ಈ ಸೇವೆಯನ್ನು ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸಂಪರ್ಕಿತ ಟಿವಿಗಳಲ್ಲಿ ಬಳಸಬಹುದು.


    ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್‌ ಪ್ರಯೋಜನಗಳು:


    ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಜಿಯೋ ಬಳಕೆದಾರರು ಅನಿಯಮಿತ ಲೈವ್ ಕ್ರೀಡೆಗಳನ್ನು ನೋಡಬಹುದಾಗಿದೆ. ಇದಲ್ಲದೇ ಟಿವಿಗಿಂತ ಮೊದಲು ಹಾಟ್‌ಸ್ಟಾರ್ ವಿಶೇಷತೆಗಳು ಮತ್ತು ಧಾರಾವಾಹಿಗಳು ಹಾಗೂ ಚಲನಚಿತ್ರಗಳನ್ನು ವಿಕ್ಷೀಸಬಹುದು. ಜೊತೆಗೆ ಡಿಸ್ನಿ+ ಚಲನಚಿತ್ರಗಳು (ಇಂಗ್ಲಿಷ್ +ಡಬ್ ಮಾಡಲಾದ) ಸಿನಿಮಾಗಳನ್ನು ಹಾಗೂ ಡಿಸ್ನಿ + ಓರಿಜಿನಲ್ಸ್ ಅನ್ನು ಯಾವುದೇ ಅಡೆತಡೆ ಇಲ್ಲದೇ ಆನಂದಿಸಬಹದು. ಮತ್ತೂ 4ಕೆ ಗುಣಮಟ್ಟದಲ್ಲಿ 4 ಸ್ಕ್ರೀನ್‌ಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ ನೋಡುವ ಅವಕಾಶ ದೊರೆಯಲಿದೆ.


    ಇದನ್ನು ಓದಿ: Samsung Galaxy F22 ಖರೀದಿಗೆ ಕ್ಯೂ ನಿಂತ ಜನರು: ಕೇವಲ 50 ರೂ.ಗೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್!


    2 ಹೊಸ ಜಿಯೋ ಯೋಜನೆಗಳ ವಿವರಗಳು:


    ₹1,499 ಪ್ಲಾನ್:


    - ₹1499 ಮೌಲ್ಯದ 1-ವರ್ಷದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಚಂದಾದಾರಿಕೆ


    - ಕಾಂಪ್ಲಿಮೆಂಟರಿ ಜಿಯೋ ₹719 ಯೋಜನೆ: ದಿನ 2 GB ಡೇಟಾದೊಂದಿಗೆ 84 ದಿನದ ವ್ಯಾಲಿಡಿಟಿ ದೊರೆಯಲಿದೆ. ಜೊತೆಗೆ ಅನಿಯಮಿತ ಕಾಲಿಂಗ್, ದಿನ 100 SMS ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ.


    ಇದನ್ನು ಓದಿ: Google Maps ಮೂಲಕ ಹಣ ಗಳಿಸಬಹುದು! ಹೇಗೆ ಸಾಧ್ಯ?


    ₹4199 ಪ್ಲಾನ್:


    - ₹1499 ಮೌಲ್ಯದ 1-ವರ್ಷದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಚಂದಾದಾರಿಕೆ -


    - ಕಾಂಪ್ಲಿಮೆಂಟರಿ ಜಿಯೋ ₹4,199 ಯೋಜನೆ: ದಿನ 3 GB ಡೇಟಾದೊಂದಿಗೆ 365 ದಿನದ ವ್ಯಾಲಿಡಿಟಿ ದೊರೆಯಲಿದೆ. ಜೊತೆಗೆ ಅನಿಯಮಿತ ಕಾಲಿಂಗ್, ದಿನ 100 SMS ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ.

    Published by:Harshith AS
    First published: