ಮುಂಬೈ; 100 ರಲ್ಲಿ 91.7ರ ಬಿಎಸ್ಐ ಸ್ಕೋರ್ ಮತ್ತು ಬ್ರಾಂಡ್ ಸಾಮರ್ಥ್ಯಕ್ಕಾಗಿ ವಿಶಿಷ್ಟ AAA+ ರೇಟಿಂಗ್ನೊಂದಿಗೆ ಈ ವರ್ಷ ಮೊದಲ ಬಾರಿಗೆ ಬ್ರ್ಯಾಂಡ್ ಫೈನಾನ್ಸ್ ಗ್ಲೋಬಲ್ 500 ರ್ಯಾಂಕಿಂಗ್ ಅನ್ನು ಪ್ರವೇಶಿಸಿರುವ ಭಾರತೀಯ ಟೆಲಿಕಾಂ ದೈತ್ಯ ಜಿಯೋ, ವಿಶ್ವದ 5ನೇ ಅತ್ಯಂತ ಪ್ರಬಲ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2016ರಷ್ಟು ಈಚೆಗೆ ಸ್ಥಾಪನೆಯಾಗಿದ್ದರೂ, ಜಿಯೋ ಬಹಳ ಬೇಗನೆ ಭಾರತದ ಅತಿದೊಡ್ಡ ಮೊಬೈಲ್ ನೆಟ್ವರ್ಕ್ ಆಪರೇಟರ್ ಮತ್ತು ವಿಶ್ವದ ಮೂರನೇ ಅತಿದೊಡ್ಡ ಮೊಬೈಲ್ ನೆಟ್ವರ್ಕ್ ಆಪರೇಟರ್ ಆಗಿ ಬೆಳೆದಿದ್ದು, ಸುಮಾರು 400 ಮಿಲಿಯನ್ ಚಂದಾದಾರರನ್ನು ಹೊಂದಿದೆ.
ನಂಬಲಾಗದಷ್ಟು ಕಡಿಮೆ ಬೆಲೆಯ ಯೋಜನೆಗಳಿಗೆ ಹೆಸರುವಾಸಿಯಾದ ಜಿಯೋ, ಲಕ್ಷಾಂತರ ಬಳಕೆದಾರರಿಗೆ 4G ಅನ್ನು ಉಚಿತವಾಗಿ ನೀಡುವ ಮೂಲಕ ಭಾರತದಲ್ಲಿ ಬಿರುಗಾಳಿ ಎಬ್ಬಿಸಿದ್ದು ಮಾತ್ರವಲ್ಲದೆ ಭಾರತೀಯರು ಅಂತರಜಾಲವನ್ನು ಬಳಸುವ ರೀತಿಯನ್ನೇ ಬದಲಿಸಿತು. ಇದನ್ನು ಈಗ ‘ಜಿಯೋ ಎಫೆಕ್ಟ್’ ಎಂದೇ ಕರೆಯಲಾಗುತ್ತದೆ. ಬ್ರಾಂಡ್ ಫೈನಾನ್ಸ್ನ ಮೂಲ ಮಾರುಕಟ್ಟೆ ಸಂಶೋಧನೆಯ ಫಲಿತಾಂಶಗಳಿಂದ ರಾಷ್ಟ್ರದಾದ್ಯಂತ ಜಿಯೋ ಬ್ರ್ಯಾಂಡ್ನ ಪ್ರಾಬಲ್ಯ ಸ್ಪಷ್ಟವಾಗಿದೆ.
ಇದನ್ನು ಓದಿ: Jio prepaid Plan: 11 ರೂ.ಗೆ 1GB ಡೇಟಾ!; ಜಿಯೋ ಕಡಿಮೆ ಬೆಲೆಯ ಪ್ಲಾನ್ ಬಗ್ಗೆ ಇಲ್ಲಿದೆ ಮಾಹಿತಿ
ಭಾರತದಲ್ಲಿನ ಟೆಲಿಕಾಂ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಪರಿಗಣನೆ ಪರಿವರ್ತನೆ, ಖ್ಯಾತಿ, ಶಿಫಾರಸು, ಬಾಯಿ ಮಾತಿನ ಪ್ರಚಾರ, ನಾವೀನ್ಯತೆ, ಗ್ರಾಹಕ ಸೇವೆ ಮತ್ತು ಹಣದ ಮೌಲ್ಯ - ಎಲ್ಲ ಅಂಶಗಳಲ್ಲೂ ಜಿಯೋ ಉತ್ತಮ ಅಂಕಗಳನ್ನು ಪಡೆದಿದೆ. ಈ ವಲಯದಲ್ಲಿ ಜಿಯೋ ಬ್ರ್ಯಾಂಡ್ಗೆ ಯಾವುದೇ ಪ್ರಮುಖ ದೌರ್ಬಲ್ಯಗಳಿಲ್ಲ, ಮತ್ತು ಜಾಗತಿಕವಾಗಿ ಇತರ ಟೆಲಿಕಾಂ ಬ್ರಾಂಡ್ಗಳಂತಲ್ಲದೆ, ತಾನು ಗಮನಾರ್ಹವಾಗಿ ವಿಭಿನ್ನವಾಗಿರುವುದನ್ನು ಮತ್ತು ಗ್ರಾಹಕರಿಂದ ನಿಜವಾದ ಪ್ರೀತಿ ಪಡೆದಿರುವುದನ್ನು ಜಿಯೋ ತೋರಿಸಿಕೊಟ್ಟಿದೆ.
ಬ್ರ್ಯಾಂಡ್ ಸಾಮರ್ಥ್ಯಕ್ಕಾಗಿ ಎದ್ದುಕಾಣುವ ಬ್ರ್ಯಾಂಡ್ ಆಗಿರುವುದರ ಜೊತೆಗೆ, ಬ್ರ್ಯಾಂಡ್ ಮೌಲ್ಯದ ದೃಷ್ಟಿಯಿಂದಲೂ ಜಿಯೋ ಟೆಲಿಕಾಂ ವಲಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿದ್ದು, ಶೇ. 50ರ ಹೆಚ್ಚಳದೊಂದಿಗೆ 4.8 ಬಿಲಿಯನ್ ಡಾಲರುಗಳಿಗೆ ಏರುವ ಮೂಲಕ ಉದ್ಯಮದಾದ್ಯಂತ ಇರುವ ಋಣಾತ್ಮಕ ಪ್ರವೃತ್ತಿಯನ್ನು ಮೀರಿ ಬೆಳೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ