Reliance Jio: 20.9 ಎಂಬಿಪಿಎಸ್ ಡೌನ್ಲೋಡ್ ವೇಗದೊಂದಿಗೆ 4ಜಿ ಚಾರ್ಟ್​ನಲ್ಲಿ ಮುಂಚೂಣಿ ಸ್ಥಾನ ಪಡೆದ ಜಿಯೋ!

ಟ್ರಾಯ್ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಎಲ್ಲ ಮೂರೂ ಖಾಸಗಿ ಆಪರೇಟರ್​ಗಳ 4ಜಿ ಅಪ್ಲೋಡ್ ವೇಗದಲ್ಲಿ ಸುಧಾರಣೆಯಾಗಿದೆ. ವೊಡಾಫೋನ್ ಐಡಿಯಾ ಸೆಪ್ಟೆಂಬರ್ ತಿಂಗಳಲ್ಲಿ 7.2 ಎಂಬಿಪಿಎಸ್ ಸರಾಸರಿ ಅಪ್ಲೋಡ್ ವೇಗ ಹೊಂದಿತ್ತು. ನಂತರದ ಸ್ಥಾನದಲ್ಲಿ 6.2 ಎಂಬಿಪಿಎಸ್ ವೇಗ ಇರುವ ರಿಲಯನ್ಸ್ ಜಿಯೋ ಇದ್ದರೆ, ಭಾರ್ತಿ ಏರ್ಟೆಲ್ 4.5 ಎಂಬಿಪಿಎಸ್ ವೇಗದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ರಿಲಾಯನ್ಸ್ ಜಿಯೋ.

ರಿಲಾಯನ್ಸ್ ಜಿಯೋ.

  • Share this:
    ನವದೆಹಲಿ, ಅಕ್ಟೋಬರ್ 18: ರಿಲಯನ್ಸ್ ಜಿಯೋ (Reliance Jio) ಪ್ರತಿ ಸೆಕೆಂಡ್​ಗೆ ಸರಾಸರಿ 20.9 ಮೆಗಾಬೈಟ್ (MBPS) ಡೌನ್​ಲೋಡ್​ ವೇಗ ಕಾಯ್ದುಕೊಳ್ಳುವ ಮೂಲಕ 4ಜಿ ವಿಭಾಗದಲ್ಲಿ ಅಕ್ಟೋಬರ್ ತಿಂಗಳಲ್ಲಿ ಕೂಡ ಮೊದಲ ಸ್ಥಾನದಲ್ಲಿ ಪಡೆದುಕೊಂಡಿದೆ. ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (Tray) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ರಿಲಯನ್ಸ್ ಜಿಯೋದ 4ಜಿ ನೆಟ್ವರ್ಕ್ ವೇಗವು ಶೇ 15ರಷ್ಟು ಹೆಚ್ಚಾಗಿದೆ. ಅದರ ಪ್ರತಿಸ್ಪರ್ಧಿ ಕಂಪೆನಿಗಳಾದ ಭಾರತಿ ಏರ್​ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿಐ) ವೇಗವು ತಿಂಗಳಿಂದ ತಿಂಗಳಿಗೆ ಕ್ರಮವಾಗಿ ಸುಮಾರು ಶೇ 85 ಮತ್ತು ಶೇ 60ರಷ್ಟು, ಅಂದರೆ 11.9 ಎಂಬಿಪಿಎಸ್ ಹಾಗೂ 14.4 ಎಂಬಿಪಿಎಸ್ನಷ್ಟು ಏರಿಕೆಯಾಗಿದೆ.

    ಇನ್ನು 7.2 ಎಂಬಿಪಿಎಸ್ ಡೇಟಾ ವೇಗ ಹೊಂದಿರುವ ವೊಡಾಫೋನ್ ಐಡಿಯಾ ಅಪ್ಲೋಡ್ ವಿಭಾಗದಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಡೌನ್​ಲೋಡ್​ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಅಪ್ಲೋಡ್ ವೇಗವು ತಮ್ಮ ಸಂಪರ್ಕದಲ್ಲಿ ಇರುವವರಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ತ್ವರಿತವಾಗಿ ರವಾನಿಸಲು ನೆರವಾಗುತ್ತದೆ.

    ಟ್ರಾಯ್ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಎಲ್ಲ ಮೂರೂ ಖಾಸಗಿ ಆಪರೇಟರ್​ಗಳ 4ಜಿ ಅಪ್ಲೋಡ್ ವೇಗದಲ್ಲಿ ಸುಧಾರಣೆಯಾಗಿದೆ. ವೊಡಾಫೋನ್ ಐಡಿಯಾ ಸೆಪ್ಟೆಂಬರ್ ತಿಂಗಳಲ್ಲಿ 7.2 ಎಂಬಿಪಿಎಸ್ ಸರಾಸರಿ ಅಪ್ಲೋಡ್ ವೇಗ ಹೊಂದಿತ್ತು. ನಂತರದ ಸ್ಥಾನದಲ್ಲಿ 6.2 ಎಂಬಿಪಿಎಸ್ ವೇಗ ಇರುವ ರಿಲಯನ್ಸ್ ಜಿಯೋ ಇದ್ದರೆ, ಭಾರ್ತಿ ಏರ್ಟೆಲ್ 4.5 ಎಂಬಿಪಿಎಸ್ ವೇಗದೊಂದಿಗೆ ಕೊನೆಯ ಸ್ಥಾನದಲ್ಲಿದೆ.

    ಸರ್ಕಾರಿ ಸ್ವಾಮ್ಯದ ದೂರಸಂರ್ಪಕ ಸಂಸ್ಥೆ ಬಿಎಸ್ಎನ್ಎಲ್, ಆಯ್ದ ಪ್ರದೇಶಗಳಲ್ಲಿ 4ಜಿ ಸಂಪರ್ಕವನ್ನು ಕಲ್ಪಿಸಿದೆ. ಆದರೆ, ಅದರ ನೆಟ್ವರ್ಕ್ ವೇಗವನ್ನು ಟ್ರಾಯ್ ಚಾರ್ಟ್​ನಲ್ಲಿ ನಮೂದಿಸಿಲ್ಲ. ಮೈ ಸ್ಪೀಡ್ ಆಪ್​ನ ಸಹಾಯದೊಂದಿಗೆ ದೇಶಾದ್ಯಂತ ರಿಯಲ್ ಟೈಮ್ ಆಧಾರದಲ್ಲಿ ದತ್ತಾಂಶಗಳನ್ನು ಸಂಗ್ರಹಿಸುವ ಟ್ರಾಯ್, ಅದರ ಮೂಲಕ ಸರಾಸರಿ ವೇಗವನ್ನು ಲೆಕ್ಕ ಹಾಕುತ್ತದೆ.

    ಇದನ್ನು ಓದಿ: Clubhouse: ಹೊಸ ಮ್ಯೂಸಿಕ್ ಮೋಡ್ ಆಯ್ಕೆಯನ್ನು ಸಕ್ರಿಯಗೊಳಿಸುವುದು ಮತ್ತು ಬಳಸುವುದು ಹೇಗೆ?

    ಉಚಿತ ಯೋಜನೆ ಜೊತೆಗೆ ರಿಯಾಯಿತಿ ವೋಚರ್

    Reliance Jio ತನ್ನ ಗ್ರಾಹಕರಿಗೆ ಉತ್ತಮ ಉಡುಗೊರೆಯನ್ನು ತಂದಿದೆ. ಕಂಪನಿಯು ರೆಫರಲ್ ಕೋಡ್ 'ಜಿಯೋ ಟುಗೆದರ್' (Jio Together) ಅನ್ನು ಪ್ರಾರಂಭಿಸಿದೆ. ಆದರೆ ಇದನ್ನು ಹೊಸ ಜಿಯೋ ಪ್ರಿಪೇಯ್ಡ್ (jio Prepaid)ಸಂಪರ್ಕಗಳಲ್ಲಿ ಮತ್ತು ಜಿಯೋಗೆ ಪೋರ್ಟ್ ಮಾಡಿದ ನಂತರ ಬಳಸಬಹುದಾಗಿದೆ. ಜಿಯೋ ವೆಬ್‌ಸೈಟ್‌ನ ಪ್ರಕಾರ, ಈ ಆಫರ್ ಅಡಿಯಲ್ಲಿ, ರೆಫರರ್ ಮತ್ತು ರೆಫರರ್ ಇಬ್ಬರಿಗೂ 98 ರೂ ಮತ್ತು 349 ರೂ.ವಿನ ಉಚಿತ ರೀಚಾರ್ಜ್ ವೋಚರ್‌ಗಳನ್ನು (Reacharge Vocher) ನೀಡಲಾಗುವುದು. ಜಿಯೋ ವಿವಿಧ ಬ್ರಾಂಡ್‌ಗಳಿಂದ 2,000 ರೂ. ವರೆಗಿನ ಹೆಚ್ಚುವರಿ ರಿಯಾಯಿತಿ ವೋಚರ್‌ಗಳನ್ನು ಸಹ ನೀಡುತ್ತದೆ.

    ಅದಕ್ಕೂ ಮಿಗಿಲಾಗಿ, ಕಂಪನಿಯು ಪ್ರತಿ ಬಾರಿಯೂ ಗ್ರಾಹಕರಿಗೆ ಹೆಚ್ಚಿನ ಮೌಲ್ಯದ ವೋಚರ್‌ಗಳನ್ನು ನೀಡುತ್ತದೆ. ಮೊದಲ ರೆಫರಲ್‌ನಲ್ಲಿ ಗ್ರಾಹಕರು 98 ರೂಗಳ ಉಚಿತ ರೀಚಾರ್ಜ್ ಸಿಗುತ್ತದೆ, ಇದು ದಿನಕ್ಕೆ 1.5GB ಡೇಟಾ ಮತ್ತು 14 ದಿನಗಳವರೆಗೆ ಅನಿಯಮಿತ ಕರೆ ನೀಡುತ್ತದೆ. ಅದೇ ರೀತಿ ನಿಮ್ಮ 12ನೇ ರೆಫರಲ್‌ನಲ್ಲಿ 349 ರೂ. ಮೌಲ್ಯದ ಆರು ವೋಚರ್‌ಗಳನ್ನು ಸಿಗುತ್ತದೆ. ಪ್ರತಿ ವೋಚರ್‌ ಮೂಲಕ ದಿನಕ್ಕೆ 3GB ಡೇಟಾ ಮತ್ತು 28  ದಿನಕ್ಕೆ ಅನಿಯಮಿತ ಕರೆ ನೀಡುತ್ತದೆ.

    ಈ ಆಫರ್ ಅಕ್ಟೋಬರ್ 12, 2021 ರಿಂದ ಲೈವ್ ಆಗಿ ಸಿಗುತ್ತಿದೆ. ಆದಾಗ್ಯೂ, ಜಿಯೋನ ಈ ಆಫರ್ ಅನ್ನು ಹಂತ ಹಂತವಾಗಿ ಹೊರತರಲಾಗುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಅರ್ಹ ಗ್ರಾಹಕರಿಗೆ ಒಂದು ವೀಡಿಯೊವನ್ನು ರಿಲಯನ್ಸ್ ಜಿಯೋ ಕಳುಹಿಸುತ್ತಿದೆ. ಹೊಸ ಜಿಯೋ ಸಿಮ್ ಪಡೆಯುತ್ತಿರುವ ಅಥವಾ ಜಿಯೋಗೆ ಪೋರ್ಟಿಂಗ್ ಮಾಡುವ ಯಾವುದೇ ವ್ಯಕ್ತಿಗೆ ಈ ವೀಡಿಯೊವನ್ನು ಕಳುಹಿಸಬಹುದು.
    Published by:HR Ramesh
    First published: