ಗ್ರಾಹಕರಿಗೆ 'ಜೀರೋ ಟಚ್’ ಎಂಬ ಪೋಸ್ಟ್​ಪೇಯ್ಡ್​ ಆಫರ್​ ನೀಡಲು ಮುಂದಾದ ಜಿಯೋ

news18
Updated:May 10, 2018, 9:46 PM IST
ಗ್ರಾಹಕರಿಗೆ 'ಜೀರೋ ಟಚ್’ ಎಂಬ ಪೋಸ್ಟ್​ಪೇಯ್ಡ್​ ಆಫರ್​ ನೀಡಲು ಮುಂದಾದ ಜಿಯೋ
news18
Updated: May 10, 2018, 9:46 PM IST
ನ್ಯೂಸ್ 18 ಕನ್ನಡ

ದೇಶದಲ್ಲಿ 4ಜಿ ಇಂಟರ್​​ನೆಟ್​ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಕಂಪನಿ ಇದೀಗ ಪೋಸ್ಟ್‌ ಪೇಯ್ಡ್​ ಸೇವೆ ನೀಡಲು ಸಜ್ಜಾಗಿದೆ.

ಇಷ್ಟು ದಿನ ಪ್ರಿಪೇಯ್ಡ್​​ ಸೇವೆ ನೀಡ್ತಿದ್ದ ಜಿಯೋ, ಇನ್ನೂ ಮುಂದೆ 'ಜೀರೋ ಟಚ್' ಎಂಬ ಪೋಸ್ಟ್ ಪೇಡ್ ಪ್ಲ್ಯಾನ್ ಜಾರಿಗೆ ತಂದಿದೆ. ತಿಂಗಳಿಗೆ ಕೇವಲ 199 ರೂಪಾಯಿಗೆ ಅನ್‌ಲಿಮಿಟೆಡ್ ಕರೆ ಹಾಗೂ 25 ಜಿಬಿ ಡೇಟಾ ಬಳಕೆ ಸೌಲಭ್ಯವನ್ನು ನೀಡಿದೆ.

ಜತೆಗೆ ಕೇವಲ 50 ಪೈಸೆಗೆ ಇಂಟರ್‌ನ್ಯಾಶನಲ್ ಕಾಲ್‌ ಮಾಡಲು ಅವಕಾಶ ನೀಡಿದೆ. ಇದಲ್ಲದೇ, ವಾಯ್ಸ್‌ ಕಾಲ್‌, ಡೇಟಾ ಮತ್ತು ಎಸ್‌ಎಂಎಸ್‌ಗೆ ಕೂಡ ಇಂಟರ್‌ನ್ಯಾಶನಲ್‌ ರೋಮಿಂಗ್ ದರವನ್ನು ಕೇವಲ 2 ರೂ.ಗೆ ನಿಗಧಿ ಮಾಡಿದೆ.

ಈಗಾಗಲೇ ಜಿಯೋ ಸಂಪರ್ಕ ಹೊಂದಿದವರು ನಂಬರ್ ಬದಲಿಸುವ ಅಗತ್ಯವಿಲ್ಲದೆ ಪೋಸ್ಟ್​ ಪೇಯ್ಡ್​ ಸೇವೆ ಪಡೆಯಬಹುದಾಗಿದೆ.
ಇದು ರಿಲಯನ್ಸ್  ಜಿಯೋ ಗ್ರಾಹಕರಿಗೆ ನೀಡುತ್ತಿರುವ ಕೊಡುಗೆ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಈ ಕೊಡುಗೆ ನೀಡುತ್ತಿದ್ದು ಯೋಜನೆ ಮುಂದಿನ ದಿನಗಳಲ್ಲಿ ಲಭ್ಯವಿದೆ.


Loading...

ಈ ಯೋಜನೆ ಸೇರ ಬಯಸುವವರು ಆನ್ ಲೈನ್ ಇಲ್ಲವೇ ಆಫ್ ಲೈನ್ ಮೂಲಕ ರಿಚಾರ್ಜ್ ಮಾಡಿಸಿಕೊಳ್ಳಬಹುದು.  ಈ ಲಾಭವನ್ನು ಗ್ರಾಹಕರು ಮುಂದಿನ ದಿನಗಳಲ್ಲಿ ಪಡೆಯಬಹುದಾಗಿದ್ದು. ಯಾವುದೇ ಅಂತಿಮ ಗಡುವು ಇರುವುದಿಲ್ಲ.


ಇದರಿಂದಾಗಿ ಗ್ರಾಹಕರು ಯಾವ ಸಮಯದಲ್ಲಿಯೂ ಆಫರ್​ ಲಾಭ ಪಡೆದುಕೊಳ್ಳಲು ಸಾಧ್ಯವಿದೆ ಎಂದು ರಿಲಯನ್ಸ್ ಸಂಸ್ಥೆ ಮೂಲಗಳು ತಿಳಿಸಿದೆ.

First published:May 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ