Jio Gigafiber: ಗ್ರಾಹಕರಿಗಾಗಿ ರಿಲಾಯನ್ಸ್​ ‘ಗಿಗಾ ಫೈಬರ್​‘ನಲ್ಲಿ ಏನೆಲ್ಲಾ ಸೇವೆ ಸಿಗಲಿದೆ ಗೊತ್ತಾ?

ಜಿಯೋ ಫೈಬರ್​ ಫಸ್ಟ್​​​​ ಸೇವೆಯನ್ನು ಪಡೆದುಕೊಂಡ ಗ್ರಾಹಕರು ಪ್ರಿಮಿಯಂ​ ಸಿನೆಮಾವನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ಥಿಯೇಟರಿನಲ್ಲಿ ಬಿಡುಗಡೆಯಾಗುವ ದಿನವೇ ಮೊದಲ ಶೋ ನೋಡುವ ಅವಕಾಶ ನೀಡುತ್ತಿದೆ.

Harshith AS | news18
Updated:August 13, 2019, 10:47 AM IST
Jio Gigafiber: ಗ್ರಾಹಕರಿಗಾಗಿ ರಿಲಾಯನ್ಸ್​ ‘ಗಿಗಾ ಫೈಬರ್​‘ನಲ್ಲಿ ಏನೆಲ್ಲಾ ಸೇವೆ ಸಿಗಲಿದೆ ಗೊತ್ತಾ?
ಜಿಯೋ ಫೈಬರ್​ ಫಸ್ಟ್​ ಶೋ
Harshith AS | news18
Updated: August 13, 2019, 10:47 AM IST
ಇಂದು ಮುಂಬೈ ಬಿರ್ಲಾ ಸಭಾಂಗಣದಲ್ಲಿ ರಿಲಾಯನ್ಸ್​ 42ನೇ ವಾರ್ಷಿಕ ಸಭೆಯನ್ನು  ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಿಲಾಯನ್ಸ್​ ಇಂಡಸ್ಟ್ರೀಸ್​ ಸಂಸ್ಥೆಯ ಮುಖ್ಯಸ್ಥ ಮುಖೇಶ್​ ಅಂಬಾನಿ ಮಾತನಾಡಿ ಹಲವು ಮಹತ್ವದ ಯೋಜನೆಯನ್ನು ಪ್ರಸ್ತಾಪಿಸಿದರು.

ರಿಲಾಯನ್ಸ್​ ಹಮ್ಮಿಕೊಂಡ 42ನೇ ವಾರ್ಷಿಕ ಸಭೆಯಲ್ಲಿ ಎಫ್​ಟಿಟಿಎಚ್​ ಬ್ರಾಡ್​ಬ್ಯಾಂಡ್​ ಜಿಯೋ ಗಿಗಾ ಫೈಬರ್​ ಸೇವೆಯನ್ನು ಕುರಿತು ಮಾತನಾಡಿದರು. ಸೆಪ್ಟೆಂಬರ್​ 5 ರಂದು ದೇಶಿಯ ಮಾರುಕಟ್ಟೆಯಲ್ಲಿ ಗಿಗಾ ಫೈಬರ್ ಅನ್ನು ಲೋಕಾರ್ಪಣೆ ಮಾಡುವ  ಮೂಲಕ ಸಂಚಲನ ಮೂಡಿಸಲಿದೆ ಎಂದರು.

ಗ್ರಾಹಕರಿಗಾಗಿ ರಿಲಾಯನ್ಸ್​ ಜಿಯೋ ಸಂಸ್ಥೆ ಬಿಡುಗಡೆ ಮಾಡುತ್ತಿರುವ ಗಿಗಾ ಫೈಬರ್​​​ನಲ್ಲಿ​ ಅನೇಕ ಸೇವೆಯನ್ನು ಒದಗಿಸುತ್ತಿದೆ.

ಜಿಯೋ ಫೈಬರ್​ ಲ್ಯಾಂಡ್​​ ಲೈನ್​

ರಿಲಾಯನ್ಸ್​ ಪರಿಚಯಿಸುತ್ತಿರುವ ಗಿಗಾ ಫೈಬರ್​ ಸೇವೆಯಲ್ಲಿ ಗ್ರಾಹಕರಿಗೆ ಉಚಿತ ಕರೆ ಸೌಲಭ್ಯವನ್ನು ನೀಡುತ್ತಿದೆ. ಜಿಯೋ ಫೈಬರ್​ ತಿಂಗಳಿಗೆ 700 ರೂ.ಗೆ 100 ಎಬಿಪಿಎಸ್​ ಆರಂಭಿಕ ಪ್ಯಾಕೆಜ್​ ನೀಡಲಿದೆ.

ಉಚಿತ ಎಚ್​ಡಿಟಿವಿ

ಗ್ರಾಹಕರಿಗಾಗಿ ರಿಲಾಯನ್ಸ್​ ‘ಜಿಯೋ ಫಾರೆವರ್​ ಗಿಗಾಫೈಬರ್​ ವಾರ್ಷಿಕ ಪ್ಲಾನ್​‘ ಅನ್ನು ಪರಿಚಯಿಸಿದೆ. ಈ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರು ಉಚಿತವಾಗಿ ಎಚ್​​ಡಿ ಎಲ್​​ಇಡಿ ಟಿವಿ ಹಾಗೂ ಪಿಸಿ, ಸೆಟ್​ಅಪ್​ ಬಾಕ್ಸ್​ ಉಚಿತವಾಗಿ ದೊರೆಯಲಿದೆ.

ಇದನ್ನೂ ಓದಿ: ಮೈಸೂರಿನ ದೇವರಾಜ ಮಾರುಕಟ್ಟೆಗೆ ಬೆಂಕಿ: ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಹರಸಾಹಸ

ಜಿಯೋ ಫೈಬರ್​ ಫಸ್ಟ್​ ಶೋ

ಜಿಯೋ ಫೈಬರ್​ ಫಸ್ಟ್​​​​ ಸೇವೆಯನ್ನು ಪಡೆದುಕೊಂಡ ಗ್ರಾಹಕರು ಪ್ರಿಮಿಯಂ​ ಸಿನೆಮಾವನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ಥಿಯೇಟರಿನಲ್ಲಿ ಬಿಡುಗಡೆಯಾಗುವ ದಿನವೇ ಮೊದಲ ಶೋ ನೋಡುವ ಅವಕಾಶ ನೀಡುತ್ತಿದೆ.

ಪವರ್​ ಡಿಟಿಎಚ್​

ಗ್ರಾಹಕರು ಪವರ್​ ಡಿಟಿಎಚ್​ ಅಳವಡಿಸಿಕೊಂಡಿದ್ದರೆ, ಸ್ಥಳೀಯ ಕೇಬಲ್​ ಆಪರೇಟರ್​ ಮತ್ತು ಎಂಎಸ್​ಒ ಮೂಲಕ ಜಿಯೋ ಸೆಟ್​ ಅಪ್​ ಬ್ಯಾಕ್ಸ್​ನಲ್ಲಿ ವಿವಿಧ ಕಾರ್ಯಕ್ರಮವನ್ನು ವೀಕ್ಷಿಸ ಬಹುದಾಗಿದೆ.
First published:August 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...