Jio Fiber: ಜಿಯೋ ಫೈಬರ್​ ಬಳಕೆದಾರರಿಗೆ ಡಬಲ್​ ಡೇಟಾ ಆಫರ್​!

Jio Fiber: ಜಿಯೋ ಫೈಬರ್​​​  ಬ್ರಾಡ್​ಬ್ಯಾಂಡ್​​ ಗ್ರಾಹಕರಿಗೆ ಟೈಟಾನಿಯಂ, ಪ್ಲಾಟಿನಂ, ಗೋಲ್ಡ್​​ ಮತ್ತು ಬ್ರೋನ್ಜ್​​​ ಆಯ್ಕೆಯ ಮೂಲಕ ಅಧಿಕ ಡೇಟಾ ಪ್ರಯೋಜನವನ್ನು ನೀಡುತ್ತಿದೆ. ಜೊತೆಗೆ ಉಚಿತ ವಾಯ್ಸ್​ ಕರೆ, ಟಿವಿ ವಿಡಿಯೋ ಕಾಲಿಂಗ್​​, ಗೇಮಿಂಗ್​, ಡಿವೈಸ್​​ ಸೆಕ್ಯುರಿಟಿ, ಹೋಮ್​ ಗೇಟ್​ವೇ ಮತ್ತು ಸೆಟಪ್​​  ಬಾಕ್ಸ್​​​ ವೆಲ್​ಕಂ ಆಫರ್​, ಒಟಿಟಿ ಅಪ್ಲಿಕೇಶನ್​​ಗಳು ಕೊಡುಗೆ ನೀಡುತ್ತಿದೆ

news18-kannada
Updated:May 27, 2020, 6:54 PM IST
Jio Fiber: ಜಿಯೋ ಫೈಬರ್​ ಬಳಕೆದಾರರಿಗೆ ಡಬಲ್​ ಡೇಟಾ ಆಫರ್​!
ಜಿಯೋ ಫೈಬರ್
  • Share this:
ಟೆಲಿಕಾಂ ದಿಗ್ಗಜ ರಿಲಾಯನ್ಸ್​​ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಆಫರ್​ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಲಾಕ್​ಡೌನ್​ ಸಮಯದಲ್ಲಿ ‘ವರ್ಕ್​ ಫ್ರಮ್​ ಹೋಮ್​‘ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಆದರೀಗ ಜಿಯೋ ಫೈಬರ್​​ ಇಂಟರ್​ನೆಟ್​​ ಬ್ರಾಡ್​ಬ್ಯಾಂಡ್​​​ ಬಳಕೆದಾರರಿಗೆ ಹೊಸ ಆಫರ್​ಗಳನ್ನು ತೆರೆದಿಟ್ಟಿದೆ. ವಾರ್ಷಿಕ ಜಿಯೋ ಫೈಬರ್​ ಪ್ಲಾನ್​​​​ ಆಯ್ಕೆ ಮಾಡಿಕೊಳ್ಳುವ ಗ್ರಾಹಕರಿಗೆ ಡಬಲ್​ ಡೇಟಾ ಆಫರ್​ ಅನ್ನು ಹೊತ್ತು ತಂದಿದೆ. ಇದರ ಜೊತೆಗೆ ಆರಂಭಿಕ ಕೊಡುಗೆ ಮತ್ತು ಭರ್ಜರಿ ಆಫರ್​ ಅನ್ನು ಒದಗಿಸುತ್ತಿದೆ.

ಜಿಯೋ ಫೈಬರ್​​​  ಬ್ರಾಡ್​ಬ್ಯಾಂಡ್​​ ಗ್ರಾಹಕರಿಗೆ ಟೈಟಾನಿಯಂ, ಪ್ಲಾಟಿನಂ, ಗೋಲ್ಡ್​​ ಮತ್ತು ಬ್ರೋನ್ಜ್​​​ ಆಯ್ಕೆಯ ಮೂಲಕ ಅಧಿಕ ಡೇಟಾ ಪ್ರಯೋಜನವನ್ನು ನೀಡುತ್ತಿದೆ. ಜೊತೆಗೆ ಉಚಿತ ವಾಯ್ಸ್​ ಕರೆ, ಟಿವಿ ವಿಡಿಯೋ ಕಾಲಿಂಗ್​​, ಗೇಮಿಂಗ್​, ಡಿವೈಸ್​​ ಸೆಕ್ಯುರಿಟಿ, ಹೋಮ್​ ಗೇಟ್​ವೇ ಮತ್ತು ಸೆಟಪ್​​  ಬಾಕ್ಸ್​​​ ವೆಲ್​ಕಂ ಆಫರ್​, ಒಟಿಟಿ ಅಪ್ಲಿಕೇಶನ್​​ಗಳು ಕೊಡುಗೆ ನೀಡುತ್ತಿದೆ.

ಜಿಯೋ ಬೋನ್ಜ್​ ಪ್ಲಾನ್​;

ಗ್ರಾಹಕರು ​ 699 ರೂಪಾಯಿಯ ಬೋನ್ಜ್​ ಪ್ಲಾನ್​​ ಆಯ್ದುಕೊಂಡರೆ, ಪ್ರತಿ ತಿಂಗಳು 100Mbps ವೇಗದಲ್ಲಿ 100GB ಡೇಟಾ ಮತ್ತು ಹೆಚ್ಚುವರಿ ಆರಂಭಿಕ ಕೊಡುಗೆಯಾಗಿ 50GB ಡೇಟಾ ಪಡೆಯಲಿದ್ದಾರೆ. ಅದರ ಜೊತೆಗೆ ಡಬಲ್​ ಡೇಟಾ ಆಫರ್​ ಪಡೆಯಲಿದ್ದು, ಒಟ್ಟಾರೆ ತಿಂಗಳಿಗೆ 350GB ಪಡೆಯಲಿದ್ದಾರೆ.

ಸಿಲ್ವರ್​ ಪ್ಲಾನ್​:

ಜಿಯೋ ಫೈಬರ್​ ಬಳಕೆದಾರರು 849 ರೂ. ವಾರ್ಷಿಕ ಪ್ಲಾನ್​​ ಅಳವಡಿಸಿಕೊಂಡ ಗ್ರಾಹಕರಿಗೆ ಪ್ರತಿ ತಿಂಗಳು 100Mbps​ ವೇಗದ 200GB ಡೇಟಾ ಮತ್ತು ಹೆಚ್ಚುವರಿಯಾಗಿ 200GB ಡೇಟಾ ಸಿಗಲಿದೆ. ಅದರ ಜೊತೆಗೆ ಡಬಲ್​ ಡೇಟಾ ಆಫರ್​ ಮತ್ತು ವಾರ್ಷಿಕ ಪ್ಲಾನ್​​ ಕೊಡುಗೆಯಾಗಿ 100GB ಪಡೆಯಲಿದ್ದಾರೆ ಒಟ್ಟಾರೆಯಾಗಿ 800GB ಡೇಟಾ ಪಡೆಯಲಿದ್ದಾರೆ.

ಗೋಲ್ಡ್​ ಪ್ಲಾನ್​:1299 ರೂಪಾಯಿಯ ಗೋಲ್ಡ್​ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರಿಗೆ ಪ್ರತಿ ತಿಂಗಳು 250Mbps ವೇಗದಲ್ಲಿ 500GB ಡೇಟಾ ಸಿಗಲಿದೆ. ಹೆಚ್ಚುವರಿ ಕೊಡುಗೆಯಾಗಿ 250GB ಡೇಟಾ ಸಿಗಲಿದೆ. ಅದರೊಂದಿಗೆ 500GB ಡಬಲ್​ ಡೇಟಾ ಮತ್ತು ವಾರ್ಷಿಕ ಪ್ಲಾನ್​​​ ಕೊಡುಗೆಯಾಗಿ 500GB ಸಿಗಲಿದೆ. ಒಟ್ಟಾರೆ ತಿಂಗಳಿಗೆ 1,750 ಜಿಬಿ ಸಿಗಲಿದೆ.

ಡೈಮಂಡ್​​ ಪ್ಲಾನ್​:

ಜಿಯೋ ಫೈಬರ್​ 2,499 ರೂಪಾಯಿಯ ಡೈಮಂಡ್​ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರಿಗೆ  ಪ್ರತಿ ತಿಂಗಳು 500ಎಮ್​ಬಿಪಿಎಸ್​ ವೇಗದಲ್ಲಿ 1250 ಜಿಬಿ ಡೇಟಾ ಸಿಗಲಿದೆ. ಆರಂಭಿಕ ಕೊಡುಗೆಯಾಗಿ 250ಜಿಬಿ ಡೇಟಾ, ಅದರ ಜೊತೆಗೆ 1250GB ಡಬಲ್​ ಡೇಟಾ ಆಫರ್​ ಮತ್ತು ವಾರ್ಷಿಕ ಪ್ಲಾನ್​ ಕೊಡುಗೆಯಾಗಿ 1250GB ಹೆಚ್ಚುವರಿಯಾಗಿ ಸಿಗಲಿದೆ. ಗ್ರಾಹಕರು ಒಟ್ಟು 4,000GB ಡೇಟಾವನ್ನು ಪಡೆಯಬಹುದಾಗಿದೆ.

ಪ್ಲಾಟಿನಂ ಪ್ಲಾನ್​:

ಜಿಯೋ 3,999 ರೂವಿನ ಪ್ಲಾಟಿಂನಂ ಪ್ಲಾನ್​​ನಲ್ಲಿ  ಪ್ರತಿ ತಿಂಗಳು 1GBPS​ ವೇಗದಲ್ಲಿ 2500GB ಡೇಟಾ ಸಿಗಲಿದೆ. ಅದರೊಂದಿಗೆ 2500GB ಡಬಲ್​ ಡೇಟಾ ಆಫರ್​ ಮತ್ತು ವಾರ್ಷಿಕ ಪ್ಲಾನ್​ ಕೊಡುಗೆಯಾಗಿ 2500GB ಉಚಿತ. ಗ್ರಾಹಕರು ಒಟ್ಟು 7,500GB ಡೇಟಾವನ್ನು ಪಡೆಯಲಿದ್ದಾರೆ.

ಟೈಟಾನಿಯಂ ಪ್ಲಾನ್​:

ಜಿಯೋ 8,499 ರೂವಿನ ಪ್ಲಾನ್​ನಲ್ಲಿ ಅಳವಿಡಿಸಿಕೊಂಡ ಗ್ರಾಹಕರಿಗೆ ಪ್ರತಿ ತಿಂಗಳು 1GBPS​ ವೇಗದಲ್ಲಿ 5000GB ಡೇಟಾ ಸಿಗಲಿದೆ. ಅದರೊಂದಿಗೆ 5000ಜಿಬಿ ಡಬಲ್​ ಡೇಟಾ ಆಫರ್​ ಮತ್ತು ವಾರ್ಷಿಕ ಪ್ಲಾನ್​ ಕೊಡುಗೆಯಾಗಿ 5000GB ಸಿಗಲಿದೆ. ಗ್ರಾಹಕರಿಗೆ ಒಟ್ಟು 15,00GB ಡೇಟಾ ಸಿಗಲಿದೆ
First published: May 27, 2020, 6:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading