Jio Postpaid Plus: ಜಿಯೋ ಫೈಬರ್​ ಹಾಗೂ ಜಿಯೋ ಪೋಸ್ಟ್​ ಪೇಯ್ಡ್​ ಸೇವೆಯಲ್ಲಿ ಏನೇನಿದೆ ಗೊತ್ತಾ?

Jio Fiber: ಗ್ರಾಹಕರಿಗಾಗಿ ಜಿಯೋ ಫೈಬರ್​ ಸೇವೆಯಲ್ಲಿ ವಿಶೇಷ ಆಫರ್​ ಅನ್ನು ನೀಡಿದ್ದು, ಜಿಯೋ ಪೋಸ್ಟ್​ ಪೇಯ್ಡ್​​ ಹಾಗೂ ಮೊಬೈಲ್​ ಸೇವೆಯನ್ನು ಅಭಿವೃದ್ಧಿಗೊಳಿಸಿದೆ.

news18
Updated:August 13, 2019, 10:50 AM IST
Jio Postpaid Plus: ಜಿಯೋ ಫೈಬರ್​ ಹಾಗೂ ಜಿಯೋ ಪೋಸ್ಟ್​ ಪೇಯ್ಡ್​ ಸೇವೆಯಲ್ಲಿ ಏನೇನಿದೆ ಗೊತ್ತಾ?
ಮುಖೇಶ್​ ಅಂಬಾನಿ
  • News18
  • Last Updated: August 13, 2019, 10:50 AM IST
  • Share this:
ರಿಲಾಯನ್ಸ್​ ಸಂಸ್ಥೆಯ ಮುಖ್ಯಸ್ಥ ಮುಖೇಶ್​ ಅಂಬಾನಿಯವರು 42ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ಜಿಯೋ ಗಿಗಾ ಫೈಬರ್​ ವಾಣಿಜ್ಯ ಬಿಡುಗಡೆಯ ಯೋಜನೆಯನ್ನು ಬಹಿರಂಗ ಪಡಿಸಿದ್ದಾರೆ.

ಜಿಯೋ ಪೈಬರ್​ ಹೋಮ್​ ಬ್ರ್ಯಾಂಡ್​ ಸೇವೆಯನ್ನು ಮುಂದಿನ ತಿಂಗಳು  ಬಿಡುಗಡೆಗೊಳ್ಳಿದೆ. ಜೊತೆಗೆ ಗ್ರಾಹಕರಿಗಾಗಿ ಈ ಸೇವೆಯನ್ನು ತಿಂಗಳಿಗೆ ರೂ.700 ನಂತೆ ನೀಡಲಿದ್ದೇವೆ ಎಂದಿದ್ದಾರೆ.

ಗ್ರಾಹಕರಿಗಾಗಿ ಜಿಯೋ ಫೈಬರ್​ ಸೇವೆಯಲ್ಲಿ ವಿಶೇಷ ಆಫರ್​ ಅನ್ನು ನೀಡಿದ್ದು, ಜಿಯೋ ಪೋಸ್ಟ್​ ಪೇಯ್ಡ್​​ ಹಾಗೂ ಮೊಬೈಲ್​ ಸೇವೆಯನ್ನು ಅಭಿವೃದ್ಧಿಗೊಳಿಸಿದೆ.

Reliance-Jio-Live-announcement
ಮುಕೇಶ್​ ಅಂಬಾನಿ


ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯಲ್ಲಿ ಚಂದಾದಾರ ಯಾವ ಯೋಜನೆಗೆ ಸೈನ್ ಅಪ್ ಮಾಡುತ್ತಾನೊ ಅದರ ಆಧಾರದ ಮೇಲೆ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಕೊಡುಗೆ ನೀಡಲಿದೆ.

ಅಂತೆಯೇ, ಗ್ರಾಹಕರಿಗಾಗಿ ‘ಪ್ಲಾಟಿನಂ ದರ್ಜೆಯ ಸೇವೆ ಹಾಗೂ ಉತ್ಪನ್ನದ ಅನುಭವಕ್ಕೆ ಮೊದಲು ಆದ್ಯತೆಯನ್ನು ನೀಡಲಾಗಿದೆ. ಗ್ರಾಹಕರು ಹೊಸ ಜಿಯೋ ಮೊಬೈಲ್​ ಸೇವೆಯನ್ನು ಅಥವಾ ಮೊಬೈಲ್​ ಸಂಪರ್ಕವನ್ನು ಅಳವಡಿಸಲು ಬಯಸಿದರೆ, ಮನೆ ಬಾಗಿಲಿಗೆ ಬಂದು ಸಿಮ್​ ಆ್ಯಕ್ಟಿವೇಷನ್​ ಮಾಡಲಾಗುತ್ತದೆ.

ಇನ್ನು ಜಿಯೋ ತನ್ನ ಗ್ರಾಹಕರಿಗಾಗಿ ಫ್ಯಾಮಿಲಿ ಪ್ಲಾನ್​ ಅನ್ನು ನೀಡುತ್ತಿದೆ. ಇದರಲ್ಲಿ ಸಿಂಗಲ್​ ಪ್ಲಾನ್​ ಹಾಗೂ ಮನೆಯಲ್ಲಿ ಬಳಸಲಾಗುವ ಅನೇಕ ಜಿಯೋ ಮೊಬೈಲ್​ಸಂಪರ್ಕಗಳಿಗಾಗಿ ಒಂದೇ ಬಿಲ್​ ಎಂಬ ವಿಶೇಷತೆಯನ್ನು ನೀಡಿದೆ. ಜೊತೆಗೆ ಐಎಸ್​ಡಿ ಕರೆಗಳ ದರವನ್ನು ಕಡಿಮೆ ಮಾಡುತ್ತಿದೆ.
Loading...

ಭಾರತದಾದ್ಯಂತ ಜಿಯೋ ಫೈಬರ್​ ಸೇವೆ ಸೆಪ್ಟಂಬರ್​ 5 ರಂದು ಪಸರಿಸಲಿದೆ. ಗ್ರಾಹಕರಿಗಾಗಿ ಟ್ಯಾರಿಫ್​ ಪ್ಲಾನ್​ನಡಿಯಲ್ಲಿ​ 700 ರೂಗೆ 100 Mbps​ ಮತ್ತು 1Gbps ನೀಡಲಿದೆ. ಇದು ಒಂದು ತಿಂಗಳ ಪ್ಲಾನ್​ ಆಗಿದೆ.

ಜಿಯೋ ಸಂಸ್ಥೆ ಪ್ರಾರಂಭಿಸಿದ ಈ ಸೇವೆಯನ್ನು 20 ಮಿಲಿಯನ್ ಮನೆಗಳಿಗೆ ತಲುಪಿಸುವ ಯೋಜನೆಯಲ್ಲಿದೆ. ಜೊತೆಗೆ ಜಿಯೋ ಪೈಬರ್​ ಸೇವೆ, ಜಿಯೋ ಹೋಮ್​ ಫೋನ್​ ಸೇವೆಯನ್ನು ನೀಡಲಿದೆ.​
First published:August 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...