ವೊಡಾಫೋನ್ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಬದಲಾವಣೆ; ಇನ್ನು ಸಿಗಲಿದೆ ಮತ್ತಷ್ಟು ಡೇಟಾ

jio effect; ಟೆಲಿಕಾಂ ಕ್ಷೇತ್ರದಲ್ಲಿನ ಬದಲಾವಣೆಯಿಂದ ಅನೇಕ ಗ್ರಾಹಕರು ಬೇರೆ ನೆಟ್​ವರ್ಕ್​ನತ್ತ ವಲಸೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವೊಡಾಫೊನ್​ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

news18
Updated:August 6, 2019, 5:18 PM IST
ವೊಡಾಫೋನ್ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಬದಲಾವಣೆ; ಇನ್ನು ಸಿಗಲಿದೆ ಮತ್ತಷ್ಟು ಡೇಟಾ
ವೊಡಾಫೋನ್
  • News18
  • Last Updated: August 6, 2019, 5:18 PM IST
  • Share this:
ಟೆಲಿಕಾಂ ಕ್ಷೇತ್ರದಲ್ಲಿ ಪೋಸ್ಟ್​ಪೇಯ್ಡ್​ ಮತ್ತು ಪ್ರಿಪೇಯ್ಡ್​ ದರ ಸಮರ ನಡೆಯುತ್ತಿದ್ದು, ಇದೀಗ ವೊಡಾಫೋನ್​ ಕೂಡ ತನ್ನ ದರ ಪರಿಷ್ಕರಿಸಿದೆ.

ವೊಡಾಫೋನ್​ 225 ರೂ.ಗಳ ಪ್ರಿಪೇಯ್ಡ್​ ರಿಚಾರ್ಜ್​ ಪ್ಲಾನ್​ ಬಳಕೆಯ ಗ್ರಾಹಕರಿಗೆ ಹೆಚ್ಚುವರಿ ಡೇಟಾವನ್ನು ನೀಡಲು ಮುಂದಾಗಿದೆ. ಈ ಮೊದಲು 28 ದಿನಗಳ ವ್ಯಾಲಿಡಿಟಿ ಮೂಲಕ ಅನಿಯಮಿತ ಕರೆ ಮತ್ತು ಲೋಕಲ್​ ಕರೆಗಳನ್ನು ಉಚಿತವಾಗಿ ನೀಡುತ್ತಿತ್ತು. ಜೊತೆಗೆ ದಿನಕ್ಕೆ 2GB ಡೇಟಾವನ್ನು ಉಚಿತವಾಗಿ ನೀಡುತ್ತಿತ್ತು. ಆದರೆ ಈಗ ತನ್ನ ಡೇಟಾದಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡಿದ್ದು,  500MB ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ.

ಟೆಲಿಕಾಂ ಕ್ಷೇತ್ರದಲ್ಲಿನ ಬದಲಾವಣೆಯಿಂದ ಅನೇಕ ಗ್ರಾಹಕರು ಬೇರೆ ನೆಟ್​ವರ್ಕ್​ನತ್ತ ವಲಸೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವೊಡಾಫೊನ್​ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇನ್ನು ರೂ. 225 ರ ಪ್ಲಾನ್​ನಲ್ಲಿ ಬೇರಾವುದೇ ಬದಲಾವನೆ ಮಾಡಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ: ಶಿಯೋಮಿ ಗೇಮಿಂಗ್​ ಲ್ಯಾಪ್​ಟಾಪ್​ ಬಿಡುಗಡೆ: ಇದರ ಫೀಚರ್ಸ್​ ಹೇಗಿದೆ ಗೊತ್ತಾ?

ಗ್ರಾಹಕರು ಈ ಪ್ಲಾನ್​ ಅನ್ನು ಅಳವಡಿಸಿಕೊಂಡರೆ ಪ್ರತಿ ದಿನ 100SMS​ಗಳನ್ನು ಉಚಿತವಾಗಿ ನೀಡುತ್ತಿದೆ. ಜೊತೆಗೆ ವೊಡಾಫೋನ್​ ಪ್ಲೇ ಆ್ಯಪ್​ ಮೂಲಕ ಮೂವಿ, ಲೈವ್​ ಟಿವಿ ವೀಕ್ಷಿಸುವ ಅವಕಾಶ ದೊರೆಯಲಿದೆ.
First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...