ದೀಪಾವಳಿ ಧಮಾಕ: ಹೊಚ್ಚ ಹೊಸ 8 ಆಫರ್​ಗಳನ್ನು ಘೋಷಿಸಿದ ಜಿಯೋ

zahir | news18
Updated:November 3, 2018, 4:46 PM IST
ದೀಪಾವಳಿ ಧಮಾಕ:  ಹೊಚ್ಚ ಹೊಸ 8 ಆಫರ್​ಗಳನ್ನು ಘೋಷಿಸಿದ ಜಿಯೋ
ಜಿಯೋ-ಒನ್‌ಪ್ಲಸ್ 7 ಬಿಯಾಂಡ್ ಸ್ಪೀಡ್ ಆಫರ್
  • News18
  • Last Updated: November 3, 2018, 4:46 PM IST
  • Share this:
-ನ್ಯೂಸ್ 18 ಕನ್ನಡ

ರಿಲಯನ್ಸ್ ಜಿಯೋ ದೀಪಾವಳಿ ಹಬ್ಬಕ್ಕೆ ಧಮಾಕ ಆಫರ್​ಗಳನ್ನು ನೀಡಿದೆ. ದೇಶದಾದ್ಯಂತ ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರಿಗೆ ದೀಪಾವಳಿ ಪ್ರಯುಕ್ತ 'ಜಿಯೋ ದಿವಾಲಿ ಧಮಾಕ' ಆಫರ್ ಅಡಿಯಲ್ಲಿ 8 ಹೊಸ ಯೋಜನೆಗಳನ್ನು ಘೋಷಿಸಿದೆ.

ದೀಪಾವಳಿ ಕೊಡುಗೆ:
-ದೀಪಾವಳಿ ಧಮಾಕ ಆಫರ್​ನಲ್ಲಿ ಜಿಯೋ ವಾರ್ಷಿಕ ಪ್ಲಾನ್​ವೊಂದನ್ನು ಪರಿಚಯಿಸಿದೆ. 1699 ರೂ. ರಚಾರ್ಜ್​​ ಪ್ಲಾನಿನಲ್ಲಿ ಒಂದು ವರ್ಷದವರೆಗೆ ಅನಿಯಮಿತ ಕರೆ ಮತ್ತು 547.5 GB ಇಂಟರ್​ನೆಟ್ ಡೇಟಾ ನೀಡಲಾಗುತ್ತದೆ. ಅಂದರೆ ಪ್ರತಿದಿನ 1.5GB 4G ಇಂಟರ್​ನೆಟ್​ನ್ನು ಈ ರಿಚಾರ್ಜ್​ ಮೂಲಕ ಪಡೆದುಕೊಳ್ಳಬಹುದು.

- ಎರಡನೇ ಆಫರ್​ನಲ್ಲಿ ನೀವು ಶೇ.100 ರಷ್ಟು ಕ್ಯಾಶ್​ಬ್ಯಾಕ್ ಪಡೆಯಬಹುದು. ಇಲ್ಲಿ ಕ್ಯಾಶ್​ಬ್ಯಾಕ್​ ಮೂಲಕ ಪಡೆದ ಹಣವನ್ನು ರಿಲಯನ್ಸ್ ಡಿಜಿಟಲ್​ ಸ್ಟೋರ್​ನಲ್ಲಿ ಬಳಸಿಕೊಳ್ಳಬಹುದು. ಈ ವಿಶೇಷ ಆಫರ್​ನ್ನ ಆಯ್ದ ಗ್ರಾಹಕರಿಗೆ ಮಾತ್ರ ನೀಡಲಾಗುತ್ತದೆ. 149ಕ್ಕಿಂತ ಹೆಚ್ಚಿನ ಮೊತ್ತದ ಜಿಯೋ ಪ್ಲಾನ್ ಹೊಂದಿರುವ ಮತ್ತು ಜಿಯೋಪ್ರೈಮ್ ಸದಸ್ಯತ್ವ ಪಡೆದುಕೊಂಡಿರುವ ಬಳಕೆದಾರರಿಗೆ ಈ ಕ್ಯಾಶ್​ಬ್ಯಾಕ್ ಆಫರ್ ಲಭಿಸಲಿದೆ.

ರೂ. 149, ರೂ 198, ರೂ 299, ರೂ 349, ರೂ 398, ರೂ 399, ರೂ 448, ರೂ 449 ರೂ 498, ರೂ 509, ರೂ 799, ರೂ 999, ರೂ 1699, ರೂ 1999, ರೂ 4999 ಮತ್ತು ರೂ. 9999 ರೂ. ಮೇಲೆ ಈ ಕೂಪನ್ ಕ್ಯಾಶ್​ಬ್ಯಾಕ್ ಆಫರ್ ಸಿಗಲಿದೆ. ಈ ಕ್ಯಾಶ್​ಬ್ಯಾಕ್ ಕೂಪನ್​ಗಳ ವಾಲಿಟಿಡಿ ಡಿಸೆಂಬರ್​ 31, 2018 ರಂದು ಮುಕ್ತಾಯಗೊಳ್ಳುತ್ತವೆ. ಇದನ್ನು ನೀವು ಆನ್​ಲೈನ್ ಮತ್ತು ರಿಟೇಲ್​ ರಿಚಾರ್ಜ್ ಮೂಲಕ ಪಡೆಯಬಹುದು.

-ಹೊಸ 4G ಫೋನ್ ಖರೀದಿಸಿದರೂ ಅದರ ಮೇಲೆ ಜಿಯೋ 2200 ರೂ. ಕ್ಯಾಶ್​ಬ್ಯಾಕ್ ನೀಡಲಿದೆ. ಗ್ರಾಹಕರು ತಮ್ಮ ಸ್ಮಾರ್ಟ್‌ಫೋನಿನಲ್ಲಿ MyJio ಅಪ್ಲಿಕೇಶನ್​ ಮೂಲಕ ಹೊಸ 198 ಅಥವಾ 299 ರೂ. ರಿಚಾರ್ಜ್​ ಮಾಡಬೇಕು. ಇದರಿಂದ ಗ್ರಾಹಕರಿಗೆ 50 ರೂಪಾಯಿಗಳ 40 ವೋಚರ್‌ಗಳು ಸಿಗಲಿವೆ. ಇದನ್ನು ರಿಚಾರ್ಜ್​ ಕೂಪನ್​ಗಳಾಗಿ ಬಳಸಿಕೊಳ್ಳಬಹುದು.-ಜಿಯೋ ಜೊತೆಗೆ ಪಾಲುದಾರಿಕೆ ಹೊಂದಿರುವ ಪೇಟಿಎಂ, ಫೋನ್ ಪೇ, ಅಮೆಜಾನ್ ಪೇ ಮತ್ತು ಮೊಬಿಕ್ವಿಕ್ ವಾಲೆಟ್‌ಗಳ ರೀಚಾರ್ಜ್‌ ಮೂಲಕ ಕೂಡ ಕ್ಯಾಶ್​ಬ್ಯಾಕ್ ಪಡೆಯಬಹುದು. ಇಲ್ಲಿ 300 ರೂಪಾಯಿವರೆಗೂ ಕ್ಯಾಶ್‌ಬ್ಯಾಕ್ ಸಿಗಲಿದೆ. ಈ ಆಫರ್ ನವೆಂಬರ್ 15 ರಂದು ಕೊನೆಗೊಳ್ಳಲಿದೆ.

-ಈ ರಿಚಾರ್ಜ್​ ಯೋಜನೆಯ ಸಂಪೂರ್ಣ ಉಡುಗೊರೆಯ ಪ್ಯಾಕ್ ಖರೀದಿಸಲು ಫೆಸ್ಟಿವ್ ಕಾರ್ಡ್​ನ್ನು ಕೂಡ ನೀಡಲಾಗುತ್ತಿದೆ. 1095 ರೂಪಾಯಿಯ ಈ ಕಾರ್ಡ್​​ ಮೂಲಕ ನೀವು 6 ತಿಂಗಳ ಜಿಯೋ ವಾಲಿಟಿಡಿ ಪಡೆಯಬಹುದು. ಇಲ್ಲಿ ನೀವು ಅನಿಯಮಿತ ಕರೆ ಮತ್ತು ಡೇಟಾವನ್ನು ಪಡೆಯಬಹುದು.

-ಇದಲ್ಲದೆ 501 ರೂ. ಜಿಯೋಫೋನ್ ಖರೀದಿಸಿದರೆ 594 ರೂ. ಡೇಟಾ ಪ್ಯಾಕ್​ನ್ನು ಈ ಆಫರ್​ನಲ್ಲಿ ನೀಡಲಾಗುತ್ತದೆ. ಇದು ಜಿಯೋಫೋನ್ ಮಾನ್ಸೂನ್ ಹಂಗಾಮ ಎಕ್ಸ್​ಛೇಂಚ್ ಪ್ರಸ್ತಾದಪಡಿಯಲ್ಲಿ ಅನ್ವಯಿಸುತ್ತದೆ.

ಜಿಯೋಫೋನ್ 2 ಆಫರ್​:
ಜಿಯೋಫೋನ್ 2 ಹಬ್ಬದ ಆಫರ್ ಮಾರಾಟ ನವೆಂಬರ್ 5 ರಿಂದ ನ.12ರ ತನಕ ನಡೆಯಲಿದೆ. ಇಲ್ಲಿ ನೀವು ಜಿಯೋಫೋನ್​ನ್ನು ಕೇವಲ 2,999 ರೂ .ಗೆ ಖರೀದಿಸಬಹುದು. ಹಾಗೆಯೇ ಪೇಟಿಎಂ ಮೂಲಕ ಜಿಯೋಫೋನ್ 2 ಅನ್ನು ಖರೀದಿಸಿದರೆ 200 ರೂ. ಕ್ಯಾಶ್ ಬ್ಯಾಕ್ ಕೂಡ ಲಭ್ಯವಿದೆ.

ನೀವು ಹೊಸ ಲ್ಯಾಪ್​ಟಾಪ್ ಖರೀದಿಸಿದರೂ ಕೂಡ ಜಿಯೋ ಆಫರ್​ನ್ನು ಪಡೆಯಬಹುದಾಗಿದೆ. ಇಲ್ಲಿ ಜಿಯೋ ನಿಮಗೆ ಜಿಯೋಫೈ ಮೂಲಕ 3 ಸಾವಿರ ಮೌಲ್ಯದ ಲಾಭ ಒದಗಿಸಲಿದೆ. ಇದು 168 ದಿನಗಳವರೆಗೆ ಈ ಪ್ರತಿನಿತ್ಯ 2GB ಡೇಟಾ ಮತ್ತು 6GBಯ 10 ವೋಚರ್​ಗಳನ್ನು ಹೊಂದಿರುತ್ತದೆ. ಈ ವಿಶೇಷ ಕೊಡುಗೆ 35 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಲ್ಯಾಪ್​ಟಾಪ್ ಖರೀದಿ​ ಮೇಲೆ ಸಿಗಲಿದೆ.

ಇದನ್ನೂ ಓದಿ: ಹೊಸ ಫೀಚರ್: ವಾಟ್ಸಪ್​ ಮೆಸೇಜ್​ಗೆ ರಿಪ್ಲೈ ಮಾಡುವುದು ಈಗ ಮತ್ತಷ್ಟು ಸುಲಭ

ಜಿಯೋಫೈ ಕೊಡುಗೆಯು ಎಲ್​.ಜಿ ಸ್ಮಾರ್ಟ್​ ಟಿವಿ ಮೇಲೂ ಕೂಡ ಲಭ್ಯವಿದೆ. ಇಲ್ಲಿ ನೀವು 2 ಸಾವಿರ ಮೊತ್ತದ ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಪ್ರತಿದಿನ 1.5GB ಡೇಟಾವನ್ನು 84ದಿನಗಳವರೆಗೆ ಸಿಗಲಿದೆ. ಅಲ್ಲದೆ ಇದು 10GBಯ 3 ವೋಚರ್​ಗಳ ಜಿಯೋಪ್ರೈಮ್​ನ್ನು ಒಳಗೊಂಡಿರುತ್ತದೆ.

 

First published: November 3, 2018, 4:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading