ಜಿಯೋ ಕ್ರಿಕೆಟ್ ಉತ್ಸವದಲ್ಲಿ ಪಾಲ್ಗೊಳ್ಳಿರಿ; ಆಡಿರಿ, ಬಹುಮಾನ ಗೆಲ್ಲಿರಿ


Updated:April 5, 2018, 6:08 PM IST
ಜಿಯೋ ಕ್ರಿಕೆಟ್ ಉತ್ಸವದಲ್ಲಿ ಪಾಲ್ಗೊಳ್ಳಿರಿ; ಆಡಿರಿ, ಬಹುಮಾನ ಗೆಲ್ಲಿರಿ
Reliance Jio fonder Mukesh Ambani

Updated: April 5, 2018, 6:08 PM IST
- ನ್ಯೂಸ್18 ಕನ್ನಡ

ಐಪಿಎಲ್ ಹಬ್ಬದ ಖುಷಿಯಲ್ಲಿರುವ ಜಿಯೋ ಬಳಕೆದಾರರಿಗೆ ಡಬಲ್ ಧಮಾಕದ ಸುದ್ದಿ ಇದೆ. ರಿಲಾಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೋಸ್ಕರ ಕ್ರಿಕೆಟ್ ಹಬ್ಬ ನಡೆಸಿದೆ. "ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್" ಗೇಮ್​ಗೆ ಚಾಲೂ ನೀಡಿದೆ. ಇದರಲ್ಲಿ ಜನರು ಲೈವ್ ಆಗಿ ಮೊಬೈಲ್ ಗೇಮ್ ಆಡುವ ಜೊತೆಗೆ ಕೋಟಿಗಟ್ಟಲೆ ಬಹುಮಾನ ಗೆಲ್ಲಬಹುದು. ಈ ಜಿಯೋ ಕ್ರಿಕೆಟ್ ಹಬ್ಬ ಬರೀ ಗೇಮ್​ಗಾಗಿ ಸೀಮಿತವಾಗಿಲ್ಲ, ಜಿಯೋ ಧನ್ ಧನಾ ಧನ್ ಲೈವ್ ಶೋನಲ್ಲಿ ಕ್ರಿಕೆಟ್ ಮತ್ತು ಕಾಮಿಡಿ ಮಿಶ್ರಿತ ಕಾರ್ಯಕ್ರಮಗಳನ್ನು ನೋಡಿ ಆನಂದಿಸಬಹುದು.

ಏನಿದು ಧನ್ ಧನಾ ಧನ್?
MyJio ಆ್ಯಪ್​ನಲ್ಲಿ ಜಿಯೋ ಧನ್ ಧನಾ ಧನ್ ಲೈವ್ ಶೋ ಸಿಗುತ್ತದೆ. ಇದೇ ಏಪ್ರಿಲ್ 7ರಂದು, ಅಂದರೆ ಶನಿವಾರದಂದು ಈ ಶೋ ನೇರ ಪ್ರಸಾರವಾಗಿ ಕಾಣಿಸಿಕೊಳ್ಳುತ್ತದೆ. ಅದಾದ ಬಳಿಕ ಪ್ರತೀ ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ಲೈವ್ ಶೋ ಪ್ರಸಾರವಾಗುತ್ತದೆ. ಕಾಮಿಡಿಯನ್ ಸುನೀಲ್ ಗ್ರೋವರ್ ಮತ್ತು ಸ್ಪೋರ್ಟ್ಸ್ ಆ್ಯಂಕರ್ ಸಮೀರ್ ಕೊಚ್ಚರ್ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಪ್ರತೀ ಎಪಿಸೋಡ್​ನಲ್ಲೂ ಜನಪ್ರಿಯ ಕ್ರಿಕೆಟ್ ಆಟಗಾರರು ಮತ್ತು ಸೆಲಬ್ರಿಟಿಗಳು ಅತಿಥಿಗಳಾಗಿ ಕಾಣಿಕೊಳ್ಳುತ್ತಾರೆ. ಆಫ್​ ಫೀಲ್ಡ್ ಕ್ರಿಕೆಟ್ ಅನುಭವಗಳು, ನಗೆ, ಕ್ರಿಕೆಟ್ ತಜ್ಞರ ಮಾತುಗಳನ್ನು ನೀವು ಜಿಯೋ ಧನ್ ಧನಾ ಧನ್ ಲೈವ್​ನಲ್ಲಿ ನೀವು ವೀಕ್ಷಿಸಿ ಆನಂದಿಸಬಹುದು.

ಜಿಯೋ ಕ್ರಿಕೆಟ್ ಪ್ಲೇ-ಅಲಾಂಗ್:
ಕ್ರಿಕೆಟ್ ಆಟ ನೋಡಿ ಆನಂದಿಸುತ್ತಿದ್ದವರು ಕ್ರಿಕೆಟ್ ಗೇಮ್​ನಲ್ಲಿ ಭಾಗಿಯಾಗಿ ಡಬಲ್ ಖುಷಿ ಅನುಭವಿಸಬೇಕೆ? ಅದಕ್ಕೆಂದೇ ಈ ಗೇಮ್ ಆ್ಯಪ್ ಇದೆ. ಈ ಆಟವು ಭಾರತದ ಎಲ್ಲಾ ಸ್ಮಾರ್ಟ್​ಫೋನ್​ಗಳಲ್ಲೂ 11 ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತದೆ. ಪ್ರತೀ ಪಂದ್ಯದ ಅವಧಿಯಲ್ಲಿ ರಿಯಲ್​-ಟೈಮ್​ನಲ್ಲೇ ಸಂವಾದ ನಡೆಸಬಹುದು.

ಇದರ ಜೊತೆಗೆ ಕ್ರಿಕೆಟ್ ಸೀಸನ್ ಪ್ಯಾಕ್​ಗಳ ಮೂಲಕ ಯಾವುದೇ ಲೈವ್ ಮ್ಯಾಚ್​ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. ಇವೆಲ್ಲವೂ ಕೂಡ ಮೈಜಿಯೋ ಆ್ಯಪ್​ನಲ್ಲಿ ಲಭ್ಯವಿದೆ.
First published:April 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ