• Home
  • »
  • News
  • »
  • tech
  • »
  • Jio Cinema: ಫಿಫಾ ವಿಶ್ವಕಪ್‌ನಲ್ಲಿ ಜಿಯೋ ಸಿನೆಮಾ ಮೈಲಿಗಲ್ಲು; 100 ಮಿಲಿಯನ್‌ಗೂ ಹೆಚ್ಚು ವೀಕ್ಷಕರನ್ನು ತಲುಪಿದ ಡಿಜಿಟಲ್‌ ಫ್ಲಾಟ್‌ಫಾರ್ಮ್‌

Jio Cinema: ಫಿಫಾ ವಿಶ್ವಕಪ್‌ನಲ್ಲಿ ಜಿಯೋ ಸಿನೆಮಾ ಮೈಲಿಗಲ್ಲು; 100 ಮಿಲಿಯನ್‌ಗೂ ಹೆಚ್ಚು ವೀಕ್ಷಕರನ್ನು ತಲುಪಿದ ಡಿಜಿಟಲ್‌ ಫ್ಲಾಟ್‌ಫಾರ್ಮ್‌

ಜಿಯೋ ಸಿನಿಮಾ

ಜಿಯೋ ಸಿನಿಮಾ

 ಈ ಬಾರಿಯ ಫಿಫಾ ವಿಶ್ವಕಪ್​ ಸಾಕಷ್ಟು ದಾಖಲೆಗಳನ್ನು ಸೃಷ್ಟಿಸಿದೆ. ಈ ಮಧ್ಯೆ ಇದೀಗ ಜಿಯೋ ಸಿನೆಮಾ ಕೂಡ ದಾಖಲೆಯನ್ನು ಮಾಡಿದ್ದು, ಈ ಬಾರಿ ಅತೀ ಹೆಚ್ಚು ಡೌನ್​ಲೋಡ್​ ಮಾಡಿದ ಅಪ್ಲಿಕೇಶನ್ ಎಂದು ಜಿಯೋಸಿನೆಮಾ ಗುರುತಿಸಿಕೊಂಡಿದೆ.

  • Share this:

    ಈ ಬಾರಿಯಾ ಫಿಫಾ ವಿಶ್ವಕಪ್ (FIFA Worldcup) ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಫೈನಲ್‌ ವೇಳೆ ನಡೆದ ಕೆಲ ಅದ್ಭುತಗಳು ವಿಡಿಯೋ ಸ್ಟ್ರೀಮಿಂಗ್ (Video Streaming)​ ಅಪ್ಲಿಕೇಶನ್ ಇತಿಹಾಸದಲ್ಲಿ ಒಂದು ಮೈಲಿಗಲ್ಲನ್ನು ಸೃಷ್ಟಿ ಮಾಡಿದೆ.ವೊಡಫೋನ್ ಐಡಿಯಾ (Vodafone Idea), ಏರ್​​ಟೆಲ್ (Airtel)​, ಬಿಎಸ್​ಎನ್​ಎಲ್ (BSNL) ಈ ಎಲ್ಲಾ ಟೆಲಿಕಾಂಗಳನ್ನು ಹಿಂದಿಕ್ಕಿ ಜಿಯೋ ಸಿನೆಮಾ ದಾಖಲೆ ಮಟ್ಟದಲ್ಲಿ ವೀಕ್ಷಕರನ್ನು ಪಡೆದುಕೊಂಡಿದೆ. ಜಿಯೋ ಕಂಪನಿ ತನ್ನ ಫೀಚರ್ಸ್​ ಮೂಲಕ ಒಂದರ ಮೇಲೊಂದು ಸಾಧನೆಗಳನ್ನು ಈ ವರ್ಷ ಮಾಡುತ್ತಲೇ ಇದೆ. 


    ಈ ಬಾರಿಯ ಫಿಫಾ ವಿಶ್ವಕಪ್​ ಸಾಕಷ್ಟು ದಾಖಲೆಗಳನ್ನು ಸೃಷ್ಟಿಸಿದೆ. ಈ ಮಧ್ಯೆ ಇದೀಗ ಜಿಯೋ ಸಿನೆಮಾ ಕೂಡ ದಾಖಲೆಯನ್ನು ಮಾಡಿದ್ದು, ಈ ಬಾರಿ ಅತೀ ಹೆಚ್ಚು ಡೌನ್​ಲೋಡ್​ ಮಾಡಿದ ಅಪ್ಲಿಕೇಶನ್ ಎಂದು ಜಿಯೋ ಸಿನೆಮಾ ಗುರುತಿಸಿಕೊಂಡಿದೆ.


    ದಾಖಲೆ ಬರೆದ ಜಿಯೋ ಸಿನೆಮಾ


    ರಿಲಯನ್ಸ್‌ ಒಡೆತನದ ಜಿಯೋ ಸಿನೆಮಾ ಅಪ್ಲಿಕೇಶನ್ ಈ ಬಾರಿ ಫಿಫಾ ವಿಶ್ವಕಪ್​ ಅನ್ನು ಜಿಯೋ ಸಿನಿಮಾ Viacom 18 ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್​ ಸ್ಟ್ರೀಮ್‌ ಮಾಡಿತ್ತು.


    ಇದನ್ನೂ ಓದಿ: ಫ್ಲಿಪ್​ಕಾರ್ಟ್​​ನ ‘ಇಯರ್​ ಎಂಡ್​ ಸೇಲ್​‘ ಆರಂಭ, ಈ ಸಾಧನಗಳ ಮೇಲೆ ಬಂಪರ್ ಆಫರ್!


    ಇದಾದ ಬೆನ್ನಲ್ಲೇ ಜಿಯೋ ಸಿನೆಮಾ ಹಲವು ದಾಖಲೆಗಳಿಗೆ ಪಾತ್ರವಾಗಿದೆ. ಅತ್ತ ದೇಶದಲ್ಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ಅತೀ ಹೆಚ್ಚು ಡೌನ್​ಲೋಡ್​ ಮಾಡಿಕೊಂಡ ಸ್ಟ್ರೀಮಿಂಗ್ ಅಪ್ಲಿಕೇಶನ್ ಆದರೆ, ಇತ್ತ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಟಿವಿ ವೀಕ್ಷಕರನ್ನು ಹಿಂದಿಕ್ಕಿ ಫ್ಲಾಟ್‌ಫಾರ್ಮ್‌ನಲ್ಲಿ ಅತಿಹೆಚ್ಚು ವೀಕ್ಷಕರನ್ನು ಗಳಿಸಿದ ಅಗ್ರ ಖ್ಯಾತಿಗೆ ಪಾತ್ರವಾಗಿದೆ.


    ಭಾರತದಲ್ಲೂ ಫುಟ್‌ಬಾಲ್‌ ಕ್ರೇಜ್‌


    ಕತಾರ್​ನಲ್ಲಿ ನಿನ್ನೆ ನಡೆದ ಫಿಫಾ ವಿಶ್ವಕಪ್‌ನಲ್ಲಿ​​ ಅರ್ಜೆಂಟೀನಾ ಮತ್ತು ಫ್ರಾನ್ಸ್ ಮುಖಾಮುಖಿಯಾಗಿದ್ದವು. ಇಬ್ಬರ ನಡುವಿನ ಸೆಟೆಸಾಟದಲ್ಲಿ ಅರ್ಜೆಂಟೀನಾ ವಿಶ್ವಕಪ್‌ಗೆ ಮುತ್ತಿಕ್ಕಿತು.


    ಜಗತ್ತಿನಾದ್ಯಂತ ಕ್ರೇಜ್‌ ಹುಟ್ಟಿಸಿರುವ ಈ ಆಟದ ಫೈನಲ್‌ ಅನ್ನು ನಿನ್ನೆ ಬಿಲಿಯನ್ ಗಟ್ಟಲೇ ಅಭಿಮಾನಿಗಳು ವೀಕ್ಷಿಸಿದ್ದಾರೆ. ಭಾರತದಲ್ಲಿ ಫುಟ್‌ಬಾಲ್‌ ಕ್ರೇಜ್‌ ಅಷ್ಟಿಲ್ಲ ಅನ್ನೋ ಒಂದು ಮಾತಿದೆ. ಆದರೆ ಜಿಯೋ ಸಿನೆಮಾದಲ್ಲಿ ಪಂದ್ಯ ವೀಕ್ಷಿಸಿದ ಸಂಖ್ಯೆಗಳನ್ನು ನೋಡಿದರೆ ಭಾರತದಲ್ಲೂ ಫುಟ್‌ಬಾಲ್‌ ಕ್ರೇಜ್‌ ಜೋರಾಗಿಯೇ ಇದೆ ಎನ್ನಬಹುದು.


    ಜಿಯೋ ಸಿನೆಮಾದಲ್ಲಿ ಪಂದ್ಯ ವೀಕ್ಷಿಸಿದ 100 ಮಿಲಿಯನ್ ವೀಕ್ಷಕರು


    ಭಾರತದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಜನ ಪಂದ್ಯ ವೀಕ್ಷಿಸಿರುವುದು ಸೇರಿ ನಿನ್ನೆ ನಡೆದ ಫೈನಲ್‌ ಪಂದ್ಯ ಹಲವು ಸಂಪ್ರದಾಯಗಳನ್ನು ಮುರಿದಿದೆ. ನಿನ್ನೆ ನಡೆದ ಪಂದ್ಯಾವಳಿಯನ್ನು ಜಿಯೋ ಸಿನಿಮಾದಲ್ಲಿ ನೋಡಿದ ವೀಕ್ಷಕರ ಸಂಖ್ಯೆ 100 ಮಿಲಿಯನ್ ತಲುಪಿರುವುದು ಒಂದು ಕಡೆಯಾದರೆ, ಕತಾರ್ 2022 ಫುಟ್ಬಾಲ್ ವಿಶ್ವಕಪ್ ಭಾರತದಲ್ಲಿ ಇದುವರೆಗೆ ಹೆಚ್ಚು ತೊಡಗಿಸಿಕೊಂಡಿರುವ ಮತ್ತು ವೀಕ್ಷಿಸಲ್ಪಟ್ಟ FIFA ವಿಶ್ವಕಪ್ ಕೂಡ ಆಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


    ಟಿವಿಗಿಂತ ಹೆಚ್ಚಾಗಿ ಜಿಯೋ ಸಿನೆಮಾದಲ್ಲಿ ಪಂದ್ಯ ವೀಕ್ಷಿಸಿದ ಅಭಿಮಾನಿಗಳು


    BARC ಅಂಕಿಅಂಶಗಳ ಪ್ರಕಾರ, ಪಂದ್ಯಾವಳಿಯ ಮೊದಲ 48 ಪಂದ್ಯಗಳ ಸಂಚಿತ ವ್ಯಾಪ್ತಿಯು ಭಾರತದಲ್ಲಿ 42.2 ಮಿಲಿಯನ್ ತಲುಪಿದೆ. ಈ ಎಲ್ಲಾ ಅಂಕಿಅಂಶಗಳನ್ನು ಆಧಾರಿಸಿ ನೋಡಿರುವ ಪ್ರಕಾರ, ಡಿಜಿಟಲ್ ವೀಕ್ಷಕರು ಮೊದಲ ಬಾರಿಗೆ ಟಿವಿಯನ್ನು ಹಿಂದಿಕ್ಕಿದ್ದಾರೆ. ಮತ್ತು ನವೆಂಬರ್ 20 ರಿಂದ iOS ಮತ್ತು Android ಎರಡರಲ್ಲೂ ಮೂರು ವಾರಗಳವರೆಗೆ ಡೌನ್‌ಲೋಡ್ ಮಾಡಿದ ಉಚಿತ ಅಪ್ಲಿಕೇಶನ್‌ನಲ್ಲಿ ಇದೇ (Jio cinema) ನಂ. ಒನ್‌ ಆಗಿದೆ.


    ಉತ್ತಮ ಅನುಭವ ನೀಡಿದ ಹೈಪ್‌ ಮೋಡ್


    ಜಿಯೋ ಸಿನೆಮಾದಲ್ಲಿ ವೀಕ್ಷಕರಿಗೆ ಹೈಪ್​ ಮೋಡ್​ನಲ್ಲಿ ಪಂದ್ಯವನ್ನು ಸ್ಟ್ರೀಮಿಂಗ್​ ಮಾಡಲಾಗಿತ್ತು. ಹೈಪ್ ಮೋಡ್ ವೀಕ್ಷಕರಿಗೆ ಫಿಫಾ ವಿಶ್ವಕಪ್ 2022 ಪಂದ್ಯಗಳನ್ನು ಬಹು ಕೋನಗಳಿಂದ ಅನುಭವಿಸಲು ಅನುಮತಿಸಿತು.


    ಫಿಲ್ಟರ್‌ಗಳು, ಕ್ಯಾಮೆರಾ ಆಂಗಲ್‌ಗಳು ಮತ್ತು ಹೆಚ್ಚಿನವುಗಳನ್ನು ಇದು ಒಳಗೊಂಡಿತ್ತು. ಇದು ಮಾರ್ಕ್ಸ್​​ಶೀಟ್​ಗಳನ್ನು, ಟೈಮ್​ ವೀಲ್​ಗಳನ್ನು ಒಳಗೊಂಡಿತ್ತು. ಒಟ್ಟಾರೆ ಈ ಹೈಪ್‌ ಮೋಡ್‌ ವೀಕ್ಷಕರ ನೋಡುವ ಅನುಭವವನ್ನು ಹೆಚ್ಚಿಸಿತ್ತು.


    Snap Inc ನೊಂದಿಗೆ ಪಾಲುದಾರಿಕೆ, ಮಹೀಂದ್ರಾದೊಂದಿಗೆ ಸಹಯೋಗ


    ಜಿಯೋ ಸಿನೆಮಾ ಫಿಫಾ ವರ್ಲ್ಡ್ ಕಪ್ 2022 ಗಾಗಿ Snap Inc ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಬಳಕೆದಾರರಿಗೆ ಹಿಂದೆಂದೂ ನೋಡಿರದ ಧ್ವನಿ-ಸಕ್ರಿಯ AR ಲೆನ್ಸ್ ಮತ್ತು Snapchat ನ ಡಿಸ್ಕವರ್ ಪ್ಲಾಟ್‌ಫಾರ್ಮ್‌ನಲ್ಲಿ ಒಂದೊಳ್ಳೆ ಅನುಭವ ನೀಡಿತ್ತು. ಇನ್ನೂ ಜಿಯೋ ಸಿನಿಮಾವು ಮಹೀಂದ್ರಾದೊಂದಿಗಿನ ಸಹಯೋಗದಿಂದ ಮತ್ತಷ್ಟು ರಂಗನ್ನು ಪಡೆದುಕೊಂಡಿತ್ತು. ಭಾರತದಲ್ಲಿ ಫುಟ್‌ಬಾಲ್‌ನ ಹೆರಾಲ್ಡ್ ಹೀರೋಗಳನ್ನು ಆಚರಿಸುವ ಮಹೀಂದ್ರಾದೊಂದಿಗೆ JioCinema ಕಂಟೆಂಟ್ ಸರಣಿಯನ್ನು ನಿರ್ಮಿಸಿತ್ತು.


    ಪ್ಯಾನಲ್‌ನಲ್ಲಿ ವಿಶ್ವಕಪ್ ಹೀರೋಗಳು


    Viacom 18 ಸ್ಪೋರ್ಟ್ಸ್, ಫಿಫಾ ವರ್ಲ್ಡ್ ಕಪ್ 2022 ಗಾಗಿ ಸ್ಟಾರ್-ಸ್ಟಡೆಡ್ ಪರಿಣಿತ ಪ್ಯಾನೆಲ್ ಅನ್ನು ಕೂಡ ಹೊಂದಿತ್ತು. ಪಂದ್ಯದ ಬಗ್ಗೆ ಮತಾಡಲು, ವಿಶ್ಲೇಷಿಸಲು ಸ್ಟೂಡಿಯೋ ಪ್ಯಾನಲ್‌ನಲ್ಲ ವೇಯ್ನ್ ರೂನಿ, ಲೂಯಿಸ್ ಫಿಗೋ, ರಾಬರ್ಟ್ ಪೈರ್ಸ್, ಗಿಲ್ಬರ್ಟೊ ಸಿಲ್ವಾ ಮತ್ತು ಸೋಲ್ ಕ್ಯಾಂಪ್‌ಬೆಲ್‌ರಂತಹ ವಿಶ್ವಕಪ್ ಹೀರೋಗಳು ಉಪಸ್ಥಿತರಿದ್ದರು.


    50 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು


    ಇನ್ನು ಇ-ಕಾಮರ್ಸ್, ಬ್ಯಾಂಕಿಂಗ್, ಹಣಕಾಸು ಸೇವೆಗಳು, ಆಟೋ, ಫ್ಯಾಷನ್, ಹಾಸ್ಪಿಟಾಲಿಟಿ ಮತ್ತು ಫಿನ್‌ಟೆಕ್‌ನಾದ್ಯಂತ 50 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು FIFA ವಿಶ್ವಕಪ್‌ನ Viacom18 ಸ್ಪೋರ್ಟ್ಸ್ ಪ್ರಸ್ತುತಿಗೆ ಸೇರಿಕೊಂಡಿವೆ.

    Published by:Prajwal B
    First published: