ಜಿಯೋ ಡಬಲ್ ಧಮಾಕಾ: ಪ್ರತಿದಿನ ಸಿಗುತ್ತೆ ಹೆಚ್ಚುವರಿ 2GB ಡೇಟಾ

ರಿಲಯನ್ಸ್​ ಜಿಯೋ Jio Diwali Dhamaka Offer ಅಡಿಯಲ್ಲಿ ಪರಿಚಯಿಸಿದ್ದ ಈ ಆಫರ್​ನಲ್ಲಿ 149 ರೂ.ಗಿಂತ ಅಧಿಕ ಮೊತ್ತದ ರಿಚಾರ್ಜ್​ ಮಾಡಿಸಿದರೆ 100% ಕ್ಯಾಶ್​ಬ್ಯಾಕ್​ನ್ನು ಒದಗಿಸಿತ್ತು.

zahir | news18
Updated:November 28, 2018, 3:00 PM IST
ಜಿಯೋ ಡಬಲ್ ಧಮಾಕಾ: ಪ್ರತಿದಿನ ಸಿಗುತ್ತೆ ಹೆಚ್ಚುವರಿ 2GB ಡೇಟಾ
jio
zahir | news18
Updated: November 28, 2018, 3:00 PM IST
ರಿಲಯನ್ಸ್ ಜಿಯೋ ಸೆಪ್ಟೆಂಬರ್​ನಲ್ಲಿ ಸೆಲೆಬ್ರೇಷನ್ ಪ್ಯಾಕ್ ಮೂಲಕ ಗ್ರಾಹಕರಿಗೆ ಹೆಚ್ಚುವರಿ ಡೇಟಾ ಸೇವೆಯನ್ನು ಒದಗಿಸಿತ್ತು. ಈ ಪ್ಲಾನ್​ನಲ್ಲಿ ಜಿಯೋ ಬಳಕೆದಾರರಿಗೆ ಕಂಪೆನಿಯು ಪ್ರತಿನಿತ್ಯ 2GB 4G ಡೇಟಾ ನೀಡಲಾಗುತ್ತಿತ್ತು. ಅಲ್ಲದೆ ಅದರೊಂದಿಗೆ ಹೆಚ್ಚುವರಿ 2GB ಡೇಟಾ ಪಡೆಯುತ್ತಿದ್ದರು. ಈ ಮೊದಲು ಸೆಪ್ಟೆಂಬರ್ 30 ರ ವರೆಗೆ ಇದ್ದ ಈ ಆಫರ್ ಪ್ಲಾನ್​ನ್ನು ಇದೀಗ ನವೆಂಬರ್ 30 ರ ತನಕ ಮುಂದೂಡಲಾಗಿದೆ. ಈ ವಿಶೇಷ ಯೋಜನೆಯನ್ನು ಬಳಕೆದಾರರು ಸದುಪಯೋಗಪಡಿಸಿಕೊಳ್ಳಬಹುದು.

ಹೇಗೆ ಸಿಗಲಿದೆ ಆಫರ್
ಈ ಪ್ಲಾನ್​​ನ ಲಾಭವು ಈಗಾಗಲೇ ಜಿಯೋ ಆಕ್ಟೀವೇಟ್ ಮಾಡಿಕೊಂಡಿರುವ ಬಳಕೆದಾರರಿಗೆ ಸಿಗಲಿದೆ. ಹೆಚ್ಚುವರಿ ಡೇಟಾ ಪ್ಲಾನ್​ ಪಡೆಯಲು MyJio ಆ್ಯಪ್​ಗೆ ಹೋಗಬೇಕು. ಮೈ ಜಿಯೋ ಮೆನು ಬಟನ್​ ಕ್ಲಿಕ್ ಮಾಡಿದರೆ ನಿಮಗೆ ದೊರೆಯಲಿರುವ ಪ್ಲಾನ್​ಗಳನ್ನು ಕೊಡಲಾಗಿರುತ್ತದೆ. ಅಲ್ಲಿ ನೀವು ಜಿಯೋ ಸೆಲೆಬ್ರೇಷನ್ ಪ್ಯಾಕ್​ನ್ನು ಕಾಣಬಹುದು. ನಿಮಗೆ ಈ ಆಫರ್ ಲಭ್ಯವಿದೆಯೇ ಎಂಬುದು ಅಲ್ಲಿ ನೀಡಲಾಗಿರುತ್ತದೆ. ಹಾಗೆಯೇ ಇದರ ವಾಲಿಟಿಡಿ ಅವಧಿಯನ್ನು ಆ್ಯಪ್​ನಲ್ಲಿ ನೋಡಬಹುದು.

ಇದನ್ನೂ ಓದಿ: ಸಚಿನ್​ರಂತೆ ಶ್ರೇಷ್ಠ ಬ್ಯಾಟ್ಸ್​ಮನ್​ ಆಗಬೇಕೆಂದು ಕನಸು ಕಂಡಿದ್ದ, ಆದರೆ ಆ ಒಂದು ಬೌನ್ಸರ್ ವಿಧಿ ಬರೆಯಿತು..!

ರಿಲಯನ್ಸ್​ ಜಿಯೋ ದೀಪಾವಳಿ ಧಮಾಕಾ ಅಡಿಯಲ್ಲಿ ಪರಿಚಯಿಸಿದ್ದ ಈ ಆಫರ್​ನಲ್ಲಿ 149 ರೂ.ಗಿಂತ ಅಧಿಕ ಮೊತ್ತದ ರಿಚಾರ್ಜ್​ ಮಾಡಿಸಿದರೆ 100% ಕ್ಯಾಶ್​ಬ್ಯಾಕ್​ನ್ನು ಒದಗಿಸಿತ್ತು. ಈ ಕ್ಯಾಶ್​ಬ್ಯಾಕ್ ಸೇವೆಯು ಮೈಜಿಯೋ ಆ್ಯಪ್​ನ ಮೈಕೂಪನ್ಸ್​ನಲ್ಲಿ ನೀಡಲಾಗಿದ್ದು ಬಳಕೆದಾರರು ಅದನ್ನು ರೀಚಾರ್ಜ್ ಕೂಪನ್​ಗಳಾಗಿ ಬಳಸಿಕೊಳ್ಳಬಹುದು.

ಇದನ್ನೂ ಓದಿ: 71 ವರ್ಷಗಳ ಬಳಿಕ ಪಾಕಿಸ್ತಾನದ ಸಹೋದರಿಯ ಮಡಿಲು ಸೇರಿದ ಭಾರತದ ಸಹೋದರ
First published:November 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...