Jio: ಝೊಮಾಟೋ ಇವಿಗೆ ಬೆಂಬಲ ಸೂಚಿಸಿದ ಜಿಯೋ-ಬಿಪಿ!

Jio / ಜಿಯೋ

Jio / ಜಿಯೋ

ರಿಲಾಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (RIL) ಮತ್ತು ಬಿಪಿ ಸಂಸ್ಥೆಯ ಸಹಭಾಗಿತ್ವದಲ್ಲಿ ಸ್ಥಾಪಿತವಾಗಿರುವ ಇಂಧನ ಮತ್ತು ಸಂಚಾರ ಸೌಲಭ್ಯಗಳ ಜಂಟಿ ಸಂಸ್ಥೆ ಜಿಯೋ-ಬಿಪಿ, ಝೊಮ್ಯಾಟೋಗೆ ಎಲೆಕ್ಟ್ರಿಕ್‌ ವಾಹನ ಸಂಚಾರ ಸೇವೆಯನ್ನು ಒದಗಿಸಲಿದ್ದು, ತನ್ನ ಜಿಯೋ-ಬಿಪಿ ಪಲ್ಸ್‌ ಬ್ರ್ಯಾಂಡ್‌ನ ಬ್ಯಾಟರಿ (Battery) ಬದಲಾವಣೆ ಸ್ಟೇಷನ್‌ಗಳಿಗೆ ಸುಲಭ ಪ್ರವೇಶಾವಕಾಶ ಒದಗಿಸಲಿದೆ.

ಮುಂದೆ ಓದಿ ...
  • Share this:

    ಮುಂಬೈ, 16 ಜೂನ್‌ 2022: ಆಹಾರ ಡೆಲಿವರಿ ಸೇವೆ ಒದಗಿಸುವ ಝೊಮ್ಯಾಟೋ (Zomato) ಮತ್ತು ಜಿಯೋ-ಬಿಪಿ (Jio -Bp) ಎಲೆಕ್ಟ್ರಿಕ್‌ ವಾಹನಗಳಿಗೆ (Electric Vehicle) ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದು, 2030 ರ ವೇಳೆಗೆ 100% ಎಲೆಕ್ಟ್ರಿಕ್‌ ವಾಹನಗಳನ್ನು ಹೊಂದುವ ಝೊಮ್ಯಾಟೋದ ಬದ್ಧತೆಗೆ ಇದು ಪೂರಕವಾಗಿರಲಿದೆ. ರಿಲಾಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (RIL) ಮತ್ತು ಬಿಪಿ ಸಂಸ್ಥೆಯ ಸಹಭಾಗಿತ್ವದಲ್ಲಿ ಸ್ಥಾಪಿತವಾಗಿರುವ ಇಂಧನ ಮತ್ತು ಸಂಚಾರ ಸೌಲಭ್ಯಗಳ ಜಂಟಿ ಸಂಸ್ಥೆ ಜಿಯೋ-ಬಿಪಿ, ಝೊಮ್ಯಾಟೋಗೆ ಎಲೆಕ್ಟ್ರಿಕ್‌ ವಾಹನ ಸಂಚಾರ ಸೇವೆಯನ್ನು ಒದಗಿಸಲಿದ್ದು, ತನ್ನ ಜಿಯೋ-ಬಿಪಿ ಪಲ್ಸ್‌ ಬ್ರ್ಯಾಂಡ್‌ನ ಬ್ಯಾಟರಿ (Battery) ಬದಲಾವಣೆ ಸ್ಟೇಷನ್‌ಗಳಿಗೆ ಸುಲಭ ಪ್ರವೇಶಾವಕಾಶ ಒದಗಿಸಲಿದೆ.


    ಎಲೆಕ್ಟ್ರಿಕ್ ವಾಹನ ಸರಣಿಯಲ್ಲಿ ಎಲ್ಲ ಸಂಸ್ಥೆಗಳಿಗೂ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಜಿಯೋ-ಬಿಪಿ ರೂಪಿಸುತ್ತಿದೆ. ಕಳೆದ ವರ್ಷ ಜಿಯೋ-ಬಿಪಿ ಭಾರತದ ಎರಡು ಅತಿದೊಡ್ಡ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ. ಜಂಟಿ ಸಂಸ್ಥೆಯ ಎಲೆಕ್ಟ್ರಿಕ್ ಸಂಚಾರ ವಹಿವಾಟು ತನ್ನ ಜಿಯೋ-ಬಿಪಿ ಪಲ್ಸ್‌ ಎಂಬ ಬ್ರ್ಯಾಂಡ್ ಅಡಿಯಲ್ಲಿ ಭಾರತೀಯ ಗ್ರಾಹಕರಿಗೆ ಚಾರ್ಜಿಂಗ್‌ ಮೂಲಸೌಕರ್ಯವನ್ನು ಒದಗಿಸುತ್ತಿದೆ. ಜಿಯೋ-ಬಿಪಿ ಪಲ್ಸ್‌ ಮೊಬೈಲ್ ಆಪ್ ಬಳಸಿಕೊಂಡು ಗ್ರಾಹಕರು ತಮ್ಮ ವಾಹನಗಳಿಗೆ ಸಮೀಪದಲ್ಲಿ ಎಲ್ಲಿ ಚಾರ್ಜಿಂಗ್‌ ಸ್ಟೇಷನ್‌ ಇದೆ ಎಂದು ಹುಡುಕಬಹುದಾಗಿದೆ.


    ಇದನ್ನೂ ಓದಿ: 5G In India: ಶೀಘ್ರದಲ್ಲೇ ಸಿಗಲಿದೆ 5G ಹೈಸ್ಪೀಡ್​ ಇಂಟರ್​ನೆಟ್​! ವೇಗದ ಮಿತಿ ಎಷ್ಟಿರಲಿದೆ ಗೊತ್ತಾ?


    ಝೊಮ್ಯಾಟೋ ಜೊತೆಗಿನ ಈ ಒಪ್ಪಂದದಿಂದ ಎಲೆಕ್ಟ್ರಿಕ್‌ ವಾಹನವನ್ನು ಬಳಸುವವರ ಸಂಖ್ಯೆ ಇನ್ನಷ್ಟು ವೇಗದಲ್ಲಿ ಹೆಚ್ಚಳವಾಗಲಿದೆ. ಉತ್ತಮ ರೇಂಜ್‌ ನೀಡುವ ಉತ್ತಮ ಗುಣಮಟ್ಟದ ಬ್ಯಾಟರಿಗಳು ಮತ್ತು ಕೆಲವೇ ನಿಮಿಷಗಳಲ್ಲಿ ಮುಗಿಯುವ ಬ್ಯಾಟರಿ ಬದಲಾವಣೆ ಪ್ರಕ್ರಿಯೆಯಿಂದಾಗಿ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಬ್ಯಾಟರಿ ಬದಲಾವಣೆ ಅತ್ಯಂತ ಸೂಕ್ತವಾದ ವಿಧಾನವಾಗಿದೆ. ಅದರಲ್ಲೂ, ಡೆಲಿವರಿ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಇದು ಅತ್ಯಂತ ಅನುಕೂಲಕರ ವಿಧಾನವಾಗಿದೆ. ಹೀಗಾಗಿ, ಡೆಲಿವರಿ ಮತ್ತು ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಬ್ಯಾಟರಿ ಬದಲಾವಣೆ ಮಹತ್ವದ ಕೆಲಸ ಮಾಡಲಿದೆ.


    ಇದನ್ನೂ ಓದಿ: Vodafone-Idea: ರೀಚಾರ್ಜ್ ಮಾಡಿದ್ರೆ ಉಚಿತವಾಗಿ ಸಿಗುತ್ತೆ 2400 ರೂಪಾಯಿಯ ಕ್ಯಾಶ್​ಬ್ಯಾಕ್​! ಆದ್ರೆ ಈ ಬಳಕೆದಾರರಿಗೆ ಮಾತ್ರ


    ಲಡಾಖ್​ ಪಾಂಗ್ಯಾಂಗ್ ಸರೋವರದ ಬಳಿ 4G ಸೇವೆಗಳನ್ನು ಒದಗಿಸಿದ ಜಿಯೋ


    ಲಡಾಖ್‌ನಲ್ಲಿನ (Ladakh) ಪಾಂಗ್ಯಾಂಗ್ ಸರೋವರದ (Pangong Lake) ಬಳಿ ಇರುವ ಹಳ್ಳಿಗೆ ರಿಲಾಯನ್ಸ್‌ ಜಿಯೋ (Reliance Jio) ತನ್ನ 4G ಸೇವೆಗಳನ್ನು ಒದಗಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ (India) ಮತ್ತು ಚೀನಾ (China) ಮಧ್ಯೆ ಸಂಘರ್ಷಕ್ಕೆ ಈ ಪ್ರದೇಶ ಕೇಂದ್ರವಾಗಿತ್ತು.


    ಪಾಂಗ್ಯಾಂಗ್‌ ಸರೋವರದ ಸ್ಪಾಂಗ್‌ಮಿಕ್‌ ಗ್ರಾಮದಲ್ಲಿ 4G ಧ್ವನಿ ಮತ್ತು ಡೇಟಾ ಸೇವೆಯನ್ನು ರಿಲಾಯನ್ಸ್‌ ಜಿಯೋ ಆರಂಭಿಸಿದೆ ಎಂದು ರಿಲಾಯನ್ಸ್‌ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಜನಪ್ರಿಯ ಪ್ರವಾಸಿ ತಾಣದ ಸುತ್ತಮುತ್ತ 4G ಮೊಬೈಲ್‌ ಸಂಪರ್ಕವನ್ನು ಒದಗಿಸುತ್ತಿರುವ ಮೊದಲ ಟೆಲಿಕಾಂ ಸೇವಾ ಪೂರೈಕೆದಾರ ರಿಲಾಯನ್ಸ್‌ ಆಗಿದೆ. ಸ್ಪಾಂಗ್‌ಮಿಕ್‌ ಗ್ರಾಮದಲ್ಲಿ ಜಿಯೋ ಮೊಬೈಲ್‌ ಟವರ್ ಅನ್ನು ಲಡಾಖ್‌ನ ಲೋಕಸಭೆ ಸದಸ್ಯ ಜಮ್ಯಾಂಗ್‌ ಶೆರಿಂಗ್‌ ನಾಮ್‌ಗ್ಯಾಲ್‌ ಉದ್ಘಾಟನೆ ಮಾಡಿದ್ದಾರೆ.


    ಈ ಟವರ್ ಉದ್ಘಾಟನೆಯಿಂದಾಗಿ ಸ್ಥಳೀಯರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಇದರಿಂದ ಈ ಪ್ರದೇಶದಲ್ಲಿನ ಆರ್ಥಿಕತೆ ವೃದ್ಧಿಯಾಗುತ್ತದೆ ಮತ್ತು ಪ್ರವಾಸಿಗರಿಗೆ ಹಾಗೂ ಸೇನಾಪಡೆಗಳಿಗೆ ಈ ಪ್ರದೇಶದಲ್ಲಿ ಉತ್ತಮ ಸಂಪರ್ಕ ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

    Published by:Harshith AS
    First published: