• Home
  • »
  • News
  • »
  • tech
  • »
  • Jio Book: ಇನ್ಮುಂದೆ ಎಲ್ರಿಗೂ ಸಿಗುತ್ತೆ ಜಿಯೋ ಬುಕ್​, ಅದು ಕೈಗೆಟಕುವ ಬೆಲೆಯಲ್ಲಿ!

Jio Book: ಇನ್ಮುಂದೆ ಎಲ್ರಿಗೂ ಸಿಗುತ್ತೆ ಜಿಯೋ ಬುಕ್​, ಅದು ಕೈಗೆಟಕುವ ಬೆಲೆಯಲ್ಲಿ!

ಜಿಯೋ ಬುಕ್​

ಜಿಯೋ ಬುಕ್​

ರಿಲಯನ್ಸ್ ಜಿಯೋ (Reliance Jio)  ದಿಂದ ಅತಿ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಜಿಯೋಬುಕ್ ಇದೀಗ ಭಾರತದಲ್ಲಿ ಪ್ರತಿಯೊಬ್ಬರಿಗೆ ಲಭ್ಯವಿದೆ.

  • Share this:

ಹಲವಾರು ವದಂತಿಗಳು ಹಾಗೂ ಮಾಹಿತಿ ಸೋರಿಕೆಯ ನಂತರ ಜಿಯೋಬುಕ್ (Jio Book) ಇದೀಗ ಲ್ಯಾಪ್‌ಟಾಪ್ (Laptop) ಮಾರುಕಟ್ಟೆ ವಿಭಾಗಕ್ಕೆ ಅಧಿಕೃತ ಪ್ರವೇಶವನ್ನು ಪಡೆದುಕೊಂಡಿದೆ. ಈ ಹಿಂದೆ ಕೈಗೆಟಕುವ ಬೆಲೆ (Price) ಯಲ್ಲಿ ಬಂದಿದ್ದ ಜಿಯೋ ಬುಕ್ (Jio Book) ಕೇವಲ ಸರಕಾರಿ ನೌಕರರಿಗೆ ಮಾತ್ರ ದೊರೆಯುವಂತಿತ್ತು ಹಾಗೂ ಅವರಿಗೆ ಮಾತ್ರವೇ ಸೀಮಿತವಾಗಿತ್ತು. ರಿಲಯನ್ಸ್ ಜಿಯೋ (Reliance Jio)  ದಿಂದ ಅತಿ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಜಿಯೋಬುಕ್ ಇದೀಗ ಭಾರತದಲ್ಲಿ ಪ್ರತಿಯೊಬ್ಬರಿಗೆ ಲಭ್ಯವಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2022 ರಲ್ಲಿ ಜಿಯೋ ಸಂಸ್ಥೆಯು ಜಿಯೋಬುಕ್‌ ಅನ್ನು ಅನಾವರಣಗೊಳಿಸಿತು.


ಭಾರತದಲ್ಲಿ ಜಿಯೋಬುಕ್ ಇದೀಗ ಎಲ್ಲರಿಗೂ ಲಭ್ಯ


ಅದಾಗ್ಯೂ ಸಂಸ್ಥೆಯು ಜಿಯೋಬುಕ್‌ನ ಬೆಲೆಯನ್ನು ಗ್ರಾಹಕರಿಗೆ ದೃಢೀಕರಿಸಿರಲಿಲ್ಲ. ಇದೀಗ ಈ ಲ್ಯಾಪ್‌ಟಾಪ್‌ ಅನ್ನು ಪ್ರತಿಯೊಬ್ಬ ಗ್ರಾಹಕರೂ ರಿಲಯನ್ಸ್ ಡಿಜಿಟಲ್ ಸ್ಟೋರ್‌ನಿಂದ ಖರೀದಿಸಬಹುದಾಗಿದೆ. ಜಿಯೋಬುಕ್‌ನ ವಿಶೇಷತೆ ಹಾಗೂ ಬೆಲೆ ಏನು ಎಂಬುದನ್ನು ತಿಳಿದುಕೊಳ್ಳೋಣ


ಬಜೆಟ್ ಲ್ಯಾಪ್‌ಟಾಪ್‌ಗಳೊಂದಿಗೆ ಸ್ಪರ್ಧಿಸಲಿರುವ ಜಿಯೋಬುಕ್


ಜಿಯೋಬುಕ್ ಅನ್ನು ಶಿಕ್ಷಣ ಹಾಗೂ ಬ್ರೌಸಿಂಗ್‌ನಂತಹ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವಂತೆ ನಿರ್ಮಿಸಲಾಗಿದೆ. ಅಂತೆಯೇ ಸೀಮಿತ ಬಜೆಟ್ ಹೊಂದಿರುವವರಿಗೆ ಇದು ಸೂಕ್ತ ಲ್ಯಾಪ್‌ಟಾಪ್ ಎಂದೆನಿಸಿದೆ. ಹಲವಾರು ಜಿಯೋ ಅಪ್ಲಿಕೇಶನ್‌ಗಳನ್ನು ಹೊಂದಿರುವ ಲ್ಯಾಪ್‌ಟಾಪ್ ಮೈಕ್ರೋಸಾಫ್ಟ್ 365 ಸೇವೆಗಳನ್ನು ಒದಗಿಸುತ್ತದೆ. ಲ್ಯಾಪ್‌ಟಾಪ್ ಕ್ಷೇತ್ರದಲ್ಲಿ ಏಸರ್, ಲೆನೊವೊ ಹಾಗೂ ಲಾವಾದ ಇದೇ ಬೆಲೆಯ ಲ್ಯಾಪ್‌ಟಾಪ್‌ಗಳೊಂದಿಗೆ ಜಿಯೋಬುಕ್ ಸ್ಪರ್ಧೆಗಿಳಿಯಲಿದ್ದು ಪ್ರಬಲ ಸ್ಪರ್ಧೆಯನ್ನು ನೀಡಲಿದೆ ಎಂಬುದಾಗಿ ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.


ಜಿಯೋಬುಕ್ ಬೆಲೆ ಭಾರತದಲ್ಲಿ ಹೇಗಿದೆ?


ರಿಲಯನ್ಸ್ ಜಿಯೋ, ಜಿಯೋಬುಕ್ ಅನ್ನು ರೂ 15,799 ಕ್ಕೆ ಲಾಂಚ್ ಮಾಡಿದೆ. ಲ್ಯಾಪ್‌ಟಾಪ್‌ನ ಮೂಲಬೆಲೆ ರೂ 35,605 ಆಗಿದ್ದರೂ ಇದನ್ನು 15,799 ಕ್ಕೆ ಮಾರಾಟ ಮಾಡಲಾಗುತ್ತಿದೆ. ಪ್ರಮುಖ ಬ್ಯಾಂಕ್‌ಗಳ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು ಹಾಗೂ ಇಎಮ್‌ಐ ವಹಿವಾಟುಗಳಿಗೆ ಸಂಸ್ಥೆಯು ರೂ 5,000 ತ್ವರಿತ ವಿನಾಯಿತಿಯನ್ನು ನೀಡುತ್ತಿದೆ.


ಜಿಯೋಬುಕ್ ವೈಶಿಷ್ಟ್ಯಗಳು


ಜಿಯೋಬುಕ್ ಒಂದೇ ಬಣ್ಣ ನೀಲಿ ಬಣ್ಣದಲ್ಲಿ ಲಭ್ಯವಿದೆ. 11.6 ಇಂಚಿನ ಸ್ಕ್ರೀನ್ ಅನ್ನು ಲ್ಯಾಪ್‌ಟಾಪ್ ಹೊಂದಿದ್ದು ಸ್ಕ್ರೀನ್ ರೆಸಲ್ಯೂಶನ್ 1366x768 ಪಿಕ್ಸೆಲ್‌ಗಳಾಗಿವೆ. 2 ಎಮ್‌ಪಿ ವೆಬ್ ಕ್ಯಾಮೆರಾ ಲ್ಯಾಪ್‌ಟಾಪ್‌ನಲ್ಲಿದೆ. ಎಚ್‌ಡಿಎಮ್‌ಐ ಪೋರ್ಟ್ ಅನ್ನು ಒಳಗೊಂಡಿದೆ ಹಾಗೂ ವೈ-ಫೈ ಮತ್ತು ಬ್ಲ್ಯೂಟೂತ್ ಸಂಪರ್ಕವನ್ನು ಬೆಂಬಲಿಸುತ್ತದೆ. 128 ಜಿಬಿ ಮೈಕ್ರೋ ಎಸ್‌ಡಿ ಕಾರ್ಡ್, 5,000mAh ಬ್ಯಾಟರಿಯನ್ನು ಲ್ಯಾಪ್‌ಟಾಪ್ ಒಳಗೊಂಡಿದೆ. ಜಿಯೋಬುಕ್, ಜಿಯೋ ಓಎಸ್ ಅನ್ನು ಚಾಲನೆ ಮಾಡುತ್ತದೆ ಹಾಗೂ ಜಿಯೋ 4ಜಿ ಎಲ್‌ಟಿಇ ತಂತ್ರಜ್ಞಾನದೊಂದಿಗೆ ಮಿಳಿತಗೊಂಡಿದ್ದು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ.


ಇದನ್ನೂ  ಓದಿ: ಟ್ರೂ ಕಾಲರ್​ನ ಈ ಫೀಚರ್​​ಗಳನ್ನು ನೀವೊಮ್ಮೆ ನೋಡಲೇ ಬೇಕು


ಡಿವೈಸ್ ಬ್ಯಾಟರಿ 8 ಗಂಟೆಗಳು ಹಾಗೂ ಕೆಲವು ಸಮಯಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ವರದಿ ತಿಳಿಸಿದೆ. ಲ್ಯಾಪ್‌ಟಾಪ್ ಆಕ್ಟಾ-ಕೋರ್ CPU ನಿಂದ ಚಾಲಿತವಾಗಿದೆ ಮತ್ತು ಕೇವಲ 1.2 Kg ತೂಕವಿದೆ. ಇದರಿಂದ ಡಿವೈಸ್ ತುಂಬಾ ಹಗುರವಾಗಿದೆ. ಅಪ್ಲಿಕೇಶನ್‌ಗಳು, ಕಂಟೆಂಟ್ ಮತ್ತು ಉತ್ಪಾದಕತೆಯ ಅನೂಹ್ಯ ಸಂಗ್ರಹಣೆಯನ್ನೇ ಒಳಗೊಂಡಿರುವ ಈ ಲ್ಯಾಪ್‌ಟಾಪ್‌ ಮೂಲಕ ಬಳಕೆದಾರರು ಜಿಯೋಸ್ಟೋರ್‌ಗೆ ಪ್ರವೇಶವನ್ನು ಪಡೆಯುತ್ತಾರೆ.


ಮೇಡ್​ ಇನ್​ ಇಂಡಿಯಾ ಜಿಯೋ ಬುಕ್!


ಈ ಲ್ಯಾಪ್‌ಟಾಪ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಇನ್ನೊಂದು ವಿಷಯವೆಂದರೆ ಇದು ಮೇಡ್ ಇನ್ ಇಂಡಿಯಾ, ಸರ್ಕಾರದ ಆತ್ಮನಿರ್ಭರ್ ಭಾರತ್ ಮಿಷನ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಾಣಗೊಂಡಿರುವ ಲ್ಯಾಪ್‌ಟಾಪ್ ಆಗಿದೆ. ಸಿಮ್ ಅನ್ನು ಸಕ್ರಿಯಗೊಳಿಸಲು, KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ ಇದಕ್ಕಾಗಿ ಬಳಕೆದಾರರು ಹತ್ತಿರದ ಜಿಯೋ ಸ್ಟೋರ್‌ಗೆ ಭೇಟಿ ನೀಡಬೇಕಾಗುತ್ತದೆ.


ಇದನ್ನೂ ಓದಿ: ಮೂಲ ಬೆಲೆಗಿಂತ 60 ಪಟ್ಟು ಹೆಚ್ಚು ಮೊತ್ತಕ್ಕೆ ಹರಾಜಾಯ್ತು ಮೊದಲ ಐಫೋನ್!


ಜಿಯೋಬುಕ್ ಅನ್ನು ಸ್ಥಳೀಯವಾಗಿ ಗುತ್ತಿಗೆ ತಯಾರಕರಾದ ಫ್ಲೆಕ್ಸ್ ಉತ್ಪಾದಿಸುತ್ತದೆ ಮತ್ತು ಮಾರ್ಚ್ ವೇಳೆಗೆ ನೂರಾರು ಸಾವಿರ ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ ಎಂದು ಮೂಲವೊಂದು ತಿಳಿಸಿದೆ.

Published by:ವಾಸುದೇವ್ ಎಂ
First published: