ಟ್ರಾಯ್ ರಿಪೋರ್ಟ್; 4ಜಿ ಡೌನ್​ಲೋಡ್ ಸ್ಪೀಡ್​ನಲ್ಲಿ ಜಿಯೋಗಿಲ್ಲ ಸರಿಸಾಟಿ


Updated:March 31, 2018, 6:07 PM IST
ಟ್ರಾಯ್ ರಿಪೋರ್ಟ್; 4ಜಿ ಡೌನ್​ಲೋಡ್ ಸ್ಪೀಡ್​ನಲ್ಲಿ ಜಿಯೋಗಿಲ್ಲ ಸರಿಸಾಟಿ
ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮಾಲೀಕ ಮುಕೇಶ್ ಅಂಬಾನಿ

Updated: March 31, 2018, 6:07 PM IST
- ನ್ಯೂಸ್18 ಕನ್ನಡ

ನವದೆಹಲಿ(ಮಾ. 31): 4ಜಿ ಸ್ಪೀಡ್ ವಿಚಾರದಲ್ಲಿ ರಿಲಾಯನ್ಸ್ ಜಿಯೋ ಸಂಸ್ಥೆಯೇ ಮತ್ತೆ ನಂಬರ್ ಒನ್ ಎನಿಸಿದೆ. ಜಿಯೋ 21.3 ಎಂಬಿಪಿಎಸ್ ಸರಾಸರಿ ಡೌನ್​ಲೋಡ್ ವೇಗ ಹೊಂದಿದೆ. ಈ ವಿಚಾರದಲ್ಲಿ ತನ್ನ ಸಮೀಪದ ಸ್ಪರ್ಧಿಗಿಂತ ಡಬಲ್ ಪಟ್ಟು ಹೆಚ್ಚು ಸ್ಪೀಡ್ ಜಿಯೋದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಏರ್​ಟೆಲ್​ನ ಸರಾಸರಿ ವೇಗವು ಕೇವಲ 8.8 ಎಂಬಿಪಿಎಸ್ ಇದೆ. ಇದು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಪ್ರಕಟಿಸಿದ ಮಾಹಿತಿಯಾಗಿದೆ. ಡೌನ್​ಲೋಡ್ ವಿಚಾರದಲ್ಲಿ ಜಿಯೋ ಟಾಪ್​ನಲ್ಲಿದ್ದರೆ, ಅಪ್​ಲೋಡ್ ಸ್ಪೀಡ್ ವಿಚಾರದಲ್ಲಿ ಐಡಿಯಾ ಮುಂದಿದೆ.

4ಜಿ ಡೌನ್​ಲೋಡ್ ಸರಾಸರಿ ವೇಗ:
1) ಜಿಯೋ: 21.3 ಎಂಬಿಪಿಎಸ್

2) ಏರ್​​ಟೆಲ್: 8.8 ಎಂಬಿಪಿಎಸ್
3) ವೊಡಾಫೋನ್: 7.2
4) ಐಡಿಯಾ: 6.8
Loading...

4ಜಿ ಅಪ್​ಲೋಡ್ ಸರಾಸರಿ ವೇಗ:
1) ಐಡಿಯಾ: 6.9 ಎಂಬಿಪಿಎಸ್
2) ವೊಡಾಫೋನ್: 5.5
3) ಜಿಯೋ: 4.5
4) ಏರ್​ಟೆಲ್: 3.9 ಎಂಬಿಪಿಎಸ್

ಇಂಟರ್ನೆಟ್​ನಲ್ಲಿ ಬ್ರೌಸ್ ಮಾಡಲು, ವಿಡಿಯೋ ವೀಕ್ಷಿಸಲು ಡೌನ್​ಲೋಡ್ ವೇಗ ಬಹಳ ಮುಖ್ಯ. ಹಾಗೆಯೇ, ಇಮೇಜ್, ವಿಡಿಯೋ ಅಥವಾ ಯಾವುದಾದರೂ ದಾಖಲೆಗಳನ್ನು ಇಂಟರ್ನೆಟ್​ನಲ್ಲಿ ಶೇರ್ ಮಾಡಲು ಅಪ್​ಲೋಡ್ ಸ್ಪೀಡ್ ಮುಖ್ಯವಾಗುತ್ತದೆ. ಈ ಎರಡೂ ಇಂಟರ್ನೆಟ್ ಸ್ಪೀಡನ್ನು ಪರೀಕ್ಷಿಸಲು ಹಲವು ಆನ್​ಲೈನ್ ಅಪ್ಲಿಕೇಶನ್​ಗಳಿವೆ. ಅವುಗಳಲ್ಲಿ ಮೈಸ್ಪೀಡ್ ಕೂಡ ಒಂದು. ಟ್ರಾಯ್ ಸಂಸ್ಥೆಯು ಇದೇ ಮೈಸ್ಪೀಡ್ ಆ್ಯಪ್ ಮೂಲಕ ಪ್ರತೀ ತಿಂಗಳು ಭಾರತೀಯ ಟೆಲಿಕಾಂ ಆಪರೇಟರ್​ಗಳ ಇಂಟರ್ನೆಟ್ ವೇಗವನ್ನು ಪರೀಕ್ಷಿಸಿ ವರದಿ ಪ್ರಕಟಿಸುತ್ತದೆ.

(ಸ್ಪಷ್ಟನೆ: ನ್ಯೂಸ್18 ಕನ್ನಡ ವಾಹಿನಿಯು ರಿಲಾಯನ್ಸ್ ಜಿಯೋದ ಮಾಲೀಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಒಂದು ಭಾಗವಾಗಿದೆ.)
First published:March 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ