ಮುಂಬೈ(ಏ.6): ಸ್ಪೆಕ್ಟ್ರಮ್ ಟ್ರೇಡಿಂಗ್ ಮೂಲಕ ಆಂಧ್ರಪ್ರದೇಶ, ದೆಹಲಿ ಮತ್ತು ಮುಂಬೈ ಸರ್ಕಲ್‌ಗಳಲ್ಲಿನ 800 ಮೆಗಾಹರ್ಟ್ಸ್ ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್ ಬಳಸುವ ಹಕ್ಕನ್ನು ಪಡೆದುಕೊಳ್ಳಲು ಭಾರ್ತಿ ಏರ್ಟೆಲ್ ಲಿಮಿಟೆಡ್ನೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿರುವುದಾಗಿ ರಿಲಿಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (RJIL) ತಿಳಿಸಿದೆ. ಹೊಸ ಒಪ್ಪಂದದಿಂದಾಗಿ ಮುಂದಿನ ದಿನಗಳಲ್ಲಿ ಜಿಯೋ ನೆಟ್‌ವರ್ಕ್ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಲಿದ್ದು, ಇದರಿಂದ ಬಳಕೆದಾರರಿಗೂ ಅತ್ಯುತ್ತಮ ಸೇವೆ ದೊರೆಯಲಿದೆ.
ಈ ಒಪ್ಪಂದದ ಭಾಗವಾಗಿರುವ ಸ್ಪೆಕ್ಟ್ರಮ್‌ನ ಸರ್ಕಲ್‌ವಾರು ವಿವರ ಹೀಗಿದೆ:
ಸರ್ಕಲ್
800 ಮೆಗಾಹರ್ಟ್ಸ್ ಬ್ಯಾಂಡ್ (ಎಫ್‌ಡಿಡಿ)
ಆಂಧ್ರಪ್ರದೇಶ - 3.75
ದೆಹಲಿ - 1.25
ಮುಂಬೈ- 2.50
ಒಟ್ಟು- 7.50
ಈ ಒಪ್ಪಂದವು ದೂರಸಂಪರ್ಕ ಇಲಾಖೆ ಪ್ರಕಟಿಸಿರುವ ಸ್ಪೆಕ್ಟ್ರಮ್ ಟ್ರೇಡಿಂಗ್ ಮಾರ್ಗಸೂಚಿಗಳಿಗೆ ಅನುಸಾರವಾಗಿದೆ ಹಾಗೂ ಇದು ಅಗತ್ಯ ನಿಯಂತ್ರಣ ಮತ್ತು ಶಾಸನಬದ್ಧ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ. ಈ ಸ್ಪೆಕ್ಟ್ರಮ್ ಅನ್ನು ಬಳಸುವ ಹಕ್ಕಿನ ಒಟ್ಟು ಮೌಲ್ಯ ರೂ.1,497 ಕೋಟಿಗಳಾಗಿದ್ದು, ಯಾವುದೇ ವಹಿವಾಟು ಸಂಬಂಧಿ ಹೊಂದಾಣಿಕೆಗಳಿಗೆ ಒಳಪಟ್ಟಂತೆ ರೂ.459 ಕೋಟಿಗಳ ಸಂಬಂಧಿತ ಮುಂದೂಡಲ್ಪಟ್ಟ ಪಾವತಿ ಹೊಣೆಗಾರಿಕೆಯ (deferred payment liability) ಪ್ರಸ್ತುತ ಮೌಲ್ಯವನ್ನೂ ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ