• Home
 • »
 • News
 • »
 • tech
 • »
 • Jio 5G Network: ಪಶ್ಚಿಮಬಂಗಾಳದಲ್ಲೂ ಜಿಯೋ 5ಜಿ ಸೇವೆ ಆರಂಭ! ಡಿಫರೆಂಟ್ ಫೀಚರ್ಸ್​ಗಳನ್ನು ಇದು ಹೊಂದಿರಲಿದೆ

Jio 5G Network: ಪಶ್ಚಿಮಬಂಗಾಳದಲ್ಲೂ ಜಿಯೋ 5ಜಿ ಸೇವೆ ಆರಂಭ! ಡಿಫರೆಂಟ್ ಫೀಚರ್ಸ್​ಗಳನ್ನು ಇದು ಹೊಂದಿರಲಿದೆ

ಜಿಯೋ 5ಜಿ

ಜಿಯೋ 5ಜಿ

ಜಿಯೋ ಟ್ರೂ 5ಜಿ ಪ್ರಪಂಚದಲ್ಲೇ ಅತ್ಯಾಧುನಿಕ 5G ವ್ಯವಸ್ಥೆಯಾಗಲಿದೆ. ಪಶ್ಚಿಮ ಬಂಗಾಳ ರಾಜ್ಯದ ಜನರ ಜೀವನವನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ತಂತ್ರಜ್ಞಾನವು  ಸೇವೆ ಸಲ್ಲಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಜಿಯೋ ತನ್ನ ಸುಧಾರಿತ ಟ್ರೂ 5ಜಿ ನೆಟ್‌ವರ್ಕ್ ಅನ್ನು ಪಶ್ಚಿಮ ಬಂಗಾಳದಲ್ಲಿ ಪ್ರಾರಂಭಿಸಲು ಆದ್ಯತೆ ನೀಡುತ್ತಿದೆ

ಮುಂದೆ ಓದಿ ...
 • Share this:

  ಇದೀಗ ಜಿಯೋ (Jio) ಪ್ರಪಂಚದಾದ್ಯಂತ 5ಜಿ ಸೇವೆಯನ್ನು (5G Network) ಪ್ರಾರಂಭಿಸುತ್ತಿದೆ. 2023ರ ಡಿಸೆಂಬರ್ ಒಳಗಡೆ ವಿಶ್ವದಾದ್ಯಂತ 5ಜಿ ಸೇವೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಗ್ರಾಹಕರಿಗೆ ಭರವಸೆ ನೀಡಿತ್ತು. ಪಶ್ಚಿಮಬಂಗಾಳದಲ್ಲಿ ಜಿಯೊ ತನ್ನ 5ಜಿ ಸೇವೆಯನ್ನು ಪ್ರಾರಂಭಿಸಲಿದೆ. 'ಸಿಟಿ ಆಫ್ ಎಕ್ಸೈಟ್‌ಮೆಂಟ್' ಎಂದು ಕರೆಯಲ್ಪಡುವ ಕೋಲ್ಕತ್ತಾದಲ್ಲಿ 45.7% ಮಾರುಕಟ್ಟೆ ಪಾಲನ್ನು ಹೊಂದಿರುವ ಜಿಯೋ ಹೆಚ್ಚು ಬೇಡಿಕೆಯ ಬ್ರ್ಯಾಂಡ್ (Brand) ಆಗಿ ಹೊರಹೊಮ್ಮಿದೆ. ಇಂದು ಜಿಯೋ ಪಶ್ಚಿಮಬಂಗಾಳದಲ್ಲೂ Westbengal) ಸ್ಥಾಪಿಸುವ ಹೊಸ ಯೋಜನೆಯನ್ನು ಕೈಗೊಂಡಿದೆ. ಇದಲ್ಲದೆ ಇದರ ಜೊತೆಗೆ ಗ್ರಾಹಕರಿಗೆ ಬೇರೆ ಬೇರೆ ಯೋಜನೆಗಳನ್ನು ನೀಡಲಿದೆ ಎಂದು ವರದಿಯಲ್ಲಿದೆ.


  ಜಿಯೋ ಟ್ರೂ 5ಜಿ ಪ್ರಪಂಚದಲ್ಲೇ ಅತ್ಯಾಧುನಿಕ 5G ವ್ಯವಸ್ಥೆಯಾಗಲಿದೆ. ಪಶ್ಚಿಮ ಬಂಗಾಳ ರಾಜ್ಯದ ಜನರ ಜೀವನವನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ತಂತ್ರಜ್ಞಾನವು  ಸೇವೆ ಸಲ್ಲಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಜಿಯೋ ತನ್ನ ಸುಧಾರಿತ ಟ್ರೂ 5ಜಿ ನೆಟ್‌ವರ್ಕ್ ಅನ್ನು ಪಶ್ಚಿಮ ಬಂಗಾಳದಲ್ಲಿ ಪ್ರಾರಂಭಿಸಲು ಆದ್ಯತೆ ನೀಡುತ್ತಿದೆ.


  5ಜಿ ಸೇವೆ ಕುರಿತು ಕಂಪನಿಯಿಂದ ಪ್ರಕಟನೆ:


  ಈ ವರ್ಷದ ಅಂತ್ಯದ ವೇಳೆಗೆ ಕೋಲ್ಕತ್ತಾ ಮೆಟ್ರೋಪೊಲಿಸ್‌ನಾದ್ಯಂತ 5G ಸೇವೆಗಳನ್ನು ಹೊರತರಲು ಜಿಯೋ ಎಂಜಿನಿಯರ್‌ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಜಿಯೋ ತನ್ನ 5ಜಿ ಸೇವೆಯನ್ನು ಪಶ್ಚಿಮ ಬಂಗಾಳ ರಾಜ್ಯದಾದ್ಯಂತ ಮತ್ತು ರಾಜ್ಯದ ಉತ್ತರ ಭಾಗದ ಗೇಟ್‌ವೇಯಾದ ಸಿಲಿಗುರಿಯಿಂದ ಪ್ರಾರಂಭಿಸಿ ಅಸ್ಸಾಂ/ಈಶಾನ್ಯ ರಾಜ್ಯಗಳವರೆಗೆ ವಿಸ್ತರಿಸಲು ಸಿದ್ಧವಾಗಿದೆ.


  ಇದನ್ನೂ ಓದಿ: ವಾಟ್ಸಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ರಾಜೀನಾಮೆ! ಕಾರಣವೇನು? ಇಲ್ಲಿದೆ ಮಾಹಿತಿ


  5ಜಿ ಸೇವೆ ಹೇಗಿರಲಿದೆ:


  ಜಿಯೋ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 500 Mbps ನಿಂದ 1 GBPS ವರೆಗಿನ ವೇಗವನ್ನು ಪಡೆಯಬಹುದಾಗಿದೆ. ಅವರು ಹೆಚ್ಚಿನ ಪ್ರಮಾಣದ ಡೇಟಾವನ್ನು ಈ 5ಜಿ ಸೇವೆ ಮೂಲಕ ಇನ್ನುಮುಂದೆ ಸರಳವಾಗಿ ಬಳಸಬಹುದಾಗಿದೆ.


  Jio 5G service started in West Bengal to! It will have different features
  ಜಿಯೋ 5ಜಿ


  ಜಿಯೋದಿಂದ ಮುಂದಿನ ಯೋಜನೆಗಳು ಏನೇನು ಬರಲಿದೆ?


  ಪಶ್ಚಿಮ ಬಂಗಾಳ ಸರ್ಕಾರದ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಇಲಾಖೆ ಮತ್ತು ಡಾಟ್ ಆಯೋಜಿಸಿದ ಕಾರ್ಯಾಗಾರದಲ್ಲಿ ರಾಜ್ಯದ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಲು ಸಹಾಯ ಮಾಡುವ ಕೆಲವು ಅಪ್ಲಿಕೇಶನ್‌ಗಳನ್ನು ಪ್ರದರ್ಶಿಸಲು ಜಿಯೋ ಒಂದು ತಂತ್ರಜ್ಞಾನವನ್ನು ಪ್ರಾರಂಭಿಸಲಿದೆ. ಜಿಯೋ ತನ್ನ "ಪ್ರಗತಿಶೀಲ ಬಂಗಾಳ" ಎಂಬ ದೃಷ್ಟಿಯನ್ನು ಸೃಷ್ಟಿಸಲು ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ಕೈಜೋಡಿಸಲು ಬಯಸುತ್ತದೆ. ಜಿಯೋ ಟ್ರೂ 5ಜಿಯೊಂದಿಗೆ ಬಂಗಾಳವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುವುದು ಜಿಯೋದ ಉದ್ದೇಶವಾಗಿದೆ.


  ಜಿಯೋ ತನ್ನ ತಂತ್ರಜ್ಞಾನದಲ್ಲಿ ಪ್ರದರ್ಶಿಸಲಾದ ಕೆಲವು ಯೋಜನೆಗಳ ಉದಾಹರಣೆಗಳು ಇಲ್ಲಿವೆ:


  ಕೃಷಿ: 


  ಪಶ್ಚಿಮ ಬಂಗಾಳ ಸರ್ಕಾರವು "ಮಾತಿರ್ ಕಥಾ" ದಂತಹ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಇದು IOT ಮತ್ತು ಡ್ರೋನ್ ಮೂಲಕ ಕೆಲವೊಂದು ಕೃಷಿ ಪರಿಹಾರಗಳಿಗೆ ಗಮನಾರ್ಹಪ್ರೋತ್ಸಾಹವನ್ನು ನೀಡುತ್ತದೆ. ಹಾನಿಕಾರಕ ರಾಸಾಯನಿಕಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳ ಅತಿಯಾದ ಸಿಂಪಡಿಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಕೃಷಿಯಲ್ಲಿ ಇದು ಇನ್ನಷ್ಟು ಫಲವತ್ತು ಬರುವಮತೆ ಮಾಡುತ್ತದೆ.


  ಶಿಕ್ಷಣ:


  ಇದು ರಾಜ್ಯದ ಉತ್ತಮ ಗುಣಮಟ್ಟದ ಶಿಕ್ಷಣವನ್ನುಪಡೆಯಲು ಡಿಜಿಟಲ್ ಕಲಿಕೆಯ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ. ಶಾಲಾ ಕಟ್ಟಡಗಳ ಕೊರತೆಯ ಸಮಸ್ಯೆಯನ್ನು ಪರಿಹರಿಸಲು 3D ಮಾದರಿಗಳ ಸಾಧನಗಳನ್ನು ಬಳಕೆ ಮಾಡಿ ವಿದ್ಯಾರ್ಥಿಗಳು ಉತ್ಸಾಹದಿಂದ ಕಲಿಯಲು ಮತ್ತು ಶಿಕ್ಷಕರಿಗೆ ಪಾಠ ಮಾಡಲು ಸಹಾಯ ಮಾಡುತ್ತದೆ.


  Jio 5G service started in West Bengal to! It will have different features
  5G jio


  ಆರೋಗ್ಯ ರಕ್ಷಣೆ:


  ಆಸ್ಪತ್ರೆಯ ಸೌಲಭ್ಯಗಳು ಸೀಮಿತವಾಗಿರುವ ಪ್ರದೇಶಗಳಲ್ಲಿ ಇದು ಅರ್ಹ ಮತ್ತು ಗುಣಮಟ್ಟದ ತಜ್ಞರ ಸೇವೆಗಳನ್ನು ಒದಗಿಸುತ್ತದೆ. 5G ಟೆಲಿರಾಡಿಯಾಲಜಿ, ಆಂಬ್ಯುಲೆನ್ಸ್, ಕ್ಲಿನಿಕ್ ಇತ್ಯಾದಿಗಳಂತಹ ಸ್ಮಾರ್ಟ್ ಹೆಲ್ತ್‌ಕೇರ್ ಪರಿಹಾರಗಳಾಗಿ ಪರಿವರ್ತಿಸುವ ಮೂಲಕ ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತದೆ.


  ಸ್ಮಾರ್ಟ್ ಆಫೀಸ್:


  ಜಿಯೋ ಏರ್‌ಫೈಬರ್, ಕ್ಲೌಡ್ ಪಿಸಿ, ವಿಡಿಯೋ ಟೆಲಿಫೋನಿ- ಸಿಸಿ ಕ್ಯಾಮೆರಾ ಇತ್ಯಾದಿಗಳಂತಹ ಸುಲಭವಾದ ವೈರ್‌ಲೆಸ್ ಪ್ಲಗ್ ಮತ್ತು ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್​ಗಳೊಂದಿಗೆ ಜಿಯೋ ಕಚೇರಿಗಳು ಹೆಚ್ಚು ಸ್ಮಾರ್ಟ್ ಆಗುತ್ತಿವೆ.


  ಇದು ಜಿಯೋ ಮುಂದಿನ ದಿನಗಳಲ್ಲಿ ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡುತ್ತಿರುವ ಯೋಜನೆಗಳಾಗಿವೆ.

  Published by:Prajwal B
  First published: