Jio True 5G: ಚಿತ್ರದುರ್ಗದ ನಗರಗಳಲ್ಲೂ ಆರಂಭವಾಯಿತು ಜಿಯೋ 5ಜಿ ಸೇವೆ!

ಜಿಯೋ 5ಜಿ

ಜಿಯೋ 5ಜಿ

ರಿಲಯನ್ಸ್​ ಜಿಯೋ ಇತ್ತೀಚೆಗೆ 5ಜಿ ನೆಟ್​ವರ್ಕ್ ಸೇವೆಯನ್ನು ಸ್ಥಾಪಿಸುವಲ್ಲಿ ಭಾರೀ ಮುಂಚೂಣಿಯಲ್ಲಿದೆ. ಇದೀಗ ಈ ಕಂಪೆನಿ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ 5ಜಿ ನೆಟ್​ವರ್ಕ್​ ಅನ್ನು ವಿಸ್ತರಿಸಿದೆ.

 • Share this:

  ದೇಶದ ಟೆಲಿಕಾಂ ವಲಯದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ (Telecom Companies). ಈ ಕಂಪೆನಿಗಳು ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಮದ ಹೊಸ ಹೊಸ ರೀಚಾರ್ಜ್​ ಯೋಜನೆಗಳನ್ನು (Recharge Plans) ಪರಿಚಯಿಸುತ್ತಲೇ ಇರುತ್ತದೆ. ಅದರಲ್ಲೂ ದೇಶದೆಲ್ಲೆಡೆ ಭಾರೀ ಸದ್ದಿನಲ್ಲಿರುವ ಸುದ್ದಿಯೆಂದರೆ ಅದು 5ಜಿ ನೆಟ್​​ವರ್ಕ್​. ಈ 5ಜಿ ಸೇವೆಯನ್ನು ನೀಡುವಲ್ಲಿ ಜಿಯೋ ಮುಂಚೂಣಿಯಲ್ಲಿದ್ದರೆ, ಏರ್​​ಟೆಲ್​ ಎರಡನೇ ಸ್ಥಾನದಲ್ಲಿದೆ. ಜಿಯೋ 5ಜಿ ನೆಟ್​ವರ್ಕ್​ ದೇಶದೆಲ್ಲೆಡೆ ವಿಸ್ತರಿಸುವ ಕನಸನ್ನು ಹೊಂದಿದ್ದು, ಈ ಕಂಪೆನಿ ಇದಕ್ಕಾಗಿ ಹಗಲಿರುಳೆನ್ನದೆ ದುಡಿಯುತ್ತಿದೆ. ಇದುವರೆಗೆ ಜಿಯೋ (Jio) ಬಳೆಕದಾರರು 225 ನಗರಗಳಲ್ಲಿ ತನ್ನ 5ಜಿ ಸೇವೆಯನ್ನು ಪಡೆಯುತ್ತಿದ್ದಾರೆ. ಇದೀಗ ಮತ್ತೊಂದು ನಗರದಲ್ಲಿ ಜಿಯೋ ತನ್ನ 5ಜಿ ಸೇವೆಯನ್ನು ಆರಂಭಿಸಿದೆ.


  ರಿಲಯನ್ಸ್​ ಜಿಯೋ ಇತ್ತೀಚೆಗೆ 5ಜಿ ನೆಟ್​ವರ್ಕ್ ಸೇವೆಯನ್ನು ಸ್ಥಾಪಿಸುವಲ್ಲಿ ಭಾರೀ ಮುಂಚೂಣಿಯಲ್ಲಿದೆ. ಇದೀಗ ಈ ಕಂಪೆನಿ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ 5ಜಿ ನೆಟ್​ವರ್ಕ್​ ಅನ್ನು ವಿಸ್ತರಿಸಿದೆ.


  ಚಿತ್ರದುರ್ಗದಲ್ಲಿ 5ಜಿ ಸೇವೆಯನ್ನು ಸ್ಥಾಪಿಸಿದ ಮೊದಲ ಕಂಪೆನಿ\


  ರಿಲಯನ್ಸ್ ಜಿಯೋ ಚಿತ್ರದುರ್ಗದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಟೆಲಿಕಾಂ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಇಂದಿನಿಂದ ಪ್ರಾರಂಭವಾಗುವ ಈ ಸೇವೆಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್‌ ಆಫರ್ ಮೂಲಕ ಆಹ್ವಾನಿಸಲಾಗುತ್ತದೆ.
  ಜಿಯೋ 5ಜಿ ಬಗ್ಗೆ ವಕ್ತಾರರ ಅಭಿಪ್ರಾಯ


  ಜಿಯೋ 5ಜಿ ಸೇವೆಯನ್ನು ಸ್ಥಾಪಿಸಿದ ನಂತರ ಈ ಸಂದರ್ಭದಲ್ಲಿ ಮಾತನಾಡಿದ ಜಿಯೋ ವಕ್ತಾರರು, ಚಿತ್ರದುರ್ಗ ಮತ್ತು 33 ಹೆಚ್ಚುವರಿ ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ನಾವು ಬಹಳಷ್ಟು ಸಂತೋಷ ಪಡುತ್ತೇವೆ. ಇದರೊಂದಿಗೆ 5ಜಿ ಸೇವೆಗಳು ದೊರೆಯುತ್ತಿರುವ ನಗರಗಳ ಒಟ್ಟು ಸಂಖ್ಯೆಯನ್ನು 225 ನಗರಗಳಿಗೆ ಏರಿಕೆಯಾಗುತ್ತಿದೆ. ಬೀಟಾ ಪ್ರಾಯೋಗಿಕ ಅನಾವರಣವಾದ ಕೇವಲ 120 ದಿನಗಳಲ್ಲಿ ಜಿಯೋ ಈ ಮೈಲಗಲ್ಲನ್ನು ಸಾಧಿಸಿದೆ ಮತ್ತು 2023ರ ಡಿಸೆಂಬರ್ ವೇಳೆಗೆ ಪರಿವರ್ತನೆಯ ಜಿಯೋ ಟ್ರೂ 5ಜಿ ಸೇವೆಗಳೊಂದಿಗೆ ಇಡೀ ರಾಷ್ಟ್ರವನ್ನು ಸಂಪರ್ಕಿಸುವ ಹಾದಿಯಲ್ಲಿದೆ.


  ಈ ಪ್ರಮಾಣದ 5ಜಿ ನೆಟ್‌ವರ್ಕ್ ವಿಸ್ತರಣೆಯು ಜಗತ್ತಿನಲ್ಲಿ ಬೇರೆ ಯಾವ ಸ್ಥಳದಲ್ಲೂ ಆಗಿಲ್ಲ ಮತ್ತು ಭಾರತದಲ್ಲೇ ಮೊದಲನೆಯದು ಎಮದು ಹೇಳಿದ್ದಾರೆ. 2023ನೇ ಇಸವಿಯು ಭಾರತಕ್ಕೆ ಒಂದು ಹೆಗ್ಗುರುತಾಗಿದೆ.


  ಜಿಯೋ 5ಜಿ


  ಇಡೀ ದೇಶವು ಜಿಯೋದ ಉನ್ನತ ನೆಟ್‌ವರ್ಕ್ ಮೂಲಸೌಕರ್ಯದ ಮೂಲಕ ವಿತರಿಸಲಾದ ಕ್ರಾಂತಿಕಾರಿ ಟ್ರೂ 5ಜಿ ತಂತ್ರಜ್ಞಾನದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತದೆ. ನಮ್ಮ ದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಾವು ಎಂದಿಗೂ ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.


  ಇದನ್ನೂ ಓದಿ: ಮೊಬೈಲ್​ ಬಳಕೆದಾರರಿಗೆ ಶಾಕಿಂಗ್ ನ್ಯೂಸ್​! ಇಂದಿನಿಂದ ಈ ಫೋನ್​ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸಲ್ಲ


  ಜಿಯೋ 5ಜಿ ರೀಚಾರ್ಜ್​ ಪ್ಲ್ಯಾನ್​​ಗಳು


  ಜಿಯೋ 5ಜಿ ಸೇವೆ ಲಭ್ಯವಿರುವ ಪ್ರದೇಶದ ಗ್ರಾಹಕರು ಜಿಯೋ 239 ರೂಪಾಯಿ ಪ್ರಿಪೇಯ್ಡ್ ಯೋಜನೆ ಅಥವಾ ಅದಕ್ಕಿಂತ ಅಧಿಕ ಮೊತ್ತದ ಪ್ಲ್ಯಾನ್‌ ರೀಚಾರ್ಜ್ ಮಾಡಿರುವ ಗ್ರಾಹಕರು ಹೆಚ್ಚುವರಿ ಪ್ಯಾಕ್ ಖರೀದಿಸುವ ಅಗತ್ಯವಿಲ್ಲ. ಆದರೆ ಕಡಿಮೆ ಬೆಲೆಯ ಪ್ಲ್ಯಾನ್‌ಗಳನ್ನು ರೀಚಾರ್ಜ್‌ ಮಾಡಿರುವ ಗ್ರಾಹಕರಿಗೆ 5G ಅನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಜಿಯೋ ಹೊಸ 5ಜಿ ಅಪ್‌ಗ್ರೇಡ್‌ ಪ್ರಿಪೇಯ್ಡ್ ಯೋಜನೆಯನ್ನು ಈಗ ಅವರಿಗೆ ಲಭ್ಯ ಮಾಡಿದೆ. ಅದುವೇ ಜಿಯೋ 61 ರೂಪಾಯಿ ಪ್ಲ್ಯಾನ್ ಆಗಿದ್ದು, ಈ ಯೋಜನೆಯಲ್ಲಿ ಬಳಕೆದಾರರು 6 ಜಿಬಿ ಡೇಟಾವನ್ನು ಪಡೆಯುತ್ತಾರೆ.

  Published by:Prajwal B
  First published: