ಭಾರತದ ಟೆಲಿಕಾಂ ವಲಯದಲ್ಲಿ (India Telecom Company) ನಂಬರ್ ಒನ್ ಕಂಪೆನಿಯೆಂದು ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ (Reliance Jio) ದೇಶದೆಲ್ಲೆಡೆ 5ಜಿ ಸೇವೆಯನ್ನು ವಿಸ್ತರಿಸುವ ಗುರಿಯಲ್ಲಿದೆ. ಜಿಯೋ ತನ್ನ ರೀಚಾರ್ಜ್ ಪ್ಲ್ಯಾನ್ಗಳ ಮೂಲಕ ಹಲವಾರು ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಈ ಮಧ್ಯೆ ತನ್ನ ಟ್ರೂ 5ಜಿ ಸೇವೆಯನ್ನು ಸ್ಥಾಪಿಸುವ ಮೂಲಕ ಹೊಸ ಸಂಚಲನವನ್ನೇ ಸೃಷ್ಟಿ ಮಾಡುತ್ತಿದೆ. ಇದರ ಜೊತೆಗೆ ಜಿಯೋನ ಪ್ರಬಲ ಸ್ಪರ್ಧಿಯಗಿರುವ ಏರ್ಟೆಲ್ (Airtel) ಕೂಡ ತನ್ನ 5ಜಿ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಈ ಕಂಪೆನಿ ಕೂಡ ಈಗಾಗಲೇ ಹಲವು ಭಾಗಗಳಲ್ಲಿ ತನ್ನ 5ಜಿ ನೆಟ್ವರ್ಕ್ (5G Network) ಸೇವೆಯನ್ನು ವಿಸ್ತರಿಸಿದೆ.
ದೇಶದಲ್ಲಿ ಜಿಯೋ 5ಜಿ ಭಾರೀ ಸದ್ದು ಮಾಡುತ್ತಿದೆ. ಈ ಮಧ್ಯೆ ಸದ್ಯ ರಿಲಯನ್ಸ್ ಜಿಯೋ ಮತ್ತೆ ಕರ್ನಾಟಕದ 5 ಜಿಲ್ಲೆಗಳಲ್ಲಿ ತನ್ನ 5ಜಿ ಸೇವೆಯನ್ನು ವಿಸ್ತರಿಸಿದೆ. ಎಲ್ಲೆಲ್ಲಾ ಜಿಯೋ ತನ್ನ 5ಜಿ ಸೇವೆಯನ್ನು ಸ್ಥಾಪಿಸಿದೆ ಎಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಎಲ್ಲೆಲ್ಲಿ ಲಭ್ಯ?
ಜಿಯೋ ಈ ಹಿಂದೆ ಕರ್ನಾಟಕದ ಹಲವು ಕಡೆಗಳಲ್ಲಿ 5ಜಿ ಸೇವೆಯನ್ನು ಆರಂಭಿಸಿತ್ತು. ಇದೀಗ ಕರ್ನಾಟಕದ ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಮಂಡ್ಯ ಮತ್ತು ತುಮಕೂರಿನಲ್ಲಿ ಜಿಯೋ ಟ್ರೂ 5ಜಿ ಸೇವೆಯನ್ನು ಸ್ಥಾಪಿಸಿದೆ.
ಒಂದೇ ದಿನದಲ್ಲಿ 50 ನಗರಗಳಲ್ಲಿ ಜಿಯೋ 5ಜಿ
ಭಾರತದ ಜನಪ್ರಿಯ ಟೆಲಿಕಾಂ ಕಂಪೆನಿಯಾಗಿರುವ ರಿಲಯನ್ಸ್ ಜಿಯೋ ಇದೇ ಜನವರಿ 24 ರ ಮಂಗಳವಾರದಂದು 50 ನಗರಗಳಲ್ಲಿ ತನ್ನ ಟ್ರೂ 5ಜಿ ಸೇವೆಗಳ ಅತಿದೊಡ್ಡ ಬಿಡುಗಡೆಯನ್ನು ಘೋಷಿಸಿದೆ. ಈ ಆರಂಭದೊಂದಿಗೆ ದೇಶದಲ್ಲಿ ಇದುವರೆಗೆ 184 ನಗರಗಳಲ್ಲಿ ಜಿಯೋ ಬಳಕೆದಾರರು ಈಗ ಜಿಯೋ ಟ್ರೂ 5ಜಿ ಸೇವೆಗಳನ್ನು ಪಡೆಯುತ್ತಿದ್ದಾರೆ.
5ಜಿಯನ್ನು ಸ್ಥಾಪಿಸಿದ ಏಕೈಕ ಕಂಪೆನಿ
ರಿಲಯನ್ಸ್ ಜಿಯೋ ಈ ಹೆಚ್ಚಿನ ನಗರಗಳಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಇಂದಿನಿಂದ ಪ್ರಾರಂಭ ಆಗುವ ಸೇವೆಯೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್ ಕಂ ಆಫರ್ ಮೂಲಕ ಆಹ್ವಾನಿಸಲಾಗುತ್ತದೆ.
ಜಿಯೋ 5ಜಿ ಬಗ್ಗೆ ವಕ್ತಾರರ ಮಾತು
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, “ಕರ್ನಾಟಕದ ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಮಂಡ್ಯ ಮತ್ತು ತುಮಕೂರು ಹಾಗೂ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 45 ಹೆಚ್ಚುವರಿ ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸುತ್ತಿರುವುದನ್ನು ಘೋಷಿಸಲು ನಾವು ತುಂಬಾನೇ ಸಂತೋಕ್ಷಗೊಂಡಿದ್ದೇವೆ. ಇದರೊಂದಿಗೆ ಒಟ್ಟು 5ಜಿ ನಗರಗಳ ಸಂಖ್ಯೆಯನ್ನು ಭಾರತದ 184 ನಗರಗಳಿಗೆ ಕೊಂಡೊಯ್ಯುತ್ತೇವೆ. ಇದು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಎಲ್ಲೆಡೆ 5ಜಿ ಸೇವೆಗಳ ಅತಿದೊಡ್ಡ ಜಾರಿಗಳಲ್ಲಿ ಒಂದಾಗಿದೆ.
“2023ರ ಹೊಸ ವರ್ಷದಲ್ಲಿ ಜಿಯೋ ಟ್ರೂ 5ಜಿ ತಂತ್ರಜ್ಞಾನದ ರೂಪಾಂತರದ ಪ್ರಯೋಜನಗಳನ್ನು ಪ್ರತಿಯೊಬ್ಬ ಜಿಯೋ ಬಳಕೆದಾರರು ಆನಂದಿಸಬೇಕೆಂದು ನಾವು ಬಯಸುತ್ತೇವೆ. ಏಕೆಂದರೆ ನಾವು ರಾಷ್ಟ್ರದಾದ್ಯಂತ ಟ್ರೂ 5ಜಿ ಜಾರಿಯ ವೇಗ ಮತ್ತು ತೀವ್ರತೆಯನ್ನು ಹೆಚ್ಚಿಸಿದ್ದೇವೆ. 2023ರ ಡಿಸೆಂಬರ್ ಒಳಗೆ ಇಡೀ ರಾಷ್ಟ್ರವು ಜಿಯೋ ಟ್ರೂದಿಂದ 5ಜಿ ಸೇವೆಗಳು ಆನಂದಿಸಲು ಮತ್ತು ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ರಿಪಬ್ಲಿಕ್ ಡೇ ಸೇಲ್ ಆರಂಭ; ಈ ಸಾಧನಗಳ ಮೇಲೆ ಬಂಪರ್ ಆಫರ್
ಡಿಜಿಟಲೈಸ್ ಮಾಡುವ ಗುರಿ
“ಪ್ರತಿಯೊಂದು ಪ್ರದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್ಗಢ, ಗೋವಾ, ಹರಿಯಾಣ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ, ಪುದುಚೇರಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳ ನಿರಂತರ ಬೆಂಬಲಕ್ಕಾಗಿ ನಾವು ಆಭಾರಿಯಾಗಿದ್ದೇವೆ,” ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ