ದೇಶದೆಲ್ಲೆಡೆ ಈಗ 5ಜಿ ನೆಟ್ವರ್ಕ್ಗಳದ್ದೇ (5G Network) ಸುದ್ದಿ. ಅದ್ರಲ್ಲೂ ರಿಲಯನ್ಸ್ ಜಿಯೋ (Releance Jio) ಮತ್ತು ಏರ್ಟೆಲ್ (Airtel) ದೇಶದ ಕೆಲನಗರಗಳಲ್ಲಿ ಈಗಾಗಲೇ 5ಜಿ ನೆಟ್ವರ್ಕ್ ಅನ್ನು ವಿಸ್ತರಿಸಿದ್ದು, ಲಭ್ಯವೂ ಇದೆ. ಇದೀಗ ಟೆಲಿಕಾಂ ಕಂಪೆನಿಗಳಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿರುವ ಜಿಯೋ ಕರ್ನಾಟಕ ರಾಜ್ಯದ ಕೆಲನಗರಗಳಲ್ಲಿ ತನ್ನ ಟ್ರೂ 5ಜಿ ಸೇವೆಯನ್ನು ಜನವರಿ 10, 2023ರಂದು ಸ್ಥಾಪಿಸಿದೆ. ಅಂದಹಾಗೆ ಜಿಯೋ ಮಂಗಳೂರು (Mangalore), ಹುಬ್ಬಳ್ಳಿ- ಧಾರವಾಡ, ಬೆಳಗಾವಿಯಲ್ಲಿ ತನ್ನ 5ಜಿ ಸೇವೆಯನ್ನು ಸ್ಥಾಪಿಸಿದ ಭಾರತದ ಮೊದಲ ಟೆಲಿಕಾಂ ಕಂಪೆನಿಯೆಂದು ಗುರುತಿಸಿಕೊಂಡಿದೆ.
ಇದೀಗ ರಿಲಯನ್ಸ್ ಜಿಯೋ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಟ್ರೂ 5ಜಿ ಸೇವೆಯನ್ನು ಸ್ಥಾಪಿಸಿದೆ. ಈ ನಗರಗಳಲ್ಲಿ 5ಜಿ ಸೇವೆಯನ್ನು ಸ್ಥಾಪಿಸಿದ ಮೊದಲ ಟೆಲಿಕಾಂ ಕಂಪೆನಿ ಜಿಯೋ ಆಗಿದ್ದು, ಇದು 1 ಜಿಬಿಪಿಎಸ್+ ವೇಗದಲ್ಲಿ ಚಾಲನೆಯಾಗುತ್ತದೆ ಎಂದು ಕಂಪೆನಿ ತಿಳಿಸಿದೆ.
ಜಿಯೋ ವಕ್ತಾರರ ಮಾತು
ಈ ಸಂದರ್ಭದಲ್ಲಿ ಜಿಯೋ 5ಜಿ ಕುರಿತು ಮಾತನಾಡಿದ ಜಿಯೋ ವಕ್ತಾರರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ನಗರಗಳಲ್ಲಿ 5ಜಿ ಸೇವೆಯನ್ನು ವಿಸ್ತರಿಸಲು ನಾವು ತುಂಬಾ ಹೆಮ್ಮೆ ಪಡುತ್ತೇವೆ ಎಂದಿದ್ದಾರೆ. ಜೊತೆಗೆ ನಮ್ಮ ಟ್ರೂ 5ಜಿ ಸೇವೆಗಳನ್ನು ದೇಶದ ಹಲವು ನಗರಗಳಲ್ಲಿ ಪ್ರಾರಂಭಿಸಿದ್ದೇವೆ. ನಾವು ಪ್ರಾರಂಭಿಸಿದ ಅತೀದೊಡ್ಡ ಅನಾವರಣದಲ್ಲಿ ಇದೂ ಒಂದಾಗಿದೆ ಎಂದು ಹೇಳಿದ್ದಾರೆ. ಇನ್ಮುಂದೆ ಜಿಯೋ ಬಳಕೆದಾರರು ಜಿಯೋ ಟ್ರೂ 5ಜಿ ಟೆಕ್ನಾಲಜಿ ಜೊತೆಗೆ 2023ರಲ್ಲಿ ಜಿಯೋನ ಎಲ್ಲಾ ಹೊಸ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ಯಾಮ್ಸಂಗ್ ಕಂಪೆನಿಯಿಂದ ಧೂಳೆಬ್ಬಿಸುವ ಸ್ಮಾರ್ಟ್ಫೋನ್ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್
ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಈ ನಗರಗಳು ನಮ್ಮ ದೇಶದಲ್ಲಿರುವಂತಹ ಪ್ರಮುಖ ಪ್ರವಾಸೋದ್ಯಮ ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿದೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ, ಈ ಪ್ರದೇಶದ ಗ್ರಾಹಕರು ಕೇವಲ 5ಜಿ ಸೇವೆಯನ್ನು ಪಡೆಯುವುದು ಮಾತ್ರವಲ್ಲದೇ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್ಎಂಇಗಳು ಈ ಎಲ್ಲಾ ಕಂಪೆನಿಗಳು ಬಹಳಷ್ಟು ಬೆಳವಣಿಗೆಯಾಗಲುಸಾಧ್ಯವಾಗುತ್ತದೆ ಎಂದು ಜಿಯೋ ವಕ್ತಾರರು ಹೇಳಿದ್ದಾರೆ.
ಜನವರಿ 10ರಿಂದ 5 ರಾಜ್ಯಗಳಲ್ಲಿ ಜಿಯೋ 5ಜಿ ವಿಸ್ತರಣೆ
ರಿಲಯನ್ಸ್ ಜಿಯೋ ಜನವರಿ 10, 2023 ಕರ್ನಾಟಕದ 5 ರಾಜ್ಯಗಳ, 8 ನಗರಗಳಲ್ಲಿ ಜಿಯೋ ಬಳಕೆದಾರರನ್ನು 5ಜಿಗೆ ಆಹ್ವಾನಿಸಲಾಗುತ್ತದೆ ಎಂದು ಹೇಳಿದೆ. ಅವುಗಳೆಂದರೆ, ಕರ್ನಾಟಕದ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ, ಕೇರಳದ ಚೇರ್ತಲ, ಮಹಾರಾಷ್ಟ್ರದ ಸೋಲಾಪುರ, ತೆಲಂಗಾಣದ ವಾರಂಗಲ್ ಮತ್ತು ಕರೀಂ ನಗರದಲ್ಲಿ, ಮತ್ತು ಅಸ್ಸಾಂನ ಗುವಾಹತಿಯಲ್ಲಿ 5ಜಿ ಸೇವೆಯನ್ನು ವಿಸ್ತರಿಸುವುದಾಗಿ ಭರವಸೆ ನೀಡಿದೆ. ಇನ್ನು ಈ ನಗರಗಳಲ್ಲಿ ಜಿಯೋ ಬಳಕೆದಾರರು ಜಿಯೋ ವೆಲ್ಕಮ್ ಆಫರ್ ಮೂಲಕ 1 ಜಿಬಿಪಿಎಸ್+ ವೇಗದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅನ್ಲಿಮಿಟೆಡ್ ಡೇಟಾವನ್ನು ಬಳಸಬಹುದಾಗಿದೆ.
ಜಿಯೋ 5ಜಿ ಡೇಟಾ ಪ್ಲ್ಯಾನ್
ಇದೀಗ ಜಿಯೋ ಟೆಲಿಕಾಂ ಕಂಪೆನಿ ತನ್ನ 5ಜಿ ನೆಟ್ವರ್ಕ್ ಅನ್ನು ದೇಶದ ಹಲವು ನಗರಗಳಲ್ಲಿ ವಿಸ್ತರಿಸಿದ್ದು, ಇದರ ಬೆನ್ನಲ್ಲೇ 5ಜಿ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸಿದೆ. ಈ ರೀಚಾರ್ಜ್ ಪ್ಲ್ಯಾನ್ ಜಿಯೋದಿಂದ ಬಿಡುಗಡೆಯಾದ ಮೊದಲ 5ಜಿ ಪ್ಲ್ಯಾನ್ ಆಗಿದೆ. ಹಾಗಿದ್ರೆ ಈ ಪ್ಲ್ಯಾನ್ನಲ್ಲಿ ಯಾವೆಲ್ಲಾ ಪ್ರಯೋಜನಗಳು ಲಭ್ಯ ಇದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಜಿಯೋನ 61 ರೂಪಾಯಿ 5ಜಿ ರೀಚಾರ್ಜ್ ಪ್ಲ್ಯಾನ್
ಜಿಯೋ 61 ರೂಪಾಯಿ ಪ್ರಿಪೇಯ್ಡ್ ಯೋಜನೆಯು 6ಜಿಬಿ ಹೈ ಸ್ಪೀಡ್ 5ಜಿ ಡೇಟಾವನ್ನು ನೀಡಲಿದೆ. ಇದು ಟೆಲ್ಕೋ ವೆಬ್ಸೈಟ್ನಲ್ಲಿನ ಪಟ್ಟಿಯ ಪ್ರಕಾರ ಜಿಯೋದ ಸಕ್ರಿಯ ಯೋಜನೆಯ ಮಾನ್ಯತೆಯನ್ನು ಹೊಂದಿರುತ್ತದೆ. ಈ ಸೇವೆ 119 ರೂ, 149 ರೂ, 179 ರೂ, 199 ರೂ ಹಾಗೂ 209 ರೂ, ಬೆಲೆಯ ಜಿಯೋ ಪ್ಲಾನ್ಗಳಿಗೂ ಅನ್ವಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ