ವಿಶ್ವದಾದ್ಯಂತ ಟೆಕ್ನಾಲಜಿ ಮಾರುಕಟ್ಟೆಯಲ್ಲಿ (Technology Market) ಸದ್ದು ಮಾಡುತ್ತಿರುವ ಒಂದು ಸುದ್ದಿ ಇದ್ದರೆ ಅದು 5ಜಿ ನೆಟ್ವರ್ಕ್ (5G Network) ಸೇವೆ. ಇದೀಗ ರಿಲಯನ್ಸ್ ಜಿಯೋ (Reliance Jio) ದೇಶದ ಹಲವು ಭಾಗಗಳಲ್ಲಿ ತನ್ನ 5ಜಿ ಸೇವೆಯನ್ನು ಪ್ರಾರಂಭಿಸಿದೆ. 2023ರ ಡಿಸೆಂಬರ್ ಒಳಗೆ ದೇಶದ ಮೂಲೆ ಮೂಲೆಯಲ್ಲೂ 5ಜಿ ನೆಟ್ವರ್ಕ್ ಅನ್ನು ಸ್ಥಾಪಿಸುವುದಾಗಿಯೂ ಭರವಸೆ ನೀಡಿದೆ. ದೇಸದ ನಂಬರ್ 1 ಟೆಲಿಕಾಂ ಕಂಪನಿಯಾಗಿರುವ ಜಿಯೋ ಮುಂದಿನ ದಿನಗಳಲ್ಲಿ ದೇಶವನ್ನು ಒಂದು ಡಿಜಿಟಲೈಸ್ ಮಾಡುವಲ್ಲಿ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ತನ್ನ ಟಲಿಕಾಂನಲ್ಲಿ ಹಲವಾರು ಗ್ರಾಹಕರನ್ನು ಹೊಂದಿದ್ದು, ಗ್ರಾಹಕರಿಗಾಗಿ ಹಲವಾರು ಆಫರ್ಸ್ಗಳನ್ನು ಸಹ ನೀಡುತ್ತದೆ.
ದೇಶದೆಲ್ಲೆಡೆ ಜಿಯೋ 5ಜಿ ಸೇವೆಯನ್ನು ಪ್ರಾರಂಭಿಸುವ ಯೋಜನೆಯಲ್ಲಿದೆ. ಆದರೆ ಇದೀಗ ಕೆಲವೊಂದು ಮೊಬೈಲ್ಗಳಲ್ಲಿ ಕೂಡ 5ಜಿ ಸೆಟಪ್ ಮಾಡುವಂತಹ ಆಯ್ಕೆಯಿದೆ. ಆದರೆ ಇದನ್ನು ಸೆಟ್ ಹೇಗೆ ಮಾಡಿಕೊಳ್ಳುವುದು ಎಂದು ಹೆಚ್ಚಿನವರಿಗೆ ಗೊತ್ತಿಲ್ಲ.
ಜಿಯೋ ಸೇವೆ ಎಲ್ಲೆಲ್ಲಿ ಲಭ್ಯವಿದೆ?
ಸದ್ಯ ರಿಲಯನ್ಸ್ ಜಿಯೋ ದೇಶದೆಲ್ಲೆಡೆ 5ಜಿ ನೆಟ್ವರ್ಕ್ ಸೇವೆಯನ್ನು ಪಸರಿಸುವ ಕನಸನ್ನು ಹೊಂದಿದೆ. ಈಗಾಗಲೇ ದೇಶದ 11 ಪ್ರದೇಶಗಳಲ್ಲಿ 5ಜಿ ನೆಟ್ವರ್ಕ್ ಸೇವೆಯನ್ನು ಆರಂಭಿಸಿದೆ. ಅವುಗಳೆಂದರೆ ದೆಹಲಿ, ಬೆಂಗಳೂರು, ಮುಂಬೈ, ವಾರಣಾಸಿ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ, ನಾಥದ್ವಾರ, ಪುಣೆ, ಗುರುಗ್ರಾಮ, ನೋಯ್ಡಾ, ಘಾಜಿಯಾಬಾದ್, ಫರಿದಾಬಾದ್ ಹಾಗೂ ಗುಜರಾತ್ನ 33 ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ. ಆದರೆ 2023ರ ಡಿಸೆಂಬರ್ ಒಳಗಡೆ ದೇಶದ ಎಲ್ಲಾ ನಗರಗಳಲ್ಲಿ ವಿಸ್ತರಿಸುವುದಾಗಿ ಭರವಸೆ ನೀಡಿದೆ.
ಇದನ್ನೂ ಓದಿ: ಸ್ಮಾರ್ಟ್ಫೋನ್ ಅಖಾಡದಲ್ಲಿ ಇದ್ರದ್ದೇ ಹವಾ, ಎಲ್ಲರ ಕೈಯಲ್ಲೂ ರಾರಾಜಿಸುತ್ತಿದೆ ರಿಯಲ್ಮಿ 10 ಪ್ರೋ!
ಪ್ಯಾನ್ ಇಂಡಿಯಾ ರೀತಿಯಲ್ಲಿ ಜಿಯೋ ನೆಟ್ವರ್ಕ್ ರಚನೆ
ಇತ್ತೀಚಿಗೆ ನಡೆದ ರಿಲಯನ್ಸ್ ಜಿಯೋ ಟೆಲಿಕಾಂನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಜಿಯೋ, 2022 ರ ಅಂತ್ಯದ ವೇಳೆಗೆ ಭಾರತದ ಪ್ರಮುಖ ನಗರಗಳಲ್ಲಿ 5ಜಿ ನೆಟ್ವರ್ಕ್ ಸೇವೆಯನ್ನು ವಿಸ್ತರಿಸುವುದಾಗಿ ಘೋಷಿಸಿತು. ಇದಲ್ಲದೆ, ಡಿಸೆಂಬರ್ 2023 ರ ವೇಳೆಗೆ ಜಿಯೋ ಟ್ರೂ 5ಜಿ ಸೇವೆಯನ್ನು ಪ್ಯಾನ್ ಇಂಡಿಯಾ ಕವರೇಜ್ ಮಾಡುವ ಗುರಿಯನ್ನು ಒಳಗೊಂಡಿದೆ.
ಮೊಬೈಲ್ನಲ್ಲಿ ಜಿಯೋ 5ಜಿ ನೆಟ್ವರ್ಕ್ ಆ್ಯಕ್ಟಿವ್ ಮಾಡುವುದು ಹೇಗೆ?
ಹೊಸ ವರ್ಷದ ಪ್ರಯುಕ್ತ ಜಿಯೋ ಟೆಲಿಕಾಂ 2023 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ಅನ್ನು ಲಾಂಚ್ ಮಾಡಿದೆ. ಈ ಯೋಜನೆಯು ವಾರ್ಷಿಕ ಯೋಜನೆ ಆಗಿದ್ದು, 252 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆ ಮೂಲಕ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಒಟ್ಟಾಗಿ ಈ ಯೋಜನೆಯಲ್ಲಿ 630 ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದು. ಹಾಗೆಯೇ ಇದರಲ್ಲಿ ಅನ್ಲಿಮಿಟೆಡ್ ಕಾಲ್ ಮಾಡುವ ಸೌಲಭ್ಯ, ಪ್ರತಿದಿನ ಉಚಿತವಾಗಿ 100 ಎಸ್ಎಮ್ಎಸ್ ಮಾಡುವ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ ಟಿವಿ, ಜಿಯೋ ಸಿನೆಮಾ ಹಾಗೂ ಇತರೆ ಆ್ಯಪ್ಗಳ ಉಚಿತ ಚಂದಾದಾರಿಕೆ ಕೂಡ ಲಭ್ಯವಿದೆ.
ಜಿಯೋ ಹೊಸವರ್ಷಕ್ಕೆ ಬಿಡುಗಡೆ ಮಾಡಿದ ಯೋಜನೆ ಇದಾಗಿದ್ದು, ಹೀಗೆ 58ಜಿ ವೆಲ್ಕಂ ಆಫರ್ ಅನ್ನು ಸಹ ನೀಡಿದೆ. ಈ ಮೂಲಕ ಹೈಸ್ಪೀಡ್ ಇಂಟರ್ನೆಟ್ ಸೇವೆಯನ್ನು ಜಿಯೋ ನೀಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ