Jio 5G: 2023ರ ಅಂತ್ಯದ ವೇಳೆಗೆ ಭಾರತದಾದ್ಯಂತ ಜಿಯೋ 5ಜಿ ನೆಟ್​​ವರ್ಕ್​​ ಸೇವೆ ಲಭ್ಯ!

ಜಿಯೋ

ಜಿಯೋ

ದೇಶದೆಲ್ಲೆಡೆ ಇದೀಗ 5ಜಿ ನೆಟ್​ವರ್ಕ್​ ಸೇವೆ ಭಾರೀ ಚರ್ಚೆಯಲ್ಲಿದ್ದು, ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ ಗುಡ್​ ನ್ಯೂಸ್​ ನೀಡಿದೆ. ಅದೇನೆಂದರೆ 2023 ರ ಅಂತ್ಯದ ವೇಳೆಗೆ ಭಾರತದಾದ್ಯಂತ ಹೈಸ್ಪೀಡ್ 5ಜಿ ಟೆಲಿಕಾಂ ಸೇವೆಗಳನ್ನು ಒದಗಿಸುವುದಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಮಂಗಳವಾರ ತಿಳಿಸಿದೆ.

ಮುಂದೆ ಓದಿ ...
  • Share this:

    ಮೊಬೈಲ್ ನೆಟ್​ವರ್ಕ್ ಗಳಲ್ಲಿ (Mobile Network) 4ಜಿ ಯುಗ ಒಂದು ರೀತಿಯಲ್ಲಿ ಹಳೆಯದಾಗುತ್ತಾ ಬಂದಿದ್ದು, ಈಗ ಏನಿದ್ರು 5ಜಿ ನೆಟ್​ವರ್ಕ್​ನದ್ದೇ ಹವಾ ಅಂತ ಹೇಳಬಹುದು. ಈಗಾಗಲೇ ಎಲ್ಲಾ ನೆಟ್ವರ್ಕ್ ಒದಗಿಸುವ ಕಂಪನಿಗಳು ತಾನು ಮುಂದು ನಾನು ಮುಂದು ಎನ್ನುವಂತೆ 5ಜಿ ನೆಟ್​ವರ್ಕ್ (5G Network)​ ಸೇವೆಯನ್ನು ವಿಸ್ತರಿಸುವ ಕಾರ್ಯದಲ್ಲಿ ತೊಡಗಿವೆ ಅಂತ ಹೇಳಬಹುದು. ಅದರಲ್ಲೂ ನೀವು ರಿಲಯನ್ಸ್ ಜಿಯೋ ನೆಟ್​ವರ್ಕ್ ನ ಬಳಕೆದಾರರಾಗಿದ್ದರೆ, ಇಲ್ಲಿದೆ ನೋಡಿ ನಿಮಗಾಗಿ ಒಂದು ಒಳ್ಳೆಯ ಸುದ್ದಿ. ಹೌದು.. ಒಳ್ಳೆಯ ಸುದ್ದಿ ಏನೆಂದರೆ 2023 ರ ಅಂತ್ಯದ ವೇಳೆಗೆ ಭಾರತದಾದ್ಯಂತ ಹೈಸ್ಪೀಡ್ 5ಜಿ ಟೆಲಿಕಾಂ ಸೇವೆಗಳನ್ನು ಒದಗಿಸುವುದಾಗಿ ರಿಲಯನ್ಸ್ ಜಿಯೋ (Reliance Jio) ಇನ್ಫೋಕಾಮ್ ಮಂಗಳವಾರ ತಿಳಿಸಿದೆ.


    ತನ್ನ 5ಜಿ ನೆಟ್​​ವರ್ಕ್ ಸೇವೆಯನ್ನು ವಿಸ್ತರಿಸಲಿದೆಯಂತೆ ಜಿಯೋ


    "ಜಿಯೋ 5ಜಿ ಹೆಜ್ಜೆಗುರುತನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಇತರ ನಗರಗಳು, ಪಟ್ಟಣಗಳು ಮತ್ತು ತಾಲ್ಲೂಕುಗಳಿಗೆ ತಿಂಗಳಿಗೆ ಹೆಚ್ಚಿಸುವ ಘೋಷಿತ ಗುರಿಯನ್ನು ಸಾಧಿಸುವ ಹಾದಿಯಲ್ಲಿದ್ದೇವೆ ಮತ್ತು ಡಿಸೆಂಬರ್ 2023 ರ ವೇಳೆಗೆ ದೇಶಾದ್ಯಂತ ಪ್ರತಿ ಪಟ್ಟಣ, ಪ್ರತಿ ತಾಲೂಕು ಅನ್ನು ಒಳಗೊಳ್ಳುವ ಗುರಿಯನ್ನು ಹೊಂದಿದ್ದೇವೆ" ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿದ್ದಾರೆ.


    ಇದು ವಿಶ್ವದ ಅತ್ಯಂತ ವೇಗದ 5ಜಿ ರೋಲ್ ಔಟ್ ಆಗಲಿದೆ ಎಂದು ಸಹ ಆಕಾಶ್ ಅಂಬಾನಿ ಅವರು ಹೇಳಿದರು. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (ಎಂಇಐಟಿವೈ) ಮತ್ತು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಆಯೋಜಿಸಿದ್ದ ಬಜೆಟ್ ನಂತರದ ವೆಬಿನಾರ್ ನಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.


    ಇದನ್ನೂ ಓದಿ: ಆ್ಯಪಲ್ ಪೋನ್ ಕಂಪೆನಿಯಿಂದ ಕರ್ನಾಟಕದಲ್ಲಿ ತಯಾರಿಕಾ ಘಟಕ ಸ್ಥಾಪನೆ! 1 ಲಕ್ಷ ಉದ್ಯೋಗ ಸೃಷ್ಟಿ


    ಅಕ್ಟೋಬರ್ 1, 2022 ರಂದು, ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಭಾರತೀಯ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾರತದಲ್ಲಿ 5ಜಿ ಸೇವೆಗಳನ್ನು ಔಪಚಾರಿಕವಾಗಿ ಉದ್ಘಾಟಿಸಲಾಯಿತು.


    ತಮ್ಮ ಜಿಯೋ 5ಜಿ ನೆಟ್​​ವರ್ಕ್ ಬಗ್ಗೆ ಏನ್ ಹೇಳಿದ್ರು ಅಂಬಾನಿ?


    "ಅರ್ಧ ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ಉದ್ಯಮವು ತನ್ನನ್ನು ತಾನು ಪುನರುಜ್ಜೀವನಗೊಳಿಸಿದೆ ಮತ್ತು ದೇಶದ ಮೂಲೆ ಮೂಲೆಗೂ 5ಜಿ ಕ್ರಾಂತಿಯನ್ನು ವೇಗವಾಗಿ ತರುತ್ತಿದೆ. ಟ್ರೂ 5ಜಿ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಲು ವಿಶಿಷ್ಟವಾಗಿ ಸೂಕ್ತವಾದ ವಿಶ್ವದ ಅತಿದೊಡ್ಡ ಸ್ಟ್ಯಾಂಡ್ ಅಲೋನ್ ನೆಟ್​ವರ್ಕ್ ಆರ್ಕಿಟೆಕ್ಚರ್ ನೊಂದಿಗೆ ಜಿಯೋ ದೇಶದಲ್ಲಿ 5ಜಿ ನೆಟ್​ವರ್ಕ್ ರೋಲ್ಔಟ್ ಮಾಡುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಆಕಾಶ್ ಅಂಬಾನಿ ಹೇಳಿದರು.


    ಜಿಯೋ


    ಜಿಯೋ ಇದುವರೆಗೆ 277 ನಗರಗಳಲ್ಲಿ ತನ್ನ 5ಜಿ ಸೇವೆಯನ್ನು ಪ್ರಾರಂಭಿಸಿದೆ. ಸರ್ಕಾರವು ಆಗಸ್ಟ್ 2022 ರಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಸ್ಪೆಕ್ಟ್ರಮ್ ಹಂಚಿಕೆ ಪತ್ರಗಳನ್ನು ಹೊರಡಿಸಿ ದೇಶದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಲು ತಯಾರಿ ನಡೆಸುವಂತೆ ಕೇಳಿಕೊಂಡಿತು. ಟೆಲಿಕಾಂ ಇಲಾಖೆ 5ಜಿ ಸ್ಪೆಕ್ಟ್ರಮ್ ಹರಾಜಿನಿಂದ ಒಟ್ಟು 1.50 ಲಕ್ಷ ಕೋಟಿ ರೂಪಾಯಿಗಳ ಬಿಡ್ ಗಳನ್ನು ಸ್ವೀಕರಿಸಿದೆ.




    ಏನಿದು 5ಜಿ ನೆಟ್​​ವರ್ಕ್? 3ಜಿ ಮತ್ತು 4ಜಿ ಸೇವೆಗಳಿಗಿಂತ ಇದು ಹೇಗೆ ಭಿನ್ನವಾಗಿದೆ?


    5ಜಿ ಐದನೇ ತಲೆಮಾರಿನ ಮೊಬೈಲ್ ನೆಟ್​​ವರ್ಕ್ ಆಗಿದ್ದು, ದೊಡ್ಡ ಡೇಟಾವನ್ನು ಅತ್ಯಂತ ವೇಗವಾಗಿ ರವಾನಿಸುವ ಸಾಮರ್ಥ್ಯವನ್ನು ಹೊಂದಿದೆ. 3ಜಿ ಮತ್ತು 4ಜಿಗೆ ಹೋಲಿಸಿದರೆ, 5ಜಿ ಬಹಳ ವೇಗವಾದ ಸೇವೆಯನ್ನು ಒದಗಿಸುತ್ತದೆ. ಇದು ವಿವಿಧ ಕ್ಷೇತ್ರಗಳಲ್ಲಿ ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ.


    ಪ್ಯಾನ್-ಇಂಡಿಯಾ 5ಜಿ ರೋಲ್ಔಟ್ ಗಣಿಗಾರಿಕೆ, ವೇರ್ ಹೌಸಿಂಗ್, ಟೆಲಿಮೆಡಿಸಿನ್, ಶಿಕ್ಷಣ, ಉತ್ಪಾದನೆ, ಕೃಷಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ರಿಮೋಟ್ ಡೇಟಾ ಮೇಲ್ವಿಚಾರಣೆಯಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ತರುವ ನಿರೀಕ್ಷೆಯಿದೆ.

    Published by:Prajwal B
    First published: