ಜಿಯೋ (Jio) ಮತ್ತು ಏರ್ಟೆಲ್ (Airtel) ಕಳೆದ ವರ್ಷ ತಮ್ಮ 5ಜಿ (5G) ಸೇವೆಗಳನ್ನು (Service) ಪ್ರಾರಂಭಿಸಿದವು ಎಂಬುದು ನಮಗೆಲ್ಲಾ ತಿಳಿದೇ ಇದೆ. ಅಂದಿನಿಂದ ಟೆಲಿಕಾಂ ಆಪರೇಟರ್ ಗಳು ದೇಶದ ವಿವಿಧ ಭಾಗಗಳಲ್ಲಿ ತಮ್ಮ 5ಜಿ ಸೇವೆಗಳನ್ನು ಪ್ರಾರಂಭಿಸುತ್ತಿದ್ದಾರೆ. ಮುಕೇಶ್ ಅಂಬಾನಿ (Mukesh Ambani) ನೇತೃತ್ವದ ಸಂಸ್ಥೆ ಇದುವರೆಗೆ 75 ಭಾರತೀಯ ನಗರಗಳಲ್ಲಿ ಜಿಯೋ 5ಜಿ ಸೇವೆಯನ್ನು ಪ್ರಾರಂಭಿಸಿದೆ ಎಂದು ಅಧಿಕೃತವಾಗಿ ದೃಢಪಡಿಸಿದೆ. ಅದಕ್ಕೆ ಇನ್ನೂ 3 ನಗರಗಳು ಸೇರಿದ್ದು, ಇತ್ತೀಚಿನ ನಗರಗಳು ಜೈಪುರ್, ಜೋಧಪುರ್ ಮತ್ತು ಉದಯಪುರ್ ಸೇರಿವೆ.
ಯಾವ ಯಾವ ನಗರಗಳಲ್ಲಿ ಜಿಯೋ 5ಜಿ ಸೇವೆ ಲಭ್ಯವಿದೆ ನೋಡಿ
ಅಕ್ಟೋಬರ್ 4, 2022 ರಂದು ದೆಹಲಿ, ಮುಂಬೈ, ವಾರಣಾಸಿ, ಕೋಲ್ಕತ್ತಾ, ಅಕ್ಟೋಬರ್ 22, 2022 ರಂದು ನಾಥದ್ವಾರ, ಚೆನ್ನೈ, ನವೆಂಬರ್ 10, 2022 ರಂದು ಬೆಂಗಳೂರು ಮತ್ತು ಹೈದರಾಬಾದ್, ನವೆಂಬರ್ 11, 2022 ರಂದು ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್, ನವೆಂಬರ್ 23, 2022 ರಂದು ಪುಣೆ,
ನವೆಂಬರ್ 25, 2022 ರಂದು ಗುಜರಾತ್ ರಾಜ್ಯದಲ್ಲಿರುವ 33 ಜಿಲ್ಲೆಗಳು, ಡಿಸೆಂಬರ್ 14, 2022 ರಂದು ಉಜ್ಜಯಿನಿ ದೇವಾಲಯ, ಡಿಸೆಂಬರ್ 20, 2022 ರಂದು ಕೊಚ್ಚಿ, ಗುರುವಾಯೂರ್ ದೇವಾಲಯ, ಡಿಸೆಂಬರ್ 26, 2022 ರಂದು ತಿರುಮಲ, ವಿಜಯವಾಡ, ವಿಶಾಖಪಟ್ಟಣಂ, ಗುಂಟೂರು ನಗರಗಳಲ್ಲಿ ಜಿಯೋ 5ಜಿ ಸೇವೆಯು ಲಭ್ಯವಿವೆ.
ಇನ್ನೂ ಡಿಸೆಂಬರ್ 28, 2022 ರಂದು ಲಕ್ನೋ, ತಿರುವನಂತಪುರಂ, ಮೈಸೂರು, ನಾಸಿಕ್, ಔರಂಗಾಬಾದ್, ಚಂಡೀಘಡ್, ಮೊಹಾಲಿ, ಪಂಚಕುಲ, ಜಿರಾಕ್ಪುರ್, ಖರಾರ್, ದೇರಬಸ್ಸಿ, ಡಿಸೆಂಬರ್ 29, 2022 ರಂದು ಭೋಪಾಲ್, ಇಂದೋರ್, ಜನವರಿ 5, 2023 ರಂದು ಭುವನೇಶ್ವರ್, ಕಟಕ್, ಜನವರಿ 6, 2023 ರಂದು ಜಬಲ್ಪುರ್, ಗ್ವಾಲಿಯರ್, ಲುಧಿಯಾನ, ಸಿಲಿಗುರಿ ಮತ್ತು ಜನವರಿ 7, 2023 ರಂದು ಜೈಪುರ್, ಜೋಧಪುರ್ ಮತ್ತು ಉದಯಪುರ್ ನಲ್ಲಿ 5ಜಿ ಸೇವೆ ಶುರುವಾಗಿದೆ ಅಂತ ಹೇಳಲಾಗುತ್ತಿದೆ.
5ಜಿ ಸ್ಮಾರ್ಟ್ಫೋನ್ ಗಳಲ್ಲಿ ಮಾತ್ರವೇ 5ಜಿ ಅನ್ನು ಬಳಸಬಹುದು
ಈಗ, 5ಜಿ ಸ್ಮಾರ್ಟ್ಫೋನ್ ಗಳಲ್ಲಿ ಮಾತ್ರವೇ 5ಜಿ ಅನ್ನು ಬಳಸಬಹುದು ಎಂಬುದನ್ನು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ. ಎಲ್ಲಾ 5ಜಿ ಸಕ್ರಿಯಗೊಳಿಸಿದ ಸ್ಮಾರ್ಟ್ಫೋನ್ ಗಳಿಗೆ 5ಜಿ ಬೆಂಬಲವನ್ನು ತರಲು ಜಿಯೋ ಒಇಎಂಗಳೊಂದಿಗೆ ಕೆಲಸ ಮಾಡುತ್ತಿದೆ. ಅರ್ಹ ಆಪಲ್ ಐಫೋನ್ ಮಾದರಿಗಳು ಇತ್ತೀಚಿನ ಐಒಎಸ್ ನವೀಕರಣದ ಆಗಮನದೊಂದಿಗೆ ಈಗ 5ಜಿ ಅನ್ನು ಸಹ ಚಲಾಯಿಸಬಹುದು.
ನಿಮ್ಮ ಫೋನ್ ನಲ್ಲಿ 5ಜಿ ಸಕ್ರಿಯಗೊಳಿಸುವುದು ಹೇಗೆ?
ನೀವು ಮೇಲೆ ತಿಳಿಸಿದ ಯಾವುದೇ ನಗರಗಳಲ್ಲಿ ವಾಸಿಸುತ್ತಿದ್ದರೆ ಮತ್ತು ಇನ್ನೂ ಜಿಯೋ 5ಜಿ ಬಳಸಲು ಸಾಧ್ಯವಾಗದಿದ್ದರೆ ನೀವು ನಿಮ್ಮ ಮೊಬೈಲ್ ಫೋನ್ ನ ಸೆಟ್ಟಿಂಗ್ಗಳನ್ನು ಬದಲಾಯಿಸಬೇಕಾಗುತ್ತದೆ. ನೀವು ಸೆಟ್ಟಿಂಗ್ಸ್ ಮೆನುಗೆ ಹೋಗಿ ಅಲ್ಲಿ ನೆಟ್ವರ್ಕ್ ಸೆಟ್ಟಿಂಗ್ ಗಳಿಗೆ ಹೋಗಿ ತದ ನಂತರ 5ಜಿ ಗೆ ಹೋಗಿ.
ಈಗ, ಜಿಯೋ 5ಜಿ ಸೇವೆಯು ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ, ನಿಮ್ಮ ಫೋನ್ ನಲ್ಲಿ ನೀವು 5ಜಿ ಸೇವೆ ಬಳಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಬಳಕೆದಾರರು ಜಿಯೋ 5ಜಿ ಆಹ್ವಾನವನ್ನು ಸ್ವೀಕರಿಸಿದರೆ ಮಾತ್ರ 5ಜಿ ಬಳಸಲು ಸಾಧ್ಯವಾಗುತ್ತದೆ ಎಂಬುದನ್ನು ಗಮನಿಸಬೇಕು, ಇದು ಮೈಜಿಯೋ ಅಪ್ಲಿಕೇಶನ್ನಲ್ಲಿ ಲಭ್ಯವಿರಬೇಕು.
ಜಿಯೋ ಅರ್ಹ ಬಳಕೆದಾರರಿಗೆ ವಾಟ್ಸಾಪ್ ನಲ್ಲಿ ಜಿಯೋ 5ಜಿ ಆಹ್ವಾನವನ್ನು ಕಳುಹಿಸುತ್ತಿದೆ. ನೀವು ಇನ್ನೂ ಆಹ್ವಾನವನ್ನು ನೋಡಲು ಸಾಧ್ಯವಾಗದಿದ್ದರೆ, ನೀವು ಹೆಚ್ಚು ಸಮಯ ಕಾಯಬೇಕಾಗುತ್ತದೆ ಎಂದರ್ಥ.
ಇದನ್ನೂ ಓದಿ:Jio 5G: 5ಜಿ ಗಾಗಿ ಜಿಯೋ ಜೊತೆ ಪಾಲುದಾರಿಕೆ ಮಾಡಿಕೊಂಡ ಮೊಟೊರೊಲಾ ಕಂಪನಿ!
ರಿಲಯನ್ಸ್ ಜಿಯೋ ಈ ವರ್ಷದ ಕೊನೆಯಲ್ಲಿ 5ಜಿ ಯೋಜನೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಪ್ರಸ್ತುತ, ಟೆಲಿಕಾಂ ಆಪರೇಟರ್ ಬಳಕೆದಾರರು 239 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಜಿಯೋ ಯೋಜನೆಗೆ ಚಂದಾದಾರರಾಗಿದ್ದರೆ ಜಿಯೋ 5ಜಿ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಘೋಷಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ