ಈ ನಾಲ್ಕು ದೇಶಗಳ ಜಿಡಿಪಿಗಿಂತಲೂ ಅಧಿಕ ಅಮೆಜಾನ್​ ಸಿಇಒ ಒಟ್ಟು ಆಸ್ತಿ ಮೌಲ್ಯ!


Updated:July 17, 2018, 5:04 PM IST
ಈ ನಾಲ್ಕು ದೇಶಗಳ ಜಿಡಿಪಿಗಿಂತಲೂ ಅಧಿಕ ಅಮೆಜಾನ್​ ಸಿಇಒ ಒಟ್ಟು ಆಸ್ತಿ ಮೌಲ್ಯ!

Updated: July 17, 2018, 5:04 PM IST
ಆನ್​ಲೈನ್ ರಿಟೇಲ್ ದಿಗ್ಗಜ ಅಮೆಜಾನ್ ಕಂಪನಿ ಸಿಇಒ ಜೆಫ್ ಬೆಜೋಸ್ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಇವರ ಆದಾಯ ಎಷ್ಟು ದೇಶಗಳ ಜಿಡಿಪಿಗೆ(ರಾಷ್ಟ್ರೀಯ ಉತ್ಪನ್ನ)ಕ್ಕೆ ಸಮವಾಗುತ್ತೆ ಗೊತ್ತಾ? ಇದನ್ನು ತಿಳಿಯಲೇ ಬೇಕಾದರೆ ಈ ಸ್ಟೋರಿಯನ್ನು ಓದಿ.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಮೈಕ್ರೋಸಾಫ್ಟ್​ ದಿಗ್ಗಜ ಬಿಲ್​ಗೇಟ್ಸ್​ನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದಿದ್ದ ಅಮೆಜಾನ್​ ಸಿಯಿಒ ಜೆಫ್​ ಬೆಜೋಸ್​ನ ಆಸ್ತಿಯ​ 150 ಬಿಲಿಯನ್​ ಡಾಲರ್​ಗೆ ಏರಿಕೆಯಾಗಿದೆ.

ಆದರೆ ಇವರ ಒಟ್ಟು ಆಸ್ತಿಯನ್ನು ಕ್ರೋಷಿಯಾ, ಎಸ್ಟೋನಿಯಾ, ಐಸ್​ಲ್ಯಾಂಡ್​ ಮತ್ತು ಕಾಂಬೋಡಿಯಾದ ಒಟ್ಟು ದೇಶೀಯ ಉತ್ಪನ್ನಗಳ ಆದಾಯಕ್ಕಿಂತಲೂ ಅಧಿಕವಾಗಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿದು ಬಂದಿದೆ. ಇತ್ತೀಚೆಗೆ ವಿಶ್ವ ಫೂಟ್​ಬಾಲ್​ ಚಾಂಪಿಯನ್ಸ್​ಷಿಪ್​ನಲ್ಲಿ ಫೈನಲ್​ ಪ್ರವೇಶಿಸಿದ ಕ್ರೋಷಿಯಾ ದೇಶದ ಒಟ್ಟು ದೇಶೀಯ ಉತ್ಪನ್ನದ 61 ಬಿಲಿಯನ್​ ಡಾಲರ್​, ಎಸ್ಟೋನಿಯಾ 30 ಬಿಲಿಯನ್​ ಡಾಲರ್​, ಐಸ್​ಲ್ಯಾಂಡ್​ 29 ಬಿಲಿಯನ್​ ಡಾಲರ್​, ಮತ್ತು ಕಾಂಬೋಡಿಯಾ 24 ಬಿಲಿಯನ್​ ಡಾಲರ್​ ಆದಾಯ ಹೊಂದಿದೆ.

ಬ್ಲೂಂಬರ್ಗ್​ ಬಿಲಿಯೇನರ್ಸ್​ ಪಟ್ಟಿಯ ಪ್ರಕಾರ ಬಿಲ್​ಗೇಟ್ಸ್​ 100 ಬಿಲಿಯನ್​ ಡಾಲರ್​ ಹೊಂದಿದ್ದು, ಬೆಜೋಸ್​ ಆಸ್ತಿ ಬಿಲ್​ಗೇಟ್ಸ್​ಗಿಂತ 50 ಬಿಲಿಯನ್​ ಡಾಲರ್​ ಅಧಿಕವಿದ್ದು ಈ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಸೋಮವಾರದ ಮಾರುಕಟ್ಟೆ ಮೌಲ್ಯದ ಪ್ರಕಾರ ಅಮೇಜಾನ್​ ಕಂಪನಿ 890 ಬಿಲಿಯನ್​ ಡಾಲರ್​ ಮೂಲ ಬೆಲೆ ಹೊಂದಿದ್ದು, ಇದೇ ಮೊಟ್ಟ ಮೊದಲ ಬಾರಿಗೆ ಅಮೇಜಾನ್​ ಶೇರುಗಳು 1,841.95 ಡಾಲರ್ ದಾಟಿದೆ.

ತನ್ನ 30ನೇ ವಯಸ್ಸಿನಲ್ಲಿ ಮಾಡುತ್ತಿದ್ದ ಕೆಲಸಕ್ಕೆ ವಿಧಾಯ ಹೇಳಿ ಅಮೇಜಾನ್​ನ್ನು ಸ್ಥಾಪಿಸಿದ ಬೆಜೋಸ್​, ಇದರೊಂದಿಗೆ ಬ್ಲೂ ಒರಿಜಿನ್ಸ್​ ಎಂಬ ಅಂತರಿಕ್ಷಯಾನ ಸಂಸ್ಥೆಯನ್ನು ಕೂಡಾ ಹುಟ್ಟುಹಾಕಿದ್ದಾರೆ.
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...