ಜಾವಾ ಪರಾಕ್​ ಬೈಕ್​ ಮಾರುಕಟ್ಟೆಗೆ; ಬೆಲೆಯೆಷ್ಟು ಗೊತ್ತಾ?

Jawa Perak Bobber: ಹೊಸ ಪರಾಕ್‌ ಬಾಬರ್‌ ಬೈಕ್​ ಸಂಪೂರ್ಣ ಭಿನ್ನವಾದ ಚಾಸಿಯನ್ನು ವಿನ್ಯಾಸ ಹೊಂದಿದ್ದು, ಇತರ ಜಾವಾ ಬೈಕ್‌ಗಳಿಗಿಂತ ತುಸು ದೊಡ್ಡದಾಗಿದೆ ಮತ್ತು ಎಂಜಿನ್‌ನಲ್ಲೂ ವ್ಯತ್ಯಾಸವಿದೆ.

news18-kannada
Updated:November 15, 2019, 6:57 PM IST
ಜಾವಾ ಪರಾಕ್​ ಬೈಕ್​ ಮಾರುಕಟ್ಟೆಗೆ; ಬೆಲೆಯೆಷ್ಟು ಗೊತ್ತಾ?
ಜಾವಾ ಪರಾಕ್​ ಬೈಕ್
  • Share this:
ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕೆ ಕಂಪನಿ ಜಾವಾ ಬಹುನಿರೀಕ್ಷಿತ ಪರಾಕ್‌ ಬಾಬರ್‌ ಬೈಕ್‌ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನೂತನ ಬೈಕ್​ ಜಾವಾ ಪರಾಖ್​ ಬಾಬರ್​ ಬಿಎಸ್‌6 ಎಂಜಿನ್‌ ಅನ್ನು ಅಲವಡಿಸಿಕೊಂಡಿದ್ದು, ಎಬಿಎಸ್‌ ಸ್ಟಾಂಡರ್ಡ್‌ ಫೀಚರ್‌ ಹೊಂದಿದೆ.ಇದರಲ್ಲಿ 334 ಸಿಸಿ ಸಿಂಗಲ್‌ ಸಿಲಿಂಡರ್‌ ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ ಇದ್ದು, 31 ಎನ್‌ಎಂ ಟಾರ್ಕ್‌ ಉತ್ಪಾದಿಸಲಿದೆ.

ಹೊಸ ಪರಾಕ್‌ ಬಾಬರ್‌ ಬೈಕ್​ ಸಂಪೂರ್ಣ ಭಿನ್ನವಾದ ಚಾಸಿಯನ್ನು ವಿನ್ಯಾಸ ಹೊಂದಿದ್ದು, ಇತರ ಜಾವಾ ಬೈಕ್‌ಗಳಿಗಿಂತ ತುಸು ದೊಡ್ಡದಾಗಿದೆ ಮತ್ತು ಎಂಜಿನ್‌ನಲ್ಲೂ ವ್ಯತ್ಯಾಸವಿದೆ.

ಪರಾಕ್‌ ಬಾಬರ್‌ ಬೈಕ್‌


ವಿಶೇಷವೆಂದರೆ ಪರಾಕ್​​​ ಬೈಕ್​ ಒಂದು ಸೀಟು ಹೊಂದಿರುವ ಆಕರ್ಷಕ ಬೈಕ್‌ ಆಗಿದ್ದು ಹಿಂಭಾಗ ಭಿನ್ನ ರೀತಿಯ ಮೋನೋಶಾಕ್‌ ಮತ್ತು ಮುಂಭಾಗ ಟೆಲಿಸ್ಕೋಪಿಕ್‌ ಶಾಕ್ಸ್‌ ಅಬ್ಸರ್​​​ಗಳನ್ನು  ಹೊಂದಿದೆ. ಜತೆಗೆ ಮ್ಯಾಟ್‌ ಬ್ಲ್ಯಾಕ್‌ ಕಲರ್‌, ಭಿನ್ನ ರೀತಿಯ ಟೂಲ್‌ಬಾಕ್ಸ್‌, ಬಾರ್‌ ಎಂಡ್‌ ಮಿರರ್‌ಗಳು, ಆಕರ್ಷಕ ಫೆಂಡರ್‌ ಮತ್ತು ಉದ್ದನೆಯ ಸೈಲೆನ್ಸರ್‌ಗಳನ್ನು ಹೊಂದಿದೆ

ಇದೀಗ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಪರಾಕ್​ ಬೈಕ್​ ದೇಶಾದ್ಯಂತ 105 ಡೀಲರ್‌ಗಳ ಬಳಿ ಬೈಕ್‌ ಮಾರಾಟವಾಗಲಿದೆ. ಮುಂದಿನ ವರ್ಷ ಎಪ್ರಿಲ್‌ನಿಂದ ಇದನ್ನು ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶವನ್ನು ಕಂಪೆನಿ ಹೊಂದಿದೆ.

ಈವರೆಗೆ ಬಾಬರ್‌ ಶೈಲಿಯ ಬೈಕನ್ನು ಟ್ರಯಂಫ್ ಮಾತ್ರವೇ ಬಿಡುಗಡೆ ಮಾಡುತ್ತಿತ್ತು. ಇದೀಗ ಜಾವಾ ಕೂಡ ಹೊಸ ವಿನ್ಯಾಸದಲ್ಲಿ ಪರಾಕ್​ ಬೈಕ್​ ಅನ್ನು ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್​ ಬೆಲೆ 1.95 ಲಕ್ಷ  ಆಗಿದ್ದು, ಟ್ರಯಂಫ್ ಬೈಕ್​ಗೆ ಪೈಪೋಟಿ ನೀಡಲಿದೆಇದನ್ನೂ ಓದಿ: Bigg Boss Kannada 7: ಕೃಷ್ಣ ಸುಂದರಿ ಭೂಮಿ ಶೆಟ್ಟಿಯ ಕಣ್ಮನ ಸೆಳೆಯುವ ಚಿತ್ರಪಟಗಳು

ಇದನ್ನೂ ಓದಿ:  Rachita Ram: ಮದುವೆ ತಯಾರಿಯಲ್ಲಿ ಡಿಂಪಲ್ ಕ್ವೀನ್ ಫುಲ್ ಬ್ಯುಸಿ!

First published:November 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading