HOME » NEWS » Tech » JAWA JAWA 42 WAITING PERIODS STILL STRETCH UP TO 10 MONTHS HAS

ಬುಕ್ಕಿಂಗ್​ ಮಾಡಿಕೊಂಡ ಜಾವ ಬೈಕ್​ಗಾಗಿ ಇನ್ನೆಷ್ಟು ತಿಂಗಳು ಕಾಯಬೇಕು ಗೊತ್ತಾ?

ಬೈಕ್​ ದೇಖೋ ವರದಿಯ ಪ್ರಕಾರ ಬುಕ್ಕಿಂಗ್​ ಮಾಡಿಕೊಂಡ ಜಾವ ಬೈಕ್​ಗಾಗಿ 10 ತಿಂಗಳ ಕಾಯುವಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿದು ಬಂದಿದೆ

Harshith AS | news18
Updated:July 18, 2019, 6:21 PM IST
ಬುಕ್ಕಿಂಗ್​ ಮಾಡಿಕೊಂಡ ಜಾವ ಬೈಕ್​ಗಾಗಿ ಇನ್ನೆಷ್ಟು ತಿಂಗಳು ಕಾಯಬೇಕು ಗೊತ್ತಾ?
ಜಾವ ಬೈಕ್
  • News18
  • Last Updated: July 18, 2019, 6:21 PM IST
  • Share this:
ದಶಕಗಳ ಹಿಂದೆ ಮೊಟಾರ್​ ಸೈಕಲ್​ ವಿಭಾಗದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿದ್ದ ಜಾವ ಬೈಕ್​ ಮತ್ತೆ ಹೊಸ ರೂಪವನ್ನು ಅಳವಡಿಸಿಕೊಂಡು ಮಾರುಕಟ್ಟೆಗೆ ಧಾವಿಸಿತ್ತು. ಬಣ್ಣ ಮತ್ತು ವೈಶಿಷ್ಟ್ಯವನ್ನು ಬದಲಾಯಿಸಿಕೊಂಡು ಗ್ರಾಹಕರ ಮನಗೆದ್ದ ಜಾವ ಬೈಕ್​  ಬಿಡುಗಡೆಗೆ ಸಜ್ಜಾಗಿತ್ತು. ಇದೀಗ ಜಾವ ಬೈಕ್ ಬುಕ್ಕಿಂಗ್​ ಸಂಖ್ಯೆ ಹೆಚ್ಚಾಗಿದ್ದು, ಗ್ರಾಹಕರು ಬೈಕ್​ ಖರೀದಿಸಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ರಾಯಲ್​ ಎನ್​​ಫೀಲ್ಡ್​​ ಬೈಕ್​ಗಳಿಗೆ ಟಕ್ಕರ್​ ಹೊಡೆಯಲು ಸಿದ್ಧವಾದ ಜಾವ ಬೈಕ್​​ ಬೇಡಿಕೆಯನ್ನು ನಿರ್ಮಿಸಿದೆ. ಬುಕ್ಕಿಂಗ್​​ ಮಾಡಿಕೊಂಡ ಗ್ರಾಹಕರು ಬೈಕಿನ ಬರುವಿಕೆಗಾಗಿ ಕಾಯುತ್ತಿದ್ದಾರೆ.​ ಇನ್ನು ಕೆಲವರು ಬುಕ್ಕಿಂಗ್​​​ ಕ್ಯಾನ್ಸಲ್​ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Mi Super Sale: ರೆಡ್​ಮಿ, ಎಂಐ ಸ್ಮಾರ್ಟ್​ಫೋನ್​​ಗಳ ​ಮೇಲೆ ವಿಶೇಷ ರಿಯಾಯಿತಿ

ಬೈಕ್​ ದೇಖೋ ವರದಿಯ ಪ್ರಕಾರ ಬುಕ್ಕಿಂಗ್​ ಮಾಡಿಕೊಂಡ ಜಾವ ಬೈಕ್​ಗಾಗಿ 10 ತಿಂಗಳ ಕಾಯುವಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿದು ಬಂದಿದೆ. ನವದೆಹಲಿಯಲ್ಲಿ ಬೈಕ್​ ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರು 8 ತಿಂಗಳ ಕಾಲ ಕಾಯಬೇಕಾಗಿದೆ. ಬೆಂಗಳೂರಿನಲ್ಲಿ ಜಾವ ಬುಕ್ಕಿಂಗ್​ ಮಾಡಿಕೊಂಡ ಗ್ರಾಹಕರು 8 ತಿಂಗಳ ಕಾಲ ಕಾಯಬೇಕಿದೆ. ಅಂತೆಯೇ, ಮುಂಬೈ ಗ್ರಾಹಕರು 7 ತಿಂಗಳ ಕಾಲ, ಹೈದರಾಬಾದ್​ ಗ್ರಾಹಕರು 9 ತಿಂಗಳ ಕಾಲ, ಪುಣೆ ಗ್ರಾಹಕರು 10 ತಿಂಗಳ ಕಾಲ, ಚೆನ್ನೈನಲ್ಲಿ ಬೈಕ್​ ಬುಕ್ಕಿಂಗ್​ ಮಾಡಿಕೊಂಡ ಗ್ರಾಹಕರು 9 ತಿಂಗಳ ಕಾಲ. ಕೊಲ್ಕತ್ತಾದಲ್ಲಿನ ಗ್ರಾಹಕರು 7 ತಿಂಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.ನೂತನ ವಿನ್ಯಾಸದಲ್ಲಿ ಮತ್ತು ತಂತ್ರಜ್ನಾನದೊಂದಿಗೆ ತಯಾರಾಗುತ್ತಿರುವ ಜಾವ ಸಂಸ್ಥೆಯ ಬೈಕ್​​ಗಳನ್ನು ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್​ ಲೆಜೆಂಡ್​ ಸಂಸ್ಥೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಂಪೆನಿ ಈಗಾಗಲೇ ಮೂರು ಹೊಸ ಬೈಕ್​​ಗಳನ್ನು ಹೊರತಂದಿದ್ದು, ಇದರಲ್ಲಿ ರೆಟ್ರೋ ಜಾವಾ, ಜಾವಾ 42 ಬೈಕ್​​ಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಅಂತೆಯೇ, ಮತ್ತೊಂದು ಜಾವಾ ಪೆರಾಕ್​​ ಬೈಕ್​ನಲ್ಲಿ ಕಸ್ಟಮ್​ ಮಾದರಿಯನ್ನು ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಕಂಪೆನಿ ತಿಳಿಸಿದೆ.​

​ಇನ್ನು ದೆಹಲಿಯ ಎಕ್ಸ್​​​ ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ.1.64 ಲಕ್ಷವೆಂದು ನಿಗದಿ ಪಡಿಸಲಾಗಿದೆ. ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್​ ಬೈಕಿಗೆ ರೂ. 1.89 ಲಕ್ಷವೆಂದು ನಿಗದಿ ಪಡಿಸಲಾಗಿದೆ.
First published: July 13, 2019, 11:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories