ಹೋಂಡಾ ಕಾರು ಸಂಸ್ಥೆ ನೂತನ ವರ್ಷದ ಮೊದಲ ಆಫರ್ ಅನ್ನು ತನ್ನ ಗ್ರಾಹಕರಿಗೆ ನೀಡಿದೆ. ಹೋಂಡಾ ಸಿವಿಕ್, ಅಮೇಜ್, ಸಿಟಿ ಕಾರುಗಳ ಮೇಲೆ 2.5 ಲಕ್ಷದಷ್ಟು ಡಿಸ್ಕೌಂಟ್ ನೀಡಿದೆ.
ಹೋಂಡಾ ನೊಯ್ಡಾದಲ್ಲಿನ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಮಾತ್ರವಲ್ಲದೆ, ಸಿವಿಕ್ ಮತ್ತು ಸಿಆರ್-ವಿ ಕಾರಿನ ಉತ್ಪಾದನೆಯನ್ನು ನಿಲ್ಲಿಸಿದೆ. ಆದರೀಗ ಕಂಪನಿ ಗ್ರಾಹಕರಿಗಾಗಿ ಡಿಸ್ಕೌಂಟ್ ನೀಡುವುದನ್ನು ಮಾತ್ರ ನಿಲ್ಲಿಸಲಿಲ್ಲ.
ಹೊಂಡಾ ಸಿವಿಕ್ ಡಿಸೇಲ್ ವೆರಿಯಂಟ್ ಕಾರಿನ ಮೇಲೆ 2.5 ಲಕ್ಷ ರೂ ರಿಯಾಯಿತಿ ನೀಡಿದೆ. ಅಂತೆಯೇ ಪೆಟ್ರೋಲ್ ಕಾರಿನ ಮೇಲೆ 1 ಲಕ್ಷದಷ್ಟು ಆಫರ್ ನೀಡಿದೆ.
2020ರಲ್ಲಿ ಹೋಂಡಾ ಅಮೇಜ್ ಕಾರಿನ ಮೇಲೆ 15 ಸಾವಿರ ಡಿಸ್ಕೌಂಟ್ ನೀಡಿತ್ತು. ಜೊತೆಗೆ 10 ಸಾವಿರ ಎಕ್ಸ್ಚೇಂಜ್ ಆಫರ್ ಒದಗಿಸಿತ್ತು. ಅಮೇಜ್ ಕಾರು ಪೆಟ್ರೋಲ್ ಮತ್ತು ಡಿಸೇಲ್ ಎರಡು ವೇರಿಯಂಟ್ನಲ್ಲಿ ಗ್ರಾಹಕರ ಖರೀದಿಗೆ ಸಿಗಲಿದ್ದು, 4 ರಿಂದ 5 ವರ್ಷಗಳ ಉಚಿತ ಎಕ್ಸ್ಟೆಂಟ್ ವ್ಯಾರೆಂಟಿ ನೀಡಿತ್ತು.
ಇದೀಗ 2021 ಮಾಡೆಲ್ ಕಾರಿನ ಕಾರಿನ ಮೇಲೂ ಅದೇ ಬೆನಿಫಿಟ್ ಒದಗಿಸುತ್ತಿದೆ. ಅಮೇಜ್ MY20 ಸ್ಪೆಷಲ್ ಮತ್ತು ಎಕ್ಸ್ಕ್ಲೂಸಿವ್ ಎಡಿಷನ್ ಆಗಿದ್ದು, ಗ್ರಾಹಕರಿಗಾಗಿ 7 ಸಾವಿರ ಕ್ಯಾಶ್ ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ ಹಳೆಯ ಕಾರಿನ ಜೊತೆಗೆ ಎಕ್ಸ್ಚೇಂಜ್ ಮಾಡುವುದಾದರೆ 15 ಸಾವಿರ ಸಿಗಲಿದೆ.
ಪೆಟ್ರೋಲ್ ವೇರಿಯಂಟ್ ಹೊಂಡಾ ಜಾಝ್ ಕಾರುಗಳ ಮೇಲೆ 15 ಸಾವಿರ ಕ್ಯಾಶ್ ಡಿಸ್ಕೌಂಟ್ ಜೊತೆಗೆ ಎಕ್ಸ್ಚೇಂಜ್ ಬೋನಸ್ ನೀಡುತ್ತಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ