Jaguar F Type R-Dynamic: ಸಖತ್ ಟಫ್ ಆಗಿದೆ ಹೊಸಾ ಜಾಗ್ವಾರ್, 46 ಲಕ್ಷದಿಂದ ಕೋಟಿಗೂ ಮೀರಿದ ಬೆಲೆ ಇರೋ ಐಶಾರಾಮಿ ಕಾರ್​ನಲ್ಲಿ ಏನೇನಿದೆ?

Jaguar F Type R-Dynamic: ಭಾರತದಲ್ಲಿ ಜಾಗ್ವಾರ್ ಶ್ರೇಣಿಯು XE (ಆರಂಭಿಕ ಬೆಲೆ₹ 46.64ಲಕ್ಷ), XF (ಆರಂಭಿಕ ಬೆಲೆ ₹ 55.67ಲಕ್ಷ), F-PACE (ಆರಂಭಿಕ ಬೆಲೆ ₹ 69.99ಲಕ್ಷ), I-PACE (ಆರಂಭಿಕ ಬೆಲೆ ₹ 105.9ಲಕ್ಷ) ಹಾಗು F-TYPE (ಆರಂಭಿಕ ಬೆಲೆ ₹ 97.97ಲಕ್ಷ). ಸೂಚಿಸಲಾಗಿರುವ ಎಲ್ಲಾ ಬೆಲೆಗಳೂ ಭಾರತದಲ್ಲಿ Ex Showroom ಬೆಲೆಗಳಾಗಿರುತ್ತವೆ.

ಹೊಸಾ ಜಾಗ್ವಾರ್

ಹೊಸಾ ಜಾಗ್ವಾರ್

  • Share this:
ಜಾಗ್ವಾರ್ ಲ್ಯಾಂಡ್‍ರೋವರ್ ಇಂಡಿಯಾ, ಭಾರತದಲ್ಲಿ ಹೊಸ ಜಾಗ್ವಾರ್ ಎಫ್-ಟೈಪ್ ಆರ್-ಡೈನಮಿಕ್ (Jaguar F Type R-Dynamic) ಬ್ಲ್ಯಾಕ್‍ಗಾಗಿ ಬುಕಿಂಗ್‍ ತೆರೆದಿದೆ. ಜಾಗ್ವಾರ್ ಆರ್-ಡೈನಮಿಕ್ ಬ್ಲ್ಯಾಕ್ 331 ಕಿ.ವ್ಯಾ.ಶಕ್ತಿ ಮತ್ತು 580 Nm ಟಾರ್ಕ್ ಒದಗಿಸುವ 5.0 ಲೀ 331 ಕಿ.ವ್ಯಾ. ಸೂಪರ್ ಚಾರ್ಜ್ ಆದ V8 ಇಂಜಿನ್ ಹೊಂದಿದೆ. ಎಫ್-ಟೈಪ್ ಆರ್-ಡೈನಮಿಕ್ ಬ್ಲ್ಯಾಕ್‍ನ ಪರಿಚಯದೊಂದಿಗೆ ನಿಖರವಾಗಿ ವಿಭಾಗಿಸಲ್ಪಟ್ಟ ಮತ್ತು ಅದ್ವಿತೀಯ ಸೌಂದರ್ಯ ಹೊಂದಿರುವ ಎಫ್-ಟೈಪ್ ಈಗ ಹಿಂದೆಂದಿಗಿಂತಲೂ ಹೆಚ್ಚು ವಿಶಿಷ್ಟವಾಗಿದ್ದು ನಿಜವಾದ ಸ್ಪೋರ್ಟ್ಸ್‍ಕಾರ್ ಪ್ರಿಯರು ತೊಡಗಿಕೊಳ್ಳುವುದಕ್ಕೆ ಮತ್ತು ಆನಂದಿಸುವುದಕ್ಕೆ ಹೆಚ್ಚಿನ ಕಾರಣಗಳನ್ನು ನೀಡುತ್ತದೆ ಎನ್ನಲಾಗಿದೆ. ಹೊಸ ಆರ್-ಡೈನಮಿಕ್ ಬ್ಲ್ಯಾಕ್‍ದಲ್ಲಿ, ಎಫ್-ಟೈಪ್‍ನ ಪರಿಶುದ್ಧವಾದ, ಕೆತ್ತನೆಯ ಸ್ವರೂಪವು, ಬ್ಲ್ಯಾಕ್ ಪ್ಯಾಕ್ ಮತ್ತು 50.8 ಸೆಂ.ಮೀ(20) ಹೊಳೆಯುವ ಬ್ಲ್ಯಾಕ್ ಫಿನಿಶ್‍ನೊಂದಿಗೆ ಐದು ಸ್ಪ್ಲಿಟ್-ಸ್ಪೋಕ್ ಚಕ್ರಗಳಿಂದ ವರ್ಧಿತಗೊಂಡಿದೆ.

ಇವುಗಳಿಗೆ ನಿಖರವಾಗಿ ಪೂರಕವಾಗಿರುವಂತೆ ಮೂರು ಮೆಟಾಲಿಕ್ ಪೈಂಟ್‍ಗಳ ಆಯ್ಕೆಯಿದೆ: ಸಂಟೋರಿನಿ ಬ್ಲ್ಯಾಕ್, ಈಗರ್ ಗ್ರೇ ಅಥವಾ ಫ್ರೆನ್ಜೀಡ್‍ರೆಡ್ ಚಾಲಕ ಕೇಂದ್ರಿತ‘1+1’ಕ್ಯಾಬಿನ್, ಪ್ರಯಾಣಿಕರನ್ನು ಸಮೃದ್ಧವಾದ ಐಶಾರಾಮೀ ವಸ್ತುಗಳಿಂದ ಸುತ್ತುವರಿಯುತ್ತದೆ. ತೆಳುವಾದ ಕಾರ್ಯಕ್ಷಮತೆಯುಳ್ಳ ಆಸನಗಳು 12-ಮಾರ್ಗ ಸರಿಪಡಿಸುವಿಕೆಗಳನ್ನು ಹೊಂದಿದ್ದು, ಲೈಟ್ ಓಯೆಸ್ಟರ್ ಕಾಂಟ್ರಾಸ್ಟ್ ಹೊಲಿಗೆ ಇರುವ ಎಬೋನಿ ಅಥವಾ ಇನ್ನೂ ಹೆಚ್ಚಿನ ಸ್ಪೋರ್ಟ್ಸ್ ಥೀಮ್‍ಗಾಗಿ ಅಗ್ನಿಕೆಂಪು ಹೊಲಿಗೆಯಿರುವ ಮಾರ್ಸ್‍ನ ಆಯ್ಕೆಯಿರುವ ವಿಂಡ್ಸರ್ ಲೆದರ್ ನಲ್ಲಿ ಟ್ರಿಮ್ ಗೊಳಿಸಲ್ಪಟ್ಟಿವೆ. ಡೋರ್ ಟ್ರಿಮ್‍ನಲ್ಲಿ ಪುನರಾವರ್ತಿಸಲಾಗಿರುವ ಸುಂದರ ವಿನ್ಯಾಸದ ಮಾನೋಗ್ರಾಮ್ ಹೊಲಿಗೆಯಂತಹ ವಿವರಗಳಿರುವ ಸೂಕ್ಷ್ಮ ಪರಿಷ್ಕರಣೆಗಳು ಎಫ್-ಟೈಪ್‍ ಆರ್-ಡೈನಮಿಕ್ ಬ್ಲ್ಯಾಕ್‍ಅನ್ನು ವಿಶೇಷಗೊಳಿಸಿವೆ.

ಇದನ್ನೂ ಓದಿ: Hyundai i20 N Line: ಹೊಸಾ ಕಾರ್ ತರುತ್ತಿದೆ ಹುಂಡೈ, ಈ ವರ್ಷವೇ ಮಾರುಕಟ್ಟೆಗೆ ರಿಲೀಸ್, ಫೀಚರ್ಸ್ ಏನಿದೆ ನೋಡಿ!

ಭಾರತದಲ್ಲಿ ಜಾಗ್ವಾರ್ ಶ್ರೇಣಿಯು XE (ಆರಂಭಿಕ ಬೆಲೆ₹ 46.64ಲಕ್ಷ), XF (ಆರಂಭಿಕ ಬೆಲೆ ₹ 55.67ಲಕ್ಷ), F-PACE (ಆರಂಭಿಕ ಬೆಲೆ ₹ 69.99ಲಕ್ಷ), I-PACE (ಆರಂಭಿಕ ಬೆಲೆ ₹ 105.9ಲಕ್ಷ) ಹಾಗು F-TYPE (ಆರಂಭಿಕ ಬೆಲೆ ₹ 97.97ಲಕ್ಷ). ಸೂಚಿಸಲಾಗಿರುವ ಎಲ್ಲಾ ಬೆಲೆಗಳೂ ಭಾರತದಲ್ಲಿ Ex Showroom ಬೆಲೆಗಳಾಗಿರುತ್ತವೆ.

ಜಾಗ್ವಾರ್ ಲ್ಯಾಂಡ್‍ರೋವರ್ ವಾಹನಗಳು ಭಾರತದ 24 ನಗರಳಾದ ಅಹಮದಾಬಾದ್, ಔರಂಗಾಬಾದ್, ಬೆಂಗಳೂರು(3), ಭುವನೇಶ್ವರ, ಚಂಡೀಗಢ, ಚೆನ್ನೈ(2), ಕೊಯಮತ್ತೂರು, ದೆಹಲಿ, ಗುರುಗ್ರಾಮ, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಕೊಚ್ಚಿ, ಕರ್ನಾಲ್, ಲಕ್ನೌ, ಲೂಧಿಯಾನಾ, ಮಂಗಳೂರು, ಮುಂಬೈ(2), ನೋಯ್ಡಾ, ಪುಣೆ, ರಾಯ್ಪುರ, ಸೂರತ್ ಮತ್ತು ವಿಜಯವಾಡ ಗಳಲ್ಲಿರುವ 28 ಅಧಿಕೃತ ಮಳಿಗೆಗಳ ಮೂಲಕ ಲಭ್ಯವಿವೆ.

ವಿಶೇಷವಾದ ಎಫ್-ಟೈಪ್ ಆರ್-ಡೈನಮಿಕ್ ಬ್ಲ್ಯಾಕ್ ಹೆಚ್ಚುವರಿ ಸಾಧನಗಳನ್ನು ಸಾಮಾನ್ಯ ಅಳವಡಿಕೆಗಳನ್ನಾಗಿ ಒಳಗೊಂಡು, ಜಾಗ್ವಾರ್ ಸ್ಪೋರ್ಟ್ಸ್‍ಕಾರಿನ ನಿಖರವಾದ, ಕಾಲಾತೀತ ವಿನ್ಯಾಸವನ್ನು ವರ್ಧಿಸುತ್ತದೆ. ಇಷ್ಟೆಲ್ಲಾ ದುಬಾರಿ ಇದ್ದರೂ ಜಾಗ್ವಾರ್ ಇಷ್ಟವಾಗೋಕೆ ನಾನಾ ಕಾರಣಗಳಿವೆ:

ಇದನ್ನೂ ಓದಿ: One Plus Nord2 Review: ಮಾರುಕಟ್ಟೆಯಲ್ಲಿರುವ ಎಲ್ಲಾ ಫೋನ್​ಗಳಿಗಿಂತ ಇದು ಹೇಗೆ ಭಿನ್ನ?

1. ಇನ್ನೂ ಹೆಚ್ಚು ಅಟ್ರಾಕ್ಟಿವ್ ಪ್ಯಾಕ್, 50.8 ಸೆಂ.ಮೀ(20) ಹೊಳೆಯುವ ಕಪ್ಪು ಗಾಲಿ, ಮತ್ತು ಸಂಟೋರಿನಿ ಬ್ಲ್ಯಾಕ್, ಈಗರ್ ಗ್ರೇ ಅಥವಾ ಫ್ರೆನ್ಜೀಡ್‍ರೆಡ್ ಮೆಟಾಲಿಕ್ ಪೈಂಟ್‍ನ ಆಯ್ಕೆ, ಎಫ್-ಟೈಪ್‍ನ ಅಂತರ್ಗತವಾದ ಸೌಂದರ್ಯವನ್ನು ಎತ್ತಿತೋರಿಸುತ್ತದೆ.

2. ಐಶಾರಾಮೀ, ಚಾಲಕ-ಕೇಂದ್ರಿತ ಒಳಾಂಗಣ: ಲೈಟ್ ಒಯೆಸ್ಟರ್ ಸ್ಟಿಚ್‍ನೊಂದಿಗೆ ಎಬೋನಿಯಲ್ಲಿ, ಫ್ಲೇಮ್‍ರೆಡ್ ಸ್ಟಿಚ್‍ನೊಂದಿಗೆ ಮಾರ್ಸ್ ಮತ್ತು ಎಬೋನಿ ಸ್ಯೂಡೋಕ್ಲಾತ್ ಹೆಡ್‍ಲೈನರ್ ಇರುವ 12-ಮಾರ್ಗ ವಿಂಡ್ಸರ್ ಲೆದರ್ ಕಾರ್ಯಕ್ಷಮತೆಯ ಆಸನಗಳು ವಿಶಿಷ್ಟವಾದ ‘1+1’ಕ್ಯಾಬಿನ್‍ಅನ್ನು ಸಮೃದ್ಧಗೊಳಿಸಿವೆ.

3.ಸುಂದರ ಡೀಟೆಲಿಂಗ್: ಆಸನ ಹಾಗು ಡೋರ್ ಟ್ರಿಮ್ ಹೊಲಿಗೆಯಲ್ಲಿ ಬಳಸಲಾಗಿರುವ ಪರಂಪರೆ ಪ್ರೇರಿತ ಮಾನೋಗ್ರಾಮ್ ವಿನ್ಯಾಸ ಮತ್ತು ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಗಾಗಿ ಸ್ಯೂಡೋಕ್ಲಾತ್ ಹೊದಿಕೆಯ ಎಂಬಾಸಿಂಗ್

4. ಶಕ್ತಿಶಾಲಿ, ಪರಿಷ್ಕೃತಇಂಜಿನ್: ರೇರ್ ವ್ಹೀಲ್‍ಡ್ರೈವ್ ಹಾಗು ಎಂಟು-ಸ್ಪೀಡ್ ‘ಕ್ವಿಕ್‍ಶಿಫ್ಟ್’ ಪ್ರಸರಣವಿರುವ 5.0 ಲೀ 331ಕಿ.ವ್ಯಾ. ಸೂಪರ್ ಚಾರ್ಜ್ ಆದ V8, ತೊಡಗಿಕೊಳ್ಳುವಂತಹ ಕಾರ್ಯಕ್ಷಮತೆ ಮತ್ತು ಅದ್ವಿತೀಯ ಚಾಲಕ ಪ್ರತಿಫಲ ಒದಗಿಸುತ್ತದೆ.
Published by:Soumya KN
First published: