Jack Dorsey Hacked: ಟ್ವಿಟರ್​​​ ಸಿಇಓ ಜ್ಯಾಕ್​ ಡಾರ್ಸಿ ಖಾತೆಯನ್ನೇ ಹ್ಯಾಕ್​ ಮಾಡಿದ ಖದೀಮರು!

ಹ್ಯಾಕರ್​ಗಳು  ಜಾಕ್​ ಖಾತೆಯನ್ನು 10 ನಿಮಿಷಗಳ ಕಾಲ ಹ್ಯಾಕ್​ ಮಾಡಿದ್ದು, ಅಸಂಬದ್ಧ ಟ್ವೀಟ್​ಗಳನ್ನು ಮಾಡುವ ಮೂಲಕ ಜಾಕ್​ ಹೆಸರನ್ನು ಹಾಳು ಮಾಡಲು ಮುಂದಾಗಿದ್ದಾರೆ.

news18
Updated:August 31, 2019, 2:51 PM IST
Jack Dorsey Hacked: ಟ್ವಿಟರ್​​​ ಸಿಇಓ ಜ್ಯಾಕ್​ ಡಾರ್ಸಿ ಖಾತೆಯನ್ನೇ ಹ್ಯಾಕ್​ ಮಾಡಿದ ಖದೀಮರು!
ಟ್ವಿಟರ್​​​ ಸಿಇಓ ಜ್ಯಾಕ್​ ಡಾರ್ಸಿ
  • News18
  • Last Updated: August 31, 2019, 2:51 PM IST
  • Share this:
ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಕರ್​ಗಳ ಉಪಟಲ ಜೋರಾಗಿದ್ದು, ಇದೀಗ ಟ್ವಿಟರ್​​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯಾಕ್​ ಡಾರ್ಸಿ ಅವರ ಅಕೌಂಟ್​ ಅನ್ನು ಹ್ಯಾಕ್​ ಮಾಡಿದ್ದಾರೆ.

ಜ್ಯಾಕ್ ಅವರ​ ಖಾತೆಯನ್ನು ರಾತ್ರಿ 8 ಗಂಟೆಯ ಸುಮಾರಿಗೆ ಹ್ಯಾಕ್​​ ಮಾಡಲಾಗಿದ್ದು, ಬಾಂಬ್​ ಬೆದರಿಕೆಯ ಟ್ವೀಟ್​ಗಳನ್ನು ಜ್ಯಾಕ್​ ಅವರ ಖಾತೆಯಿಂದ ಟ್ವೀಟ್​​ ಮಾಡಲಾಗಿದೆ. ಆ ಬಳಿಕ ಅವುಗಳನ್ನು ಡಿಲೀಟ್​ ಮಾಡಲಾಗಿದೆ. ಟ್ವೀಟ್​ ಮಾಡಲಾಗಿರುವ ಕೆಲ ಸಂದೆಶದಲ್ಲಿ ‘ಚಕ್ಲಿಂಗ್​ ಸ್ಕ್ವಾಡ್​‘ ಎಂದು ಬರೆಯಲಾಗಿದ್ದು, ಇವು ಹ್ಯಾಕರ್​ ಗುಂಪಿನ ಗುರುತಿನ ಸಂಕೇತವಾಗಿದೆ.

ಹ್ಯಾಕರ್​ಗಳು  ಜಾಕ್​ ಖಾತೆಯನ್ನು 10 ನಿಮಿಷಗಳ ಕಾಲ ಹ್ಯಾಕ್​ ಮಾಡಿದ್ದು, ಅಸಂಬದ್ಧ ಟ್ವೀಟ್​ಗಳನ್ನು ಮಾಡುವ ಮೂಲಕ ಜಾಕ್​ ಹೆಸರನ್ನು ಹಾಳು ಮಾಡಲು ಮುಂದಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಟ್ವಿಟ್ಟರ್ ಸಿಬ್ಭಂದಿಗಳು ಕೂಡಲೇ ​ಜಾಕ್​ ಖಾತೆಯನ್ನು  ಹ್ಯಾಕರ್​ಗಳ ಕೈಯಿಂದ ಮರಳಿ ಪಡೆಯಲಾಗಿದೆ.

ಇನ್ನು ಟ್ವಿಟ್ಟರ್​ನಲ್ಲಿ ನಮೂದಿಸಿರುವ ಫೋನ್​ ನಂಬರ್​ನಿಂದಾಗಿ ಜಾಕ್​ ಖಾತೆಯನ್ನು ಹ್ಯಾಕ್​ ಮಾಡಲಾಗಿದೆ. ಆ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಇದೀಗ ಜಾಕ್​ ಖಾತೆ ಸುರಕ್ಷಿತವಾಗಿದೆ.

ಇದನ್ನೂ ಓದಿ:ಉದ್ಯಮಿ ಪ್ರವೀಣ್ ಕೊಲೆ ಯತ್ನ ಪ್ರಕರಣ: 6 ಆರೋಪಿಗಳ ಬಂಧನ; ಪ್ರಮುಖ ಆರೋಪಿ ನಾಪತ್ತೆ

ಇನ್ನು ಈ ಘಟನೆ ಕುರಿತಂತೆ, ಟ್ವಿಟರ್​​​​  ಮುಖ್ಯ ಕಾರ್ಯನಿರ್ವಹಣಾಧಿಕಾರಿವರ ಖಾತೆಗೆ ಸರಿಯಾದ ಸುರಕ್ಷತೆಯಿಲ್ಲ. ದೇಶದಾದ್ಯಂತ ಅನೇಕ ಜನರು ಟ್ವಿಟ್ಟರ್​ ಖಾತೆಯನ್ನು ಬಳಸುತ್ತಿದ್ದಾರೆ. ಅವರ ಖಾತೆಗೆ ಹೇಗೆ ಸುರಕ್ಷತೆ ನೀಡಲು ಸಾಧ್ಯ ಎಂದು  ಸಾರ್ವಜನಿಕರು ವ್ಯಂಗ್ಯ ನುಡಿದಿದ್ದಾರೆ.
First published:August 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading