Smart shoes: ಇದು ಅಂತಿಂಥಾ ಶೂ ಅಲ್ಲ! ಸೆಲ್ಫಿ, ಟ್ರ್ಯಾಕಿಂಗ್​, ಫೋನ್​ ಚಾರ್ಚ್​ ಎಲ್ಲವೂ ಮಾಡಬಹುದು!

ಶೂಸ್‌ಎಕ್ಸ್

ಶೂಸ್‌ಎಕ್ಸ್

ShoesX: ಇಕ್ಸಿಗೋ ಹೊಸ ಶೂಸ್‌ಎಕ್ಸ್‌ ಗಳನ್ನು ಬಿಡುಗಡೆ ಮಾಡಿದೆ. ಇದು ಸಾಮಾನ್ಯ ಶೂಗಳಲ್ಲ, ಆದರೆ 'ಸ್ಮಾರ್ಟ್ ಶೂಸ್' ವಿಡಿಯೋ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೋಡಲು ಆಕರ್ಷಕವಾಗಿದೆ. ಇದೇ ಮೊದಲು ಅಂತಹ 'ಸ್ಮಾರ್ಟ್ ಶೂ'ಗಳನ್ನು ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ

ಮುಂದೆ ಓದಿ ...
  • Share this:

    ಇಂದಿನ ಕಾಲದಲ್ಲಿ ಜನರು ಸ್ಮಾರ್ಟ್ ಸಾಧನಗಳಿಗೆ (Smart Device) ಹೆಚ್ಚು ಒತ್ತು ನೀಡುತ್ತಿದ್ದಾರೆ. ಇಂಟರ್ನೆಟ್ (Internet) ಮತ್ತು ತಂತ್ರಜ್ಞಾನ (Technology) ಅಭಿವೃದ್ಧಿಗೊಂಡನಂತರ ಸ್ಮಾರ್ಟ್​ ಸಾಧನಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಮತ್ತೊಂದೆಡೆ ಸ್ಮಾರ್ಟ್ ಸಾಧನಗಳು ಜೀವನವನ್ನು ತುಂಬಾ ಸುಲಭಗೊಳಿಸುತ್ತದೆ. ಅಂದಹಾಗೆಯೇ ಸ್ಮಾರ್ಟ್​ಫೋನ್ (Smartphone)​, ಸ್ಮಾರ್ಟ್ ಟಿವಿ (Smart Tv), ಸ್ಮಾರ್ಟ್ ಸ್ಪೀಕರ್ (Smart Speaker) ಮತ್ತು ಸ್ಮಾರ್ಟ್ ಎಸಿ (Smart Ac) ಬಳಸಿರುಬಹುದು. ಅದರ ಉಪಯೋಗ ಪಡೆದಿರಬಹುದು. ಆದರೆ ಸ್ಮಾರ್ಟ್​ ಶೂ (Smart Shoes) ಬಗ್ಗೆ ಕೇಳಿದ್ದೀರಾ? ಈ ಸ್ಮಾರ್ಟ್ ಶೂಗಳು ಸ್ಥಳ ಟ್ರ್ಯಾಕರ್, ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾ (Camera) ಮತ್ತು ಚಾರ್ಜಿಂಗ್ ಪೋರ್ಟ್‌ನಂತಹ ಅನೇಕ ಅದ್ಭುತ ವೈಶಿಷ್ಟ್ಯಗಳೊಂದಿಗೆ ಹೊಂದಿದೆ. ಈ ವಿಶಿಷ್ಟ ಶೂ ಬಗ್ಗೆ ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಿ.


    ಭಾರತದಲ್ಲಿ ಬಿಡುಗಡೆಯಾಗಿದೆ 'ಸ್ಮಾರ್ಟ್ ಶೂಸ್'


    ಗ್ರೂಪ್ ಸಿಇಒ ಮತ್ತು ಪ್ರಸಿದ್ಧ ಆನ್‌ಲೈನ್ ಟ್ರಾವೆಲ್ ಪೋರ್ಟಲ್ ಇಕ್ಸಿಗೋ ಸಂಸ್ಥಾಪಕ ಅಲೋಕ್ ಬಾಜ್‌ಪೇಯ್ ಅವರು ಕೆಲವು ಸಮಯದ ಹಿಂದೆ ಟ್ವಿಟರ್ ಮೂಲಕ ವಿಶಿಷ್ಟವಾದ ಸ್ಮಾರ್ಟ್​ ಶೂ ಬಗ್ಗೆ ಹೇಳಿದ್ದಾರೆ. ಇಕ್ಸಿಗೋ ಹೊಸ ಶೂಸ್‌ಎಕ್ಸ್‌ ಗಳನ್ನು ಬಿಡುಗಡೆ ಮಾಡಿದೆ, ಇದು ಸಾಮಾನ್ಯ ಶೂಗಳಲ್ಲ, ಆದರೆ 'ಸ್ಮಾರ್ಟ್ ಶೂಸ್' ವಿಡಿಯೋ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೋಡಲು ಆಕರ್ಷಕವಾಗಿದೆ. ಇದೇ ಮೊದಲು ಅಂತಹ 'ಸ್ಮಾರ್ಟ್ ಶೂ'ಗಳನ್ನು ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.


    ಸ್ಮಾರ್ಟ್‌ಫೋನ್ ಚಾರ್ಜ್ ಮಾಡಿ, ಸೆಲ್ಫಿ ತೆಗೆದುಕೊಳ್ಳಿ


    ಈ ವಿಶಿಷ್ಟ ಶೂಸ್‌ಎಕ್ಸ್‌ನಲ್ಲಿ, ಜಲನಿರೋಧಕ USB ಚಾರ್ಜಿಂಗ್ ಪೋರ್ಟ್ ಅನ್ನು ನೀಡಲಾಗುತ್ತಿದೆ, ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಇದರಲ್ಲಿ, ಕೆಳಭಾಗದಲ್ಲಿ, ಬ್ಯಾಟರಿಯನ್ನು ನೀಡಲಾಗಿದೆ. ಇಷ್ಟೇ ಅಲ್ಲ, ಈ ಸ್ಮಾರ್ಟ್ ಶೂಗಳ ಜೊತೆಗೆ ನೀವು ಸೆಲ್ಫಿ ತೆಗೆದುಕೊಳ್ಳಬಹುದು. ವಾಸ್ತವವಾಗಿ, ShoesX 12MP ಮುಂಭಾಗದ ಕ್ಯಾಮೆರಾದೊಂದಿಗೆ ಬರುತ್ತದೆ.


    ಇದನ್ನೂ ಓದಿ: TRAI: ಪ್ಲಾನ್ ವ್ಯಾಲಿಡಿಟಿಯಲ್ಲಿ ಬದಲಾವಣೆ ತಂದ ಟ್ರಾಯ್​! ಇನ್ಮುಂದೆ 28 ಅಲ್ಲ, 30 ದಿನಗಳ ಕಾಲ ಬರುತ್ತದೆ


    ಕಳ್ಳತನದಿಂದ ರಕ್ಷಿಸಬಹುದು


    ಮುಂಭಾಗದ ಕ್ಯಾಮರಾ ಜೊತೆಗೆ, Ixigo ನಿಂದ ShoesX ಸಹ ಅಲ್ಟ್ರಾ ವೈಡ್ ಬ್ಯಾಕ್ ಕ್ಯಾಮೆರಾದೊಂದಿಗೆ ಬರುತ್ತದೆ ಇದರಿಂದ ನಿಮ್ಮ ಹಿಂದೆ ಯಾರಿದ್ದಾರೆ ಎಂಬುದನ್ನು ನೀವು ನೋಡಬಹುದು ಮತ್ತು ನಡೆಯುವಾಗ ಹಿಂದಿನಿಂದ ಬರುವ ಕಳ್ಳನ ಬಗ್ಗೆ ಎಚ್ಚರದಿಂರಬಹುದು.


    ಅಷ್ಟೇ ಅಲ್ಲ, ಈ ಶೂಗಳಲ್ಲಿ ಆ್ಯಂಟಿ ಥೆಫ್ಟ್ ಸೆನ್ಸರ್ ಗಳನ್ನೂ ಅಳವಡಿಸಲಾಗಿದೆ. ಇದು ನಿಮ್ಮ ಬೂಟುಗಳನ್ನು ಕಳ್ಳತನದಿಂದ ರಕ್ಷಿಸುತ್ತದೆ ಮತ್ತು ಬೂಟುಗಳನ್ನು ಧರಿಸುವ ಅಥವಾ ಎತ್ತಿಕೊಳ್ಳುವ ವ್ಯಕ್ತಿಯ ಬಗ್ಗೆ ಹೇಳುತ್ತದೆ. ಈ ಶೂಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸುದ್ದಿಯನ್ನು ಪಡೆಯುತ್ತೀರಿ ಮತ್ತು ಸ್ಮಾರ್ಟ್ ಶೂಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.


    &nbsp


    ;


    ಇದನ್ನೂ ಓದಿ: WhatsApp: ಆ್ಯಂಡ್ರಾಯ್ಡ್ ಬಳಕೆದಾರರಿಗೆ ಹೊಸ ಫೀಚರ್ ಪರಿಚಯಿಸಿದ ವಾಟ್ಸ್‌ಆ್ಯಪ್‌


    ShoesX ನ ಇತರ ವೈಶಿಷ್ಟ್ಯಗಳು


    ಶೂಸ್‌ಎಕ್ಸ್ ವಿಶೇಷವಾದ 'ಆಟೋ-ವಾರ್ಮಿಂಗ್ ಸೋಲ್'ನೊಂದಿಗೆ ಬರುತ್ತದೆ ಅದು ನಿಮ್ಮ ಪಾದಗಳನ್ನು -20 ಡಿಗ್ರಿಗಳಲ್ಲಿಯೂ ಬೆಚ್ಚಗಾಗಿಸುತ್ತದೆ. ಇದು ಕ್ಯೂಆರ್ ಕೋಡ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ, ಇದನ್ನು ಕಂಪನಿಯು ಶೂ-ಆರ್ ಕೋಡ್ ಸ್ಕ್ಯಾನರ್ ಎಂದು ಕರೆಯುತ್ತದೆ. ಇದರೊಂದಿಗೆ ನೀವು ಯಾವುದೇ QR ಕೋಡ್ ಅನ್ನು ಸುಲಭವಾಗಿ ಸ್ಕ್ಯಾನ್ ಮಾಡಬಹುದು ಮತ್ತು ಪಾವತಿಯನ್ನು ಪೂರ್ಣಗೊಳಿಸಬಹುದು. ಇದಕ್ಕಾಗಿ ಸ್ಥಳೀಯ ಟ್ರ್ಯಾಕಿಂಗ್ ಅಪ್ಲಿಕೇಶನ್ ಕೂಡ ಇದೆ, ಅದರ ಮೂಲಕ ಕ್ಯಾಲೋರಿಗಳು ಇತ್ಯಾದಿಗಳನ್ನು ನೀವು ಟ್ರ್ಯಾಕ್ ಮಾಡಬಹುದು.


    ಈ ಶೂಸ್‌ಎಕ್ಸ್ ಅನ್ನು ಇಕ್ಸಿಗೋ ಬಳಕೆದಾರರು ಮಾತ್ರ ಖರೀದಿಸಬಹುದು ಮತ್ತು ಅವುಗಳು ಸ್ಟಾಕ್‌ನಲ್ಲಿ ಲಭ್ಯವಿರುವವರೆಗೆ ಮಾತ್ರ ಖರೀದಿಸಬಹುದು. ನೀವು 'shoesx.in' ಗೆ ಭೇಟಿ ನೀಡುವ ಮೂಲಕ ShoesX ಅನ್ನು ಬುಕ್ ಮಾಡಬಹುದು. ಪ್ರಸ್ತುತ, ಅವುಗಳ ಬೆಲೆಯ ಬಗ್ಗೆ ಯಾವುದೇ ಬಹಿರಂಗಪಡಿಸಲಾಗಿಲ್ಲ.

    Published by:Harshith AS
    First published: