• Home
  • »
  • News
  • »
  • tech
  • »
  • 5G Mobiles: 5G ಸೇವೆ ಆರಂಭದ ಬೆನ್ನಲ್ಲೇ ಸ್ಮಾರ್ಟ್‌ಪೋನ್‌ ಖರೀದಿಗೆ ಈ ವರ್ಷ ಸೂಕ್ತವಲ್ಲ ಎನ್ನುತ್ತಿರುವ ತಜ್ಞರು!

5G Mobiles: 5G ಸೇವೆ ಆರಂಭದ ಬೆನ್ನಲ್ಲೇ ಸ್ಮಾರ್ಟ್‌ಪೋನ್‌ ಖರೀದಿಗೆ ಈ ವರ್ಷ ಸೂಕ್ತವಲ್ಲ ಎನ್ನುತ್ತಿರುವ ತಜ್ಞರು!

ಮೊಬೈಲ್

ಮೊಬೈಲ್

ಹಾಗಿದ್ರೆ ನೀವು 50,000 ರೂಪಾಯಿಗಿಂತ ಹೆಚ್ಚಿನ ಬೆಲೆಯ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುತ್ತೀರಾ? ಈ ಪ್ರಶ್ನೆಗೆ ಗ್ರಾಹಕರು ಇಲ್ಲ ಎಂದು ಹೇಳುವುದು ಹೆಚ್ಚು ಸೂಕ್ತ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

  • Share this:

ಈಗ ಆನ್‌ಲೈನ್‌ ಶಾಪಿಂಗ್ (Online Application)‌ ಅಪ್ಲಿಕೇಶನ್‌ಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಹಬ್ಬದ ಕೊಡುಗೆಗಳು ಜೋರಾಗಿ ನಡೆಯುತ್ತಿವೆ. ಅದರಲ್ಲಿ ಮುಖ್ಯವಾಗಿ ಮೊಬೈಲ್‌ ಪೋನ್‌ಗಳು ಹೆಚ್ಚಾಗಿ ಮಾರಾಟವಾಗುತ್ತಿವೆ. ಆದರೆ ಈ ವರ್ಷ ಸ್ಮಾರ್ಟ್‌ಪೋನ್ (Smart Phone)‌ ಖರೀದಿ ಮಾಡುವುದು ಅಷ್ಟು ಸೂಕ್ತವಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅದ್ಯಾಕೆ ಎಂದು ತಿಳಿದುಕೊಳ್ಳೋಣ ಬನ್ನಿ. ಕಳೆದ ವರ್ಷ ಆಪಲ್‌ ಕಂಪನಿ (Company) ಬಿಡುಗಡೆ ಮಾಡಿದ ಉನ್ನತ ಶ್ರೇಣಿಯ ಐಪೋನ್‌ 13 ಎಲ್ಲರ ಗಮನ ಸೆಳೆದಿತ್ತು. ಈ ವರ್ಷವೂ ಹಲವು ಮೊಬೈಲ್ (Mobile)‌ ಪೋನ್‌ಗಳು ಬಿಡುಗಡೆಗೊಂಡಿವೆ.


ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022ರ 6ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಬಹು ನಿರೀಕ್ಷಿತವಾಗಿ ಬಹುದಿನಗಳಿಂದ ಎಲ್ಲರೂ ಕಾಯುತ್ತಿದ್ದ 5G ಸೇವೆಯನ್ನು ಬಿಡುಗಡೆ ಮಾಡಿದರು.


ಇದರ ಬೆನ್ನಲ್ಲೇ ಏರ್‌ಟೆಲ್‌ನಂತಹ ಟೆಲಿಕಾಂ ಆಪರೇಟರ್‌ಗಳು ಈಗಾಗಲೇ 5ಜಿ ಸೇವೆಯನ್ನು ಗ್ರಾಹಕರಿಗೆ ನೀಡಲು ತುದಿಗಾಲಲ್ಲಿ ನಿಂತಿದೆ. ಇದೆ ಸಮಯಕ್ಕೆ ಸರಿಯಾಗಿ ಆಪಲ್ ಕಂಪನಿ ಇತ್ತೀಚಿನ ಐಫೋನ್ 14 ಸ್ಮಾರ್ಟ್‌ಪೋನ್‌ ಮಾದರಿಗಳನ್ನು ಬಿಡುಗಡೆ ಮಾಡಿದೆ. ಅಂತೆಯೇ, ಸ್ಯಾಮ್‌ಸಂಗ್‌ನ ಫೋಲ್ಡಬಲ್ ಸ್ಮಾರ್ಟ್‌ಪೋನ್‌ ಮಾಡೆಲ್‌ಗಳು ಒಂದು ತಿಂಗಳ ಹಿಂದೆ ಬಿಡುಗಡೆಯಾಯಿತು. Xiaomi ತನ್ನ ಆರು ತಿಂಗಳ-ಹಳೆಯ ಪ್ರಮುಖ ಗ್ಯಾಜೆಟ್‌ಗಳಿಗೆ ಆಕರ್ಷಕ ಕೊಡುಗೆಗಳನ್ನು ಸಹ ನೀಡುತ್ತಿದೆ. ಇವೆಲ್ಲ ತುಂಬಾ ದುಬಾರಿ ಸ್ಮಾರ್ಟ್‌ಪೋನ್‌ಗಳಾಗಿವೆ.


ಹಾಗಿದ್ರೆ ನೀವು 50,000 ರೂಪಾಯಿಗಿಂತ ಹೆಚ್ಚಿನ ಬೆಲೆಯ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುತ್ತೀರಾ? ಈ ಪ್ರಶ್ನೆಗೆ ಗ್ರಾಹಕರು ಇಲ್ಲ ಎಂದು ಹೇಳುವುದು ಹೆಚ್ಚು ಸೂಕ್ತ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ತಜ್ಞರು ಹೇಳುವ ಪ್ರಕಾರ “ಉನ್ನತ ಮಟ್ಟದ ಗ್ಯಾಜೆಟ್‌ಗಳಾದ ಸ್ಮಾರ್ಟ್‌ಪೋನ್‌ಗಳಿಗೆ ಅಪ್‌ಗ್ರೆಡ್‌ ಆಗುವುದು ಅಷ್ಟು ಸಮಂಜಸವಲ್ಲ. ಏಕೆಂದರೆ ಕೋವಿಡ್‌ ನಂತರ ಖರೀದಿ ಮಾಡಿದ ಸ್ಮಾರ್ಟ್‌ಪೋನ್‌ಗಳು ಉತ್ತಮವಾಗಿ ನವೀಕರಣಗೊಂಡ ಪೋನ್‌ಗಳಾಗಿವೆ. ಆದ್ದರಿಂದ ತಂತ್ರಜ್ಞಾನದ ಪ್ರಗತಿಯು ಸಾಕಷ್ಟು ವೇಗದಲ್ಲಿ ಬದಲಾಗುತ್ತಲೇ ಇದೆ. ಈಗ ಸದ್ಯ ಬಿಡುಗಡೆಯಾಗಿರುವ ಸ್ಮಾರ್ಟ್‌ಪೋನ್‌ಗಳು ಎಷ್ಟು ಉತ್ತಮವಾಗಿದ್ದರೂ ಸಹ ಹೆಚ್ಚುತ್ತಿರುವ ನವೀಕರಣಗಳು ಸ್ಪಷ್ಟವಾದ ಪ್ರಯೋಜನಗಳನ್ನು ಹೊಂದಿಲ್ಲ” ಎಂದು ತಜ್ಞರು ಹೇಳುತ್ತಾರೆ.


ಐಪೋನ್‌ 14 ಪ್ರೋ ಮ್ಯಾಕ್ಸ್‌


ಸ್ಮಾರ್ಟ್‌ಫೋನ್‌ಗಳಲ್ಲಿ ಇತ್ತೀಚಿಗೆ ಬಿಡುಗಡೆಯಾದ ಐಪೋನ್‌ 14 ಪ್ರೋ ಮ್ಯಾಕ್ಸ್‌ನ ಉದಾಹರಣೆಯನ್ನೆ ಇಲ್ಲಿ ತೆಗೆದುಕೊಳ್ಳೋಣ. ಈ ಸ್ಮಾರ್ಟ್‌ಪೋನ್‌ ಐಫೋನ್ 12 ಮತ್ತು 13 ರ ಸ್ಮಾರ್ಟ್‌ಪೋನ್‌ಗಳ ವೈಶಿಷ್ಟವನ್ನೆ ಹೊಂದಿದೆ ಎಂದು ಹೇಳಬಹುದು. ಈ ಆಪಲ್ ಡೈನಾಮಿಕ್ ಐಶ್‌ಲ್ಯಾಂಡ್‌ ಎಂದು ಕರೆಯುವ ಪರದೆಯಲ್ಲಿ ಸ್ಮಾರ್ಟ್ ಕಟ್-ಅವೇ ಅನ್ನು ಹೊರತು ಪಡಿಸಿ ಮಿಕ್ಕೆಲ್ಲ ನವೀಕರಣಗಳು ಒಂದೇ ತರಹ ಇವೆ.


ಈ ಹೊಸ ಐಪೋನ್‌ 14 ಪ್ರೊ ಮ್ಯಾಕ್ಸ್‌ ಈಗ ಡೀಪ್ ಪರ್ಪಲ್ ಬಣ್ಣದಲ್ಲಿ ಲಭ್ಯವಿದ್ದು, ನೋಡಲು ಅತ್ಯಂತ ಆಕರ್ಷಕವಾಗಿದೆ. ಇದು 48-ಮೆಗಾಪಿಕ್ಸೆಲ್ ಕ್ಯಾಮೆರಾ ವೈಶಿಷ್ಟವನ್ನು ಹೊಂದಿದೆ. ಈ ಹೊಸ ಸಾಫ್ಟ್‌ವೇರ್ ತಂತ್ರವು ಕಡಿಮೆ ಬೆಳಕಿನಲ್ಲಿ ತೆಗೆದ ಫೋಟೋ ಮತ್ತು ವೀಡಿಯೊವನ್ನು ಉತ್ತಮಗೊಳಿಸುತ್ತದೆ. ಆದರೆ ಐಪೋನ್‌ 12 ಪ್ರೋ ಮತ್ತು ಐಪೋನ್‌ 13 ಪ್ರೋ ಕ್ಯಾಮೆರಾಗಳು ಇದಕ್ಕಿಂತ ಬಹಳ ಉತ್ತಮವಾಗಿವೆ ಎಂದು ಹೇಳಬಹುದು.


ಆದರೆ ಹೊಸ ಐಫೋನ್‌ನ ಬ್ಯಾಟರಿ ಬಾಳಿಕೆ ಹಿಂದಿನ ಐಪೋನ್‌ ಗಿಂತ ಕಡಿಮೆ ಬಾಳಿಕೆಯನ್ನು ಹೊಂದಿದೆ. ಒಂದು ಸಲ ಚಾರ್ಜ್‌ ಮಾಡಿದರೆ ಅದು ಕೇವಲ ಒಂದು ದಿನ ಮಾತ್ರ ಬರುತ್ತದೆ. ಐಫೋನ್‌ನ ಕಾರ್ಯಕ್ಷಮತೆಯು ಯಾವಾಗಲೂ ಉತ್ತಮವಾಗಿದೆ. ಆಪಲ್ ಕಂಪನಿಯು ಯಾವಾಗಲೂ ತನ್ನ ಗ್ರಾಹಕರನ್ನು ಸೆಳೆಯಲು ನೂತನ ಪ್ರಯೋಗಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಿರುತ್ತದೆ. ಆಪಲ್‌ನ ಹೊಸ ಸ್ಮಾರ್ಟ್‌ ಪೋನ್‌ ಅನ್ನು ಮೊದಲ ಬಾರಿಗೆ ಖರೀದಿಸುವವರಿಗೆ ಮತ್ತು ಯಾವಾಗಲೂ ಐಪೋನ್‌ಗಳನ್ನು ಬಳಸುವ ಜನರಿಗೆ ಈ ಹೊಸ ಸ್ಮಾರ್ಟ್‌ಪೋನ್‌ಗಳು ಅಪ್‌ಗ್ರೇಡ್‌ ಆಗಿವೆ ಎಂದು ಹೇಳಬಹುದು.


ಇತರ ನೂತನ ಸ್ಮಾರ್ಟ್‌ಪೋನ್‌ಗಳಲ್ಲಿ ಏನೆಲ್ಲ ಬದಲಾವಣೆಯಾಗಿವೆ?


ಆಪಲ್ ಐಪೋನ್‌ ಮಾತ್ರವಲ್ಲ. ಸ್ಪೆಕ್ಟ್ರಮ್‌ನ Android ವಿಭಾಗದಲ್ಲಿ ನೋಡುವುದಾದರೆ ಸ್ಯಾಮ್ಸ್‌ಸಂಗ್‌ ನ ಗ್ಯಾಲಕ್ಸಿಯ Fold 4 ಮತ್ತು Flip 4 ಫೋನ್‌ಗಳು ಕೂಡ ನೂತನ ನವೀಕರಣಗಳ ಪ್ರಯೋಗಗಳಿಗೆ ಒಳಪಡಿಸಿಕೊಂಡಿವೆ. ಕ್ಯಾಮೆರಾ ವೈಶಿಷ್ಟ್ಯದಲ್ಲಿ ಪ್ರಮುಖ ನವೀಕರಣಗಳು ನಡೆದಿವೆ. ಉತ್ತಮ ಬ್ಯಾಟರಿ ಬಾಳಿಕೆಯನ್ನು ಸಹ ಹೊಂದಿವೆ. ಗ್ಯಾಲಕ್ಸಿ ಫೋಲ್ಡ್‌ ಸ್ಮಾರ್ಟ್‌ಪೋನ್‌ ಬಳಸುವ ಸಂದರ್ಭದಲ್ಲಿ, ಆರಂಭದಲ್ಲಿ ಬಹಳಷ್ಟು ಸಂತಸವಾಗುತ್ತದೆ ಮತ್ತು ದೊಡ್ಡ ಪರದೆಯಲ್ಲಿ ವೀಕ್ಷಿಸುವುದನ್ನು ಬಿಟ್ಟರೆ, ಉತ್ಪಾದಕತೆಯ ಪ್ರಯೋಜನಗಳು ಸ್ಪಷ್ಟವಾಗಿಲ್ಲ ಎಂದೇ ಹೇಳಬಹುದು.


ಇದರ ಜೊತೆಗೆ ಸಾಫ್ಟ್‌ವೇರ್ ಮತ್ತು ಆಪರೇಟಿಂಗ್ ಸಿಸ್ಟಮ್ ಸಾಕಷ್ಟು ಪ್ರಬುದ್ಧವಾಗಿಲ್ಲ. ಸ್ಯಾಮ್ಸ್‌ಸಂಗ್‌ S22 ಅಲ್ಟ್ರಾ 2020 ಸ್ಮಾರ್ಟ್‌ಪೋನ್‌ ಥೇಟ್‌ ಅದರ ಗ್ಯಾಲಾಕ್ಸಿ ನೋಟ್ ಫೋನ್‌ ಅನ್ನೆ ಹೋಲುತ್ತದೆ. ಇದು 10x ಜೂಮ್ ಲೆನ್ಸ್‌ನೊಂದಿಗೆ ನವೀಕರಿಸಿದ ಕ್ಯಾಮೆರಾ ಸಿಸ್ಟಮ್‌ ಅನ್ನು ಸಹ ಹೊಂದಿದೆ. ಆದರೆ ಸಾಮಾನ್ಯ ಬಳಕೆಯಲ್ಲಿ, ಎಲ್ಲಾ ಸಮಯದಲ್ಲೂ ಬಳಸುವ ಸಾಮಾನ್ಯ ಲೆನ್ಸ್ ಇಲ್ಲ.


ಸ್ಯಾಮ್‌ಸಂಗ್ ಮತ್ತು ಇತರ ಮೂಲ ಉಪಕರಣ ತಯಾರಕರ ಕಾರ್ಯಕ್ಷಮತೆಯನ್ನು ಗೂಗಲ್ ಮತ್ತು ಕ್ವಾಲ್‌ಕಾಮ್‌ನಂತಹ ಕಂಪನಿಗಳ ಆವಿಷ್ಕಾರಗಳಿಂದ ಗುರುತಿಸಲಾಗಿದೆ. Qualcomm ಅಥವಾ MediaTek ಮೂಲಕ ಪ್ರತಿಯೊಂದು ಕಂಪನಿಯವರು ಒಂದೇ ಚಿಪ್ ಅನ್ನು ಪಡೆಯುತ್ತಾರೆ. ಅದರಲ್ಲಿ ಕೆಲವು ಚಿಪ್‌ಗಳು ಉತ್ತಮವಾಗಿದ್ದರೆ, ಇನ್ನು ಕೆಲವು ಅಷಗಟೆನು ಉತ್ತಮವಾಗಿರುವುದಿಲ್ಲ. ಉದಾಹರಣೆಗೆ ನೋಡುವುದಾರೆ, Samsung Galaxy S22 ಮತ್ತು Vivo X80 ನಂತಹ ಫೋನ್‌ಗಳೊಂದಿಗೆ ಬಿಡುಗಡೆಯಾದ ಇತ್ತೀಚಿನ Snapdragon 8 Gen 1 ಸಾಕಷ್ಟು ತಾಂತ್ರಿಕ ಸಮಸ್ಯೆಗಳನ್ನು ಹೊಂದಿತ್ತು.


ಇದನ್ನೂ ಓದಿ: ಟಿಂಡರ್, ಬಂಬಲ್‌ನಂತಹ ಡೇಟಿಂಗ್ ಆ್ಯಪ್‌ಗಳಲ್ಲಿ ಮಹಿಳೆಯರದ್ದೇ ಮೇಲುಗೈ


ಆದ್ದರಿಂದ, ಕ್ವಾಲ್ಕಾಮ್ ಕೆಲವೇ ತಿಂಗಳುಗಳ ನಂತರ Snapdragon 8 Gen 1 ಅನ್ನು Snapdragon 8+ Gen 1 ಎಂದು ಅಪ್‌ಗ್ರೇಡ್‌ ಆಗಿ ಮರು ಬಿಡುಗಡೆಯಾಯಿತು. ಇದು ಒನ್‌ಪ್ಲಸ್ 10T, ಹೊಸ ಸ್ಯಾಮ್‌ಸಂಗ್ ಫೋಲ್ಡೇಬಲ್ ಮತ್ತು iQOO 9T ನಂತಹ ಫೋನ್‌ಗಳಲ್ಲಿ ಉತ್ತಮ ಸಾಧನದ ಸ್ಥಿರತೆ ಮತ್ತು ಬ್ಯಾಟರಿ ಬಾಳಿಕೆಗೆ ಸಮನಾದ ಸುಧಾರಿತ ಉಷ್ಣ ದಕ್ಷತೆಯು ಸ್ವಲ್ಪಮಟ್ಟಿಗೆ ಉತ್ತಮವಾಗಿದೆ.


ವಿವೋನ V1 ಚಿಪ್ ಅದರ X80 ಸರಣಿಯಲ್ಲಿ ಕ್ಯಾಮರಾದ ಸಂಸ್ಕರಣೆಯನ್ನು ನಿರ್ವಹಿಸುತ್ತದೆ. ಈ ಫೋನ್‌ಗಳು ಬೆರಗುಗೊಳಿಸುವ ಕ್ಯಾಮೆರಾಗಳು ಮತ್ತು ಮೈಕ್ರೋ ಗಿಂಬಲ್ ಅನ್ನು ಹೊಂದಿವೆ. ಇದು ಸೂಪರ್ ಸ್ಥಿರವಾದ ವೀಡಿಯೊವನ್ನು ಸಕ್ರಿಯಗೊಳಿಸುತ್ತದೆ. ಆದರೆ ಮತ್ತೆ ವಿವೋ X70, X60 ಮತ್ತು X50 ಮಾದರಿಗಳೊಂದಿಗೆ ಉತ್ತಮ ಕೆಲಸ ಮಾಡುತ್ತಿದೆ. ನೀವು X60 ಅಥವಾ X70 ಅನ್ನು ಹೊಂದಿದ್ದರೆ, X80 ನ ಕ್ಯಾಮೆರಾವು ಉತ್ತಮವಾಗಿ ನವೀಕರಣಗೊಂಡಿಲ್ಲ ಎಂದು ಹೇಳಬಹುದು.


ಭಾರತದಲ್ಲಿ ಗೂಗಲ್ ಮುಂದಿನ ವಾರದಲ್ಲಿ ಪಿಕ್ಸೆಲ್ 7 ಅನ್ನು ಪ್ರಾರಂಭಿಸಲಿದೆ. ಅದು ಹೊಸ ಚಿಪ್‌ಸೆಟ್, ಟೆನ್ಸರ್ 2 ಅನ್ನು ಸಹ ಹೊಂದಿರುತ್ತದೆ. ಇದು CPU ಅಥವಾ GPU ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಪ್ರಗತಿಯನ್ನು ಒಳಗೊಂಡಿರುವುದಿಲ್ಲ ಎಂದು ವರದಿಗಳು ಸೂಚಿಸುತ್ತವೆ. ಅದರ ಬದಲಿಗೆ, ಇದು AI ಮೇಲೆ ತನ್ನ ನಾವೀನ್ಯತೆಯನ್ನು ಕೇಂದ್ರೀಕರಿಸುತ್ತದೆ. ಆದರೆ ಹೊಸ ಚಿಪ್ ತನ್ನ ಕ್ಯಾಮೆರಾ ವೈಶಿಷ್ಟ್ಯವನ್ನು ಐಫೋನ್ 14 ಪ್ರೊ ಮ್ಯಾಕ್ಸ್, ಗ್ಯಾಲಕ್ಸಿ ಎಸ್ 22 ಅಲ್ಟ್ರಾ ಅಥವಾ ವಿವೋ ಎಕ್ಸ್ 80 ಪ್ರೊ ಗಿಂತ ಉತ್ತಮ ಗುಣಮಟ್ಟದ ಕ್ಯಾಮೆರಾ ವೈಶಿಷ್ಟ್ಯವನ್ನು ನೀಡಬಲ್ಲದೇ? ಎಂಬುದೇ ತಜ್ಞರ ಪ್ರಶ್ನೆ ಆಗಿದೆ.


2018 ರಿಂದ ಗೂಗಲ್ ತನ್ನ ಪ್ರಮುಖ ಸ್ಮಾರ್ಟ್‌ಪೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡದೇ ನೀವು ಹೊಸ Google ಫೋನ್ ಅನ್ನು ಖರೀದಿಸುವಿರಾ, ಅದು ಬಹುತೇಕ ಒಂದು ಲಕ್ಷಕ್ಕೂ ಹೆಚ್ಚು ಹಣ ವೆಚ್ಚವಾಗುತ್ತದೆ. ಅಷ್ಟು ಬೆಲೆಯ ಸ್ಮಾರ್ಟ್‌ಪೋನ್‌ ನಿಜಕ್ಕೂ ಅಗತ್ಯವಿದೆಯೇ?


ಇದನ್ನೂ ಓದಿ: ಹೈಡ್‌ ಮಾಡಿದ ಸ್ಟೇಟಸ್‌ ನೋಡ್ಬೇಕಾ? ಈ ಟ್ರಿಕ್ಸ್ ಬಳಸಿ, ತುಂಬಾ ಸಿಂಪಲ್​!


ಸ್ಮಾರ್ಟ್‌ಪೋನ್‌ ಖರೀದಿಗೆ ಮುಂದಿನ ವರ್ಷ ಸೂಕ್ತವೇ? ತಜ್ಞರ ಸಲಹೆಯೇನು?


ನಿಮ್ಮ ಐಫೋನ್, ಫೋಲ್ಡ್, ಗ್ಯಾಲಕ್ಸಿ ಅಥವಾ ವಿವೋ ಅನ್ನು ಮಾರಾಟ ಮಾಡದೇ ಆ ಪೋನ್‌ಗಳನ್ನೇ ಈ ವರ್ಷವು ಬಳಸಿ ಎಂಬುದು ತಜ್ಞರ ಸಲಹೆಯಾಗಿದೆ. 2023 ನೇ ವರ್ಷವು ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಉತ್ತಮವಾಗಿರುತ್ತದೆ. ಅದು ಹೇಗೆಂದರೆ ಆಪಲ್‌ ಕಂಪನಿ ಮುಂದಿನ ವರ್ಷ ಐಫೋನ್ 15 ಅನ್ನು ಬಿಡುಗಡೆ ಮಾಡಲು ಯೋಚಿಸಿದೆ. ಇದು ಹೆಚ್ಚು ನವೀಕರಣಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.


ಸ್ಯಾಮ್‌ಸಂಗ್‌ನ ಫೋಲ್ಡ್ ಲೈನ್ ಅಪ್‌ಗ್ರೇಡ್‌ಗಳೊಂದಿಗೆ ಗ್ರಾಹಕರ ಮುಂದೆ ಬರಲಿದೆ ಮತ್ತು ಗೂಗಲ್ ತನ್ನದೇ ಆದ ಫೋಲ್ಡಬಲ್ ಸ್ಮಾರ್ಟ್‌ಪೋನ್‌ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇದರ ಜೊತೆಗೆ ಭಾರತದಲ್ಲಿ Vivo ಮತ್ತು Xiaomi ಕಂಪನಿಗಳು ತಮ್ಮದೇ ಆದ ಪೋಲ್ಡ್‌ಬಲ್‌ ಸ್ಮಾರ್ಟ್‌ಪೋನ್‌ ಅನ್ನು ತರುವ ನಿರೀಕ್ಷೆ ಇದೆ. ಇದರೊಂದಿಗೆ ಅತಿ ಹೆಚ್ಚು ಗ್ಯಾಜೆಟ್‌ ಪ್ರಿಯರಿಗೆ ಅದರಲ್ಲೂ ಐಫೋನ್ ಬಳಕೆದಾರರಿಗೆ - iPhone 14 Pro Max ಅಥವಾ iPhone 13 Pro Max ಸ್ಮಾರ್ಟ್‌ಪೋನ್‌ಗಳನ್ನು ತಜ್ಞರು ಶಿಫಾರಸು ಮಾಡಿದ್ದಾರೆ. ಇನ್ನು ಆಂಡ್ರಾಯ್ಡ್‌ಗಳ ವಿಭಾಗದಲ್ಲಿ ನೋಡುವುದಾದರೆ, ವಿವೋ X80 Pro ಅನ್ನು ತಜ್ಞರು ಸೂಚಿಸುತ್ತಾರೆ.

First published: