• Home
  • »
  • News
  • »
  • tech
  • »
  • New Smartphone: ಇದು ವಿಶ್ವದ ಅತೀ ಚಿಕ್ಕ ಕೀಪ್ಯಾಡ್‌ ಮೊಬೈಲ್‌ ಅಂತೆ! ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

New Smartphone: ಇದು ವಿಶ್ವದ ಅತೀ ಚಿಕ್ಕ ಕೀಪ್ಯಾಡ್‌ ಮೊಬೈಲ್‌ ಅಂತೆ! ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ಕೀಪ್ಯಾಡ್‌ ಮೊಬೈಲ್‌ ಫೋನ್

ಕೀಪ್ಯಾಡ್‌ ಮೊಬೈಲ್‌ ಫೋನ್

ಇದು ಈ ಫೋನ್‌ನಲ್ಲಿರುವಂತಹ ಇದು ವೀಶೆಷ ಫೀಚರ್‌ಗಳಾಗಿವೆ. ಇದರ ಅಭಿವೃದ್ಧಿಗೆ ಮುಖ್ಯ ಕಾರಣ ಇದರ ಗಾತ್ರನೇ ಅಂತ ಹೇಳಬಹುದು. ಜನರಲ್ಲಿ ಬಹಳಷ್ಟು ಕುತೂಹಲವನ್ನು ಮೂಡಿಸಿದ್ದು ಇದರ ವಿಶೇಷತೆಗಳು ಇಲ್ಲಿವೆ

  • Share this:

    ಸ್ಮಾರ್ಟ್‌ಫೋನ್‌ ಕಂಪನಿಗಳಲ್ಲಿ(Smartphone Company) ಹೊಸತನದಿಂದ ಕೂಡಿದ ಮೊಬೈಲ್‌ಗಳು (Mobile) ಬರುತ್ತರುತ್ತದೆ. ಗ್ರಾಹಕರು ಕೂಡ ತಮ್ಮಲ್ಲಿನ ಬದಲಾವಣೆಗಳ ಜೊತೆಗೆ ತಂತ್ರಜ್ಞಾನದಲ್ಲೂ (Technology) ಬದಲಾವಣೆಗಳನ್ನು ಬಯಸುತ್ತಾರೆ. ಅದೇ ರೀತಿ ಅದಕ್ಕಾಗಿಯೇ ಈ ತಂತ್ರಜ್ಞಾನಗಳು ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸುವುದನ್ನು ಪ್ರಯತ್ನಿಸುತ್ತಿರುತ್ತದೆ. ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಏನಾದರು ವಿಶೇಷತೆಗಳನ್ನು ಕಾಯುತ್ತಲೇ ಇರುತ್ತಾರೆ. ಇದನ್ನೆಲ್ಲಾ ಗಮನಿಸಿಕೊಂಡು ಜನರು ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳಲು (Buy) ಮುಂದಾಗುತ್ತಾರೆ. ಇದೀಗ ಮಾರುಕಟ್ಟೆಗೆ (Market) ಒಂದು ವಿಶೇಷ ರೀತಿಯ ಸ್ಮಾರ್ಟ್‌ಫೋನ್‌ ಕಾಲಿಡುತ್ತಿದೆ. ಇದು ವಿಶ್ವದ ಅತೀ ಚಿಕ್ಕ ಫೋನ್‌ ಆಗಲಿದೆ. ಇದರ ವಿಶೇಷತೆ ಏನೆಂದರೆ ಇದು ಬೆರಳಿಗಿಂತಲೂ ಚಿಕ್ಕದಾಗಿರುವ ಮೊಬೈಲ್‌ ಫೋನ್‌ ಆಗಿದೆ.


    ಇತ್ತೀಚಿನ ದಿನಗಳಲ್ಲಿ ಫೋನ್‌ಗಳಲ್ಲಿ ವೈಶಿಷ್ಟ್ಯಗಳು ಬದಲಾಗುತ್ತಿರುತ್ತದೆ. ಇದು ಟೆಕ್‌ ಮಾರುಕಟ್ಟೆಯಲ್ಲಿ ಬರುತ್ತಿರುವಂತಹ ವಿಶೇಷ ಮೊಬೈಲ್‌ ಆಗಿದ್ದು. ಜನರಲ್ಲಿ ಬಹಳಷ್ಟು ಕುತೂಹಲವನ್ನು ಮೂಡಿಸಿದೆ. ಹಾಗಿದ್ರೆ ಇದರ ವಿಶೇಷತೆಗಳೇನು ತಿಳೀಬೇಕು ಅನ್ನುವ ಕುತೂಹಲ ನಿಮ್ಮಲ್ಲಿದೆಯಾ? ಇಲ್ಲಿದೆ ನೋಡಿ.


    ವಿಶ್ವದ ಅತ್ಯಂತ ಚಿಕ್ಕ ಮೊಬೈಲ್ ಫೋನ್ :


     ಇತ್ತೀಚಿನ ದಿನಗಳಲ್ಲಿ ಫೋನ್‌ಗಳನ್ನು ಬಳಕೆ ಮಾಡುವವರು ಹೆಚ್ಚಾಗಿದ್ದಾರೆ. ಮತ್ತು ಬಳಕೆದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಫೋನ್‌ಗಳಲ್ಲಿ ಹಲವಾರು ಅಪ್‌ಡೇಟ್‌ಗಳಾಗುತ್ತಿದೆ. ಇದಲ್ಲದೆ ಜನರ ಬೇಡಿಕೆಗಳ ಅನುಸಾರವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ವೈಶಿಷ್ಟ್ಯಗಳನ್ನು ಹೊಂದಿರುವ ಅತ್ಯಂತ ಚಿಕ್ಕ ಮೊಬೈಲ್ ಫೋನ್ ಗಳನ್ನು  ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಿಮ್ಮ ಬಜೆಟ್‌ಗೆ ಅನುಕೂಲವಾಗುವಂತೆ  ನೀವು ಉತ್ತಮ ಫೋನ್ ಅನ್ನು ಸುಲಭವಾಗಿ ಕಾಣಬಹುದು.


    ಇದನ್ನೂ ಓದಿ: ಈ ಸಾಧನ ನಿಮ್ಮಲ್ಲಿದ್ರೆ ಸಾಕು, ಕರೆಂಟ್ ಇಲ್ಲದಿದ್ರೂ ವೈ-ಫೈ ವರ್ಕ್ ಆಗುತ್ತೆ!


    ಆದರೆ ಇಂದಿಗೂ ಕೆಲವರು ಕೀಪ್ಯಾಡ್ ಫೋನ್‌ಗಳನ್ನು ಬಳಸುತ್ತಾರೆ ಅಥವಾ ಕೀಪ್ಯಾಡ್ ಫೋನ್ ಅನ್ನು ಸೆಕೆಂಡರಿ ಫೋನ್‌ನಂತೆ ಬಳಸುತ್ತಾರೆ. ಇಂದು ನಾವು ನಿಮಗೆ ಬೆರಳಿಗಿಂತ ಕಡಿಮೆ ಗಾತ್ರದ ಕೀಪ್ಯಾಡ್ ಫೋನ್ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.‌‌


    It is like the world s smallest keypad mobile What is special Here is the information
    ಕೀಪ್ಯಾಡ್‌ ಮೊಬೈಲ್‌ ಫೋನ್


    ಅತ್ಯಂತ ಚಿಕ್ಕ ಕೀಪ್ಯಾಡ್‌ ಫೋನ್:


    KECHAODA A26 ಕಂಪೆನಿಯಂತಹ ವೈಶಿಷ್ಟ್ಯದ ಫೋನ್‌ಗಳಲ್ಲಿ ಇದು ಒಂದಾಗಿದೆ. ಇದು ನೋಟದಲ್ಲಿ ತುಂಬಾ ಚಿಕ್ಕದಾಗಿದೆ ಮತ್ತು ಇದರ ಗಾತ್ರವೇ ಇದರ ವಿಶೇಷತೆ ಕಾರಣವಾಗಿದೆ. ಈ ಫೋನ್ ಗಾತ್ರದಲ್ಲಿ ತುಂಬಾ ಚಿಕ್ಕದಾಗಿದೆ. ಈ ಫೋನ್ ಅನ್ನು ನೀವು ಅಂಗೈನಲ್ಲಿ ಹಿಡಿದು ಕೈ ಮುಚ್ಚಿದರೆ ನಿಮ್ಮ ಕೈಯಲ್ಲಿ ಫೋನ್ ಇದೆ ಎಂಬುದೇ ಯಾರಿಗೂ ಗೊತ್ತಾಗುವುದಿಲ್ಲ. ಈ ಫೋನ್ ಗಾತ್ರವನ್ನು ಲೆಕ್ಕಹಾಕಿದರೆ ಇದು ನಿಮ್ಮ ಬೆರಳಿಗಿಂತ ಚಿಕ್ಕದಾಗಿದೆ ಮತ್ತು ನೋಡುವಾಗಲೇ ಜನರನ್ನು ಬಹಳ ಆಕರ್ಷಿಸುತ್ತದೆ. ನೀವು ಈ ಫೋನ್ ಅನ್ನು ಸೆಕೆಂಡರಿ ಫೋನ್ ಆಗಿಯೂ ಬಳಸುವ ಆಯ್ಕೆಯಿದೆ.


    ಬೆಲೆ ಮತ್ತು ಲಭ್ಯತೆ:


    ನೀವು KECHAODA A26 ಬೆಲೆಯನ್ನು ನೋಡಿದರೆ, ಇದನ್ನು ಕೇವಲ 1,220 ರೂಗಳಲ್ಲಿ ಖರೀದಿಸಬಹುದು. ಈ ಫೋನ್ ಬಹುತೇಕ ಎಲ್ಲಾ ಇ-ಕಾಮರ್ಸ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದನ್ನು ಕಪ್ಪು, ಗೋಲ್ಡ್, ಬೂದು, ಸಿಲ್ವರ್ ಮತ್ತು ಗುಲಾಬಿ ಬಣ್ಣಗಳಲ್ಲಿ ಖರೀದಿಸುವ ಆಯ್ಕೆಯನ್ನು ನೀಡಲಾಗಿದೆ.


    ಈ ಕೀಪ್ಯಾಡ್ ಫೋನ್‌ನ ವೈಶಿಷ್ಟ್ಯ:‌


    • KECHAODA A26 ಫೋನ್‌ನೊಂದಿಗೆ, ನೀವು ಕರೆ ಮತ್ತು ಸಂದೇಶ ಕಳುಹಿಸುವಿಕೆಯನ್ನು ಆನಂದಿಸಬಹುದು.

    • ಇದು 32ಎಂಬಿ ರಾಮ್ ಮತ್ತು 32ಎಂಬಿ ರೋಮ್ ಅನ್ನು ಹೊಂದಿದೆ.

    • ಇದಲ್ಲದೇ ನೀವು ಡಾಟಾವನ್ನು ಸಂಗ್ರಹಿಸಲು ಮೈಕ್ರೋ ಎಸ್ಡಿ ಕಾರ್ಡ್ ಸ್ಲಾಟ್ ಬಳಸಿ 1ಜಿಬಿ  ವರೆಗೆ ವಿಸ್ತರಿಸಬಹುದು.‌


    It is like the world s smallest keypad mobile What is special Here is the information
    ಕೀಪ್ಯಾಡ್‌ ಮೊಬೈಲ್‌ ಫೋನ್


    • ಇದು 0.66 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಇದರಲ್ಲಿ ಪವರ್ ಬ್ಯಾಕಪ್ಗಾಗಿ 800mAh ಬ್ಯಾಟರಿಯನ್ನು ನೀಡಲಾಗಿದೆ.

    • ಫೋನ್‌ನಲ್ಲಿ ಡ್ಯುಯಲ್ ಸಿಮ್ ಬೆಂಬಲವನ್ನು ಸಹ ನೀಡಲಾಗಿದೆ.


    ಇದನ್ನೂ ಓದಿ: ಮೊಟೊರೊಲಾದಿಂದ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ! ಇದರಲ್ಲಿ ಏನಿದೆ ಸ್ಪೆಷಲ್‌ ಫೀಚರ್ಸ್?


    ಇದು ಈ ಫೋನ್‌ನಲ್ಲಿರುವಂತಹ ಇದು ವೀಶೆಷ ಫೀಚರ್‌ಗಳಾಗಿವೆ. ಇದರ ಅಭಿವೃದ್ಧಿಗೆ ಮುಖ್ಯ ಕಾರಣ ಇದರ ಗಾತ್ರನೇ ಅಂತ ಹೇಳಬಹುದು. ಏಕೆಂದರೆ ಇದನ್ನು ಗ್ರಾಹಕರಿಗೆ ಎಲ್ಲಿಯೂ ಇಟ್ಟುಕೊಳ್ಳಬಹುದಾದ ಅವಕಾಶಗಳಿವೆ.

    Published by:Harshith AS
    First published: