• Home
 • »
 • News
 • »
 • tech
 • »
 • Apple Watch: ಈಗಿನ ಆ್ಯಪಲ್ ವಾಚ್ ಹೆಲ್ತ್ಕೇರ್ ಅನ್ನೂ ಮಾಡ್ತಿದ್ಯಾ? ಏನಿದು ವಿಚಿತ್ರ ಸಂಗತಿ

Apple Watch: ಈಗಿನ ಆ್ಯಪಲ್ ವಾಚ್ ಹೆಲ್ತ್ಕೇರ್ ಅನ್ನೂ ಮಾಡ್ತಿದ್ಯಾ? ಏನಿದು ವಿಚಿತ್ರ ಸಂಗತಿ

ಸಾಂಧರ್ಭಿಕ ಚಿತ್ರ

ಸಾಂಧರ್ಭಿಕ ಚಿತ್ರ

ಆಪಲ್‌ನ ತಾಂತ್ರಿಕ ಆವಿಷ್ಕಾರಗಳು ಹಲವಾರು ಬಾರಿ ಜೀವಗಳನ್ನು ಉಳಿಸಿವೆ. ಅದೇ ರೀತಿ 12 ವರ್ಷದ ಬಾಲಕಿಯೊಬ್ಬಳ ಜೀವ ಉಳಿಸಿದೆ. ಆಪಲ್ ವಾಚ್‌ನಿಂದಾಗಿ ಆಕೆ ದೊಡ್ಡ ಆನಾರೋಗ್ಯಕಾರಿ ಗಂಡಾಂತರದಿಂದ ಪಾರಾಗಿದ್ದಾಳೆ. ಎನಾದು ಅಂತ ತಿಳಿದುಕೊಳ್ಳಿ

 • Share this:

  ಹೌದು ಇದು ವಿಚಿತ್ರ (Strange) ಸಂಗತಿಯಾದ್ರು ಇದು ವಾಸ್ತವ (Reality) ಸಂಗತಿಯೆ. ಐಫೋನ್ ವಾಚ್ (iPhone Watch) ಇಂತಹ ಹಲವು ವಿಷಯಕ್ಕೆ ಸಾಕ್ಷಿಯಾಗುತ್ತಿದೆ. ಉದಾರಹಣೆಗೆ ಒಮ್ಮೆ 12 ವರ್ಷದ  ಬಾಲಕಿಯಲ್ಲಿನ ಕ್ಯಾನ್ಸರ್  (Cancer) ಪತ್ತೆ ಹಚ್ಚಿದ್ದು. ಈ ಹಿಂದೆ ಮಹಿಳೆಯೊಬ್ಬಳು ಗರ್ಭವತಿಯಾಗಿರುವುದನ್ನು (Pregnant lady) ಪತ್ತೆ ಮಾಡಿತ್ತು ಈ ರೀತಿಯ ಅನೇಕ ಸಾಕ್ಷಿಗಳು ದೊರಕಿವೆ. ಆ್ಯಪಲ್‌ ಕಂಪೆನಿ ಹೊಸ ಮಾದರಿಯ ಫೀಚರ್ ಗಳನ್ನು (Feature) ನೀಡುವುದರಿಂದ ಇವೆಲ್ಲ ಸಾದ್ಯವಾಗುತ್ತಿದೆ ಎಂದು ಗ್ರಾಹಕರು (Customer ) ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದಲ್ಲದೆ ನೆಟ್ಟಿಗರು ಈ ವಿಷಯದ ಬಗ್ಗೆ ಚರ್ಚಿಸುತ್ತಿದ್ದಾರೆ. ಎಂಬುವುದು  ಅಷ್ಟೆ ಸತ್ಯ. ಇಲ್ಲೊಂದು 12 ವರ್ಷದ ಬಾಲಕಿ ಯ ಕಾನ್ಸರ್ ರೋಗವನ್ನು ಪತ್ತೆ ಹಚ್ಚಿರುವುದು ವಿಚಿತ್ರ ಸಂಗತಿಯಾಗಿದೆ. ಎನೀದು ಅನ್ನೊದನ್ನು ನೀವು ತಿಳಿದುಕೊಳ್ಳಿ.


  12 ವರ್ಷದ ಬಾಲಕಿಗೆ ಎನಾಗಿತ್ತು ಗೊತ್ತಾ?


  ಆ್ಯಪಲ್‌ನ ತಾಂತ್ರಿಕ  ಇನ್ವೆನ್ಷನ್  ಹಲವಾರು ಬಾರಿ  ಹಲವು ಜೀವಗಳನ್ನು ಉಳಿಸಿವೆ. ಈ ಸಾಲಿಗೆ 12 ವರ್ಷದ ಬಾಲಕಿಯೊಬ್ಬಳು ಸೇರಿದ್ದಾಳೆ. ಹೌದು ಆ್ಯಪಲ್ ವಾಚ್‌ನಿಂದಾಗಿ ಆಕೆ ದೊಡ್ಡ ಆನಾರೋಗ್ಯ ಗಂಡಾಂತರದಿಂದ ತಪ್ಪಿಸಿಕೊಂಡಿದ್ದಾಳೆ. ಹಾಗಾಗಿ, ಬಾಲಕಿಯ ಕುಟುಂಬವು ಆ್ಯಪಲ್ ವಾಚ್‌ನ ಸಾಮರ್ಥ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ.


  ಸಾಂಧರ್ಭಿಕ ಚಿತ್ರ


  ಇದನ್ನೂ ಓದಿ: Tech Tips: ಆಂಡ್ರಾಯ್ಡ್ ಫೋನ್​ನಿಂದ ಐಫೋನ್​ಗೆ ಫೋಟೋ, ವಿಡಿಯೋ ಪಟ್ ಅಂತ ಕಳಿಸಿ


  ಯುವಜನರಲ್ಲಿ ಅಸಾಮಾನ್ಯವಾದ ಕ್ಯಾನ್ಸರ್ ಅನ್ನು ಕಂಡುಹಿಡಿಯಲು ಸಾಧ್ಯವಾಗಿಸುವ ಮೂಲಕ ತನ್ನ ಜೀವವನ್ನು ಉಳಿಸಿದೆ ಎಂದು ಆ ಬಾಲಕಿಯು ಮನಸಾರೆ ಹೇಳಿದ್ದಾಳೆ. ಆ್ಯಪಲ್ ವಾಚ್‌ನಲ್ಲಿನ ಹೃದಯ ಬಡಿತ (ಹಾರ್ಟ್ ಬೀಟ್ ಮಾನಿಟರಿಂಗ್) ಫೀಚರ್ , ವಾಚ್ ಎಸ್‌ಇ, ವಾಚ್ 7 ಮತ್ತು ಇತ್ತೀಚೆಗೆ ಬಿಡುಗಡೆಯಾದ ವಾಚ್ 8 ಮತ್ತು ವಾಚ್ ಅಲ್ಟ್ರಾದಲ್ಲಿ ಕಾಣಬಹುದಾಗಿದೆ. ಇಲ್ಲಿ ಹಾರ್ಟ್ ಬೀಟ್ ಚೆಕ್ ಮಾಡುವುದರಿಂದ ಹೃದಯ ಸಂಬಂಧಿತ ರೋಗವನ್ನು ಪತ್ತೆ ಹಚ್ಚಲು ಸಹಾಕಾರಿಯಾಗಿದೆ.


  12 ವರ್ಷ ವಯಸ್ಸಿನ ಇಮಾನಿ ಮೈಲ್ ಅವರ ಆ್ಯಪಲ್ ವಾಚ್ ಒಂದು ಸಂಜೆ  ಒಂದೆ ಸಮನೆ ಹೆಚ್ಚಿನ ಹೃದಯ ಬಡಿತದ ಬಗ್ಗೆ ಎಚ್ಚರಿಸಲು  ಆರಂಭಿಸಿತು. ಆಗ ಎಚ್ಚೆತ್ತುಕೊಂಡ ಮೈಲ್ ಅನ್ನು ಆಕೆಯ ತಾಯಿ ಜೆಸ್ಸಿಕಾ ಕಿಚನ್ ಆಸ್ಪತ್ರೆಗೆ ಕರೆದೊಯ್ದರು. ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಗೆ  ಅಪೆಂಡಿಸೈಟಿಸ್  ಇರುವ  ವಿಷಯ ತಿಳಿದುಬರುತ್ತದೆ. ರೋಗನಿರ್ಣಯದ ಪ್ರಕ್ರಿಯೆಯಲ್ಲಿ  ಮತ್ತೊಂದು ಗೊತ್ತಾದ ಸಂಗತಿ  ಎನೆಂದರೆ  ಅದು ಬೆಚ್ಚಿಬೀಳುವಂತೆ ಮಾಡಿತು.


  ಬಾಲಕಿಯ ಅಪೆಂಡಿಕ್ಸ್‌ನಲ್ಲಿ ನ್ಯೂರೋಎಂಡೋಕ್ರೈನ್ ಗಡ್ಡೆ(ಕ್ಯಾನ್ಸರ್) ಇರುವುದನ್ನು ವೈದ್ಯರು ಪತ್ತೆ ಹಚ್ಚಿದರು.  ಚಿಕ್ಕ ವಯಸ್ಸಿನಲ್ಲಿ ಕಂಡು ಬರುವ ವಿರಳ ಗಡ್ಡೆ ಇದು ಎಂದು ವೈದ್ಯರು ತಿಳಿಸಿದರು. ಅದರೆ ಈ ಕ್ಯಾನ್ಸರ್ ಈಗಾಗಲೇ ಮೈಲ್ ದೇಹದ ಇತರ ಭಾಗಗಳಿಗೆ ಹರಡಿದೆ ಎಂಬುದನ್ನು ವೈದ್ಯರು ಪತ್ತೆ ಹಚ್ಚಿದರು. ತಕ್ಷಣವೇ ಕ್ಯಾನ್ಸರ್ ರೋಗವನ್ನು ಗುಣಪಡಿಸಲು ವೈದ್ಯರು ಸಿಎಸ್ ಮೋಟ್ ಚಿಡ್ರೆನ್ಸ್  ಶಸ್ತ್ರಚಿಕಿತ್ಸೆ ಕೈಗೊಂಡರು.


  ಇದನ್ನೂ ಓದಿ: TATA Binge: ಟಾಟಾದಿಂದ OTT ಲವರ್ಸ್‌ಗೆ ಭರ್ಜರಿ ಸಿಹಿಸುದ್ದಿ, ಇನ್ಮುಂದೆ ಲೈಫ್ ಇನ್ನಷ್ಟು ಜಿಂಗಾಲಾಲ!


  ಈ ಬಗ್ಗೆ  ಡೆಟ್ರಾಯಿಟ್ ಎನು ವರದಿ ಮಾಡಿದೆ ಗೊತ್ತಾ?


  ಈ ಬಗ್ಗೆ ಅವರ್ ಡೆಟ್ರಾಯಿಟ್ (Hour Detroit) ವರದಿ ಮಾಡಿದೆ. ಒಂದು ವೇಳೆ 12 ವರ್ಷದ ಬಾಲಕಿಯು ಆ್ಯಪಲ್ ಕೈ ಗಡಿಯಾರವನ್ನು ಹೊಂದಿಲ್ಲದಿದ್ದರೆ, ತೀವ್ರ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತಿತ್ತು ಎಂದು ಆ ವರದಿಯಲ್ಲಿ ತಿಳಿಸಲಾಗಿದೆ.


  ಮಹಿಳೆಗೆ ತಾನು ಗರ್ಬಿಣಿ ಎಂದು ಗೋಚರಿಸುವಂತೆ ಮಾಡಿದ ಆ್ಯಪಲ್ ವಾಚ್


  ಸಾಂಧರ್ಭಿಕ ಚಿತ್ರ


  ಇದೇ ರೀತಿಯ ಘಟನೆಯೊಂದು ಈ ತಿಂಗಳ ಆರಂಭದಲ್ಲಿ ವರದಿಯಾಗಿತ್ತು. ಮಹಿಳೆಗೆ ತಾನು ಗರ್ಭವತಿಯಾಗಿರುವುದು ಗೊತ್ತೇ ಇರಲಿಲ್ಲ. ಆಕೆಗೆ ಗೊತ್ತಾಗುವ ಮುಂಚೆಯೇ ಆ ಬಗ್ಗೆ ಆ್ಯಪಲ್ ವಾಚಿನಿಂದ ಆ ಬಗ್ಗೆ ಸುಳಿವು ನೀಡಿತ್ತು. ರೆಡ್ಡಿಟ್ ಥ್ರೆಡ್ ( Reddit thread) ಈ ಬಗ್ಗೆ ವರದಿ ಮಾಡಿದೆ. 34 ವರ್ಷದ ಮಹಿಳೆಯೊಬ್ಬರು ಕ್ಲಿನಿಕಲ್ ಪರೀಕ್ಷೆಗೆ (Clinical Test) ಒಳಗಾಗುವ ಮೊದಲೇ ಗರ್ಭಧಾರಣೆಯನ್ನು ಗುರುತಿಸಲು ತನ್ನ ಆ್ಯಪಲ್ ವಾಚ್ ಸಹಾಯ ಮಾಡಿತು ಎಂಬುದನ್ನು ಈ ವರದಿಯಲ್ಲಿ ತಿಳಿಸಿದ್ದಾರೆ. ದಿನಗಟ್ಟಲೆ ಸ್ಮಾರ್ಟ್ ವಾಚ್ (Smart Watch) ತನ್ನ ವಿಶಿಷ್ಟವಾದ ಹೃದಯ ಬಡಿತವನ್ನು ತೋರಿಸಲಾರಂಭಿಸಿತು. ಇಲ್ಲಿ ಏನೋ ಎಡವಟ್ಟಾಗಿದೆ ಎಂದು ತನಗೆ ಅನಿಸಲಾರಂಭಿಸಿತು ಎಂದು ಆಕೆ ಹೇಳಿದ್ದಾಳೆ. ಬಳಿಕ ಟೆಸ್ಟ್ ಮಾಡಿರುವುದರಿಂದ ತಾನು ಗರ್ಭಿಣಿ ಎಂದು ತಿಳಿದುಬಂದಿದೆ ಎನ್ನುವ ಸತ್ಯವನ್ನು ಹೊರಹಾಕಿದ್ದಾರೆ.

  Published by:Harshith AS
  First published: