ಇಸ್ರೋದಿಂದ ನೂತನ ಟಿವಿ ಚಾನೆಲ್​


Updated:August 14, 2018, 6:55 PM IST
ಇಸ್ರೋದಿಂದ ನೂತನ ಟಿವಿ ಚಾನೆಲ್​

Updated: August 14, 2018, 6:55 PM IST
ವಿಜ್ಞಾನ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನೂತನ ಟಿವಿ ಮಾಧ್ಯಮವೊಂದನ್ನು ಆರಂಭಿಸಲು ತೀರ್ಮಾನಿಸಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಜ್ಞಾನ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನೂತನ ಟಿವಿ ಮಾಧ್ಯಮವೊಂದನ್ನು ಆರಂಭಿಸಲು ತೀರ್ಮಾನಿಸಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂದಿನ ಮೂರು ಅಥವಾ ನಾಲ್ಕು ತಿಂಗಳಲ್ಲಿ ಇಸ್ರೋ ಈ ಚಾನೆಲ್​ ಆರಂಭಿಸಲಿದ್ದು, ಪ್ರಮುಖವಾಗಿ ವಿಜ್ಞಾನ ಕ್ಷೇತ್ರದಲ್ಲಿ ಆಗುವ ಮಹತ್ತರ ಬದಲಾವಣೆಯನ್ನು ಸಾಮಾನ್ಯ ಜನರಿಗೂ ತಿಳಿಸಲು ಈ ವೇದಿಕೆಯನ್ನು ಬಳಸಿಕೊಳ್ಳಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ ಸಿವನ್​ ಹೇಳಿದ್ದಾರೆ.

ಭಾರತದ ಬಾಹ್ಯಾಕಾಶ ಯೋಜನೆ ಪಿತಾಮಹ ವಿಕ್ರಮ್​ ಸಾರಾಭಾಯ್​ ಅವರ 99 ಜನುಮ ದಿನದಂದು ಮಾತನಾಡಿರುವ ಕೆ ಸಿವನ್​, ಇಸ್ರೋ ಟಿವಿ ಯೋಜನೆ ಕುರಿತು ಹೇಳಿಕೆ ನೀಡಿದ್ದಾರೆ. ಈ ಮಾಧ್ಯಮಕ್ಕೆ ಇಸ್ರೋ ಟಿವಿ ಎಂದೇ ನಾಮಕರಣ ಮಾಡಲಾಗುತ್ತದೆ, ಸ್ಥಳೀಯ ಭಾಷೆ ಹಾಗು ಆಂಗ್ಲ ಭಾಷೆಯಲ್ಲಿ ಈ ಚಾನೆಲ್​ ನಡೆಸಲಾಗುತ್ತದೆ. ಈ ಮೂಲಕ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ನಮ್ಮ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಯನ್ನು ನಾವು ತಲುಪಿಸಬಹುದು ಎಂದು ಹೇಳಿದ್ದಾರೆ.

ಈ ಮಾಧ್ಯಮದ ಮೂಲಕ ಮಕ್ಕಳು ಮತ್ತು ಯುವಕರಿಗೆ ವೈಜ್ಞಾನಿಕ ಅಭಿವೃದ್ಧಿಯನ್ನು ತಲುಪಿಸಲು ಯೋಜನೆ ರೂಪಿಸಲಾಗುತ್ತದೆ. ಇದಲ್ಲದೇ ಇಸ್ರೋ ವಿಜ್ಞಾನಿಗಳ ಮೂಲಕ 8-10ನೇ ತರಿಗತಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಮಾದರಿಯನ್ನು ತಯಾರಿಸಲು ಸಹಾಯ ಮಾಡಲಾಗುತ್ತದೆ. ಇವರಿಗೆ 30 ದಿನಗಳ ಕಾಲ ಟ್ರೈನಿಂಗ್​ ಕೂಡಾ ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹೊಸ ತಮ್ಮದೇ ಆದ ಉಪಗ್ರಹ ನಿರ್ಮಿಸಲು ಸಹಾಯ ಮಾಡಲಾಗುತ್ತದೆ, ಶೀಘ್ರದಲ್ಲೆ ಈ ಯೋಜನೆ ಜಾರಿಗೊಳಸಲಾಗುತ್ತದೆ ಎಂದು ಸಿವನ್​ ಹೇಳಿದ್ದಾರೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ