ಸಿಯಾಚಿನ್​ ಯೋಧರ ನೆರವಿಗೆ ಬಂದ ಇಸ್ರೋ


Updated:August 27, 2018, 3:00 PM IST
ಸಿಯಾಚಿನ್​ ಯೋಧರ ನೆರವಿಗೆ ಬಂದ ಇಸ್ರೋ

Updated: August 27, 2018, 3:00 PM IST
ಭಾರತದ ಗಡಿಯ ಅತ್ಯಂತ ಕಟ್ಟಕಡೇಯ ಹಾಗೂ ಭಾರೀ ಅಪಾಯಾಕಾರಿ ಜಾಗಗಳಲ್ಲಿ ಒಂದಾದ ಸಿಯಾಚಿನ್​ನಲ್ಲಿ ಗಡಿಕಾಯುವ ಸೈನಿಕರ ಆರೋಗ್ಯದ ಕುರಿತು ವಿಶೇಷ ಒಲವು ತೋರಿಸಿರುವ ಕೇಂದ್ರ ಸರಕಾರ, ಯೋಧರ ಆರೋಗ್ಯ ವಿಚಾರವಾಗಿ ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ (ಇಸ್ರೋ )ದ ಸಹಾಯ ಯಾಚಿಸಿದೆ.

ಎಎನ್ಐ ವರದಿ ಪ್ರಕಾರ, ಟೆಲಿಮೆಡಿಸಿನ್​ ಯೋಜನೆಯಲ್ಲಿ 53 ವೈದ್ಯಕೀಯ ಕೇಂದ್ರಗಳನ್ನು ಸಿಯಾಚಿನ್​ ಯೋಧರಿಗಾಗಿ ನಿರ್ಮಾಣ ಮಾಡಲಾಗಿದ್ದು, ಪ್ರಸಕ್ತ 20 ಕೇಂದ್ರಗಳನ್ನು ಆರ್ಮಿ, ನೇವಿ ಮತ್ತು ಭಾರತೀಯ ವಾಯು ಸೇನೆಯ ತಾಣಗಳಲ್ಲಿ ರಚಿಸಲು ತೀರ್ಮಾನಿಸಲಾಗಿದೆ. ಈ ಕುರಿತಂತೆ ಕೇಂದ್ರ ರಕ್ಷಣಾ ಇಲಾಖೆ ಇಸ್ರೋದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಸಿಯಾಚಿನ್​ನಲ್ಲಿ ನಿಯೋಜಿಸಲ್ಲಪಡುವ ಸೈನಿಕರು ಸರಕಾರ ಸಾಕಷ್ಟು ಸೌಲಭ್ಯದಿಂದ ವಂಚಿಸಲ್ಪಟ್ಟಿರುತ್ತಾರೆ, ಅಲ್ಲದೇ ವಿಶ್ವದಲ್ಲೇ ಅತ್ಯಂತ ಎತ್ತರ ಹಾಗೂ ದುರ್ಗಮ ಪ್ರದೇಶವಾದ ಸಿಯಾಚಿನಂತಹ ಸ್ಥಳಿಗಳಿಗೆ ಈ ಕೇಂದ್ರಗಳ ಮೂಲಕ ವೈದ್ಯಕೀಯ ಸೇವೆಯನ್ನು ಪೂರೈಸಲಾಗುತ್ತದೆ. ಮುಂದಿನ ದಿನಗಳಲ್ಲಿ ಯೋಧರಿಗೆ ಬೇಕಾದಂತಹ ಅತ್ಯುತ್ತಮ ವೈದ್ಯಕೀಯ ಸೇವೆಗೆ ಇಸ್ರೋ ನೂತನ ತಂತ್ರಜ್ಞಾನವನ್ನು ಹುಡುಕುವುದಾಗಿ ಹೇಳಿಕೊಂಡಿದೆ.

2001ರಲ್ಲೇ ಇಸ್ರೋ ಈ ಯೋಜನೆಯನ್ನು ಆರಂಭಿಸಿತ್ತು, ಇನ್ನೂ 50 ನೂತನ ಕೇಂದ್ರಗಳ ಸ್ಥಾಪನೆಗೆ ಶುಕ್ರವಾರದಂದು ಇಸ್ರೋ ಹಾಗು ಗೃಹ ಇಲಾಖೆ ಒಪ್ಪಂದವೊಂದಕ್ಕೆ ಸಹಿ ಮಾಡಿಕೊಂಡಿದೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...