• Home
  • »
  • News
  • »
  • tech
  • »
  • Skyroot Aerospace: ಇತಿಹಾಸ ಸೃಷ್ಟಿಸಲು ಹೊರಟಿರುವ ಇಸ್ರೋ, ದೇಶದ ಮೊದಲ ಖಾಸಗಿ ರಾಕೆಟ್ ಉಡಾವಣೆ!

Skyroot Aerospace: ಇತಿಹಾಸ ಸೃಷ್ಟಿಸಲು ಹೊರಟಿರುವ ಇಸ್ರೋ, ದೇಶದ ಮೊದಲ ಖಾಸಗಿ ರಾಕೆಟ್ ಉಡಾವಣೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಖಾಸಗಿ ವಲಯದಲ್ಲಿ ಇದು ಮೊದಲ ಉಡಾವಣೆಯಾಗಿರುವುದರಿಂದ, ಇದನ್ನು ಉದ್ಘಾಟನಾ ಮಿಷನ್ ಎಂದು ಕರೆಯಲಾಗುತ್ತದೆ. ಇದನ್ನು ಯಶಸ್ವಿಗೊಳಿಸುವ ಮೂಲಕ ಇಸ್ರೋ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಅನಾವರಣಗೊಳಿಸಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.

  • Share this:

     ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಬೈಸಿಕಲ್ ನಲ್ಲಿ ರಾಕೆಟ್ (Rocket) ಬಿಡಿಭಾಗಗಳನ್ನು ಹೊತ್ತೊಯ್ದಿದ್ದ ಇಸ್ರೋ ಇದೀಗ ಖಾಸಗಿ ರಾಕೆಟ್ (Private Rocket) ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲು ಹೊರಟಿದ್ದು ವಿಶ್ವವೇ ಅಚ್ಚರಿಗೆ ಕಾರಣವಾಗಿದೆ. ಇದರೊಂದಿಗೆ ಇಸ್ರೋ ಬಾಹ್ಯಾಕಾಶ ವ್ಯಾಪಾರದಲ್ಲಿ ಮತ್ತೊಂದು ಸಂಚಲನವನ್ನು ಮೂಡಿಸುವಂತಿದೆ. ವಿಕ್ರಮ್-ಎಸ್ ರಾಕೆಟ್ ಅನ್ನು ಹೈದರಾಬಾದ್‌ನ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ತಯಾರಿಸಿದ್ದು ಇದನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SHAAR) ಶ್ರೀಹರಿಕೋಟಾದ ಭಾರತೀಯ ಬಾಹ್ಯಾಕಾಶ ಉಡಾವಣಾ ಕೇಂದ್ರದಲ್ಲಿ ಉಡಾವಣೆ ಮಾಡಲಿದ್ದಾರೆ. ಇಂದು ಬೆಳಗ್ಗೆ 11:30ಕ್ಕೆ ನಿಂಗಿಗೆ ಕಳುಹಿಸಲಾಗಿದ್ದು.


    ಖಾಸಗಿ ವಲಯದಲ್ಲಿ ಇದು ಮೊದಲ ಉಡಾವಣೆಯಾಗಿರುವುದರಿಂದ, ಇದನ್ನು ಉದ್ಘಾಟನಾ ಮಿಷನ್ ಎಂದು ಕರೆಯಲಾಗುತ್ತದೆ. ಇದನ್ನು ಯಶಸ್ವಿಗೊಳಿಸುವ ಮೂಲಕ ಇಸ್ರೋ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಅನಾವರಣಗೊಳಿಸಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.


    ರಾಕೆಟ್ ಉಡಾವಣೆಯ ವೈಶಿಷ್ಟ್ಯಗಳು:


    ಭಾರತೀಯ ಬಾಹ್ಯಾಕಾಶ ಪಿತಾಮಹ ವಿಕ್ರಮ್ ಸಾರಾಬಾಯಿ ಅವರಿಗೆ ಗೌರವಾರ್ಥವಾಗಿ ರಾಕೆಟ್‌ಗೆ 'ವಿಕ್ರಮ್-ಎಸ್' ಎಂದು ಹೆಸರಿಡಲಾಗಿದೆ. ಇದರ ತೂಕ 545 ಕೆ.ಜಿ. ಇದೆ. ಇದು ಸುಮಾರು 3 ಬೈಕ್‌ಗಳಿಗೆ ಸಮವಾದ ತೂಕವನ್ನು ಹೊಂದಿದೆ. ರಾಕೆಟ್‌ನ ಉದ್ದ 6 ಮೀಟರ್ ಆಗಿದೆ. ಇದು ನಿಂಗಿನಲ್ಲಿ 81.5 ಕಿ.ಮೀ ಎತ್ತರಕ್ಕೆ ಹೋಗುತ್ತದೆ. ಯು-ಟರ್ನ್ ತೆಗೆದುಕೊಂಡ ನಂತರ ಶ್ರೀಹರಿಕೋಟಾದಿಂದ 115 ಕಿಮೀ ದೂರದಲಲ್ಲಿ ಸಮುದ್ರಕ್ಕೆ ಬೀಳುತ್ತದೆ.


    ಇದನ್ನೂ ಓದಿ: 13 ಗಂಟೆಗಳ ಚಾರ್ಜಿಂಗ್‌ ಸಾಮರ್ಥ್ಯವನ್ನು ಹೊಂದಿದ ಸ್ಯಾಮ್‌ಸಂಗ್‌ನ ಇಯರ್‌ಬಡ್ಸ್‌ ಮಾರುಕಟ್ಟೆಗೆ ಲಗ್ಗೆ!


    ಈ ಮೂಲಕ 3 ಉಪಗ್ರಹಗಳು ಬಾಹ್ಯಾಕಾಶಕ್ಕೆ ರವಾನೆ:


    ಈ ರಾಕೆಟ್ ಮೂಲಕ 3 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಅವುಗಳಲ್ಲಿ ಒಂದು ಫನ್-ಸ್ಯಾಟ್, ಚೆನ್ನೈನ ಏರೋಸ್ಪೇಸ್ ಸ್ಟಾರ್ಟ್‌ಅಪ್‌ನ ಸ್ಪೇಸ್‌ಕಿಡ್ಸ್ ತಯಾರಿಸಿದ 2.5 ಕೆಜಿ ಉಪಗ್ರಹವಾಗಿದೆ. ಇನ್ನೆರಡು ದೇಶೀಯ ಉಪಗ್ರಹಗಳಾಗಿವೆ. ಸದ್ಯ ಈ ರಾಕೆಟ್ ಉಡಾವಣೆಗೆ ಹವಾಮಾನ ತುಂಬಾ ಅನುಕೂಲಕರವಾಗಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.


    ISRO is going to create history the country s first private rocket launch
    ಸಾಂದರ್ಭಿಕ ಚಿತ್ರ


    ಭಾರಿ ಆದಾಯ


    ಈಗಾಗಲೇ ವಿದೇಶಿ ಉಪಗ್ರಹಗಳನ್ನು ನಿಂಗಿಗೆ ಕಳುಹಿಸುವ ಮೂಲಕ ಇಸ್ರೋ ಭಾರಿ ಆದಾಯ ಗಳಿಸುತ್ತಿದೆ. ಇದನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಖಾಸಗಿ ರಾಕೆಟ್ ಗಳನ್ನೂ ಉಡಾವಣೆ ಮಾಡುವ ಯೋಜನೆ ರೂಪಿಸಲಾಗಿದೆ. ಮುಖ್ಯವಾಗಿ ಶೋರ್ ನಿಂದ ನಿಂಗಿಗೆ ರಾಕೆಟ್ ಉಡಾವಣೆ ಮಾಡಲು ಇದು ತುಂಬಾ ಒಳ್ಳೆಯದಾಗಿದೆ. ಇಂತಹ ಪರಿಸ್ಥಿತಿಗಳು ಭೂಮಿಯ ಮೇಲಿನ ನಾಲ್ಕೈದು ಸ್ಥಳಗಳಲ್ಲಿ ಮಾತ್ರ ಇವೆ. ಆದ್ದರಿಂದ, ಇಸ್ರೋ ಈ ದಿಕ್ಕಿನಲ್ಲಿ ಯೋಜನೆಯೊಂದಿಗೆ ಮುನ್ನಡೆಯುತ್ತಿದೆ.


    ATU ಬಾಹ್ಯಾಕಾಶ ವಿಜ್ಞಾನದಲ್ಲಿ ಸಂಶೋಧನೆಗಾಗಿ ಸುಮಾರು 100 ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುತ್ತಿದೆ. ಈ ಕಂಪನಿಗಳು ಉಪಗ್ರಹಗಳು, ರಾಕೆಟ್‌ಗಳು ಮತ್ತು ಇತರ ಘಟಕಗಳನ್ನು ತಯಾರಿಸುತ್ತವೆ. ಆದ್ದರಿಂದ ಭವಿಷ್ಯದಲ್ಲಿ ಇಸ್ರೋ ವಾಣಿಜ್ಯ ಪ್ರಗತಿ ಸಾಧಿಸುವುದು ಖಚಿತ. ಈ ಉತ್ಸಾಹದಲ್ಲಿ, ಇಸ್ರೋ ಕೆಲವೇ ತಿಂಗಳುಗಳಲ್ಲಿ ಚಂದ್ರಯಾನ-3 ಮಿಷನ್ ಅನ್ನು ಪ್ರಾರಂಭಿಸಲು ಸಿದ್ಧವಾಗುತ್ತಿದೆ. ಇಸ್ರೋ ಇತಿಹಾಸದಲ್ಲಿ ಈ ದಿನ ವಿಶಿಷ್ಟವಾಗಲಿದೆ.


    ಯೋಜನೆಗೆ ಪ್ರಾರಂಭ್ ಎಂದು ಹೆಸರಿಡಲಾಗಿದೆ:


    ಖಾಸಗಿ ವಲಯದ ಉಡಾವಣೆಗಳನ್ನು ಬಾಹ್ಯಾಕಾಶಕ್ಕೆ ಪ್ರಾರಂಭಿಸಲು ಇಸ್ರೋ ಜೊತೆಗಿನ ಎಂಒಯು ಅಡಿಯಲ್ಲಿ ರಾಕೆಟ್ ಅನ್ನು ಉಡಾವಣೆ ಮಾಡಲಾಗುವುದು. ಯೋಜನೆಗೆ ಪ್ರಾರಂಭ್ ಎಂದು ಹೆಸರಿಸಲಾಗಿದೆ.


    ಇದನ್ನೂ ಓದಿ: ಭಾರತೀಯರು ಹೆಚ್ಚು ಬಳಸೋ ಪಾಸ್​ವರ್ಡ್​ ಇವೆಯಂತೆ! ಇದರಲ್ಲಿ ನಿಮ್ಮ ಪಾಸ್​ವರ್ಡ್​​ ಕೂಡ ಇದೆಯಾ?


    ಹೌದು ಇದು ಇಸ್ರೋ ಯೋಜನೆಯಲ್ಲಿ ಹೊಸ ಸಂಚಲನವನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ. ಇದೀಗ ಬಹಳಷ್ಟು ಪ್ರಸಿದ್ಧಿ ಪಡೆದ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ ಈ ವರ್ಷದ ಈ ಉಡಾವಣೆ ಬಹಳ ವಿಶೇಷವಾಗಿದ್ದು ಇಂದು ಉಡಾವಣೆಯಾಗಿದೆ.

    Published by:Prajwal B
    First published: