news18-kannada Updated:February 16, 2021, 8:55 AM IST
Photo: google
ಗೂಗಲ್ ಮ್ಯಾಪ್ಗೆ ಪರ್ಯಾಯವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮತ್ತು ಮ್ಯಾಪ್ ಮೈ ಇಂಡಿಯಾ ಸಂಸ್ಥೆ ಸ್ವದೇಶಿ ಮ್ಯಾಪ್ ಸಿದ್ಧಪಡಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳ ಸುರಿಮಳೆಯೇ ಹರಿಯುತ್ತಿದೆ.
ಮ್ಯಾಪ್ ಮೈ ಇಂಡಿಯಾದ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರೋಹನ್ ವರ್ಮಾ ಪ್ರಕಾರ, ‘ಆತ್ಮ ನಿರ್ಭರ ಭಾರತ’ ಯೋಜನೆಯಡಿಯ ಈ ಸಹಯೋಗದಲ್ಲಿ ತಮ್ಮ ಜಿಯೋ ಪೋರ್ಟಲ್ಗಳನ್ನು ಒಂದುಗೂಡಿಸುವ ಮತ್ತು ಭೂ ಬಾಹ್ಯಾಕಾಶ ಪರಿಣತಿಯನ್ನು ವೃದ್ಧಿಸುವ ಮೂಲಕ ದಿಕ್ಸೂಚಿ ಸೇವೆಯನ್ನು ಅಭಿವೃದ್ಧಿಪಡಿಸಲಿವೆ. ಮ್ಯಾಪ್ ಮೈ ಇಂಡಿಯಾದ ಡಿಜಿಟಲ್ ನಕ್ಷೆಗಳು, ಇಸ್ರೋದ ತಂತ್ರಜ್ಞಾನ ಬಳಸಿಕೊಂಡು ಉಪಗ್ರಹ ಚಿತ್ರಣ ಮತ್ತು ಭೂ ಅವಲೋಕನಾ ದತ್ತಾಂಶಗಳನ್ನು ಅಭಿವೃದ್ಧಿಪಡಿಸಲಿವೆ’ ಎಂದಿದ್ದಾರೆ.
ಈಗಾಗಲೇ ದೇಶದಲ್ಲಿ ಜಿಪಿಎಸ್ ನ್ಯಾವಿಗೇಷನ್ ವ್ಯವಸ್ಥೆಯನ್ನು ಆಳುತ್ತಿರುವ ಗೂಗಲ್ ಮ್ಯಾಪ್ ಗೆ ಪರ್ಯಾಯವಾಗಿ ಸ್ವದೇಶಿ ಮ್ಯಾಪ್ ತಯಾರಿಸುವ ಬಗೆಗಿನ ನ್ಯೂಸ್ ಓದಿದ ನೆಟಿಜನ್ ಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಹಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಮೀಮ್ ಗಳನ್ನು ಹರಿಬಿಡುವ ಮೂಲಕ ಟ್ರೋಲ್ ಮಾಡಲು ಶುರುವಿಟ್ಟುಕೊಂಡಿದ್ದಾರೆ.
ಕೆಲವರು ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿ ಶೆಹ್ನಾಜ್ ಗಿಲ್ಸ್ ಗೂಗಲ್ ಮ್ಯಾಪ್ ಮತ್ತು ಸುಂದರ್ ಪಿಚೈ ಬಗ್ಗೆ ಪ್ರತಿಕ್ರಿಯೆ ನೀಡಿದಂತೆ ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು ‘ಆನ್ಲೈನ್ ನ್ಯಾವಿಗೇಷನ್ ಅಪ್ಲಿಕೇಶನ್’ಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಆಲೋಚನೆ ಉತ್ತಮವಲ್ಲವೆಂಬುದನ್ನು ತೋರಿಸುವಂತೆ ವ್ಯಂಗ್ಯದ ರೀತಿಯ ಮೀಮ್ ಹರಿಬಿಟ್ಟಿದ್ದಾರೆ.
ಭಾರತದಲ್ಲಿ ನಿಮ್ಮ ಗಮ್ಯಸ್ಥಾನಕ್ಕೆ ನ್ಯಾವಿಗೇಟ್ ಮಾಡುವುದು ಸ್ವಲ್ಪ ಸವಾಲಾಗಿದೆ ಎಂಬುದು ಸ್ಪಷ್ಟವಾಗಿದೆ. ಇದರಿಂದ ಗೂಗಲ್ ಮ್ಯಾಪ್ ಗಳಂತಹ ಸುಧಾರಿತ ತಂತ್ರಜ್ಞಾನದ ಸಾಫ್ಟ್ ವೇರ್ಗಳು ಕೂಡ ಕೆಲವೊಮ್ಮೆ ವಿಫಲಗೊಳ್ಳುತ್ತವೆ. ನೀವು ಹೋಗುವ ಜಾಗದ ಬದಲು ನಿಮ್ಮನ್ನು ಯಾವುದೋ ಒಂದು ವಿಚಿತ್ರ ಸ್ಥಳಗಳಿಗೆ ಕರೆದೊಯ್ಯಬಹುದು’ ಅನ್ನುವ ರೀತಿಯಲ್ಲಿ ಟ್ರೋಲ್ ಮಾಡಲಾಗಿದೆ. ಇನ್ನೊಬ್ಬ ಬಳಕೆದಾರ ಗೂಗಲ್ ಮ್ಯಾಪ್ ಗೆ ತಮ್ಮ ಮೀಮ್ ಅನ್ನು ಮೀಸಲಿಟ್ಟಿದ್ದಾರೆ. ಇನ್ನು ಅನೇಕರು ಹೀಗೆ ಅನೇಕ ಕಚಗುಳಿ ಇಕ್ಕುವ ಮೀಮ್ ಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.
ಇಸ್ರೋ ಮತ್ತು ಮ್ಯಾಪ್ ಮೈ ಇಂಡಿಯಾ ಈ ಸವಾಲುಗಳನ್ನು ಹೇಗೆ ನಿಭಾಯಿಸುತ್ತದೆ ಮತ್ತು ಗೂಗಲ್ ಮ್ಯಾಪ್ ಗಳಿಗೆ ಹೇಗೆ ಸ್ಪರ್ಧೆಯನ್ನು ನೀಡುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. ಇನ್ನು ಮುಂದೆ ಭಾರತೀಯರು ಭಾರತದ ಹೊರಗೆ ಸಿದ್ಧವಾದ ಸೇವೆಯ ಬದಲು ಸ್ವದೇಶಿಗರೇ ನಿರ್ಮಿಸಿದ ಸೌಲಭ್ಯವನ್ನು ಅವಲಂಬಿಸಬಹುದು. ನಿಮಗೆ ಇನ್ನು ಮುಂದೆ ಗೂಗಲ್ ಮ್ಯಾಪ್ ಅಥವಾ ಅರ್ಥ್ ಅಗತ್ಯ ಬರುವುದಿಲ್ಲ. ಈ ಸಹಯೋಗವು ‘ಆತ್ಮ ನಿರ್ಭರ ಭಾರತ’ ಯೋಜನೆಗೆ ಮತ್ತಷ್ಟು ಉತ್ಸಾಹ ತುಂಬಲಿದೆ ಎಂದು ರೋಹನ್ ವರ್ಮಾ ಹೇಳಿದ್ದಾರೆ.
ಈ ಸಹಭಾಗಿತ್ವದಲ್ಲಿ ಭೂ ಅವಲೋಕನಾ ದತ್ತಾಂಶಗಳು, ನಾವಲ್ಸಿ, ವೆಬ್ ಸೇವೆಗಳು ಮತ್ತು ಮ್ಯಾಪ್ ಮೈ ಇಂಡಿಯಾದಲ್ಲಿನ ಎಪಿಐ (ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್) ಭುವನ್, ವೇದಾಸ್ ಮತ್ತು ಮೋಸ್ದಾಕ್ ಜಿಯೋಪೋರ್ಟಲ್ಗಳನ್ನು ಬಳಸಿಕೊಂಡು ಜಂಟಿಯಾಗಿ ಗುರುತಿಸುವ ಮತ್ತು ಸಮಗ್ರ ಭೂಪ್ರಾದೇಶಿಕ ಪರಿಹಾರವೊಂದನ್ನು ನಿರ್ಮಿಸಲಿವೆ' ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Published by:
Harshith AS
First published:
February 16, 2021, 8:55 AM IST