news18-kannada Updated:February 15, 2021, 3:59 PM IST
ಪ್ರಾತಿನಿಧಿಕ ಚಿತ್ರ (Photo:Google)
ಹೊಸ ಜಾಗಕ್ಕೆ ಹೋಗುವ ವೇಳೆ ಆ ಜಾಗದ ಬಗ್ಗೆ ಗೊತ್ತಿಲದೇ ಇದ್ದರೆ ಅಥವಾ ರಸ್ತೆ ಬಗ್ಗೆ ತಿಳಿಯದೇ ಇದ್ದರೆ ಮೊದಲು ಮಾಡುವ ಕೆಲಸ ಸ್ಮಾರ್ಟ್ಫೋನಿನಲ್ಲಿರುವ ನ್ಯಾವಿಗೇಷನ್ ಆ್ಯಪ್ ತೆರೆಯುವುದು. ಸದ್ಯ ಗೂಗಲ್ ಮ್ಯಾಪ್ ಅನ್ನು ಬಹುತೇಕ ಜನರು ಬಳಲುತ್ತಿದ್ದಾರೆ. ಹೊಸ ಜಾಗಕ್ಕೆ ಭೇಟಿ ನೀಡುವವರು ಗೂಗಲ್ ಮ್ಯಾಪ್ ಬಳಸಿ ಸಂಚರಿಸುತ್ತಾರೆ.
ಆದರೀಗ ಗೂಗಲ್ ಮ್ಯಾಪ್ಗೆ ಸೆಡ್ಡು ಹೊಡೆಯಲು ದೇಶಿಯ ಭುವನ್ ಆ್ಯಪ್ ಬರುತ್ತಿದೆ. ಹೌದು. ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವಿಶೇಷ ಗುರುತನ್ನು ಹೊಂದಿರುವ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಈ ಆ್ಯಪ್ನ ಅಭಿವೃದ್ಧಿ ಕೆಲಸವನ್ನು ಆರಂಭಿಸಿದೆ.
ಅದಕ್ಕಾಗಿ ಸಂಸ್ಥೆ ಮಾಪ್ಮೈಇಂಡಿಯಾ(MapMyIndia) ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹಾಗಾಗಿ ಮುಂದನ ದಿನಗಳಲ್ಲಿ ಭಾರತೀಯರು ಭಾರತದ ಉದ್ದಗಲಕ್ಕೂ ಸಂಚರಿಸಲು ಭುವನ್ ಆ್ಯಪ್ ಬಳಸಬಹುದಾಗಿದೆ.
ಕೇವಲ 499 ರೂ. ಗೆ ಸಿಗುತ್ತೆ Google Home Mini: ಹೇಗೆ ಗೊತ್ತಾ..? ಇಲ್ಲಿದೆ ಮಾಹಿತಿ
ಇದರ ಜೊತೆಗೆ ಇಂಡಿಯಾ ಮೇಡ್ ಪೋರ್ಟಲ್ ಹಾಗೂ ಜೀಯೋಸ್ಟಪೆಷಲ್ ಸರ್ವೀಸ್ ಆರಂಭಿಸಲಿವೆ. ಆತ್ಮ ನಿರ್ಭರ ಭಾರತ ಅಭಿಯಾನದಡಿ ಈ ಹೆಜ್ಜೆಯನ್ನಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗೂಗಲ್ ಮ್ಯಾಪ್ ನಂತೆ. ಭುವನ್ ಮ್ಯಾಪ್ ಬಳಕೆಗೆ ಸಿಗಲಿದೆ ಎಂದು ಮ್ಯಾಪ್ ಮೈ ಇಂಡಿಯಾ ಸಂಸ್ಥೆಯ ಸಿ ಇ ಒ ರೋಹನ್ ವರ್ಮಾ ಹೇಳಿಕೆ ನೀಡಿದ್ದಾರೆ.
ಚೀನಾ ಆ್ಯಪ್ ಬ್ಯಾನ್ ಆದ ನಂತರ ದೇಶಿಯ ಆ್ಯಪ್ಗಳು ಜನಪ್ರಿಯೆ ಸಾಧಿಸುತ್ತಿವೆ, ಇತ್ತೀಚೆಗೆ ಕೂ ಆ್ಯಪ್ ಕೂಡ ಜನರ ಮನಗೆದ್ದಿದೆ. ಅದರಲ್ಲಿ ಟ್ವಿಟ್ಟರ್ಗೆ ಪೈಪೋಟಿ ನೀಡಲು ಮುಂದಾಗಿದೆ. ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಶ್ರೀಸಾಮನ್ಯರು ಈ ಆ್ಯಪ್ ಅನ್ನು ಬಳಸುತ್ತಿದ್ದಾರೆ.
Published by:
Harshith AS
First published:
February 15, 2021, 3:59 PM IST